ದಿನ ಭವಿಷ್ಯ 02 ಅಕ್ಟೋಬರ್ 2026, ಶುಕ್ರವಾರ

Today Horoscope: ಇಂದಿನ ದಿನ ಯಾವ ರಾಶಿಗೆ ಶುಭಫಲ, ಯಾರಿಗೆ ಹಣಕಾಸಿನ ಎಚ್ಚರಿಕೆ, ಉದ್ಯೋಗದಲ್ಲಿ ಪ್ರಗತಿ, ಕುಟುಂಬದಲ್ಲಿ ಸಂತಸ, ಪ್ರಯಾಣದ ಯೋಗ ಮತ್ತು ಆರೋಗ್ಯದ ಬಗ್ಗೆ ಗಮನ ಅಗತ್ಯ ಎಂಬುದನ್ನು ತಿಳಿಯಿರಿ.

ದಿನ ಭವಿಷ್ಯ 02 ಅಕ್ಟೋಬರ್ 2026 (Today Horoscope): ಇಂದಿನ ಸಂಪೂರ್ಣ ರಾಶಿಫಲ ತಿಳಿಯಲು ಇಲ್ಲಿ ಕ್ಲಿಕ್ಕಿಸಿ: ದಿನ ಭವಿಷ್ಯ 02-10-2026: ಮೇಷ, ಸಿಂಹ, ಕನ್ಯಾ ರಾಶಿಗೆ ಧನಲಾಭ! ನಿಮ್ಮ ದಿನ ಹೇಗಿದೆ? ಇಲ್ಲಿದೆ ರಾಶಿ ಭವಿಷ್ಯ

ಮೇಷ ರಾಶಿ:

ಹಣಕಾಸಿನಲ್ಲಿ ಪ್ರಗತಿ ಕಂಡುಬರಲಿದೆ. ಬಂಧು-ಮಿತ್ರರ ಭೇಟಿಯಿಂದ ಸಂತಸ ಹೆಚ್ಚಾಗುತ್ತದೆ. ಕುಟುಂಬದಲ್ಲಿ ನೆಮ್ಮದಿ ಇರಲಿದ್ದು, ಕೈಗೊಂಡ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಪ್ರಯಾಣದಿಂದ ಲಾಭವಾಗಬಹುದು.

ವೃಷಭ ರಾಶಿ:

ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಅನಿರೀಕ್ಷಿತ ನಷ್ಟವಾಗಬಹುದು ಹಾಗೂ ಕೆಲವು ಕೆಲಸಗಳು ವಿಳಂಬವಾಗಬಹುದು. ಸಣ್ಣ ಆರೋಗ್ಯ ಸಮಸ್ಯೆಗಳು ಕಾಡಬಹುದು. ಆಪ್ತರೊಂದಿಗೆ ಮನಸ್ತಾಪವಾಗದಂತೆ ಜಾಗರೂಕರಾಗಿರಿ.

ಮಿಥುನ ರಾಶಿ:

ಆರೋಗ್ಯ ಉತ್ತಮವಾಗಿದ್ದು ಉತ್ಸಾಹದಿಂದ ದಿನ ಕಳೆಯುವಿರಿ. ಕುಟುಂಬದಲ್ಲಿ ಸಂತಸದ ವಾತಾವರಣ ಇರಲಿದೆ. ಹೊಸ ವಸ್ತು ಖರೀದಿಸುವ ಅವಕಾಶ ಸಿಗಬಹುದು. ಕೆಲಸಗಳಲ್ಲಿ ಯಶಸ್ಸು ಮತ್ತು ಶುಭ ಸುದ್ದಿ ದೊರೆಯಲಿದೆ.

ಕರ್ಕಾಟಕ ರಾಶಿ:

ವಿದೇಶ ಪ್ರಯಾಣದ ಪ್ರಯತ್ನಗಳು ಫಲ ನೀಡಬಹುದು. ಕುಟುಂಬದಲ್ಲಿ ನೆಮ್ಮದಿ ಇದ್ದರೂ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಹೊಸ ಕೆಲಸಗಳನ್ನು ಮುಂದೂಡಬೇಕಾಗಬಹುದು. ಪ್ರಯಾಣ ಹೆಚ್ಚಾಗುವ ಸಾಧ್ಯತೆ ಇದೆ.

ಸಿಂಹ ರಾಶಿ:

ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ಆದರೆ ಅನಗತ್ಯ ಖರ್ಚು, ಪ್ರಯಾಣ ಮತ್ತು ಮಾನಸಿಕ ಒತ್ತಡ ಎದುರಾಗಬಹುದು. ಬಂಧು-ಮಿತ್ರರೊಂದಿಗೆ ಭಿನ್ನಾಭಿಪ್ರಾಯ ತಪ್ಪಿಸಿ. ದೈಹಿಕ ಆಯಾಸ ಕಾಣಿಸಿಕೊಳ್ಳಬಹುದು.

