ವಾರ್ಷಿಕ ಭವಿಷ್ಯ 2025, ಈ ವರ್ಷ ಹೇಗಿರಲಿದೆ ತಿಳಿಯಿರಿ ನಿಮ್ಮ ರಾಶಿ ಭವಿಷ್ಯ

Yearly Horoscope 2025: ಮೇಷ, ವೃಷಭ, ಮಿಥುನ ರಾಶಿ ಸೇರಿದಂತೆ ಎಲ್ಲಾ 12 ರಾಶಿಚಕ್ರ ಚಿಹ್ನೆಗಳಿಗೆ 2025 ರ ಸಂಪೂರ್ಣ ವಾರ್ಷಿಕ ಭವಿಷ್ಯ - 2025 Yearly Horoscope for all 12 zodiac signs

- - - - - - - - - - - - - Story - - - - - - - - - - - - -

Yearly Horoscope 2025: ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ ರಾಶಿ ಸೇರಿದಂತೆ ಈ ವರ್ಷ ಎಲ್ಲಾ 12 ರಾಶಿಚಕ್ರ ಚಿಹ್ನೆಗಳಿಗೆ 2025 ರ ಸಂಪೂರ್ಣ ವಾರ್ಷಿಕ ಭವಿಷ್ಯ – 2025 Yearly Horoscope for all 12 zodiac signs

2025ರ ವಾರ್ಷಿಕ ರಾಶಿ ಭವಿಷ್ಯ – 2025 Yearly Horoscope

ಮೇಷ ರಾಶಿ (Mesha) – Aries

ಮೇಷ ರಾಶಿ ವಾರ್ಷಿಕ ಭವಿಷ್ಯ 2025

ಜನವರಿ: ಹೊಸ ವರ್ಷ ಈ ತಿಂಗಳು ಹೊಸ ಆಲೋಚನೆ ಹೊಸ ಅವಕಾಶಗಳ ಸಾಧ್ಯತೆ ಇದೆ. ವೃತ್ತಿಜೀವನದಲ್ಲಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಯ. ವ್ಯಾಪಾರಕ್ಕೆ ಉತ್ತಮ ಸಮಯ.

ವಾರ್ಷಿಕ ಭವಿಷ್ಯ 2025 - 2025 Yearly Horoscope

ಫೆಬ್ರವರಿ: ಆರ್ಥಿಕ ಜವಾಬ್ದಾರಿಗಳನ್ನು ನಿಭಾಯಿಸಲು ಶ್ರಮಿಸಿ. ನಿಮ್ಮ ಶ್ರಮಕ್ಕೆ ಫಲಿತಾಂಶಗಳು ಬರುವ ಸಮಯ.

ಮಾರ್ಚ್: ವೈಯಕ್ತಿಕ ಸಂಬಂಧಗಳಲ್ಲಿ ಸಮನ್ವಯತೆಯ ಅಗತ್ಯವಿದೆ. ನಿಮ್ಮ ಮನಸ್ಸು ಶಾಂತವಾಗಿರುವಂತೆ ನೋಡಿಕೊಳ್ಳಿ.

ಏಪ್ರಿಲ್: ವೃತ್ತಿಜೀವನದಲ್ಲಿ ಹೊಸದಾಗಿ ಪ್ರಾರಂಭಿಸಬಹುದಾದ ಅವಕಾಶಗಳು ಸಿಗುತ್ತವೆ. ನಿಮ್ಮ ಕಾರ್ಯಗಳಲ್ಲಿ ಶ್ರದ್ಧೆ ಮತ್ತು ಗಮನವನ್ನು ಹೆಚ್ಚಿಸಿ.

ಮೇ: ಹಣಕಾಸಿನ ವಿಚಾರಗಳಲ್ಲಿ ಎಚ್ಚರಿಕೆಯಿಂದ ಇರಬೇಕಾದ ಸಮಯ. ನಿಮ್ಮ ಜವಾಬ್ದಾರಿಗಳನ್ನು ಚೆನ್ನಾಗಿ ನಿರ್ವಹಿಸಿ.

ಜೂನ್: ಲಾಭದ ಸೂಚನೆ ಇದೆ. ಆರ್ಥಿಕವಾಗಿ ಬಲವಾಗಿರುತ್ತೀರಿ, ಈ ತಿಂಗಳು ಆರಾಮದಾಯಕವಾಗಿರುತ್ತದೆ.

ಜುಲೈ: ನಿರೀಕ್ಷೆಯಿಂದ ಹೆಚ್ಚಾಗಿ ಸಂತೋಷ ಮತ್ತು ಯಶಸ್ಸು ಕಾಣಬಹುದು. ದುಶ್ಚಟಗಳನ್ನು ದೂರ ಮಾಡಿ.

ಆಗಸ್ಟ್: ವೃತ್ತಿಜೀವನದಲ್ಲಿ ನಿರ್ಧಾರಗಳನ್ನು ಕೈಗೊಳ್ಳುವ ಸಮಯ. ನಿಮ್ಮ ಸಾಧನೆಗಳನ್ನು ಕಾರ್ಯಗತಗೊಳಿಸಲು ಸಿದ್ಧರಾಗಿ.

ಸೆಪ್ಟೆಂಬರ್: ಭವಿಷ್ಯಕ್ಕಾಗಿ ಹೊಸ ಯೋಜನೆಗಳನ್ನು ರೂಪಿಸಲು ಇದೊಂದು ಉತ್ತಮ ಸಮಯ. ವ್ಯಾಪಾರದಲ್ಲಿ ಲಾಭವಿದೆ.

ಅಕ್ಟೋಬರ್: ಕೆಲಸಗಳನ್ನು ಸಮರ್ಪಕವಾಗಿ ಆಯೋಜಿಸಿ. ಆರ್ಥಿಕ ಸುಧಾರಣೆ ಇರುತ್ತದೆ, ದುಡ್ಡು ಕಾಸಿನ ಚಿಂತೆ ದೂರವಾಗುತ್ತದೆ.

ನವೆಂಬರ್: ಕುಟುಂಬದ ಜೊತೆ ಸಮಯ ಕಳೆಯಲು ಸಮಯ ಸಿಗುತ್ತದೆ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.

ಡಿಸೆಂಬರ್: ನಿಮ್ಮ ಗುರಿ ಮತ್ತು ಆಶಯಗಳನ್ನು ಸಾಧಿಸಲು ಶಕ್ತಿಯುಳ್ಳ ಸಮಯ. ಇಚ್ಛಾಶಕ್ತಿ ಮತ್ತು ನಂಬಿಕೆ ನಿಮಗೆ ಸಹಾಯವಾಗುತ್ತವೆ.

ವೃಷಭ ರಾಶಿ (Vrishabha) – Taurus

ವೃಷಭ ರಾಶಿ ವಾರ್ಷಿಕ ಭವಿಷ್ಯ 2025

ಜನವರಿ: ಅನಗತ್ಯ ಭಯ ಮೇಲುಗೈ ಸಾಧಿಸುತ್ತದೆ. ಹಠಾತ್ ಆರ್ಥಿಕ ನಷ್ಟದ ಸಾಧ್ಯತೆ ಇದೆ. ಕೆಲವು ಪ್ರಮುಖ ಕಾರ್ಯಕ್ರಮಗಳನ್ನು ಮುಂದೂಡಬೇಕಾಗುತ್ತದೆ.

ಫೆಬ್ರವರಿ: ಆರ್ಥಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಶ್ರಮ ಬೇಕಾಗುತ್ತದೆ. ಧೈರ್ಯ ಮತ್ತು ಜವಾಬ್ದಾರಿಯನ್ನು ಹೊಂದಲು ಪ್ರಯತ್ನಿಸಿ.

ಮಾರ್ಚ್: ನಿಮ್ಮ ಸಾಮರ್ಥ್ಯವನ್ನು ಬಳಸಲು ಇದು ಉತ್ತಮ ಸಮಯ. ವ್ಯಾಪಾರದಲ್ಲಿ ಪ್ರಗತಿ ಕಾಣಬಹುದು.

