ದಿನ ಭವಿಷ್ಯ 30 ಅಕ್ಟೋಬರ್ 2026, ಶುಕ್ರವಾರ

ಅಕ್ಟೋಬರ್ 30ರ ದಿನ ಭವಿಷ್ಯ: ಕೆಲವರಿಗೆ ಅನಿರೀಕ್ಷಿತ ಧನಲಾಭ, ಮತ್ತೆ ಕೆಲವರಿಗೆ ಸಂಕಷ್ಟ! 12 ರಾಶಿಗಳ ಇಂದಿನ ಸಂಪೂರ್ಣ ಭವಿಷ್ಯ ಇಲ್ಲಿದೆ.

ಶುಕ್ರವಾರದ ಅದೃಷ್ಟ ಯಾರಿಗೆ ಒಲಿಯಲಿದೆ? ಸಂಪೂರ್ಣ ರಾಶಿ ಫಲ ನೋಡಲು ಕ್ಲಿಕ್ಕಿಸಿ: ದಿನ ಭವಿಷ್ಯ 30-10-2026: ಈ ರಾಶಿಗಳು ಬಯಸಿದ್ದು ಫಲಿಸುವ ದಿನ; ಹಠಾತ್ ಸಂಪತ್ತು ವೃದ್ಧಿ

ಮೇಷ ರಾಶಿ: ಸಾಲ ಪಡೆಯುವ ಪ್ರಯತ್ನಗಳು ಯಶಸ್ವಿಯಾಗಲಿವೆ, ಆದರೆ ಕುಟುಂಬದ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಕೆಲಸಗಳಲ್ಲಿ ಅಡೆತಡೆ ಎದುರಾಗಬಹುದು, ಬಂಧುಮಿತ್ರರೊಂದಿಗೆ ತಾಳ್ಮೆಯಿಂದ ವರ್ತಿಸಿ.

ವೃಷಭ ರಾಶಿ: ಕೈಗೊಂಡ ಕೆಲಸಗಳಲ್ಲಿ ಯಶಸ್ಸು, ಹಣದ ಲಾಭ ಹಾಗೂ ಶುಭ ಸುದ್ದಿಗಳು ಸಿಗಲಿವೆ. ಕುಟುಂಬದಲ್ಲಿ ಸಂತೋಷ ಹೆಚ್ಚಾಗಿ, ಸಮಾಜದಲ್ಲಿ ಗೌರವ ಮತ್ತು ಮರ್ಯಾದೆ ವೃದ್ಧಿಯಾಗಲಿದೆ.

ಮಿಥುನ ರಾಶಿ: ವೃತ್ತಿಯಲ್ಲಿ ಉತ್ತಮ ಹೆಸರು ಮತ್ತು ಮನ್ನಣೆ ದೊರೆಯಲಿದ್ದು, ಕೆಲಸಗಳು ಪೂರ್ಣಗೊಳ್ಳಲಿವೆ. ಮಕ್ಕಳ ವಿಚಾರದಲ್ಲಿ ಕಾಳಜಿ ವಹಿಸಿ, ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ.

ಕರ್ಕಾಟಕ ರಾಶಿ: ಆರ್ಥಿಕ ಪರಿಸ್ಥಿತಿ ಸುಧಾರಿಸಲಿದ್ದು, ಕುಟುಂಬದಲ್ಲಿ ನೆಮ್ಮದಿ ಮತ್ತು ಸಂತೋಷ ನೆಲೆಸಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ, ಪ್ರಯಾಣದಲ್ಲಿ ಲಾಭ ಹಾಗೂ ಬಂಧುಗಳ ಭೇಟಿ ಸಾಧ್ಯತೆ ಇದೆ.

ಸಿಂಹ ರಾಶಿ: ಕೆಲಸಗಳಲ್ಲಿ ವಿಳಂಬವಾಗಬಹುದು, ಆಸ್ತಿ ವ್ಯವಹಾರದಲ್ಲಿ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಿ. ಹಣಕಾಸಿನ ವಿಚಾರದಲ್ಲಿ ಜಾಗ್ರತೆ ಇರಲಿ, ಹೊಸ ಕೆಲಸ ಆರಂಭಿಸುವುದನ್ನು ಮುಂದೂಡಿ.

