ಹೊಸ ಮನೆ ಕಟ್ಟುತ್ತಿರುವವರಿಗೆ ಸಿಹಿ ಸುದ್ದಿ, ಈ 10 ಬ್ಯಾಂಕ್ ಗಳಲ್ಲಿ ನಿಮಗೆ ಕಡಿಮೆ ಬಡ್ಡಿಗೆ ಸಾಲ ಸಿಗುತ್ತಿದೆ

Home Loan : ಕಡಿಮೆ ಬಡ್ಡಿದರದಲ್ಲಿ ಹೋಮ್ ಲೋನ್ ನೀಡುವ ಬ್ಯಾಂಕ್ ಗಳು ಯಾವುವು ಎಂದು ಈಗ ನೋಡೋಣ.

Home Loan : ಪ್ರತಿಯೊಬ್ಬ ವ್ಯಕ್ತಿಯ ಕನಸು ತಮ್ಮದೇ ಆದ ಒಂದು ಸ್ವಂತ ಮನೆ ಮಾಡಿಕೊಳ್ಳಬೇಕು ಎನ್ನುವುದಾಗಿರುತ್ತದೆ. ಅದಕ್ಕಾಗಿಯೇ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಈಗಿನ ಕಾಲದಲ್ಲಿ ಮನೆಕಟ್ಟಲು ಖರ್ಚು ಜಾಸ್ತಿ, ಲಕ್ಷಗಟ್ಟಲೇ ಹಣ ಸುರಿದು ಮನೆಕಟ್ಟಬೇಕಾಗುತ್ತದೆ.

ಆದರೆ ಎಲ್ಲರ ಬಳಿ ಮನೆಕಟ್ಟಲು ಅಷ್ಟು ಹಣ ಸಿಗುವುದಿಲ್ಲ. ಆ ರೀತಿ ಇದ್ದಾಗ ಬ್ಯಾಂಕ್ ಗಳಲ್ಲಿ ಲೋನ್ (Bank Loan) ಪಡೆದು ಮನೆ ಕಟ್ಟಬಹುದು. ಮನೆ ಕಟ್ಟುವುದಕ್ಕಾಗಿ ಸಾಕಷ್ಟು ಬ್ಯಾಂಕ್ ಗಳು ಸಾಲ (Bank Home Loan) ನೀಡುತ್ತದೆ. ಒಬ್ಬ ವ್ಯಕ್ತಿಯ ಆದಾಯ ಮತ್ತು ಅವರ ಮನೆಯ ಮೌಲ್ಯದ ಮೇಲೆ ಸಾಲ ಕೊಡಲಾಗುತ್ತದೆ.

ಬ್ಯಾಂಕ್ ಇಂದ ನೀವು ಸಾಲ ಪಡೆಯುವಾಗ ಬಡ್ಡಿದರ ಎಷ್ಟಿದೆ ಎನ್ನುವುದನ್ನು ಮೊದಲು ಚೆಕ್ ಮಾಡಬೇಕಾಗುತ್ತದೆ. ಕೆಲವು ಬ್ಯಾಂಕ್ ಗಳು ಪೇಪರ್ ವರ್ಕ್ ಗಳಿಗೂ ಜನರಿಂದಲೇ ಹಣ ವಸೂಲಿ ಮಾಡುತ್ತದೆ.

ಹೊಸ ಮನೆ ಕಟ್ಟುತ್ತಿರುವವರಿಗೆ ಸಿಹಿ ಸುದ್ದಿ, ಈ 10 ಬ್ಯಾಂಕ್ ಗಳಲ್ಲಿ ನಿಮಗೆ ಕಡಿಮೆ ಬಡ್ಡಿಗೆ ಸಾಲ ಸಿಗುತ್ತಿದೆ - Kannada News

ಕಾರ್ ಸೇಫ್ಟಿ ಟಿಪ್ಸ್! ಕಾರಿನಲ್ಲಿ ಬ್ಯಾಟರಿ ಹಾಳಾದ್ರೆ ಏನೆಲ್ಲಾ ಸಮಸ್ಯೆ ಎದುರಾಗುತ್ತದೆ ಗೊತ್ತಾ?