ಏಪ್ರಿಲ್: ಕೃಷಿ ಕ್ಷೇತ್ರದವರಿಗೆ ಲಾಭದಾಯಕವಾಗಿರುತ್ತದೆ. ಆತುರವು ಪ್ರಯತ್ನಗಳನ್ನು ಹಾಳು ಮಾಡುತ್ತದೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ.

ಮೇ: ಈ ತಿಂಗಳಲ್ಲಿ ಆರ್ಥಿಕ ಪ್ರಗತಿ ಕಾಣಲು ಉತ್ತಮ ಸಮಯ. ನಿಮ್ಮ ಕುಟುಂಬ ಜೀವನದಲ್ಲಿ ಸಂತೋಷವನ್ನು ಅನುಭವಿಸುವಿರಿ.

ಜೂನ್: ಹಠಾತ್ ಆರ್ಥಿಕ ಲಾಭದಿಂದ ಸಂತೋಷವಾಗಿರುವಿರಿ. ಎಲ್ಲಾ ಪ್ರಯತ್ನಗಳಲ್ಲಿ ಯಶಸ್ವಿಯಾಗುವಿರಿ. ಕೀರ್ತಿ, ಪ್ರತಿಷ್ಠೆ ಹೆಚ್ಚಲಿದೆ.

ಜುಲೈ: ಆರ್ಥಿಕವಾಗಿ ಉತ್ತಮ ಸಾಧ್ಯತೆಗಳು ಕಾಣುತ್ತವೆ. ಹೊಸ ಅವಕಾಶಗಳನ್ನು ಕಾಣಬಹುದು. ಹಠಾತ್ ಆರ್ಥಿಕ ಲಾಭವನ್ನು ಪಡೆಯುತ್ತೀರಿ.

ಆಗಸ್ಟ್: ಸ್ಫೂರ್ತಿಯುಳ್ಳ ಸಮಯ. ವೈಯಕ್ತಿಕ ಬದುಕಿನಲ್ಲಿ ಏನಾದರೂ ಸಾಧಿಸಲು ಪ್ರಯತ್ನಿಸಿ. ಪ್ರಮುಖ ಕಾರ್ಯಗಳು ಪೂರ್ಣಗೊಳ್ಳಲಿವೆ.

ಸೆಪ್ಟೆಂಬರ್: ನಿಮ್ಮ ಗುರಿಗಳನ್ನು ಸಾಧಿಸಲು ಉತ್ತಮ ಸಮಯ. ಶುಭ ಕಾರ್ಯಗಳು ಸುಲಭವಾಗಿ ನೆರವೇರುತ್ತವೆ. ಒಳ್ಳೆಯ ಸುದ್ದಿ ಕೇಳಿ ಬರಲಿದೆ.

ಅಕ್ಟೋಬರ್: ಬಲವಾದ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ, ನಿಮ್ಮ ಕಾರ್ಯವನ್ನು ದೈರ್ಯದಿಂದ ಮುಂದುವರಿಸಿ.

ನವೆಂಬರ್: ಕುಟುಂಬದೊಂದಿಗೆ ಸಮಯ ಕಳೆಯಲು ಸಾಧ್ಯವಾಗುತ್ತದೆ, ಹಣಕಾಸಿನ ತೊಂದರೆಗಳು ಕ್ರಮೇಣ ದೂರವಾಗುತ್ತವೆ.

ಡಿಸೆಂಬರ್: ವರ್ಷದ ಕೊನೆಯಲ್ಲಿ ಸಮೃದ್ಧಿಯನ್ನು ಸಾಧಿಸುವ ಸಮಯ. ನಿಮ್ಮ ಶ್ರದ್ಧೆ ಮತ್ತು ಉತ್ಸಾಹವು ನಿಮಗೆ ಹೆಚ್ಚು ಯಶಸ್ಸು ನೀಡುತ್ತದೆ.

ಮಿಥುನ ರಾಶಿ (Mithuna) – Gemini

ಮಿಥುನ ರಾಶಿ ವಾರ್ಷಿಕ ಭವಿಷ್ಯ 2025

ಜನವರಿ: ಹೊಸ ಪ್ರಾರಂಭಗಳಿಗೆ ಇದು ಸರಿಯಾದ ಸಮಯ. ಕೋಪ ಶಮನ ಒಳ್ಳೆಯದು. ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ಹಣದ ಚಿಂತೆ ಇಲ್ಲ.

ಫೆಬ್ರವರಿ: ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಹೊಸ ಸಿದ್ಧಾಂತಗಳನ್ನು ಅನುಸರಿಸಿ. ನಿಮ್ಮ ಪ್ರಯತ್ನಗಳಲ್ಲಿ ನೀವು ಉತ್ತಮ ಯಶಸ್ಸನ್ನು ಪಡೆಯುತ್ತೀರಿ.

ಮಾರ್ಚ್: ಹಣಕಾಸಿನ ನಷ್ಟದ ಸಾಧ್ಯತೆಗಳಿವೆ. ಹೆಚ್ಚು ವ್ಯರ್ಥ ಪ್ರಯಾಣಗಳಿವೆ. ಶಾಂತ ಮತ್ತು ಸರಳ ಮನಸ್ಸು ಅಗತ್ಯವಿದೆ.

ಏಪ್ರಿಲ್: ಒತ್ತಡದಿಂದ ಹೊರಬರುವ ಸಮಯ. ಈ ಸಮಯದಲ್ಲಿ ನಿಮ್ಮ ಗುರಿಗಳನ್ನು ಪುನರ್ ಪರಿಶೀಲಿಸಿ. ಹಠಾತ್ ಹಣ ನಷ್ಟವಾಗುವ ಸಾಧ್ಯತೆ ಇದೆ.

ಮೇ: ಹೊಸ ಯೋಜನೆಗಳೊಂದಿಗೆ ನಿಮ್ಮ ಯತ್ನವನ್ನು ಮುಂದುವರಿಸಿ. ವೃತ್ತಿ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಅಭಿವೃದ್ಧಿ ಇರುತ್ತದೆ.

ಜೂನ್: ಕುಟುಂಬದ ಪರಿಸ್ಥಿತಿಗಳು ತೃಪ್ತಿಕರವಾಗಿರುತ್ತವೆ. ವೃತ್ತಿ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ತಾಳ್ಮೆಯಿಂದಿರಬೇಕು.

ಜುಲೈ: ಪ್ರಯತ್ನಗಳಲ್ಲಿ ಅಡೆತಡೆಗಳಿಂದ ತೊಂದರೆ ಉಂಟಾಗುತ್ತದೆ. ನಿಮ್ಮ ಆರ್ಥಿಕ ನಿರ್ಧಾರಗಳಲ್ಲಿ ಬಲವನ್ನು ಕಾಯ್ದುಕೊಳ್ಳಿ.

ಆಗಸ್ಟ್: ನಿಮ್ಮ ಮಾನಸಿಕ ಶಕ್ತಿಯನ್ನು ಹೇಗೆ ಬಳಸಬೇಕೆಂದು ಕಲಿಯಿರಿ. ವೈಯಕ್ತಿಕ ಮತ್ತು ವೃತ್ತಿಜೀವನದಲ್ಲಿ ಇಷ್ಟಾರ್ಥಗಳನ್ನು ಸಾಧಿಸುವಿರಿ.

ಸೆಪ್ಟೆಂಬರ್: ಕೋಪವನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ. ಹಠಾತ್ ಆರ್ಥಿಕ ಲಾಭದಿಂದ ಸಾಲಗಳು ಮಾಯವಾಗುತ್ತವೆ.

ಅಕ್ಟೋಬರ್: ವ್ಯಾಪಾರ ಕ್ಷೇತ್ರದಲ್ಲಿ ಲಾಭವಾಗಲಿದೆ. ಈ ಹಿಂದೆ ಮುಂದೂಡಿದ್ದ ಎಲ್ಲ ಕೆಲಸಗಳು ಪೂರ್ಣಗೊಳ್ಳಲಿವೆ. ಪ್ರಯತ್ನಗಳು ಫಲ ನೀಡುತ್ತವೆ.

