ದಿನ ಭವಿಷ್ಯ 18 ನವೆಂಬರ್ 2026, ಬುಧವಾರ
Today Horoscope: ಈ ದಿನ ಕೆಲವು ರಾಶಿಗಳಿಗೆ ಆರ್ಥಿಕ ಲಾಭ ಮತ್ತು ಕೆಲಸಗಳಲ್ಲಿ ಯಶಸ್ಸು ಸಿಗುವ ಸಾಧ್ಯತೆ ಇದೆ. ಇನ್ನು ಕೆಲವು ರಾಶಿಯವರು ಆರೋಗ್ಯ, ಹಣಕಾಸು, ಕುಟುಂಬದ ವಿಚಾರಗಳಲ್ಲಿ ಎಚ್ಚರಿಕೆಯಿಂದ ವರ್ತಿಸುವುದು ಉತ್ತಮ.
12 ರಾಶಿಗಳ ಇಂದಿನ ಸಂಪೂರ್ಣ ಭವಿಷ್ಯ ತಿಳಿಯಲು ಕ್ಲಿಕ್ಕಿಸಿ: ದಿನ ಭವಿಷ್ಯ 18-11-2026: ಖರ್ಚಿನ ಮೇಲೆ ನಿಯಂತ್ರಣ ಇರಲಿ; ಈ ರಾಶಿಗಳಿಗೆ ಹಣ ಕೈತಪ್ಪುವ ಸಾಧ್ಯತೆ ಹೆಚ್ಚು
ಮೇಷ ರಾಶಿ: ವಿದೇಶ ಪ್ರಯಾಣದ ಪ್ರಯತ್ನಗಳಿಗೆ ಉತ್ತಮ ಫಲ ಸಿಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಸಂತೋಷ ಹೆಚ್ಚಾದರೂ ಆರೋಗ್ಯ ಮತ್ತು ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ.
ವೃಷಭ ರಾಶಿ: ಸಾಲ ಪಡೆಯುವ ಪ್ರಯತ್ನಗಳು ಕೈಗೂಡುವ ಸಾಧ್ಯತೆ ಇದೆ. ಕುಟುಂಬದ ಮನಸ್ತಾಪ, ಕೋಪ ಮತ್ತು ಆರೋಗ್ಯದ ವಿಚಾರದಲ್ಲಿ ತಾಳ್ಮೆಯಿಂದ ವರ್ತಿಸುವುದು ಉತ್ತಮ.
ಮಿಥುನ ರಾಶಿ: ಕೈಗೊಂಡ ಕೆಲಸಗಳಲ್ಲಿ ಅಡೆತಡೆ ಎದುರಾಗಬಹುದು. ಹಣಕಾಸಿನ ಒತ್ತಡ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮಾತಿನ ಮೇಲೆ ಹಿಡಿತವಿರಲಿ.
ಕರ್ಕಾಟಕ ರಾಶಿ: ಅನಗತ್ಯ ಖರ್ಚುಗಳಿಂದ ಹಣಕಾಸಿನ ನಷ್ಟವಾಗುವ ಸಾಧ್ಯತೆ ಇದೆ. ಕುಟುಂಬದ ವಿಚಾರಗಳು ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಉತ್ತಮ.
ಸಿಂಹ ರಾಶಿ: ಪ್ರಭಾವಿ ವ್ಯಕ್ತಿಗಳ ಪರಿಚಯದಿಂದ ಹೊಸ ಅವಕಾಶಗಳು ಸಿಗಬಹುದು. ಕುಟುಂಬದಲ್ಲಿ ನೆಮ್ಮದಿ, ಸಂತೋಷ ಹೆಚ್ಚಾಗಲಿದ್ದು ಶುಭ ಕಾರ್ಯಗಳಲ್ಲಿ ಭಾಗವಹಿಸುವಿರಿ.
ಕನ್ಯಾ ರಾಶಿ: ನಿರೀಕ್ಷಿತ ಶುಭ ಸುದ್ದಿ ಹಾಗೂ ಅನಿರೀಕ್ಷಿತ ಹಣದ ಲಾಭ ದೊರೆಯಬಹುದು. ಕೈಗೊಂಡ ಕೆಲಸಗಳಲ್ಲಿ ಯಶಸ್ಸು ಸಿಗಲಿದ್ದು ಬಂಧುಗಳ ಭೇಟಿಯಿಂದ ಸಂತೋಷ ಹೆಚ್ಚಾಗಲಿದೆ.
ತುಲಾ ರಾಶಿ: ಪ್ರಮುಖ ವ್ಯಕ್ತಿಗಳ ಭೇಟಿಯಿಂದ ಹೊಸ ವಿಚಾರಗಳು ತಿಳಿಯಲಿವೆ. ಕುಟುಂಬದಲ್ಲಿ ನೆಮ್ಮದಿಯ ಕೊರತೆ ಉಂಟಾಗದಂತೆ ಬಂಧುಗಳೊಂದಿಗೆ ಎಚ್ಚರಿಕೆಯಿಂದ ವರ್ತಿಸಿ.
ವೃಶ್ಚಿಕ ರಾಶಿ: ಪ್ರಯಾಣ ಮತ್ತು ಆರೋಗ್ಯಕ್ಕಾಗಿ ಹೆಚ್ಚಿನ ಹಣ ಖರ್ಚಾಗುವ ಸಾಧ್ಯತೆ ಇದೆ. ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ.
ಧನು ರಾಶಿ: ಹೊಸ ಕೆಲಸಗಳನ್ನು ಆರಂಭಿಸುವ ಉತ್ಸಾಹ ಮೂಡಲಿದೆ, ಆದರೆ ಹೆಚ್ಚಿನ ಶ್ರಮ ಮತ್ತು ಖರ್ಚು ಎದುರಾಗಬಹುದು. ವೃತ್ತಿ ಹಾಗೂ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ.
ಮಕರ ರಾಶಿ: ಕುಟುಂಬದಲ್ಲಿ ಬದಲಾವಣೆ ತರಲು ಪ್ರಯತ್ನಿಸುವಿರಿ. ಆರೋಗ್ಯದ ಸಣ್ಣ ಸಮಸ್ಯೆಗಳು ಕಾಡಿದರೂ ಪರಿಶ್ರಮದಿಂದ ಕೈಗೊಂಡ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ.
ಕುಂಭ ರಾಶಿ: ಹಣಕಾಸಿನ ನಷ್ಟ ಮತ್ತು ಅನಗತ್ಯ ಖರ್ಚಿನ ಸಾಧ್ಯತೆ ಇರುವುದರಿಂದ ಎಚ್ಚರಿಕೆ ವಹಿಸಿ. ಆರೋಗ್ಯ ಹಾಗೂ ಕುಟುಂಬದ ವಿಚಾರಗಳಲ್ಲಿ ತಾಳ್ಮೆ ಕಾಪಾಡಿಕೊಳ್ಳಿ.
ಮೀನ ರಾಶಿ: ಕೈಗೊಂಡ ಕೆಲಸಗಳಲ್ಲಿ ಯಶಸ್ಸು ಮತ್ತು ಅನಿರೀಕ್ಷಿತ ಹಣದ ಲಾಭ ದೊರೆಯಬಹುದು. ಕುಟುಂಬದಲ್ಲಿ ಸಂತೋಷ ಹೆಚ್ಚಾಗಲಿದ್ದು ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆ ವೃದ್ಧಿಸಲಿದೆ.



