ದಿನ ಭವಿಷ್ಯ 08-09-2026: ಈ ರಾಶಿಗೆ ಹಣ, ಆ ರಾಶಿಗೆ ಸಂಕಷ್ಟ! ನಿಮ್ಮ ರಾಶಿಗೆ ಹೇಗಿದೆ ಇಂದಿನ ಭವಿಷ್ಯ
ದಿನ ಭವಿಷ್ಯ 08 ಸೆಪ್ಟೆಂಬರ್ 2026, ಇಂದು ಈ ರಾಶಿಗಳಿಗೆ ಶುಭದಿನ: ಧನಲಾಭದಿಂದ ಶುಭಸುದ್ದಿವರೆಗೆ ಇಂದಿನ ರಾಶಿ ಫಲ ತಿಳಿಯಿರಿ - Daily Horoscope, Naleya Dina Bhavishya 08 September 2026
ದಿನ ಭವಿಷ್ಯ 08 ಸೆಪ್ಟೆಂಬರ್ 2026
ಮೇಷ ರಾಶಿ
ಬಂದು-ಮಿತ್ರರೊಂದಿಗೆ ಅನಗತ್ಯ ಮನಸ್ತಾಪ ಉಂಟಾಗದಂತೆ ಮಾತುಕತೆಯಲ್ಲಿ ಎಚ್ಚರಿಕೆ ವಹಿಸುವುದು ಒಳಿತು.
ಅನಿರೀಕ್ಷಿತವಾಗಿ ಹಣ ಖರ್ಚಾಗುವ ಅಥವಾ ಕೈತಪ್ಪುವ ಸಾಧ್ಯತೆ ಇರುವುದರಿಂದ ಆರ್ಥಿಕ ವಿಚಾರದಲ್ಲಿ ಜಾಗ್ರತೆ ಅಗತ್ಯ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡದೆ ದೈಹಿಕ ಹಾಗೂ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ಸಣ್ಣಪುಟ್ಟ ಕೆಲಸಗಳಿಗೂ ಹೆಚ್ಚಿನ ಸಮಯ ಮತ್ತು ಶ್ರಮ ವ್ಯಯಿಸುವ ಪರಿಸ್ಥಿತಿ ಎದುರಾಗಬಹುದು.
ವೃಷಭ ರಾಶಿ
ಇತರರಿಗೆ ತೊಂದರೆ ಉಂಟುಮಾಡುವ ಕೆಲಸಗಳಿಂದ ದೂರವಿರುವುದು ನಿಮಗೆ ಒಳಿತು. ವೃತ್ತಿ ಕ್ಷೇತ್ರದಲ್ಲಿ ಎದುರಾಗುವ ಅಡೆತಡೆಗಳನ್ನು ನಿಮ್ಮ ಪ್ರಯತ್ನದಿಂದ ನಿಧಾನವಾಗಿ ನಿವಾರಿಸಿಕೊಳ್ಳುವಿರಿ. ಹೊಸ ಕೆಲಸ ಕೈಗೆತ್ತಿಕೊಳ್ಳುವಾಗ ಸಾಧಕ-ಬಾಧಕಗಳನ್ನು ಪರಿಶೀಲಿಸಿ ಮುಂದುವರಿಯುವುದು ಉತ್ತಮ. ಧೈರ್ಯದಿಂದ ನಿರ್ಧಾರ ಕೈಗೊಂಡರೆ ಕೆಲವು ಹೊಸ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ಸಾಧ್ಯವಾಗಲಿದೆ.