ನವೆಂಬರ್: ತಾವು ಅಂದುಕೊಂಡ ಎಲ್ಲಾ ಕಾರ್ಯಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಅನುಕೂಲಕರ ಪರಿಸ್ಥಿತಿಗಳು ಉದ್ಭವಿಸುತ್ತವೆ.

ಡಿಸೆಂಬರ್: ಕೌಟುಂಬಿಕ ಕಲಹಗಳು ದೂರವಾಗುತ್ತವೆ. ತಾಳ್ಮೆ ಯಾವಾಗಲೂ ಒಳ್ಳೆಯದು. ಪ್ರಯಾಣದಲ್ಲಿ ಎಚ್ಚರ ಅಗತ್ಯ.

ಕಟಕ ರಾಶಿ (Kataka) – Cancer

ಕಟಕ ರಾಶಿ ವಾರ್ಷಿಕ ಭವಿಷ್ಯ 2025

ಜನವರಿ: ಬಾಕಿಯಿರುವ ಕಾರ್ಯಗಳನ್ನು ಪೂರ್ಣಗೊಳಿಸುತ್ತೀರಿ, ವ್ಯಾಪಾರ ಕ್ಷೇತ್ರಗಳಲ್ಲಿ ಹಣದ ನಷ್ಟವಾಗದಂತೆ ಎಚ್ಚರಿಕೆ ವಹಿಸಬೇಕು.

ಫೆಬ್ರವರಿ: ಈ ತಿಂಗಳು ವ್ಯವಹಾರದಲ್ಲಿ ಹೆಚ್ಚಿನ ಲಾಭವನ್ನು ಗಳಿಸುತ್ತೀರಿ. ಆದರೆ ಒಳ್ಳೆಯ ಜನರೊಂದಿಗೆ ಸ್ನೇಹ ಬೆಳೆಸಿಕೊಳ್ಳಿ.

ಮಾರ್ಚ್: ನಿಮ್ಮ ಆದಾಯವನ್ನು ಹೆಚ್ಚಿಸಲು ಶ್ರಮಿಸಿ. ಹಠಾತ್ ಆರ್ಥಿಕ ಲಾಭವಾಗಲಿದೆ. ಬಂಧು ಮಿತ್ರರಿಂದ ಬೆಂಬಲ ದೊರೆಯುವುದು.

ಏಪ್ರಿಲ್: ನಿಮ್ಮ ಜೀವನದ ಗುರಿಯನ್ನು ಅನುಸರಿಸಿ. ಸಾಲದ ಪ್ರಯತ್ನ ಫಲ ನೀಡಲಿದೆ. ಕೆಟ್ಟ ಸಹವಾಸವನ್ನು ತಪ್ಪಿಸಿ.

ಮೇ: ಗುಪ್ತ ಶತ್ರುಗಳ ಬಗ್ಗೆ ಎಚ್ಚರಿಕೆ ವಹಿಸುವುದು ಉತ್ತಮ. ಯಾವುದೇ ಸಂದರ್ಭದಲ್ಲಿ ಹತಾಶೆ ಕೆಲಸ ಮಾಡುವುದಿಲ್ಲ.

ಜೂನ್: ಕುಟುಂಬದ ಪರಿಸ್ಥಿತಿಗಳು ತೃಪ್ತಿಕರವಾಗಿವೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಜುಲೈ: ಜೀವನದಲ್ಲಿ ತಾತ್ಕಾಲಿಕ ಸಮಸ್ಯೆಗಳು ಬರುವುದರಿಂದ ಆತ್ಮವಿಶ್ವಾಸ ಮತ್ತು ಶಾಂತಿಯೊಂದಿಗೆ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಆಗಸ್ಟ್: ಪ್ರಗತಿಯನ್ನು ಸಾಧಿಸಲು ಬುದ್ದಿವಂತಿಕೆ ಮತ್ತು ಶ್ರಮದ ಅಗತ್ಯವಿದೆ. ನಿಮ್ಮ ಮನೋಭಾವವನ್ನು ಹೆಚ್ಚಿಸಿಕೊಳ್ಳಿ.

ಸೆಪ್ಟೆಂಬರ್: ನಿಮ್ಮ ಸಮಸ್ಯೆಗಳ ಕುರಿತು ನಿರ್ಧಾರಗಳನ್ನು ತೀರ್ಮಾನಿಸುವ ಸಮಯ. ಶಾಂತಯುತವಾಗಿ ವರ್ತಿಸಿ.

ಅಕ್ಟೋಬರ್: ವೃತ್ತಿ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಅಪೇಕ್ಷಿತ ಅಭಿವೃದ್ಧಿ ಇರುತ್ತದೆ. ನೀವು ಹಠಾತ್ ಆರ್ಥಿಕ ಲಾಭವನ್ನು ಪಡೆಯುತ್ತೀರಿ.

ನವೆಂಬರ್: ನಿಮ್ಮ ಶ್ರದ್ಧೆ ಮತ್ತು ಉತ್ಸಾಹದಿಂದ ಇತರರನ್ನು ಪ್ರಭಾವಿತಗೊಳಿಸಲು ಸಾಧ್ಯ. ಯಾವುದೇ ಸಮಸ್ಯೆಯನ್ನು ಸುಲಭವಾಗಿ ಜಯಿಸುವಿರಿ

ಡಿಸೆಂಬರ್: ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ, ನಡೆಯುತ್ತಿದ್ದ ಸಮಸ್ಯೆಗಳು ಕ್ರಮೇಣ ಪರಿಹಾರವಾಗುತ್ತದೆ, ಲಾಭದ ಸಾಧ್ಯತೆ ಇದೆ.

ಸಿಂಹ ರಾಶಿ (Simha) – Leo

ಸಿಂಹ ರಾಶಿ ವಾರ್ಷಿಕ ಭವಿಷ್ಯ 2025

ಜನವರಿ: ವೈಯಕ್ತಿಕವಾಗಿ ಮತ್ತು ವೃತ್ತಿಜೀವನದಲ್ಲಿ ಧೈರ್ಯ ಮತ್ತು ನಂಬಿಕೆಯೊಂದಿಗೆ ಮುಂದುವರೆಯಿರಿ.

ಫೆಬ್ರವರಿ: ಸಮಯವನ್ನು ಸದುಪಯೋಗ ಪಡಿಸಿಕೊಳ್ಳಿ. ಹೊಸ ಅವಕಾಶಗಳ ಸಾಧ್ಯತೆ ಇದೆ, ಅವುಗಳನ್ನು ಬಳಸಿಕೊಳ್ಳಿ.

ಮಾರ್ಚ್: ಅನಿರೀಕ್ಷಿತ ಖರ್ಚುಗಳು ಬರುವ ಸಾಧ್ಯತೆ ಇದೆ. ವ್ಯಾಪಾರಸ್ಥರು ಎಚ್ಚರಿಕೆಯಿಂದ ಇರುವುದು ಉತ್ತಮ.

ಏಪ್ರಿಲ್: ನಿಮಗೆ ಹೊಸ ಅವಕಾಶಗಳು ಎದುರಾಗುತ್ತವೆ. ಜೀವನದ ದಾರಿಯಲ್ಲಿ ಧೈರ್ಯದಿಂದ ನಿಲ್ಲಲು ಪ್ರಯತ್ನಿಸಿ.

ಮೇ: ನಿಮ್ಮ ಗುರಿಯನ್ನು ಗಮನದಲ್ಲಿ ಇಟ್ಟುಕೊಳ್ಳಿ. ತಾಳ್ಮೆಯಿಂದ ಪ್ರಯತ್ನಿಸಿ, ನಿಮ್ಮ ಶ್ರಮಕ್ಕೆ ಫಲ ಇದೆ.

ಜೂನ್: ಕುಟುಂಬದೊಂದಿಗೆ ಸಂತೋಷವನ್ನು ಅನುಭವಿಸುವಿರಿ. ಈ ತಿಂಗಳು ವ್ಯಾಪಾರ ಲಾಭವನ್ನು ಕಾಣುತ್ತದೆ.

