ದಿನ ಭವಿಷ್ಯ 27 ಅಕ್ಟೋಬರ್ 2026, ಮಂಗಳವಾರ

ಅಕ್ಟೋಬರ್ 27ರ ದಿನ ಭವಿಷ್ಯದಲ್ಲಿ ಹನ್ನೆರಡು ರಾಶಿಗಳ ಆರ್ಥಿಕ ಸ್ಥಿತಿ, ಉದ್ಯೋಗ, ಕುಟುಂಬ, ಆರೋಗ್ಯ ಮತ್ತು ಶುಭಫಲಗಳ ಬಗ್ಗೆ ತಿಳಿಯಿರಿ. ಯಾವ ರಾಶಿಗೆ ಅದೃಷ್ಟ ಒಲಿಯಲಿದೆ, ಯಾರು ಎಚ್ಚರಿಕೆಯಿಂದ ಇರಬೇಕು?

ಇಂದಿನ ಸಂಪೂರ್ಣ ರಾಶಿ ಫಲ ನಿಮ್ಮ ಫಾಲಿಗೆ ಹೇಗಿದೆ? ತಿಳಿಯಲು ಇಲ್ಲಿ ಕ್ಲಿಕ್ಕಿಸಿ: ದಿನ ಭವಿಷ್ಯ 27-10-2026: ಯಶಸ್ಸು, ಕುಟುಂಬದಲ್ಲಿ ನೆಮ್ಮದಿ; ಈ ರಾಶಿಗಳಿಗೆ ಅನಿರೀಕ್ಷಿತ ಲಾಭ

ಮೇಷ ರಾಶಿ: ಶುಭಕಾರ್ಯಗಳು ಸುಲಭವಾಗಿ ನೆರವೇರಲಿದ್ದು, ಬಂಧುಮಿತ್ರರೊಂದಿಗೆ ಸಂತೋಷದಿಂದ ಕಾಲ ಕಳೆಯುವಿರಿ. ಪ್ರಯಾಣದಲ್ಲಿ ಲಾಭ, ಆರ್ಥಿಕ ನೆಮ್ಮದಿ ಹಾಗೂ ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ.

ವೃಷಭ ರಾಶಿ: ಕುಟುಂಬದಲ್ಲಿ ನೆಮ್ಮದಿ ಇರಲಿದ್ದು, ಯಾವುದೇ ನಿರ್ಧಾರವನ್ನು ಆತುರದಿಂದ ತೆಗೆದುಕೊಳ್ಳಬೇಡಿ. ಅನಗತ್ಯ ಖರ್ಚು ಮತ್ತು ಭಿನ್ನಾಭಿಪ್ರಾಯಗಳಿಂದ ದೂರವಿದ್ದು, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಮಿಥುನ ರಾಶಿ: ಕೆಲವು ಕೆಲಸಗಳು ಮುಂದೂಡಿಕೆಯಾಗಬಹುದು, ಆದ್ದರಿಂದ ಗೊಂದಲಕ್ಕೆ ಒಳಗಾಗದೆ ಎಚ್ಚರಿಕೆಯಿಂದ ನಡೆದುಕೊಳ್ಳಿ. ಮಕ್ಕಳ ಬಗ್ಗೆ ಕಾಳಜಿ ವಹಿಸಿ, ನಿರ್ಲಕ್ಷ್ಯದಿಂದ ಉತ್ತಮ ಅವಕಾಶಗಳನ್ನು ಕಳೆದುಕೊಳ್ಳಬೇಡಿ.

ಕರ್ಕಾಟಕ ರಾಶಿ: ಆಸ್ತಿ ಸಂಬಂಧಿತ ಸಮಸ್ಯೆಗಳು ಬಗೆಹರಿಯುವ ಸಾಧ್ಯತೆಯಿದ್ದು, ಅನಿರೀಕ್ಷಿತ ಹಣದ ಲಾಭ ಸಂತೋಷ ತರಲಿದೆ. ದೇವರ ದರ್ಶನ ಮತ್ತು ಆತ್ಮೀಯರೊಂದಿಗಿನ ಭೇಟಿಯಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.

ಸಿಂಹ ರಾಶಿ: ಹೊಸ ಪರಿಚಯದವರನ್ನು ತಕ್ಷಣ ನಂಬಬೇಡಿ; ಕೆಲಸಗಳಲ್ಲಿ ಅಡೆತಡೆಗಳು ಎದುರಾಗುವ ಸಾಧ್ಯತೆಯಿದೆ. ಸಾಲದ ಪ್ರಯತ್ನದಲ್ಲಿ ವಿಳಂಬವಾಗಬಹುದು, ಸಹೋದರರೊಂದಿಗೆ ತಾಳ್ಮೆಯಿಂದ ವರ್ತಿಸಿ.

ಕನ್ಯಾ ರಾಶಿ: ಸಣ್ಣ ವಿಚಾರಗಳಿಗೆ ವಾದವಿವಾದ ಮಾಡದೆ ಸಂಯಮದಿಂದ ವರ್ತಿಸುವುದು ಉತ್ತಮ. ಸಮಯಕ್ಕೆ ಸರಿಯಾಗಿ ಊಟ ಮಾಡಿ, ಕೆಟ್ಟ ಸಹವಾಸದಿಂದ ದೂರವಿದ್ದು ಆರೋಗ್ಯ ಕಾಪಾಡಿಕೊಳ್ಳಿ.