ಮಿಥುನ ರಾಶಿ
ಆಪ್ತರ ಸಹಾಯ ನಿರೀಕ್ಷಿಸಿದ ಸಮಯಕ್ಕೆ ಸಿಗದೆ ಸ್ವಲ್ಪ ನಿರಾಸೆ ಉಂಟಾಗಬಹುದು. ಹಣಕಾಸಿನ ಒತ್ತಡ ಎದುರಾಗುವ ಸಾಧ್ಯತೆ ಇರುವುದರಿಂದ ಖರ್ಚಿನ ಮೇಲೆ ನಿಯಂತ್ರಣ ಇರಲಿ. ಪ್ರಯಾಣ ಮಾಡುವವರು ವಾಹನ ಚಾಲನೆ ಸೇರಿದಂತೆ ಸುರಕ್ಷತೆಯ ವಿಚಾರದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವುದು ಅಗತ್ಯ. ಅಜೀರ್ಣ ಹಾಗೂ ಕೀಲು ನೋವಿನಂತಹ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಡಬಹುದಾದ್ದರಿಂದ ಆಹಾರ ಮತ್ತು ವಿಶ್ರಾಂತಿಗೆ ಆದ್ಯತೆ ನೀಡಿ.
ಕರ್ಕಾಟಕ ರಾಶಿ
ಅನಿರೀಕ್ಷಿತವಾಗಿ ಕೆಲವು ಹೊಸ ಕೆಲಸಗಳು ಅಥವಾ ಜವಾಬ್ದಾರಿಗಳು ನಿಮ್ಮ ಮುಂದೆ ಬರಬಹುದು.
ವೃತ್ತಿ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿಯ ಸೂಚನೆಗಳಿದ್ದು, ನಿಮ್ಮ ಪ್ರಯತ್ನಕ್ಕೆ ಉತ್ತಮ ಫಲ ಸಿಗಲಿದೆ. ಆತ್ಮೀಯರನ್ನು ಭೇಟಿ ಮಾಡುವ ಯೋಜನೆಗಳು ಕೊನೆಯ ಕ್ಷಣದಲ್ಲಿ ಕೈಗೂಡದೆ ಹೋಗುವ ಸಾಧ್ಯತೆಯಿದೆ. ಅನಗತ್ಯ ಖರ್ಚು ಹಾಗೂ ಪ್ರಯಾಣಗಳಿಂದ ಮನಸ್ಸಿಗೆ ಒತ್ತಡ ಉಂಟಾಗಬಹುದು, ಆದರೆ ಮಹಿಳೆಯರ ಮೂಲಕ ಧನಲಾಭದ ಸಾಧ್ಯತೆ ಇದೆ.
ಸಿಂಹ ರಾಶಿ
ಹಣಕಾಸಿನ ವಿಚಾರದಲ್ಲಿ ಅನಿರೀಕ್ಷಿತ ನಷ್ಟ ಎದುರಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅಗತ್ಯ.
ಸ್ಥಿರಾಸ್ತಿ ವ್ಯವಹಾರಗಳಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿ. ನಿಮ್ಮನ್ನು ದಾರಿ ತಪ್ಪಿಸುವವರ ಮಾತಿಗೆ ಮಾರುಹೋಗದೆ ಸ್ವಂತ ವಿವೇಚನೆಯಿಂದ ನಿರ್ಧಾರ ತೆಗೆದುಕೊಳ್ಳಿ. ಕ್ರೀಡೆ ಮತ್ತು ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಮಾನಸಿಕ ಒತ್ತಡ ಹೆಚ್ಚಾಗಬಹುದು; ಹೊಸ ಕೆಲಸಗಳನ್ನು ಸ್ವಲ್ಪ ಮುಂದೂಡುವುದು ಒಳಿತು.
ಕನ್ಯಾ ರಾಶಿ
ಎಂತಹ ಪರಿಸ್ಥಿತಿ ಎದುರಾದರೂ ಆತ್ಮವಿಶ್ವಾಸ ಕಳೆದುಕೊಳ್ಳದೆ ಧೈರ್ಯದಿಂದ ಮುನ್ನಡೆಯುವುದು ಅಗತ್ಯ.