ಜುಲೈ: ಶ್ರದ್ಧೆ ಮತ್ತು ಶ್ರಮದಿಂದ ಉತ್ತಮ ಸಮಯ ಎದುರಾಗುತ್ತದೆ. ನಿಮ್ಮ ಮೇಲೆ ಜನರಿಗೆ ವಿಶ್ವಾಸ ಹೆಚ್ಚಾಗುತ್ತದೆ, ಖ್ಯಾತಿ ಇದೆ.

ಆಗಸ್ಟ್: ಕುಟುಂಬದಲ್ಲಿ ತೃಪ್ತಿ ಇರುತ್ತದೆ. ಹೆಸರು ಮತ್ತು ಪ್ರತಿಷ್ಠೆ ಗಳಿಸುವಿರಿ. ಸಮಾಜದಲ್ಲಿ ಗೌರವ ಕಾಣುವಿರಿ.

ಸೆಪ್ಟೆಂಬರ್: ತಾಳ್ಮೆಯಿಂದ ನಿರ್ಧಾರವನ್ನು ಮಾಡಿ. ಆಸ್ತಿ ವಿಚಾರದಲ್ಲಿ ಲಾಭದ ಸಾಧ್ಯತೆಗಳಿವೆ. ಹಣಕಾಸಿನ ತೊಂದರೆ ಇಲ್ಲ.

ಅಕ್ಟೋಬರ್: ವೃತ್ತಿ ಜೀವನದಲ್ಲಿ ಹೊಸ ಅವಧಿ ಆರಂಭವಾಗುವ ಸಮಯ. ನೀವು ಬಯಸಿದ ಕಾರ್ಯಗಳು ನಡೆಯುತ್ತವೆ.

ನವೆಂಬರ್: ವೈಯಕ್ತಿಕವಾಗಿ ಮತ್ತು ವೃತ್ತಿಜೀವನದಲ್ಲಿ ಅನೇಕ ಸಾಧನೆಗಳು ನಿಮಗೆ ಲಭ್ಯವಿವೆ. ಅವುಗಳನ್ನು ಸರಿಯಾಗಿ ಬಳಸಿಕೊಳ್ಳಿ.

ಡಿಸೆಂಬರ್: ನಿಮ್ಮ ಎಲ್ಲಾ ಕನಸುಗಳನ್ನು ನನಸಾಗುವ ಸಮಯ. ಪ್ರಗತಿಗೆ ಅವಕಾಶವಿದೆ. ತಾಳ್ಮೆಯಿಂದ ಪ್ರಯತ್ನಿಸಿ.

ಕನ್ಯಾ ರಾಶಿ (Kanya) – Virgo

ಕನ್ಯಾ ರಾಶಿ ವಾರ್ಷಿಕ ಭವಿಷ್ಯ 2025ಜನವರಿ: ಆತ್ಮವಿಶ್ವಾಸ ಮತ್ತು ಧೈರ್ಯ ಇರುತ್ತದೆ. ಹೊಸ ಆಯ್ಕೆಗಳಿಗೆ ಅವಕಾಶ ಇದೆ. ಕುಟುಂಬದಲ್ಲಿ ಸಂತೋಷ ಇರುತ್ತದೆ.

ಫೆಬ್ರವರಿ: ಆರ್ಥಿಕವಾಗಿ ಸುಧಾರಣೆಯನ್ನು ಕಾಣುವಿರಿ. ಹಣ ಕಾಸಿನ ವಿಚಾರದಲ್ಲಿ ಜಾಗರೂಕರಾಗಿರಿ, ಪ್ರಗತಿ ಕೂಡ ಇದೆ.

ಮಾರ್ಚ್: ವೈಯಕ್ತಿಕ ಮತ್ತು ವೃತ್ತಿಜೀವನದಲ್ಲಿ ಸಮತೋಲನವು ಮುಖ್ಯ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕುಟುಂಬದ ಪರಿಸ್ಥಿತಿಗಳು ತೃಪ್ತಿಕರವಾಗಿರುತ್ತವೆ.

ಏಪ್ರಿಲ್: ನಿಮ್ಮ ಪ್ರಯತ್ನಗಳಲ್ಲಿ ನೀವು ಉತ್ತಮ ಯಶಸ್ಸನ್ನು ಪಡೆಯುತ್ತೀರಿ. ಹಠಾತ್ ಆರ್ಥಿಕ ಲಾಭವಾಗಲಿದೆ. ಎಲ್ಲದರಲ್ಲೂ ಯಶಸ್ಸನ್ನು ಸಾಧಿಸುವಿರಿ.

ಮೇ: ಜವಾಬ್ದಾರಿಗಳನ್ನು ಸಂಯಮದಿಂದ ನಿಭಾಯಿಸಿ. ಬಂಧು ಮಿತ್ರರೊಂದಿಗೆ ಕಲಹ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು.

ಜೂನ್: ಹಣಕಾಸಿನ ಸಮಸ್ಯೆಗಳು ದೂರವಾಗುತ್ತವೆ. ಆದಷ್ಟು ಸುಳ್ಳು ಹೇಳುವುದನ್ನು ತಪ್ಪಿಸುವುದು ಉತ್ತಮ. ಸಂತೋಷದಿಂದ ಸಮಯ ಕಳೆಯಿರಿ.

ಜುಲೈ: ವ್ಯಾಪಾರ ಕ್ಷೇತ್ರಗಳಲ್ಲಿ ಉತ್ತಮ ಪ್ರಗತಿ ಕಂಡು ಬರುತ್ತದೆ. ಆದರೆ ಅನಗತ್ಯ ವೆಚ್ಚಗಳ ಚಿಂತೆ ಇರುತ್ತದೆ. ಹೆಚ್ಚು ವ್ಯರ್ಥ ಪ್ರಯಾಣಗಳಿವೆ.

ಆಗಸ್ಟ್: ನಿಮ್ಮ ಶ್ರದ್ಧೆ ಮತ್ತು ಶ್ರಮದಿಂದ ಹೆಚ್ಚಿನ ಪ್ರಗತಿ ಸಾಧಿಸುವ ಸಮಯ. ಶುಭ ಕಾರ್ಯಗಳು ಸುಲಭವಾಗಿ ನೆರವೇರುತ್ತವೆ.

ಸೆಪ್ಟೆಂಬರ್: ಧೈರ್ಯದಿಂದ ನೀವು ನಿಮ್ಮ ಗುರಿಗಳನ್ನು ಸಾಧಿಸಬಹುದು. ಕೌಟುಂಬಿಕ ಕಲಹಗಳು ದೂರವಾಗುತ್ತವೆ. ಕೌಟುಂಬಿಕ ನೆಮ್ಮದಿ ಇರುತ್ತದೆ.

ಅಕ್ಟೋಬರ್: ನಿಮ್ಮ ಕಾರ್ಯಗಳಿಗೆ ಉತ್ತಮ ಫಲಿತಾಂಶಗಳು ದೊರೆಯುವ ಸಮಯ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಕೆಲವು ಕಾರ್ಯಗಳನ್ನು ಧೈರ್ಯದಿಂದ ಪೂರ್ಣಗೊಳಿಸುವಿರಿ.

ನವೆಂಬರ್: ಈ ತಿಂಗಳಲ್ಲಿ ಉತ್ತಮ ಅವಕಾಶಗಳು ಎದುರಾಗುತ್ತವೆ. ಅನಗತ್ಯ ಭಯ ದೂರವಾಗುತ್ತಾರೆ. ಎಚ್ಚರಿಕೆಯಿಂದ ಪ್ರಯಾಣಿಸಿ.

ಡಿಸೆಂಬರ್: ನಿಮ್ಮ ವೈಯಕ್ತಿಕ ಮತ್ತು ವೃತ್ತಿಜೀವನದ ಗುರಿಯನ್ನು ಸರಿಯಾಗಿ ಸಾಧಿಸುವ ಸಮಯ. ಕೋಪವನ್ನು ನಿಯಂತ್ರಿಸಿ.