ತುಲಾ ರಾಶಿ: ವ್ಯಾಪಾರದಲ್ಲಿ ಆದಾಯ ಹೆಚ್ಚಾಗುವ ನಿರೀಕ್ಷೆಯಿದ್ದು, ಹೊಸ ಕೆಲಸಗಳನ್ನು ಆರಂಭಿಸಲು ಅವಕಾಶ ಸಿಗಬಹುದು. ಅನಗತ್ಯ ಪ್ರಯಾಣ ತಪ್ಪಿಸಿ, ಹಣಕಾಸಿನ ನೆರವು ಮತ್ತು ಆತ್ಮೀಯರ ಸಹಾಯಕ್ಕಾಗಿ ಕಾಯಬೇಕಾಗಬಹುದು.

ವೃಶ್ಚಿಕ ರಾಶಿ: ವಿದೇಶ ಪ್ರಯಾಣದ ಪ್ರಯತ್ನಗಳಿಗೆ ಅನುಕೂಲವಾಗಬಹುದು, ಆದರೆ ಪ್ರತಿಯೊಂದು ಹೆಜ್ಜೆಯಲ್ಲೂ ಎಚ್ಚರಿಕೆ ಅಗತ್ಯ. ಕೆಲಸಗಳಲ್ಲಿ ಅಡೆತಡೆ ಎದುರಾದರೂ ತಾಳ್ಮೆಯಿಂದ ಮುಂದುವರಿಯಿರಿ ಮತ್ತು ಆರೋಗ್ಯದ ಕಡೆ ಗಮನ ಕೊಡಿ.

ಧನು ರಾಶಿ: ಕುಟುಂಬದ ಮನಸ್ತಾಪಗಳು ಕಡಿಮೆಯಾಗಿ ನೆಮ್ಮದಿ ಮರಳಬಹುದು, ಆದರೆ ಕೆಲವು ಕೆಲಸಗಳಲ್ಲಿ ವಿಳಂಬವಾಗಲಿದೆ. ಅನಗತ್ಯ ಪ್ರಯಾಣ ತಪ್ಪಿಸಿ, ಖರ್ಚು ನಿಯಂತ್ರಿಸುವ ಮೂಲಕ ಆರ್ಥಿಕ ಸಮಸ್ಯೆಗಳನ್ನು ನಿಭಾಯಿಸಿ.

ಮಕರ ರಾಶಿ: ಯೋಜಿಸಿದ ಕೆಲಸಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಬಂಧುಮಿತ್ರರಿಂದ ಮೆಚ್ಚುಗೆ ಪಡೆಯುವಿರಿ. ಆರೋಗ್ಯ ಉತ್ತಮವಾಗಿರಲಿದ್ದು, ಸಹೋದ್ಯೋಗಿಗಳಿಗೆ ನೆರವಾಗುವ ಮೂಲಕ ಕೆಲಸದಲ್ಲಿ ಉತ್ತಮ ಸಂಬಂಧ ಬೆಳೆಸುವಿರಿ.

ಕುಂಭ ರಾಶಿ: ಆತ್ಮವಿಶ್ವಾಸದಿಂದ ಕೆಲಸಗಳನ್ನು ಪೂರ್ಣಗೊಳಿಸುವಿರಿ, ಆಸ್ತಿ ಸಂಬಂಧಿತ ಸಮಸ್ಯೆಗಳಿಗೂ ಪರಿಹಾರ ಸಿಗಬಹುದು. ಕಲೆಗಳಲ್ಲಿ ಆಸಕ್ತಿ ಹೆಚ್ಚಾಗಲಿದ್ದು, ಹೊಸ ಬಟ್ಟೆ, ವಸ್ತುಗಳು ಮತ್ತು ಆಭರಣಗಳನ್ನು ಪಡೆಯುವ ಯೋಗವಿದೆ.

ಮೀನ ರಾಶಿ: ಕುಟುಂಬದಲ್ಲಿ ಸಂತೋಷವಿದ್ದರೂ, ಆರೋಗ್ಯ ಮತ್ತು ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಕಾಳಜಿ ವಹಿಸಿ. ಹೊಸ ಕೆಲಸ ಆರಂಭಿಸುವ ಮೊದಲು ಯೋಚಿಸಿ, ಖರ್ಚು ನಿಯಂತ್ರಿಸಿ ಆತ್ಮೀಯರಿಗೆ ನೆರವಾಗಿ.

ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.

Savitha

ಪತ್ರಿಕೋದ್ಯಮದಲ್ಲಿ 8 ವರ್ಷಗಳ ಬರವಣಿಗೆ ಅನುಭವ ಹೊಂದಿರುವ ಸವಿತಾ ರವರು, ಟ್ರೆಂಡಿಂಗ್ ವಿಷಯಗಳು, ಸೋಶಿಯಲ್ ಮೀಡಿಯಾ, ವೈರಲ್ ಕಂಟೆಂಟ್, ಧಾರ್ಮಿಕ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ… More »

Related Stories