ದಿನ ಭವಿಷ್ಯ 07-09-2026: ಹೊಸ ಕೆಲಸ ಶುರು ಮಾಡಬೇಡಿ! ಈ ರಾಶಿಗಳಿಗೆ ಇಂದು ಕಾದಿದೆ ಅಡೆತಡೆ

ದಿನ ಭವಿಷ್ಯ 07 ಸೆಪ್ಟೆಂಬರ್ 2026, ಜಾಗ್ರತೆ! ಇಂದು ಈ ರಾಶಿಗಳಿಗೆ ಸಂಬಂಧಗಳಲ್ಲಿ ವೈಮನಸ್ಸಿನ ಸಾಧ್ಯತೆ - Daily Horoscope, Naleya Dina Bhavishya 07 September 2026

ದಿನ ಭವಿಷ್ಯ 07 ಸೆಪ್ಟೆಂಬರ್ 2026

ಮೇಷ ರಾಶಿ

ಹಠಾತ್ ಧನಲಾಭವಾಗುವ ಸಾಧ್ಯತೆ ಇದ್ದು, ಹೊಸ ವಸ್ತುಗಳು ಹಾಗೂ ಆಭರಣಗಳನ್ನು ಖರೀದಿಸುವ ಯೋಗವಿದೆ. ಕೀರ್ತಿ, ಪ್ರತಿಷ್ಠೆ ಹೆಚ್ಚಾಗಿ ಸಮಾಜದಲ್ಲಿ ಗೌರವವೂ ದೊರೆಯಲಿದೆ. ಕುಟುಂಬದವರೊಂದಿಗೆ ಸಂತೋಷದ ಸಮಯ ಕಳೆಯುವ ಅವಕಾಶ ಸಿಗುತ್ತದೆ. ಅಗತ್ಯವಿರುವವರಿಗೆ ಸಹಾಯ ಮಾಡಲು ಮುಂದಾಗುವಿರಿ.

ವೃಷಭ ರಾಶಿ

ಕೆಲವು ವಿಚಾರಗಳು ಮನಸ್ಸಿನಲ್ಲಿ ಗೊಂದಲ ಹಾಗೂ ಆತಂಕ ಮೂಡಿಸಬಹುದು. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡದೆ, ಸಮಯಕ್ಕೆ ಸರಿಯಾಗಿ ವಿಶ್ರಾಂತಿ ಪಡೆಯುವುದು ಉತ್ತಮ. ನೀವು ಕೈಗೊಳ್ಳುವ ಕೆಲವು ಕೆಲಸಗಳು ನಿರೀಕ್ಷೆಗಿಂತ ತಡವಾಗಿ ಪೂರ್ಣಗೊಳ್ಳಬಹುದು. ಅನಗತ್ಯ ಹಾಗೂ ಕೆಟ್ಟ ವಿಚಾರಗಳಿಂದ ದೂರವಿರುವುದು ಒಳಿತು.

ಮಿಥುನ ರಾಶಿ

ಬಂಧುಗಳು ಹಾಗೂ ಸ್ನೇಹಿತರೊಂದಿಗೆ ವ್ಯವಹರಿಸುವಾಗ ಸ್ವಲ್ಪ ಎಚ್ಚರಿಕೆ ವಹಿಸುವುದು ಅಗತ್ಯ. ನೀವು ಕೈಗೆತ್ತಿಕೊಳ್ಳುವ ಕೆಲಸಗಳಲ್ಲಿ ಸಣ್ಣಪುಟ್ಟ ಅಡೆತಡೆಗಳು ಎದುರಾಗಬಹುದು. ಈ ಸಮಯದಲ್ಲಿ ಹೊಸ ಕಾರ್ಯಗಳನ್ನು ಆರಂಭಿಸುವುದಕ್ಕಿಂತ ಈಗಾಗಲೇ ನಡೆಯುತ್ತಿರುವ ಕೆಲಸಗಳತ್ತ ಗಮನ ಹರಿಸುವುದು ಉತ್ತಮ. ಮನೆಯಲ್ಲಿನ ಕೆಲವು ಬದಲಾವಣೆಗಳು ಮನಸ್ಸಿಗೆ ಒತ್ತಡ ತರಬಹುದು.

ಕರ್ಕಾಟಕ ರಾಶಿ

ಪ್ರಭಾವಿ ಹಾಗೂ ಗಣ್ಯ ವ್ಯಕ್ತಿಗಳ ಪರಿಚಯವಾಗುವ ಸಾಧ್ಯತೆ ಇದೆ. ಮಹಿಳೆಯರ ಮೂಲಕ ಕೆಲವು ರೀತಿಯ ಲಾಭ ಅಥವಾ ಸಹಕಾರ ದೊರೆಯಬಹುದು. ಮನಸ್ಸಿನಲ್ಲಿ ಉತ್ತಮ ಆಲೋಚನೆಗಳು ಮೂಡಿ, ಹಲವು ವಿಷಯಗಳಲ್ಲಿ ಹೊಸ ಉತ್ಸಾಹ ಕಂಡುಬರಲಿದೆ. ಬಂಧುಗಳು ಹಾಗೂ ಸ್ನೇಹಿತರಿಂದ ಗೌರವ ಮತ್ತು ಮೆಚ್ಚುಗೆ ಸಿಗಬಹುದು.