ತುಲಾ ರಾಶಿ (Tula) – Libra

ತುಲಾ ರಾಶಿ ವಾರ್ಷಿಕ ಭವಿಷ್ಯ 2025

ಜನವರಿ: ವೃತ್ತಿ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ತಾಳ್ಮೆಯಿಂದಿರಬೇಕು. ಯೋಚಿಸಿದ ಕಾರ್ಯಗಳು ತಡವಾಗಿ ನೆರವೇರುತ್ತವೆ.

ಫೆಬ್ರವರಿ: ಸಮಯವನ್ನು ಸದುಪಯೋಗ ಪಡಿಸಿಕೊಳ್ಳಿ. ಆರ್ಥಿಕ ದೃಷ್ಟಿಯಿಂದ ಉತ್ತಮ ಸಮಯ. ಉತ್ತಮ ಲಾಭವಿದೆ.

ಮಾರ್ಚ್: ವೈಯಕ್ತಿಕ ಮತ್ತು ವೃತ್ತಿಜೀವನದಲ್ಲಿ ಹೊಸ ಅವಕಾಶಗಳು ಎದುರಾಗುತ್ತದೆ. ಬುದ್ದಿವಂತಿಕೆಯಿಂದ ಅವುಗಳನ್ನು ಬಳಸಿಕೊಳ್ಳಿ.

ಏಪ್ರಿಲ್: ಪ್ರಗತಿಗೆ ಇದು ಉತ್ತಮ ಸಮಯ. ಬಂಧುಗಳ ಸಹಾಯ ಮತ್ತು ಬೆಂಬಲ ದೊರೆಯುತ್ತದೆ. ಮಾನಸಿಕ ಆತಂಕ ದೂರವಾಗುತ್ತದೆ.

ಮೇ: ಜವಾಬ್ದಾರಿಗಳನ್ನು ಶಾಂತವಾಗಿ ಮತ್ತು ಸಮರ್ಪಣೆಯಿಂದ ನಿಭಾಯಿಸಿ. ವಿದೇಶಿ ಪ್ರಯತ್ನಗಳು ತಡವಾಗಿ ಫಲ ನೀಡುತ್ತವೆ.

ಜೂನ್: ಆರ್ಥಿಕ ಸುಧಾರಣೆ ಕಾದಿರುತ್ತದೆ. ಪ್ರಯತ್ನ ಮತ್ತು ಶ್ರದ್ಧೆಯಿಂದ ನಿಮ್ಮ ಗುರಿಯನ್ನು ಸಾಧಿಸಿ. ಎಲ್ಲಾ ಪ್ರಯತ್ನಗಳು ಫಲ ನೀಡುತ್ತವೆ.

ಜುಲೈ: ಶಾಂತವಾಗಿರಲು ಪ್ರಯತ್ನಿಸಿ. ಹಠಾತ್ ಆರ್ಥಿಕ ನಷ್ಟದ ಸಾಧ್ಯತೆ ಇದೆ. ಗುಪ್ತ ಶತ್ರುಗಳ ಬಗ್ಗೆ ಎಚ್ಚರಿಕೆ ವಹಿಸುವುದು ಉತ್ತಮ.

ಆಗಸ್ಟ್: ವೃತ್ತಿ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ತಡವಾಗಿ ಅಭಿವೃದ್ಧಿ ಇರುತ್ತದೆ, ನಿಮ್ಮ ಕಠಿಣ ಪ್ರಯತ್ನ ಮಾತ್ರ ನಿಲ್ಲದಿರಲಿ.

ಸೆಪ್ಟೆಂಬರ್: ನಿಮ್ಮ ಶ್ರಮವು ಫಲ ನೀಡುತ್ತದೆ, ಯಾವುದೇ ವಿಚಾರದಲ್ಲಿ ದೃಢ ನಿರ್ಧಾರಗಳನ್ನು ತೆಗೆದುಕೊಳ್ಳಿ, ಒಳ್ಳೆಯ ದಿನಗಳಿವೆ.

ಅಕ್ಟೋಬರ್: ಮುಂದೂಡಿದ್ದ ಕಾರ್ಯಗಳು ಪೂರ್ಣಗೊಳ್ಳಲಿವೆ. ಕುಟುಂಬದ ಪರಿಸ್ಥಿತಿಗಳು ತೃಪ್ತಿಕರವಾಗಿರುತ್ತವೆ. ಕೆಲವು ಗಂಭೀರ ಸಮಸ್ಯೆಗಳನ್ನು ಪರಿಹರಿಸಬಹುದು.

ನವೆಂಬರ್: ಉತ್ತಮ ಸಮಯ. ನಿಮ್ಮ ಇಚ್ಛಾಶಕ್ತಿಯಿಂದ ಯಶಸ್ಸು ನಿಮಗೆ ಲಭಿಸಲಿದೆ. ನೀವು ಎಲ್ಲಾ ವಿಷಯಗಳಲ್ಲಿ ಯಶಸ್ಸನ್ನು ಸಾಧಿಸುವಿರಿ.

ಡಿಸೆಂಬರ್: ನಿಮ್ಮ ಯೋಜನೆಗಳನ್ನು ಯಶಸ್ವಿಯಾಗಿ ಮುಗಿಸಲು ಇದು ಉತ್ತಮ ಸಮಯ. ಕೆಟ್ಟ ಜನರ ಸಹವಾಸ ತಪ್ಪಿಸಲು ಪ್ರಯತ್ನಿಸಿ.

ವೃಶ್ಚಿಕ ರಾಶಿ (Vrishchika) – Scorpio

ವೃಶ್ಚಿಕ ರಾಶಿ ವಾರ್ಷಿಕ ಭವಿಷ್ಯ 2025

ಜನವರಿ: ಹೊಸ ಯೋಜನೆಗಳನ್ನು ಕೈಗೊಳ್ಳುವ ಸಮಯ. ಧೈರ್ಯ ಮತ್ತು ಸಂಕಲ್ಪದಿಂದ ಮುಂದುವರೆಯಿರಿ.

ಫೆಬ್ರವರಿ: ಅನೇಕ ಅವಕಾಶಗಳನ್ನು ಪಡೆಯುತ್ತೀರಿ. ಆಸ್ತಿ ಸಂಬಂಧಿಸಿದ ಸಮಸ್ಯೆಗಳು ಬಗೆಹರಿಯಲಿವೆ. ಕಲೆಯಲ್ಲಿ ಆಸಕ್ತಿ ಹೆಚ್ಚುತ್ತದೆ.

ಮಾರ್ಚ್: ನಿಮ್ಮ ವೃತ್ತಿಜೀವನದಲ್ಲಿ ಪ್ರಗತಿ ಇರುತ್ತದೆ. ಸಂಪತ್ತಿನ ಅಭಿವೃದ್ಧಿ ಇರುತ್ತದೆ. ವಿದ್ಯಾರ್ಥಿಗಳು ಯಶಸ್ಸನ್ನು ಸಾಧಿಸುತ್ತಾರೆ.

ಏಪ್ರಿಲ್: ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ನೀವು ಕುಟುಂಬದೊಂದಿಗೆ ಪ್ರಯಾಣಿಸಲು ಯೋಜಿಸಬಹುದು.

ಮೇ: ಸೌಕರ್ಯಗಳಲ್ಲಿ ಹೆಚ್ಚಳವಾಗಲಿದೆ. ಅನಗತ್ಯ ವಾದಗಳನ್ನು ತಪ್ಪಿಸಿ. ಹಣವನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಿ.

ಜೂನ್: ಹೊಸ ಅವಕಾಶಗಳಿಗೆ ಸಿದ್ಧರಾಗಿ. ಉತ್ತಮ ಸಮಯ. ಕಠಿಣ ಪರಿಶ್ರಮ ಮತ್ತು ಸಮರ್ಪಣೆಯೊಂದಿಗೆ ಎಲ್ಲಾ ಕಾರ್ಯಗಳನ್ನು ಪೂರ್ಣಗೊಳಿಸಿ.

ಜುಲೈ: ಹಣ ಮತ್ತು ಆಸ್ತಿಗೆ ಸಂಬಂಧಿಸಿದಂತೆ ವಿವಾದಗಳಿರಬಹುದು. ಕಾನೂನು ವಿಷಯಗಳಿಂದ ದೂರವಿರಿ. ಯಾರನ್ನೂ ಕುರುಡಾಗಿ ನಂಬಬೇಡಿ.

