ದಿನ ಭವಿಷ್ಯ 17 ಅಕ್ಟೋಬರ್ 2026, ಶನಿವಾರ

ಅಕ್ಟೋಬರ್ 17ರ ದಿನ ಭವಿಷ್ಯದಲ್ಲಿ ಮೇಷದಿಂದ ಮೀನದವರೆಗಿನ ರಾಶಿಗಳಿಗೆ ಹಣಕಾಸು, ಉದ್ಯೋಗ, ಕುಟುಂಬ, ಆರೋಗ್ಯ, ಸಂಬಂಧಗಳ ವಿಚಾರದಲ್ಲಿ ವಿಭಿನ್ನ ಫಲಗಳಿವೆ. ಕೆಲವು ರಾಶಿಗಳಿಗೆ ಧನಲಾಭದ ಯೋಗವಿದ್ದರೆ, ಇನ್ನು ಕೆಲವು ರಾಶಿಯವರು ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳಬೇಕು.

ಇಂದಿನ ಗ್ರಹಗಳ ಪ್ರಭಾವ ನಿಮ್ಮ ರಾಶಿಗಳ ಮೇಲೆ ಹೇಗಿದೆ? ಸಂಪೂರ್ಣ ರಾಶಿ ಭವಿಷ್ಯ ತಿಳಿಯಲು ಇಲ್ಲಿ ಕ್ಲಿಕ್ಕಿಸಿ: ದಿನ ಭವಿಷ್ಯ 17-10-2026: ಗುರುವಿನ ಕೃಪೆ, 4 ರಾಶಿಗಳಿಗೆ ಸಂಪತ್ತು ವೃದ್ಧಿ! ಮುಟ್ಟಿದ್ದೆಲ್ಲ ಕೈಗೂಡುವ ಸಮಯ

ಮೇಷ ರಾಶಿ: ಇತರರಿಗೆ ತೊಂದರೆ ನೀಡುವ ಕೆಲಸಗಳಿಂದ ದೂರವಿದ್ದು, ವೃತ್ತಿಯಲ್ಲಿನ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಿ. ಹೊಸ ಕೆಲಸಗಳಲ್ಲಿ ಆತುರಪಡದೆ, ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಿ..

ವೃಷಭ ರಾಶಿ: ಹೊಸ ಯೋಜನೆಗಳನ್ನು ರೂಪಿಸಲು ಉತ್ತಮ ದಿನವಾಗಿದ್ದು, ಅನಿರೀಕ್ಷಿತ ಧನಲಾಭದ ಸಾಧ್ಯತೆಯಿದೆ. ಕುಟುಂಬದಲ್ಲಿ ಸಂತೋಷ ನೆಲೆಸಲಿದ್ದು, ಶುಭ ಸುದ್ದಿ ಕೇಳುವ ಅವಕಾಶವಿದೆ.

ಮಿಥುನ ರಾಶಿ: ಕಲಾವಿದರು ಮತ್ತು ಮಾಧ್ಯಮ ಕ್ಷೇತ್ರದವರಿಗೆ ಹೊಸ ಅವಕಾಶಗಳು ಸಿಗಬಹುದು. ಕುಟುಂಬದಲ್ಲಿ ನೆಮ್ಮದಿ ಹೆಚ್ಚಲಿದ್ದು, ಸಮಾಜದಲ್ಲಿ ಗೌರವ ಮತ್ತು ಮನ್ನಣೆ ದೊರೆಯಲಿದೆ.

ಕರ್ಕಾಟಕ ರಾಶಿ: ಹಣಕಾಸಿನ ಅಗತ್ಯಕ್ಕಾಗಿ ಮಾಡುವ ಸಾಲದ ಪ್ರಯತ್ನಗಳು ಯಶಸ್ವಿಯಾಗಬಹುದು. ಕುಟುಂಬದ ವಿಚಾರಗಳಲ್ಲಿ ತಾಳ್ಮೆಯಿಂದಿದ್ದು, ಆರೋಗ್ಯ ಮತ್ತು ಮಾತಿನ ಮೇಲೆ ಗಮನವಿರಲಿ.

ಸಿಂಹ ರಾಶಿ: ಆತ್ಮವಿಶ್ವಾಸದಿಂದ ಕೆಲಸ ಮಾಡಿದರೂ, ಹೊಸ ಪ್ರಯತ್ನಗಳಲ್ಲಿ ಅಡೆತಡೆಗಳು ಎದುರಾಗಬಹುದು. ಕೋಪ ನಿಯಂತ್ರಿಸಿ, ಮಾತನಾಡುವಾಗ ಸಂಯಮ ಕಾಪಾಡಿಕೊಳ್ಳಿ.