ಹೊಸ ಕಾರ್ಯಗಳನ್ನು ಆರಂಭಿಸಲು ಕೆಲವು ಅಡೆತಡೆಗಳು ಎದುರಾಗುವ ಸಾಧ್ಯತೆ ಇದೆ. ಕೋಪವನ್ನು ನಿಯಂತ್ರಿಸಿಕೊಂಡು ಮಾತನಾಡಿದರೆ ಅನಗತ್ಯ ಗೊಂದಲಗಳಿಂದ ದೂರವಿರಬಹುದು. ಕಠಿಣ ಮಾತುಗಳಿಂದ ಸಮಸ್ಯೆ ಹೆಚ್ಚಾಗಬಹುದು; ಇತರರಿಗೆ ತೊಂದರೆ ಉಂಟುಮಾಡುವ ಯಾವುದೇ ಕೆಲಸದಿಂದ ದೂರವಿರುವುದು ಉತ್ತಮ.
ತುಲಾ ರಾಶಿ
ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಹೆಚ್ಚು ಕಾಳಜಿ ವಹಿಸುವುದು ಉತ್ತಮ. ಆಧ್ಯಾತ್ಮಿಕ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶ ದೊರೆಯಲಿದೆ. ವಿದೇಶ ಪ್ರವಾಸ ಅಥವಾ ವಿದೇಶಕ್ಕೆ ಸಂಬಂಧಿಸಿದ ಪ್ರಯತ್ನಗಳಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಬಹುದು. ಕುಟುಂಬದಲ್ಲಿ ಅನಗತ್ಯ ವಾದ-ವಿವಾದಗಳಿಗೆ ಅವಕಾಶ ನೀಡದೆ ತಾಳ್ಮೆಯಿಂದ ನಡೆದುಕೊಂಡರೆ ನೆಮ್ಮದಿ ಸಿಗಲಿದೆ.
ವೃಶ್ಚಿಕ ರಾಶಿ
ಹೊಸ ವಸ್ತುಗಳು, ಬಟ್ಟೆ ಹಾಗೂ ಆಭರಣಗಳನ್ನು ಖರೀದಿಸುವ ಅಥವಾ ಪಡೆಯುವ ಅವಕಾಶ ಎದುರಾಗಬಹುದು.
ಅನಿರೀಕ್ಷಿತ ಧನಲಾಭ ದೊರೆಯುವ ಸಾಧ್ಯತೆ ಇದ್ದು, ಹಣಕಾಸಿನ ವಿಚಾರದಲ್ಲಿ ಸಂತಸ ಮೂಡಲಿದೆ. ವಿದ್ಯಾರ್ಥಿಗಳ ಪ್ರತಿಭೆಗೆ ಸೂಕ್ತವಾದ ಮೆಚ್ಚುಗೆ ಮತ್ತು ಗುರುತಿಸುವಿಕೆ ದೊರೆಯಲಿದೆ. ವಿನೋದ ಚಟುವಟಿಕೆಗಳಲ್ಲಿ ಭಾಗವಹಿಸುವ ಜೊತೆಗೆ ಚರ್ಚೆ, ಸಮ್ಮೇಳನಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ; ಶುಭ ಸುದ್ದಿಯೂ ಕೇಳಿಬರಬಹುದು.
ಧನು ರಾಶಿ
ಮಕ್ಕಳ ವಿಚಾರದಲ್ಲಿ ಕೆಲವು ಸಣ್ಣಪುಟ್ಟ ಸಮಸ್ಯೆಗಳು ಎದುರಾಗಬಹುದು, ಆದರೆ ಅವುಗಳನ್ನು ಸಮಾಧಾನದಿಂದ ನಿಭಾಯಿಸಬಹುದು. ಅಧಿಕಾರಿಗಳಿಂದ ಗೌರವ ಮತ್ತು ಮೆಚ್ಚುಗೆ ಪಡೆಯುವ ಅವಕಾಶ ಸಿಗಲಿದೆ. ಕೈಗೊಂಡ ಕೆಲಸಗಳನ್ನು ಒಂದೊಂದಾಗಿ ಪೂರ್ಣಗೊಳಿಸುವಿರಿ. ಆರೋಗ್ಯ ಸಮಸ್ಯೆಗಳಲ್ಲಿ ಸುಧಾರಣೆ ಕಂಡುಬರಲಿದ್ದು, ಪ್ರಯಾಣದ ವೇಳೆ ಎಚ್ಚರಿಕೆ ವಹಿಸಿ; ಹೊಸ ವ್ಯಕ್ತಿಗಳ ಪರಿಚಯವಾಗಬಹುದು.