ಸಿಂಹ ರಾಶಿ

ಸಾಲ ಪಡೆಯಲು ಅಥವಾ ಹಣಕಾಸಿನ ನೆರವು ಪಡೆಯಲು ನಡೆಸುವ ಪ್ರಯತ್ನಗಳು ಫಲ ನೀಡುವ ಸಾಧ್ಯತೆ ಇದೆ. ಆದರೆ ಕುಟುಂಬದ ಕೆಲವು ವಿಚಾರಗಳು ನಿರೀಕ್ಷೆಯಂತೆ ನಡೆಯದ ಕಾರಣ ಮನಸ್ಸಿನಲ್ಲಿ ಆತಂಕ ಮೂಡಬಹುದು. ಮಹಿಳೆಯರಿಗೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಡುವ ಸಾಧ್ಯತೆ ಇರುವುದರಿಂದ ಆರೋಗ್ಯದ ಕಡೆ ಗಮನ ಹರಿಸುವುದು ಉತ್ತಮ. ವಿಶ್ರಾಂತಿ ಹಾಗೂ ಆಹಾರ ಪದ್ಧತಿಯಲ್ಲೂ ಎಚ್ಚರಿಕೆ ಅಗತ್ಯ.

ಕನ್ಯಾ ರಾಶಿ

ಪ್ರಮುಖ ವ್ಯಕ್ತಿಗಳನ್ನು ಭೇಟಿಯಾಗುವ ಅವಕಾಶ ಸಿಗಲಿದ್ದು, ಈ ಭೇಟಿಗಳು ಮುಂದಿನ ದಿನಗಳಲ್ಲಿ ಉಪಯುಕ್ತವಾಗಬಹುದು. ಅನಗತ್ಯ ಭಯ ಹಾಗೂ ಆತಂಕಗಳು ಕ್ರಮೇಣ ದೂರವಾಗಲಿವೆ. ಸಾಲ ಅಥವಾ ಹಣಕಾಸಿನ ನೆರವಿಗಾಗಿ ಮಾಡುವ ಪ್ರಯತ್ನಗಳು ಸ್ವಲ್ಪ ತಡವಾಗಿ ಫಲ ನೀಡಬಹುದು. ಕುಟುಂಬದಲ್ಲಿ ಕೆಲವೊಮ್ಮೆ ಮನಃಶಾಂತಿಯ ಕೊರತೆ ಕಾಡುವ ಸಾಧ್ಯತೆ ಇದೆ.

ತುಲಾ ರಾಶಿ

ಕುಟುಂಬದ ಪರಿಸ್ಥಿತಿ ಸಾಮಾನ್ಯವಾಗಿ ಸಂತೋಷಕರವಾಗಿರಲಿದೆ. ಅನಿರೀಕ್ಷಿತವಾಗಿ ಹಣ ಕೈಗೆ ಬರುವ ಸಾಧ್ಯತೆ ಇದ್ದು, ಇದರಿಂದ ಹಳೆಯ ಸಾಲದ ಒತ್ತಡ ಸ್ವಲ್ಪ ಕಡಿಮೆಯಾಗಬಹುದು. ಸಮಾಜದಲ್ಲಿ ನಿಮ್ಮ ಬಗ್ಗೆ ಉತ್ತಮ ಅಭಿಪ್ರಾಯ ಮೂಡಲಿದೆ. ನಿಮ್ಮ ನಡೆ-ನುಡಿಯನ್ನು ಇತರರು ಮೆಚ್ಚಿ, ನಿಮ್ಮನ್ನು ಮಾದರಿಯಾಗಿ ಪರಿಗಣಿಸುವ ಸಾಧ್ಯತೆಯಿದೆ.

ವೃಶ್ಚಿಕ ರಾಶಿ

ಅನಿರೀಕ್ಷಿತ ಧನಲಾಭವಾಗುವ ಸಾಧ್ಯತೆ ಇದ್ದು, ಹಣಕಾಸಿನ ವಿಚಾರದಲ್ಲಿ ಅನುಕೂಲಕರ ಬೆಳವಣಿಗೆ ಕಂಡುಬರಬಹುದು. ಕುಟುಂಬದಲ್ಲಿ ಸಂತೋಷ ಹಾಗೂ ಸಂಭ್ರಮದ ವಾತಾವರಣ ನಿರ್ಮಾಣವಾಗಲಿದೆ. ಬಂಧು-ಮಿತ್ರರ ಭೇಟಿಯಿಂದ ಮನಸ್ಸಿಗೆ ಉಲ್ಲಾಸ ಸಿಗುತ್ತದೆ. ಸಮಾಜದಲ್ಲಿ ನಿಮ್ಮ ಗೌರವ ಮತ್ತು ಸ್ಥಾನಮಾನ ಹೆಚ್ಚಾಗುವ ಸಾಧ್ಯತೆ ಇದೆ.
ಆರೋಗ್ಯ ಉತ್ತಮವಾಗಿರಲಿದ್ದು, ಕೈಗೆತ್ತಿಕೊಳ್ಳುವ ಹಲವು ಕೆಲಸಗಳಲ್ಲಿ ಪ್ರಗತಿ ಸಾಧಿಸುವಿರಿ.