ಕನ್ಯಾ ರಾಶಿ:

ವೃತ್ತಿಯಲ್ಲಿ ಎದುರಾಗುವ ಸಮಸ್ಯೆಗಳನ್ನು ಧೈರ್ಯದಿಂದ ಪರಿಹರಿಸುವಿರಿ. ಹಣಕಾಸಿನ ನಷ್ಟದ ಸಾಧ್ಯತೆ ಇರುವುದರಿಂದ ಖರ್ಚಿನ ಬಗ್ಗೆ ಎಚ್ಚರಿಕೆ ವಹಿಸಿ. ಮಹಿಳೆಯರಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಜಾಗರೂಕರಾಗಿರಿ.

ತುಲಾ ರಾಶಿ:

ಅನಿರೀಕ್ಷಿತ ಹಣಕಾಸಿನ ಲಾಭ ದೊರೆಯಬಹುದು. ಉದ್ಯೋಗ ಮತ್ತು ವೃತ್ತಿಯಲ್ಲಿ ಪ್ರಗತಿ ಕಂಡುಬರಲಿದೆ. ಬಂಧು-ಮಿತ್ರರ ಭೇಟಿಯಿಂದ ಸಂತಸ ಹೆಚ್ಚಾಗಲಿದ್ದು, ಶುಭ ಸುದ್ದಿಗಳು ಕೇಳಿಬರಬಹುದು.

ವೃಶ್ಚಿಕ ರಾಶಿ:

ಉದ್ಯೋಗದಲ್ಲಿ ನಿರೀಕ್ಷಿತ ಪ್ರಗತಿ ಸಿಗಲಿದೆ. ಹಣಕಾಸಿನ ಲಾಭದ ಜೊತೆಗೆ ಕುಟುಂಬದಲ್ಲಿ ನೆಮ್ಮದಿ ಇರಲಿದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಶುಭಕಾರ್ಯಗಳ ಪ್ರಯತ್ನಗಳು ಯಶಸ್ವಿಯಾಗಬಹುದು.

ಧನು ರಾಶಿ:

ಶುಭಕಾರ್ಯಗಳ ಪ್ರಯತ್ನಗಳು ಫಲ ನೀಡಲಿವೆ. ನಿರೀಕ್ಷಿತ ಒಳ್ಳೆಯ ಸುದ್ದಿ ಸಂತಸ ತರಲಿದೆ. ಬಂಧು-ಮಿತ್ರರೊಂದಿಗೆ ಸಮಯ ಕಳೆಯುವಿರಿ. ಆಕಸ್ಮಿಕ ಧನಲಾಭ ಮತ್ತು ಹೊಸ ವಸ್ತು ಖರೀದಿ ಯೋಗವಿದೆ.

ಮಕರ ರಾಶಿ:

ಕುಟುಂಬದವರ ಸಹಕಾರ ದೊರೆಯಲಿದೆ. ಆದರೆ ಹಣಕಾಸಿನ ನಷ್ಟದ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅಗತ್ಯ. ಆರೋಗ್ಯದಲ್ಲಿ ಆಯಾಸ ಕಾಣಿಸಿಕೊಳ್ಳಬಹುದು. ಕೆಲವು ಪ್ರಯಾಣಗಳನ್ನು ಮುಂದೂಡಬೇಕಾಗಬಹುದು.

ಕುಂಭ ರಾಶಿ:

ಮಾತುಕತೆಯಲ್ಲಿ ಸಂಯಮದಿಂದ ನಡೆದುಕೊಳ್ಳಿ. ಕೆಲವು ಕೆಲಸಗಳಿಗೆ ಅಡೆತಡೆಗಳು ಎದುರಾಗಬಹುದು. ಹಣಕಾಸಿನ ಸಮಸ್ಯೆಗಳು ನಿಧಾನವಾಗಿ ಬಗೆಹರಿಯಲಿವೆ. ಹೊಸ ವ್ಯಕ್ತಿಗಳೊಂದಿಗೆ ವ್ಯವಹರಿಸುವಾಗ ಎಚ್ಚರಿಕೆ ವಹಿಸಿ.

ಮೀನ ರಾಶಿ:

ಕೃಷಿ ಕ್ಷೇತ್ರದಲ್ಲಿರುವವರಿಗೆ ಲಾಭದ ಅವಕಾಶಗಳಿವೆ. ಆತುರದ ನಿರ್ಧಾರಗಳಿಂದ ಸಮಸ್ಯೆಯಾಗಬಹುದು. ವಿರೋಧಿಗಳಿಂದ ದೂರವಿರಿ. ಆರೋಗ್ಯದ ಕಡೆ ಗಮನ ನೀಡಿ, ದೈಹಿಕ ಆಯಾಸ ಮತ್ತು ಆತಂಕ ಕಾಡಬಹುದು.

Savitha

ಪತ್ರಿಕೋದ್ಯಮದಲ್ಲಿ 8 ವರ್ಷಗಳ ಬರವಣಿಗೆ ಅನುಭವ ಹೊಂದಿರುವ ಸವಿತಾ ರವರು, ಟ್ರೆಂಡಿಂಗ್ ವಿಷಯಗಳು, ಸೋಶಿಯಲ್ ಮೀಡಿಯಾ, ವೈರಲ್ ಕಂಟೆಂಟ್, ಧಾರ್ಮಿಕ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ… More »

Related Stories