ಆಗಸ್ಟ್: ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗುತ್ತವೆ. ಕೌಟುಂಬಿಕ ಜೀವನದ ಸಮಸ್ಯೆಗಳನ್ನು ಬುದ್ಧಿವಂತಿಕೆಯಿಂದ ಪರಿಹರಿಸಿ.

ಸೆಪ್ಟೆಂಬರ್: ತಮ್ಮ ಶ್ರಮದಿಂದ ಉತ್ತಮ ಸಾಧನೆಗಳನ್ನು ಸಾಧಿಸಬಹುದು. ನಿರ್ಧಾರವನ್ನು ಬಹಳ ಚಿಂತನಶೀಲವಾಗಿ ತೆಗೆದುಕೊಳ್ಳಿ.

ಅಕ್ಟೋಬರ್: ನೀವು ನಿಮ್ಮ ಕೆಲಸದ ಅಪೇಕ್ಷಿತ ಫಲಿತಾಂಶಗಳನ್ನು ಪಡೆಯುತ್ತೀರಿ, ವೃತ್ತಿಜೀವನದಲ್ಲಿ ನೀವು ಅಪಾರ ಯಶಸ್ಸನ್ನು ಪಡೆಯುತ್ತೀರಿ.

ನವೆಂಬರ್: ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ. ಬಾಕಿ ಉಳಿದಿರುವ ಕೆಲಸವನ್ನು ಬುದ್ಧಿವಂತಿಕೆಯಿಂದ ಪೂರ್ಣಗೊಳಿಸುತ್ತೀರಿ.

ಡಿಸೆಂಬರ್: ಆತ್ಮವಿಶ್ವಾಸದಿಂದ ಮುಂದುವರಿಯಿರಿ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಕೌಟುಂಬಿಕ ಜೀವನದಲ್ಲಿ ಸಂತೋಷ ಇರುತ್ತದೆ.

ಧನು ರಾಶಿ (Dhanus) – Sagittarius

ಧನು ರಾಶಿ ವಾರ್ಷಿಕ ಭವಿಷ್ಯ 2025

ಜನವರಿ: ಭವಿಷ್ಯಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ. ವ್ಯಾಪಾರ ಪರಿಸ್ಥಿತಿಯಲ್ಲಿ ಏರಿಳಿತಗಳು ಸಾಧ್ಯ.

ಫೆಬ್ರವರಿ: ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ. ಹಣ ಮತ್ತು ಆರೋಗ್ಯ ಎರಡಕ್ಕೂ ಗಮನ ಬೇಕು.

ಮಾರ್ಚ್: ವೈಯಕ್ತಿಕ ಮತ್ತು ವೃತ್ತಿಜೀವನದಲ್ಲಿ ಉತ್ತಮ ಅವಕಾಶಗಳು ಕಾಣುವಿರಿ. ಹಳೆಯ ಸಮಸ್ಯೆಗಳ ಬಗ್ಗೆ ಯೋಚಿಸುವುದನ್ನು ತಪ್ಪಿಸಿ.

ಏಪ್ರಿಲ್:  ಖರ್ಚು ಹೆಚ್ಚಾಗಬಹುದು. ಎಲ್ಲಾ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಪ್ರಯತ್ನಿಸಿ. ಕಠಿಣ ಪರಿಶ್ರಮ ಅಗತ್ಯ.

ಮೇ: ನಿಮ್ಮ ಯೋಜನೆಗಳಿಗೆ ಹೆಚ್ಚು ಶ್ರದ್ಧೆ ನೀಡಿ. ವ್ಯಾಪಾರದಲ್ಲಿ ಪ್ರಗತಿ ಕಂಡುಬರುವುದು ಮತ್ತು ನಿಮ್ಮ ಗೌರವ ಹೆಚ್ಚುವುದು.

ಜೂನ್: ಕೌಶಲ್ಯವನ್ನು ಪ್ರತಿಯೊಂದು ಕ್ಷೇತ್ರದಲ್ಲೂ ಬಳಸಿದರೆ ಯಶಸ್ಸು ಸಿಗುತ್ತದೆ. ರಾಜಕೀಯದಲ್ಲಿ ಕೆಲವು ಮಹತ್ವದ ಯಶಸ್ಸು ಸಿಗಲಿದೆ.

ಜುಲೈ: ಆರ್ಥಿಕವಾಗಿ ಉತ್ತಮ ಸಮಯ. ಉದ್ಯೋಗ, ವ್ಯಾಪಾರ ಮತ್ತು ರಾಜಕೀಯದಲ್ಲಿ ಪ್ರಗತಿಯ ಸಾಧ್ಯತೆಗಳಿವೆ. ಯಶಸ್ಸನ್ನು ಪಡೆಯುತ್ತೀರಿ.

ಆಗಸ್ಟ್: ಧೈರ್ಯ ಮತ್ತು ತಾಳ್ಮೆಯಿಂದ ಕೆಲಸ ಮಾಡಿ. ಕೆಲಸದ ಸ್ಥಳದಲ್ಲಿ ಪ್ರಗತಿಗೆ ಉತ್ತಮ ಅವಕಾಶಗಳಿವೆ. ದೀರ್ಘ ಪ್ರಯಾಣ ಇರಬಹುದು.

ಸೆಪ್ಟೆಂಬರ್: ಹೊಸ ಸಾಧನೆಗಳಿಗಾಗಿ ಉತ್ತಮ ಸಮಯ. ನಿಮ್ಮ ಅದೃಷ್ಟವು ನಿಮಗೆ ಅನುಕೂಲಕರವಾಗಿರುತ್ತದೆ. ನಿರ್ಧಾರವನ್ನು ಯೋಚಿಸಿ ತೆಗೆದುಕೊಳ್ಳಿ.

ಅಕ್ಟೋಬರ್: ಕೆಲಸದ ಸ್ಥಳದಲ್ಲಿ ನೀವು ಉನ್ನತ ಸ್ಥಾನವನ್ನು ತಲುಪುತ್ತೀರಿ. ರಿಯಲ್ ಎಸ್ಟೇಟ್ ಕೆಲಸದಿಂದ ಲಾಭ ಇರುತ್ತದೆ.

ನವೆಂಬರ್: ದೊಡ್ಡ ಲಾಭವನ್ನು ತರುತ್ತದೆ. ತಾಳ್ಮೆಯಿಂದಿರಿ ಮತ್ತು ಕಷ್ಟಪಟ್ಟು ಕೆಲಸ ಮಾಡಿ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ

ಡಿಸೆಂಬರ್: ಹಣಕ್ಕೆ ಸಂಬಂಧಿಸಿದ ಯೋಜನೆಗಳು ಯಶಸ್ವಿಯಾಗುತ್ತವೆ. ನಿಮ್ಮ ಪ್ರಭಾವ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಉತ್ತಮ ಅವಕಾಶಗಳು ದೊರೆಯಲಿವೆ.

ಮಕರ ರಾಶಿ (Makara) – Capricorn

ಮಕರ ರಾಶಿ ವಾರ್ಷಿಕ ಭವಿಷ್ಯ 2025

ಜನವರಿ: ಹೊಸ ಆರಂಭಗಳಿಗೆ ಸಮಯ. ಪ್ರಗತಿಗಾಗಿ ಪ್ರಯತ್ನಗಳು ಯಶಸ್ವಿಯಾಗುವ ಸಾಧ್ಯತೆ. ಕಠಿಣ ಪರಿಶ್ರಮ ಮತ್ತು ಧೈರ್ಯ ಅಗತ್ಯ.

ಫೆಬ್ರವರಿ: ವೃತ್ತಿಜೀವನದಲ್ಲಿ ಉತ್ತಮ ಅವಕಾಶಗಳು ಸಿಗುತ್ತವೆ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡುಬರುತ್ತದೆ. ನಿಮ್ಮ ಸಂಪತ್ತು ಹೆಚ್ಚಾಗುತ್ತದೆ

ಮಾರ್ಚ್: ಜವಾಬ್ದಾರಿಗಳನ್ನು ಶ್ರದ್ಧೆಯಿಂದ ನಿರ್ವಹಿಸಿ. ಇದು ನಿಮಗೆ ಪ್ರಗತಿಯ ಸಮಯ. ನಿಮ್ಮ ಗೌರವ ಮತ್ತು ಸ್ಥಾನಮಾನ ಹೆಚ್ಚಾಗುತ್ತದೆ.