ಧನು ರಾಶಿ

ಈ ಸಮಯದಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗಲಿದೆ. ನಿಮ್ಮ ಜಾಣ್ಮೆ ಹಾಗೂ ಸೂಕ್ಷ್ಮವಾದ ಆಲೋಚನೆಯ ಮೂಲಕ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ನಿಮ್ಮ ಸಾಮರ್ಥ್ಯ ಮತ್ತು ಪರಾಕ್ರಮವನ್ನು ಸುತ್ತಮುತ್ತಲಿನವರು ಗುರುತಿಸುವ ಸಾಧ್ಯತೆ ಇದೆ. ಎದುರಾಗುತ್ತಿದ್ದ ಕೆಲವು ಅಡೆತಡೆಗಳು ಕ್ರಮೇಣ ದೂರವಾಗಲಿವೆ.
ಶುಭಕಾರ್ಯಗಳಿಗೆ ಸಂಬಂಧಿಸಿದ ಪ್ರಯತ್ನಗಳು ಯಶಸ್ವಿಯಾಗಬಹುದು.

ಮಕರ ರಾಶಿ

ವೃತ್ತಿಜೀವನದಲ್ಲಿ ಅನುಕೂಲಕರ ಸ್ಥಳ ಬದಲಾವಣೆ ಅಥವಾ ವರ್ಗಾವಣೆಯ ಅವಕಾಶ ಎದುರಾಗಬಹುದು. ಆದರೆ ಹಣಕಾಸಿನ ವಿಚಾರದಲ್ಲಿ ಕೆಲವು ಸವಾಲುಗಳು ಎದುರಾಗುವ ಸಾಧ್ಯತೆ ಇದೆ. ಅನಗತ್ಯ ಜಗಳ ಹಾಗೂ ವಾದವಿವಾದಗಳಿಂದ ದೂರವಿರುವುದು ಒಳಿತು. ಆರೋಗ್ಯದ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡದೆ ಅಗತ್ಯವಿದ್ದರೆ ವೈದ್ಯರ ಸಲಹೆಯಂತೆ ಔಷಧಿ ಪಡೆಯಿರಿ.

ಕುಂಭ ರಾಶಿ

ನಿಮ್ಮಿಂದ ಯಾವುದೇ ರೀತಿಯ ಅಪಕೀರ್ತಿ ಉಂಟಾಗದಂತೆ ಮಾತು ಮತ್ತು ನಡೆ-ನುಡಿಯಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಪ್ರಯಾಣ ಮಾಡುವ ಸಂದರ್ಭಗಳಲ್ಲಿ ಹೆಚ್ಚುವರಿ ಖರ್ಚು ಹಾಗೂ ಆಯಾಸ ಉಂಟಾಗುವ ಸಾಧ್ಯತೆ ಇದೆ. ಅನಗತ್ಯ ಕಲಹಗಳಿಗೆ ಸಿಲುಕದೆ ಶಾಂತವಾಗಿ ಪರಿಸ್ಥಿತಿಯನ್ನು ನಿಭಾಯಿಸುವುದು ಉತ್ತಮ.

ಮೀನ ರಾಶಿ

ಶುಭಕಾರ್ಯಗಳಿಗೆ ಸಂಬಂಧಿಸಿದ ಪ್ರಯತ್ನಗಳು ಸುಲಭವಾಗಿ ನೆರವೇರುವ ಸಾಧ್ಯತೆ ಇದೆ. ಬಂಧುಗಳು ಮತ್ತು ಸ್ನೇಹಿತರೊಂದಿಗೆ ಸಂತೋಷದಿಂದ ಸಮಯ ಕಳೆಯುವ ಅವಕಾಶ ದೊರೆಯಲಿದೆ. ಪ್ರಯಾಣದಿಂದ ಲಾಭ ಹಾಗೂ ಹೊಸ ಅವಕಾಶಗಳು ಸಿಗಬಹುದು. ನೀವು ಹಾಕುವ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವ ಸಾಧ್ಯತೆ ಇದ್ದು, ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಚಿಂತೆ ಇರುವುದಿಲ್ಲ.

Savitha

ಪತ್ರಿಕೋದ್ಯಮದಲ್ಲಿ 8 ವರ್ಷಗಳ ಬರವಣಿಗೆ ಅನುಭವ ಹೊಂದಿರುವ ಸವಿತಾ ರವರು, ಟ್ರೆಂಡಿಂಗ್ ವಿಷಯಗಳು, ಸೋಶಿಯಲ್ ಮೀಡಿಯಾ, ವೈರಲ್ ಕಂಟೆಂಟ್, ಧಾರ್ಮಿಕ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ… More »

Related Stories