ಕನ್ಯಾ ರಾಶಿ: ಕೆಲಸದ ನಿಮಿತ್ತ ಪ್ರಯಾಣ ಹೆಚ್ಚಾಗಬಹುದು, ಸಮಯಕ್ಕೆ ಸರಿಯಾಗಿ ಊಟ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ. ಕೋಪ ಮತ್ತು ಆತುರದಿಂದ ತೊಂದರೆ ಎದುರಾಗಬಹುದು, ಪ್ರತಿಯೊಂದು ವಿಚಾರದಲ್ಲೂ ತಾಳ್ಮೆ ಇರಲಿ.

ತುಲಾ ರಾಶಿ: ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ, ಉದ್ಯೋಗದ ನಿಮಿತ್ತ ಸ್ಥಳ ಬದಲಾವಣೆಯಾಗುವ ಸಾಧ್ಯತೆ ಇದೆ. ಆರ್ಥಿಕ ಸಮಸ್ಯೆಗಳು ನಿಧಾನವಾಗಿ ದೂರವಾಗಲಿದ್ದು, ಕುಟುಂಬದ ವಿಚಾರದಲ್ಲಿ ಚಿಂತೆ ಕಾಡಬಹುದು.

ವೃಶ್ಚಿಕ ರಾಶಿ: ಹಣಕಾಸಿನ ನಷ್ಟದ ಸಾಧ್ಯತೆ ಇರುವುದರಿಂದ ಅನಗತ್ಯ ಖರ್ಚು ಮತ್ತು ಮನರಂಜನೆಗೆ ಕಡಿವಾಣ ಹಾಕಿ. ಮಾನಸಿಕ ಒತ್ತಡ ಹೆಚ್ಚದಂತೆ ನೋಡಿಕೊಳ್ಳಿ, ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ.

ಧನು ರಾಶಿ: ಶುಭಕಾರ್ಯಗಳ ಪ್ರಯತ್ನಗಳು ಫಲ ನೀಡಲಿದ್ದು, ಅನಿರೀಕ್ಷಿತ ಹಣದ ಲಾಭವಾಗುವ ಸಾಧ್ಯತೆ ಇದೆ. ಕೆಲಸದಲ್ಲಿ ಯಶಸ್ಸು, ಗೌರವ ಹೆಚ್ಚಳ ಹಾಗೂ ಬಂಧುಮಿತ್ರರೊಂದಿಗೆ ಸಂತೋಷದ ಸಮಯ ಕಳೆಯುವಿರಿ.

ಮಕರ ರಾಶಿ: ಹಣದ ಲಾಭದ ಜೊತೆಗೆ ಉದ್ಯೋಗ ಮತ್ತು ವೃತ್ತಿಯಲ್ಲಿ ಪ್ರಗತಿ ಕಾಣುವ ಸಾಧ್ಯತೆ ಇದೆ. ರಾಜಕೀಯ ಹಾಗೂ ಕ್ರೀಡಾ ಕ್ಷೇತ್ರದವರಿಗೆ ಉತ್ತಮ ಅವಕಾಶಗಳು ಸಿಗಲಿದ್ದು, ಶುಭ ಸುದ್ದಿ ಕೇಳುವಿರಿ.

ಕುಂಭ ರಾಶಿ: ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಿ, ದೇವರ ದರ್ಶನದಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಹಣದ ಲಾಭ, ಕುಟುಂಬದಲ್ಲಿ ಸಂತೋಷ ಹಾಗೂ ಶುಭಕಾರ್ಯಗಳ ಪ್ರಯತ್ನಗಳಲ್ಲಿ ಯಶಸ್ಸು ದೊರೆಯಲಿದೆ.

ಮೀನ ರಾಶಿ: ಆತಂಕಗಳು ಕಡಿಮೆಯಾಗಲಿದ್ದು, ಉದ್ಯೋಗದಲ್ಲಿ ಸ್ಥಳ ಬದಲಾವಣೆಯ ಸಾಧ್ಯತೆ ಇದೆ. ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಸಾಲ ಮತ್ತು ಹಣಕಾಸಿನ ನಿರ್ಧಾರಗಳನ್ನು ಯೋಚಿಸಿ ತೆಗೆದುಕೊಳ್ಳಿ.

Savitha

ಪತ್ರಿಕೋದ್ಯಮದಲ್ಲಿ 8 ವರ್ಷಗಳ ಬರವಣಿಗೆ ಅನುಭವ ಹೊಂದಿರುವ ಸವಿತಾ ರವರು, ಟ್ರೆಂಡಿಂಗ್ ವಿಷಯಗಳು, ಸೋಶಿಯಲ್ ಮೀಡಿಯಾ, ವೈರಲ್ ಕಂಟೆಂಟ್, ಧಾರ್ಮಿಕ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ… More »

Related Stories