ಏಪ್ರಿಲ್: ಧೈರ್ಯದಿಂದ ನಿರ್ಣಯಗಳನ್ನು ತೆಗೆದುಕೊಳ್ಳಿ. ಹೊಸ ಅವಕಾಶಗಳು ಎದುರಾಗಲಿವೆ. ಆರ್ಥಿಕ ಲಾಭ ಸಿಗಲಿದೆ. ನಿಮ್ಮ ಕೋಪವನ್ನು ನಿಯಂತ್ರಿಸಿ.

ಮೇ: ದೀರ್ಘಕಾಲೀನ ಯೋಜನೆಗೆ ಆದ್ಯತೆ ನೀಡಿ. ಎಚ್ಚರಿಕೆಯಿಂದ ಮತ್ತು ತಾಳ್ಮೆಯಿಂದ ಕೆಲಸ ಮಾಡಿ. ಅನಗತ್ಯ ವೆಚ್ಚವನ್ನು ತಪ್ಪಿಸಿ.

ಜೂನ್: ವೈಯಕ್ತಿಕ ಮತ್ತು ವೃತ್ತಿಜೀವನದಲ್ಲಿ ಮುನ್ನಡೆಯಲು ಉತ್ತಮ ಸಮಯ. ನೀವು ಕೆಲವು ಕೆಲಸದ ಜವಾಬ್ದಾರಿಯನ್ನು ಪಡೆಯಬಹುದು.

ಜುಲೈ: ನಿಮ್ಮ ಶ್ರಮ ಫಲ ನೀಡುತ್ತದೆ. ಅಧ್ಯಯನದಲ್ಲಿ ಉತ್ತಮ ಪ್ರಗತಿ ಕಂಡುಬರುತ್ತದೆ ಮತ್ತು ನೀವು ಗೌರವವನ್ನು ಪಡೆಯುತ್ತೀರಿ.

ಆಗಸ್ಟ್: ನಿಮ್ಮ ಕನಸುಗಳನ್ನು ಪೂರೈಸಲು ಹೊಸ ಅವಕಾಶಗಳು ಎದುರಾಗುತ್ತವೆ. ನಿಮ್ಮ ಸಾಮರ್ಥ್ಯದಿಂದ ಇತರರನ್ನು ಮೆಚ್ಚಿಸುವಿರಿ.

ಸೆಪ್ಟೆಂಬರ್: ಧೈರ್ಯದಿಂದ ನಿಮ್ಮ ಗುರಿಗಳನ್ನು ಸಾಧಿಸಲು ಪ್ರಯತ್ನಿಸಿ. ನಿಮಗೆ ಪ್ರಗತಿಯ ಸಾಧ್ಯತೆಗಳಿವೆ. ಚಿಂತನಶೀಲವಾಗಿ ವರ್ತಿಸಿ.

ಅಕ್ಟೋಬರ್: ಸಂಬಂಧಗಳಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಬೆಳೆಸಿ. ವೃತ್ತಿ ಜೀವನದಲ್ಲಿ ಯಶಸ್ಸಿನ ಸಾಧ್ಯತೆಗಳಿವೆ.

ನವೆಂಬರ್: ವೈಯಕ್ತಿಕ ಬೆಳವಣಿಗೆಗೆ ಉತ್ತಮ ಸಮಯ. ಜೀವನದ ಹೊಸ ಆಯಾಮಗಳತ್ತ ಗಮನ ಹರಿಸಿ. ಇದು ನಿಮಗೆ ಒಳ್ಳೆಯ ಸಮಯ.

ಡಿಸೆಂಬರ್: ವೃತ್ತಿಜೀವನದಲ್ಲಿ ಯಶಸ್ಸು ಕಾಣುವಿರಿ. ಹೊಸ ಆರಂಭಗಳಿಗೆ ಸಿದ್ಧರಾಗಿ. ನಿಮ್ಮ ವೃತ್ತಿಜೀವನದಲ್ಲಿ ಯಶಸ್ಸಿನ ಸಾಧ್ಯತೆಗಳಿವೆ. ಅದೃಷ್ಟ ಹೆಚ್ಚಲಿದೆ.

ಕುಂಭ ರಾಶಿ (Kumbha) – Aquarius

ಕುಂಭ ರಾಶಿ ವಾರ್ಷಿಕ ಭವಿಷ್ಯ 2025

ಜನವರಿ: ನಿಮ್ಮನ್ನು ನಿಮ್ಮ ಗುರಿಯತ್ತ ಕೊಂಡೊಯ್ಯುತ್ತದೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಕೋಪ ನಿಯಂತ್ರಿಸಿ.

ಫೆಬ್ರವರಿ: ಸ್ನೇಹ ಮತ್ತು ಸಂಬಂಧಗಳಲ್ಲಿ ಉತ್ತಮ ಸಮಯ. ಆರ್ಥಿಕ ಸುಧಾರಣೆ ಸಾಧ್ಯ. ಯುವಕರಿಗೆ ಒಳ್ಳೆಯ ಸುದ್ದಿ ಸಿಗಲಿದೆ.

ಮಾರ್ಚ್: ನಿಮ್ಮ ತಾಳ್ಮೆ ಮತ್ತು ಶ್ರಮ ಫಲ ನೀಡುತ್ತದೆ. ಪ್ರಗತಿಗೆ ಅವಕಾಶ ಇರುತ್ತದೆ. ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ.

ಏಪ್ರಿಲ್: ಬಲವಾದ ನಿರ್ಧಾರಗಳನ್ನು ಕೈಗೊಳ್ಳುವ ಕಾಲ. ಹೊಸ ಪ್ರಾರಂಭಗಳಿಗೆ ಸಿದ್ಧರಾಗಿ. ಯಾವುದೇ ವಿವಾದಗಳು ನಡೆಯುತ್ತಿದ್ದರೆ, ಕೊನೆಗೊಳ್ಳುತ್ತದೆ

ಮೇ: ನಿಮ್ಮ ಶ್ರಮವು ಯಶಸ್ಸಾಗಿ ಪ್ರತಿಫಲಿಸುತ್ತದೆ. ಜೀವನದಲ್ಲಿ ಹೊಸ ತಿರುವುಗಳು ಕಾಣುತ್ತವೆ. ಕಾನೂನು ವಿಷಯಗಳಲ್ಲಿ ಪರಿಹಾರ ಸಿಗುವಂತಿದೆ.

ಜೂನ್: ಆರ್ಥಿಕ ಸ್ಥಿತಿಯಲ್ಲಿ ಸತತ ಸುಧಾರಣೆ ಕಾಣುತ್ತದೆ. ವ್ಯಕ್ತಿತ್ವದ ಬೆಳವಣಿಗೆಗೆ ಸಮಯ. ಪ್ರಯತ್ನಗಳು ಫಲ ನೀಡಲಿವೆ. ಸಂಪತ್ತಿನ ಅಭಿವೃದ್ಧಿ ಇರುತ್ತದೆ.

ಜುಲೈ: ವೈಯಕ್ತಿಕ ಮತ್ತು ವೃತ್ತಿಜೀವನದಲ್ಲಿ ಸಮತೋಲನ ಸಾಧಿಸುವ ಸಮಯ. ಹಠಾತ್ ಆರ್ಥಿಕ ಲಾಭವನ್ನು ಹೊಂದಿರುತ್ತಾರೆ. ಕುಟುಂಬದಲ್ಲಿ ಸಂತೋಷ ಇರುತ್ತದೆ.