ಇನ್ನು ಕೆಲವು ಬ್ಯಾಂಕ್ ಗಳು ಶುರುವಿನಲ್ಲಿ ಕಡಿಮೆ ಬಡ್ಡಿ ಎಂದು ಹೇಳಿ, ನಂತರದಲ್ಲಿ ಹೆಚ್ಚು ಬಡ್ಡಿಯನ್ನು ವಿಧಿಸುತ್ತದೆ. ಇಂಥ ಹಲವು ಘಟನೆಗಳು ನಡೆಯುತ್ತಲೇ ಇರುತ್ತದೆ. ಹಾಗಾಗಿ ನೀವು ಸಾಲ ಪಡೆಯುವುದಕ್ಕಿಂತ ಮೊದಲು ಬ್ಯಾಂಕ್ ಬಗ್ಗೆ ಪೂರ್ತಿಯಾಗಿ ವಿಚಾರಿಸಿಕೊಳ್ಳುವುದು ಒಳ್ಳೆಯದು.

ಜನರಿಗೆ ಒಂದು ಮನೆ ಕಟ್ಟಲು ಹೆಚ್ಚು ಹಣ ಬೇಕಾಗುತ್ತದೆ, ಲಕ್ಷ ಲಕ್ಷ ಹಣ ಖರ್ಚು ಮಾಡಿ ಮನೆ ಕಟ್ಟಬೇಕಿರುವ ಕಾರಣ, ಬ್ಯಾಂಕ್ ಗಳಲ್ಲಿ ಪಡೆಯುವ ಲೋನ್ ಕೂಡ ದೊಡ್ಡ ಮೊತ್ತದ ಲೋನ್ ಆಗಿರಲಿದೆ.

ಹಾಗಾಗಿ ನೀವು ಲೋನ್ ಪಡೆಯುವಾಗ ಕಡಿಮೆ ಬಡ್ಡಿದರದಲ್ಲಿ ಲೋನ್ ಕೊಡುವ ಬ್ಯಾಂಕ್ ಇಂದ ಲೋನ್ ಪಡೆದು ತೀರಿಸಬೇಕು. ಇಲ್ಲದೆ ಹೋದರೆ ಲೋನ್ EMI ಕಟ್ಟಲು ಸಾಧ್ಯವಾಗದೆ ಪರದಾಡಬೇಕಾಗುತ್ತದೆ.

ಒಂದು ವೇಳೆ ನೀವು ಈಗ ಮನೆಕಟ್ಟುತ್ತಿದ್ದು ಲೋನ್ ಪಡೆಯಬೇಕು ಎಂದುಕೊಂಡಿದ್ದರೆ, ಕಡಿಮೆ ಬಡ್ಡಿಯಲ್ಲಿ ಲೋನ್ ಕೊಡುವ ಬ್ಯಾಂಕ್ ಗಳ ಬಗ್ಗೆ ಇಂದು ನಿಮಗೆ ಮಾಹಿತಿ ತಿಳಿಸಿಕೊಡುತ್ತೇವೆ..

ನಮ್ಮ ದೇಶದ ಈ 10 ಬ್ಯಾಂಕ್ ಗಳಲ್ಲಿ ಕಡಿಮೆ ಬಡ್ಡಿದರಕ್ಕೆ ಹೋಮ್ ಲೋನ್ ಸಿಗುತ್ತದೆ. ಈ ಬ್ಯಾಂಕ್ ಗಳಲ್ಲಿ ಲೋನ್ ಪಡೆಯುವುದು ಜನರಿಗೂ ಅನುಕೂಲ. ಈ ಲೋನ್ ನ ಕಡಿಮೆ ಬೆಲೆ, ಜನರ CIBIL ಸ್ಕೋರ್, ತೆಗೆದುಕೊಳ್ಳುವ ಸಾಲದ ಮೊತ್ತ, ಸಾಲ ಪಾವತಿ ಮಾಡಲು ತೆಗೆದುಕೊಳ್ಳುವ ಅವಧಿ ಇದೆಲ್ಲದರ ಮೇಲೆ ಬಡ್ಡಿದರ ನಿರ್ಧಾರ ಆಗಲಿದ್ದು. ಕಡಿಮೆ ಬಡ್ಡಿದರಕ್ಕೆ ನಿಮ್ಮ CIBIL ಸ್ಕೋರ್ ಮೂಲ ಕಾರಣ ಆಗುತ್ತದೆ.

ಕಡಿಮೆ ಬಡ್ಡಿದರದಲ್ಲಿ ಹೋಮ್ ಲೋನ್ ನೀಡುವ ಬ್ಯಾಂಕ್ ಗಳು ಯಾವುವು ಎಂದು ನೋಡುವುದಾದರೆ..