ಮಕರ ರಾಶಿ
ಕುಟುಂಬದಲ್ಲಿ ಅನಿರೀಕ್ಷಿತವಾಗಿ ಭಿನ್ನಾಭಿಪ್ರಾಯಗಳು ಮೂಡುವ ಸಾಧ್ಯತೆ ಇರುವುದರಿಂದ ಮಾತಿನ ಮೇಲೆ ಹಿಡಿತ ಇರಲಿ.
ಮನಸ್ಸಿಗೆ ಬೇಸರ ಉಂಟುಮಾಡುವ ಸುದ್ದಿಗಳನ್ನು ಕೇಳುವ ಪರಿಸ್ಥಿತಿ ಎದುರಾಗಬಹುದು. ಹಣಕಾಸಿನಲ್ಲಿ ಅಚಾನಕ್ ನಷ್ಟವಾಗದಂತೆ ವ್ಯವಹಾರಗಳಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವುದು ಅಗತ್ಯ. ಪ್ರಯಾಣದಲ್ಲಿ ಜಾಗರೂಕರಾಗಿರಿ; ಪರಿಸ್ಥಿತಿಯನ್ನು ಗಮನಿಸಿ ಕೆಲವು ಹೊಸ ಕೆಲಸಗಳನ್ನು ಮುಂದೂಡುವುದು ಅನಿವಾರ್ಯವಾಗಬಹುದು.
ಕುಂಭ ರಾಶಿ
ಬಂದು-ಮಿತ್ರರೊಂದಿಗೆ ಅನಗತ್ಯ ವೈಮನಸ್ಸು ಉಂಟಾಗದಂತೆ ಸಂಯಮದಿಂದ ವರ್ತಿಸುವುದು ಒಳಿತು.
ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆ ಇದ್ದರೂ, ಎದುರಾಗುವ ಆರೋಗ್ಯ ಸಮಸ್ಯೆಗಳನ್ನು ನಿಧಾನವಾಗಿ ಗೆಲ್ಲುವಿರಿ. ನಿಮ್ಮ ಮೇಲೆ ಬರುವ ಅನಗತ್ಯ ಆರೋಪಗಳು ಕೆಲಕಾಲ ಮುಜುಗರಕ್ಕೆ ಕಾರಣವಾಗಬಹುದು. ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ ಉಂಟಾಗಬಹುದು; ಆದರೂ ಹೊಸ ಕಾರ್ಯಗಳಿಗೆ ಸೂಕ್ತ ಯೋಜನೆ ರೂಪಿಸುವಿರಿ.
ಮೀನ ರಾಶಿ
ಹೊಸ ಕಾರ್ಯಗಳನ್ನು ಆರಂಭಿಸಲು ಉತ್ತಮ ಯೋಜನೆ ರೂಪಿಸಿಕೊಂಡು ಮುಂದುವರಿಯುವಿರಿ.
ಅನಿರೀಕ್ಷಿತ ಧನಲಾಭದ ಅವಕಾಶಗಳು ಎದುರಾಗಲಿದ್ದು, ಕುಟುಂಬದಲ್ಲಿ ಸಂತಸದ ವಾತಾವರಣ ಇರಲಿದೆ. ಬಂದು-ಮಿತ್ರರೊಂದಿಗೆ ಸೇರಿ ಹಾಗೂ ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶ ಸಿಗುತ್ತದೆ.
ಶುಭ ಸುದ್ದಿಗಳು ಮನಸ್ಸಿಗೆ ಸಂತಸ ತರಲಿದ್ದು, ನೆಮ್ಮದಿ ಮತ್ತು ಉತ್ಸಾಹದಿಂದ ದಿನ ಕಳೆಯುವಿರಿ.