ಆಗಸ್ಟ್: ವ್ಯಾಪಾರದ ಅಂಶವಾಗಿ ಹಣಕಾಸಿನ ನಷ್ಟದ ಸಾಧ್ಯತೆಗಳಿವೆ. ಹೆಚ್ಚು ವ್ಯರ್ಥ ಪ್ರಯಾಣಗಳಿವೆ. ಉದ್ಯೋಗ ಕ್ಷೇತ್ರಗಳಲ್ಲಿ ತಾಳ್ಮೆಯಿಂದಿರಬೇಕು.

ಸೆಪ್ಟೆಂಬರ್: ನಿಮ್ಮ ಗುರಿಗಳತ್ತ ಮುನ್ನಡೆಯಿರಿ. ಹೊಸ ಜನರನ್ನು ನಂಬಿ ಮೋಸ ಹೋಗಬಾರದು. ಸಮಾಜದಲ್ಲಿ ಅಪಖ್ಯಾತಿ ಬರದಂತೆ ಎಚ್ಚರಿಕೆ ವಹಿಸಿ.

ಅಕ್ಟೋಬರ್: ಇತರರಿಗೆ ಹಾನಿಯನ್ನುಂಟುಮಾಡುವ ಕೆಲಸಗಳಿಂದ ದೂರವಿರುವುದು ಉತ್ತಮ. ಹೊಸ ಅವಕಾಶಗಳು ಎದುರಾಗುತ್ತವೆ.

ನವೆಂಬರ್: ನಿಮಗೆ ಅನುಕೂಲಕರ ಸಮಯ. ವ್ಯಾಪಾರ ಕ್ಷೇತ್ರದಲ್ಲಿ ಲಾಭವಾಗಲಿದೆ. ಬಂಧು ಮಿತ್ರರ ಬೆಂಬಲ ದೊರೆಯಲಿದೆ. ಪ್ರಯತ್ನಗಳ ಫಲ ಕಾಣುವಿರಿ.

ಡಿಸೆಂಬರ್: ಗುರಿಗಳನ್ನು ಸಾಧಿಸುವ ಸಮಯ. ಶಾಂತವಾಗಿರಲು ಪ್ರಯತ್ನಿಸಿ. ಆದರೆ ಯಾವುದೇ ವಿಚಾರದಲ್ಲಿ ನಿರ್ಲಕ್ಷ್ಯ ಒಳ್ಳೆಯದಲ್ಲ.

ಮೀನ ರಾಶಿ (Meena) – Pisces

ಮೀನ ರಾಶಿ ವಾರ್ಷಿಕ ಭವಿಷ್ಯ 2025

ಜನವರಿ: ಅನಗತ್ಯ ವೆಚ್ಚಗಳು ಮತ್ತು ಅನಿರೀಕ್ಷಿತ ವೆಚ್ಚಗಳು ಹೆಚ್ಚಾಗುತ್ತವೆ. ನೀವು ಎಲ್ಲದರಲ್ಲೂ ಹೆಚ್ಚು ಜಾಗರೂಕರಾಗಿರುವುದು ಉತ್ತಮ.

ಫೆಬ್ರವರಿ: ಹಣಕಾಸಿನ ವಿಚಾರದಲ್ಲಿ ಯಾರನ್ನೂ ಕುರುಡಾಗಿ ನಂಬದಿರುವುದು ಉತ್ತಮ. ಅನಗತ್ಯ ಸಂಪರ್ಕ ಮತ್ತು ವ್ಯಸನಗಳಿಂದ ದೂರವಿರಿ.

ಮಾರ್ಚ್: ಧೈರ್ಯದಿಂದ ಹೊಸ ಅವಕಾಶಗಳನ್ನು ಅನ್ವೇಷಿಸಲು ಪ್ರಾರಂಭಿಸಿ. ಹಣಕಾಸಿನ ಸಮಸ್ಯೆಗಳು ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತವೆ.

ಏಪ್ರಿಲ್: ವ್ಯಾಪಾರಗಳು ಲಾಭದಾಯಕವಾಗಿ ಮುನ್ನಡೆಯುತ್ತವೆ. ಮಕ್ಕಳ ಬಗ್ಗೆ ನಿರೀಕ್ಷಿತ ಒಳ್ಳೆಯ ಸುದ್ದಿ ಸಿಗಲಿದೆ. ಆರೋಗ್ಯ ಚೆನ್ನಾಗಿರುತ್ತದೆ.

ಮೇ: ಉದ್ಯೋಗದಲ್ಲಿ ಅನಿರೀಕ್ಷಿತವಾಗಿ ಉತ್ತಮ ಬೆಳವಣಿಗೆ ನಡೆಯುತ್ತದೆ. ವೃತ್ತಿ ಮತ್ತು ವ್ಯಾಪಾರ ಬಹಳ ಲಾಭದಾಯಕವಾಗಿ ಪ್ರಗತಿ ಹೊಂದಲಿದೆ.

ಜೂನ್: ನಿಮಗೆ ದೊರೆಯುವ ಅವಕಾಶಗಳನ್ನು ಸರಿಯಾಗಿ ಉಪಯೋಗಿಸಿ. ಹಣಕಾಸಿನ ವ್ಯವಹಾರಗಳು ಇತ್ಯರ್ಥಗೊಳ್ಳುತ್ತವೆ. ಕೌಟುಂಬಿಕ ಜೀವನ ಸುಗಮವಾಗಲಿದೆ.

ಜುಲೈ: ಜೀವನದಲ್ಲಿ ಪ್ರಗತಿ ಕಾಣಲು ಶ್ರದ್ಧೆ ಮತ್ತು ಸಮರ್ಪಣೆಯನ್ನು ಪ್ರದರ್ಶಿಸಿ. ವೃತ್ತಿ ಮತ್ತು ವ್ಯಾಪಾರದಲ್ಲಿ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ.

ಆಗಸ್ಟ್: ನಿಮ್ಮ ದಕ್ಷತೆಯು ಅಪೇಕ್ಷಿತ ಮನ್ನಣೆಯನ್ನು ಪಡೆಯುತ್ತದೆ. ಹೆಚ್ಚುವರಿ ಆದಾಯದ ಪ್ರಯತ್ನಗಳು ಯಶಸ್ವಿಯಾಗುವ ಸಾಧ್ಯತೆಯಿದೆ.

ಸೆಪ್ಟೆಂಬರ್: ವೃತ್ತಿ ಮತ್ತು ವ್ಯಾಪಾರದಲ್ಲಿ ಲಾಭ ಸ್ವಲ್ಪ ಕಡಿಮೆಯಾಗುವ ಸಾಧ್ಯತೆ ಇದೆ. ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಜಾಗ್ರತೆ ವಹಿಸುವುದು ಉತ್ತಮ.

ಅಕ್ಟೋಬರ್: ಆತ್ಮವಿಶ್ವಾಸದಿಂದ ಮುಂದುವರೆಯಿರಿ. ವೃತ್ತಿ ಮತ್ತು ವ್ಯವಹಾರಗಳು ಲಾಭದ ಹಾದಿಯಲ್ಲಿರುತ್ತವೆ. ಆದಾಯ ವೃದ್ಧಿಗೆ ಉತ್ತಮ ಅವಕಾಶವಿದೆ.

ನವೆಂಬರ್: ವೃತ್ತಿ ಮತ್ತು ವ್ಯಾಪಾರವು ನಿರೀಕ್ಷಿತ ಮಟ್ಟದಲ್ಲಿ ಬೆಳೆಯುತ್ತದೆ. ಆದಾಯದ ದೃಷ್ಟಿಯಿಂದ ಶುಭ ಯೋಗಗಳು ದೊರೆಯಲಿವೆ.

ಡಿಸೆಂಬರ್: ವ್ಯಾಪಾರದಲ್ಲಿ ಲಾಭಕ್ಕೆ ಕೊರತೆಯಿಲ್ಲ. ಆದಾಯ ಸ್ಥಿರವಾಗಿರುತ್ತದೆ. ಹಣಕಾಸಿನ ಪರಿಸ್ಥಿತಿ ಸುಗಮವಾಗಿ ಸಾಗಲಿದೆ. ಗಳಿಕೆಯ ಪ್ರಯತ್ನಗಳು ಯಶಸ್ವಿಯಾಗುತ್ತವೆ.

English Summary
Related Stories