Home Loan*HDFC ಬ್ಯಾಂಕ್ ನಲ್ಲಿ ಹೋಮ್ ಲೋನ್ ಗೆ ನೀಡುವ ಬಡ್ಡಿದರ 8.5% ಇಂದ 9.4% ವರೆಗು ಇರುತ್ತದೆ. ಇದು ಕಡಿಮೆ ಬಡ್ಡಿದರ ಆಗಿದೆ.

*ಇಂಡಿಯನ್ ಬ್ಯಾಂಕ್ ನಲ್ಲಿ ಕೂಡ ನಿಮಗೆ ಕಡಿಮೆ ಬಡ್ಡಿದರಕ್ಕೆ ಲೋನ್ ಸಿಗುತ್ತದೆ.

*ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಕೂಡ ನಿಮಗೆ ಕಡಿಮೆ ಬಡ್ಡಿಗೆ ಹೋಮ್ ಲೋನ್ ಸಿಗುತ್ತದೆ, ಇಲ್ಲಿ 8.5% ಇಂದ 10.01% ವರೆಗು ಬಡ್ಡಿದರ ಇರುತ್ತದೆ.

*indusind ಬ್ಯಾಂಕ್ ನಲ್ಲಿ ಕೂಡ ಕಡಿಮೆ ಬಡ್ಡಿದರದಲ್ಲಿ ಹೋಮ್ ಲೋನ್ ಸಿಗಲಿದ್ದು, 8.5% ಇಂದ 10.55% ವರೆಗು ಇರುತ್ತದೆ.

*IDBI ಬ್ಯಾಂಕ್ ಕೂಡ ಕಡಿಮೆ ಬಡ್ಡಿಗೆ ಹೋಮ್ ಲೋನ್ ನೀಡಲಿದ್ದು, ಇಲ್ಲಿ ಬಡ್ಡಿದರ 8.55% ಇಂದ 10.30% ವರೆಗು ಇರುತ್ತದೆ.

*ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ 8.6% ಇಂದ 10.30% ಬಡ್ಡಿದರದಲ್ಲಿ ಹೋಮ್ ಲೋನ್ ಸಿಗುತ್ತದೆ.

*ಬ್ಯಾಂಕ್ ಆಫ್ ಬರೋಡಾದಲ್ಲಿ 8.6% ಇಂದ 10.5% ವರೆಗಿನ ಬಡ್ಡಿದರದಲ್ಲಿ ಹೋಮ್ ಲೋನ್ ಸಿಗುತ್ತದೆ.

*SBI ನಲ್ಲಿ 8.7% ಇಂದ 9.75% ವರೆಗಿನ ಬಡ್ಡಿದರದಲ್ಲಿ ಹೋಮ್ ಲೋನ್ ನೀಡಲಾಗುತ್ತದೆ.

*ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 8.7% ಇಂದ 10.8% ಬಡ್ಡಿದರದಲ್ಲಿ ಹೋಮ್ ಲೋನ್ ಸಿಗುತ್ತದೆ.

ಈಗಾಗಲೇ ನೀವು ಹೋಮ್ ಲೋನ್ ಪಡೆದಿದ್ದು, ಹೆಚ್ಚು ಬಡ್ಡಿಯ ಲೋನ್ ಕಟ್ಟುತ್ತಿದ್ದರೆ, ಕಡಿಮೆ ಬಡ್ಡಿದರಕ್ಕೆ ಲೋನ್ ಕೊಡುವ ಬ್ಯಾಂಕ್ ಗೆ ನಿಮ್ಮ ಸಾಲವನ್ನು ಟ್ರಾನ್ಸ್ಫರ್ ಮಾಡಿಸಿಕೊಳ್ಳಬಹುದು. ಇದು ದುಡ್ಡು ಖರ್ಚು ಇಲ್ಲದೆ ನಡೆಯುವ ಪ್ರಕ್ರಿಯೆ ಆಗಿದ್ದು, ಬ್ಯಾಂಕ್ ನಿಮ್ಮ ಮೇಲೆ ಒತ್ತಡ ಹೇರಲು ಸಾಧ್ಯ ಆಗುವುದಿಲ್ಲ. ಹಾಗಾಗಿ ಈ ಪ್ರಯತ್ನವನ್ನು ಮಾಡಬಹುದು.

you can get low interest on Home Loan in these 10 banks

Follow us On

FaceBook Google News

you can get low interest on Home Loan in these 10 banks