ಕನ್ಯಾ ರಾಶಿ: ಕುಟುಂಬದಲ್ಲಿ ಸಂತೋಷ ನೆಲೆಸಲಿದ್ದು, ಅನಿರೀಕ್ಷಿತ ಹಣದ ಲಾಭದಿಂದ ಸಾಲದ ಹೊರೆ ಕಡಿಮೆಯಾಗಬಹುದು. ನಿಮ್ಮ ನಡೆ ಮತ್ತು ಕೆಲಸಗಳಿಂದ ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ.

ತುಲಾ ರಾಶಿ: ಧನಲಾಭದ ಸಾಧ್ಯತೆಯಿದ್ದು, ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂತೋಷದ ಸಮಯ ಕಳೆಯುವಿರಿ. ಆರೋಗ್ಯ ಉತ್ತಮವಾಗಿದ್ದು, ಶುಭಕಾರ್ಯಗಳ ಪ್ರಯತ್ನಗಳು ಕೈಗೂಡುವ ಸಾಧ್ಯತೆಯಿದೆ.

ವೃಶ್ಚಿಕ ರಾಶಿ: ನಿಮ್ಮ ಬುದ್ಧಿವಂತಿಕೆ ಮತ್ತು ಧೈರ್ಯದಿಂದ ಕೆಲಸಗಳಲ್ಲಿ ಯಶಸ್ಸು ಪಡೆಯುವಿರಿ. ಪ್ರಮುಖ ವ್ಯಕ್ತಿಗಳ ಭೇಟಿಯಿಂದ ಅನುಕೂಲವಾಗಲಿದ್ದು, ವಿರೋಧಿಗಳ ಕಿರಿಕಿರಿ ಕಡಿಮೆಯಾಗಬಹುದು.

ಧನು ರಾಶಿ: ಹಣಕಾಸಿನ ವಿಚಾರಗಳಲ್ಲಿ ಅನುಕೂಲಕರ ಬೆಳವಣಿಗೆಗಳಾಗಬಹುದು, ಸಾಲದ ಸಮಸ್ಯೆಗಳು ಕಡಿಮೆಯಾಗುವ ಸಾಧ್ಯತೆಯಿದೆ. ಕುಟುಂಬದೊಂದಿಗೆ ಸಂತೋಷದಿಂದ ಸಮಯ ಕಳೆಯುವಿರಿ ಮತ್ತು ಇತರರಿಗೆ ಸಹಾಯ ಮಾಡುವಿರಿ.

ಮಕರ ರಾಶಿ: ಬಂಧುಗಳು ಮತ್ತು ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾಗದಂತೆ ಎಚ್ಚರಿಕೆ ವಹಿಸಿ. ಆರೋಗ್ಯದ ಬಗ್ಗೆ ಗಮನ ನೀಡಿ, ಗೊಂದಲದ ನಡುವೆಯೂ ಹೊಸ ಕೆಲಸಗಳಿಗೆ ಯೋಜನೆ ರೂಪಿಸಿ.

ಕುಂಭ ರಾಶಿ: ಅನಗತ್ಯ ಖರ್ಚುಗಳನ್ನು ತಪ್ಪಿಸಿ, ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರಿಕೆಯಿಂದಿರಿ. ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆಯಿರುವುದರಿಂದ ಆರೋಗ್ಯಕ್ಕೆ ಆದ್ಯತೆ ನೀಡಿ.

ಮೀನ ರಾಶಿ: ನಿಮ್ಮ ಪ್ರಯತ್ನಗಳಿಗೆ ಉತ್ತಮ ಫಲ ದೊರೆಯುತ್ತದೆ, ಅನಿರೀಕ್ಷಿತ ಧನಲಾಭ ಸಂತೋಷ ತರಬಹುದು. ಕುಟುಂಬದೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುವಿರಿ, ಹೊಸ ಯೋಜನೆಗಳಿಗೂ ಅನುಕೂಲಕರ ದಿನವಾಗಿದೆ.

ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.

Savitha

ಪತ್ರಿಕೋದ್ಯಮದಲ್ಲಿ 8 ವರ್ಷಗಳ ಬರವಣಿಗೆ ಅನುಭವ ಹೊಂದಿರುವ ಸವಿತಾ ರವರು, ಟ್ರೆಂಡಿಂಗ್ ವಿಷಯಗಳು, ಸೋಶಿಯಲ್ ಮೀಡಿಯಾ, ವೈರಲ್ ಕಂಟೆಂಟ್, ಧಾರ್ಮಿಕ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ… More »

Related Stories