ದಿನ ಭವಿಷ್ಯ 09-10-2026: ಅದೃಷ್ಟ ಫುಲ್ ಚೇಂಜ್! ಈ 3 ರಾಶಿಗಳಿಗೆ ಬೆಳಗ್ಗಿನಿಂದಲೇ ಶುಭಫಲದ ಸೂಚನೆ

ನಾಳೆಯ ದಿನ ಭವಿಷ್ಯ 09 ಅಕ್ಟೋಬರ್ 2026, ಹಣ, ಉದ್ಯೋಗ, ಕುಟುಂಬ… ಇಂದು ನಿಮ್ಮ ರಾಶಿಯಲ್ಲಿ ಏನೆಲ್ಲಾ ಬದಲಾವಣೆ? - Daily Horoscope, Naleya Dina Bhavishya 09 October 2026

ದಿನ ಭವಿಷ್ಯ 09 ಅಕ್ಟೋಬರ್ 2026

ಮೇಷ ರಾಶಿ

ಈ ದಿನ ಮೇಷ ರಾಶಿಯವರಿಗೆ ಅನಿರೀಕ್ಷಿತವಾಗಿ ಧನಲಾಭವಾಗುವ ಸಾಧ್ಯತೆ ಇದೆ. ಹೊಸ ವಸ್ತುಗಳು ಅಥವಾ ಆಭರಣಗಳನ್ನು ಖರೀದಿಸುವ ಯೋಗ ಕಂಡುಬರುತ್ತದೆ. ಕುಟುಂಬದವರೊಂದಿಗೆ ಸಂತೋಷದ ಸಮಯ ಕಳೆಯುವಿರಿ. ಅಗತ್ಯವಿರುವವರಿಗೆ ಸಹಾಯ ಮಾಡಲು ಮುಂದಾಗುವಿರಿ. ಸಾಲದ ಒತ್ತಡ ಕಡಿಮೆಯಾಗಲಿದ್ದು, ಶತ್ರುಗಳಿಂದಲೂ ಯಾವುದೇ ತೊಂದರೆ ಎದುರಾಗುವ ಸಾಧ್ಯತೆ ಕಡಿಮೆ.

ವೃಷಭ ರಾಶಿ

ವೃಷಭ ರಾಶಿಯವರಿಗೆ ಕೆಲವೊಂದು ವಿಚಾರಗಳು ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡದೆ ಹೆಚ್ಚಿನ ಗಮನ ನೀಡುವುದು ಒಳಿತು. ನೀವು ಕೈಗೊಳ್ಳುವ ಕೆಲವು ಕೆಲಸಗಳು ನಿರೀಕ್ಷೆಗಿಂತ ತಡವಾಗಿ ಪೂರ್ಣಗೊಳ್ಳಬಹುದು. ಕೆಟ್ಟ ಅಭ್ಯಾಸ ಮತ್ತು ಅನಗತ್ಯ ವಿಚಾರಗಳಿಂದ ದೂರವಿರುವುದು ಉತ್ತಮ. ಉದ್ಯೋಗ ಮತ್ತು ವೃತ್ತಿಯಲ್ಲಿ ಪ್ರಗತಿ ಕಂಡುಬಂದರೂ, ಸ್ಥಿರಾಸ್ತಿ ವಿಚಾರಗಳಲ್ಲಿ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಬೇಕು.

ಮಿಥುನ ರಾಶಿ

ನಿರೀಕ್ಷಿಸಿದಂತೆ ಎಲ್ಲವೂ ನಡೆಯದೇ ಕೆಲವು ಬದಲಾವಣೆಗಳನ್ನು ಎದುರಿಸಬೇಕಾಗಬಹುದು. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಡುವ ಸಾಧ್ಯತೆ ಇರುವುದರಿಂದ ಸಮಯಕ್ಕೆ ಸರಿಯಾಗಿ ಊಟ ಮಾಡುವುದು ಮುಖ್ಯ. ಮನಸ್ಸಿನ ಚಂಚಲತೆಯಿಂದ ಕೆಲವೊಂದು ಗೊಂದಲಗಳು ಉಂಟಾಗಬಹುದು. ಆದ್ದರಿಂದ ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಮನಸ್ಸನ್ನು ಸ್ಥಿರವಾಗಿರಿಸಿಕೊಳ್ಳಿ. ಮಕ್ಕಳ ವಿಚಾರದಲ್ಲಿ ಹೆಚ್ಚಿನ ಗಮನ ಮತ್ತು ಕಾಳಜಿ ಅಗತ್ಯ.

ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯವರಿಗೆ ಕೈಗೊಂಡ ಬಹುತೇಕ ಕಾರ್ಯಗಳಲ್ಲಿ ಉತ್ತಮ ಫಲಿತಾಂಶ ದೊರೆಯಲಿದೆ. ಅನಿರೀಕ್ಷಿತವಾಗಿ ಹಣಕಾಸಿನ ಲಾಭವೂ ಸಿಗುವ ಸಾಧ್ಯತೆ ಇದೆ. ಕುಟುಂಬದವರೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುವ ಜೊತೆಗೆ, ವಿಂದೂ-ವಿನೋದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶ ಸಿಗಬಹುದು. ಮಕ್ಕಳಿಂದ ಸಂತೋಷ ದೊರೆಯಲಿದೆ. ಕಲಾತ್ಮಕ ವಸ್ತುಗಳ ಖರೀದಿ ಅಥವಾ ಸಂಗ್ರಹದಲ್ಲಿ ಆಸಕ್ತಿ ಮೂಡಬಹುದು. ಬಂಧು-ಮಿತ್ರರ ಭೇಟಿ ಹಾಗೂ ಹೊಸ ಕಾರ್ಯಗಳ ಯೋಜನೆಗೆ ಇದು ಉತ್ತಮ ಸಮಯ.

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಒತ್ತಡ ಎದುರಾಗಬಹುದು. ವೃತ್ತಿ ಅಥವಾ ಉದ್ಯೋಗದಲ್ಲಿ ನಿರೀಕ್ಷಿಸದ ಕೆಲವು ನಷ್ಟಗಳು ಸಂಭವಿಸುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅಗತ್ಯ. ಕುಟುಂಬದಲ್ಲಿ ಕೆಲವು ಬದಲಾವಣೆಗಳನ್ನು ಬಯಸುವಿರಿ. ಕೈಗೆ ಬಂದ ಉತ್ತಮ ಅವಕಾಶವೊಂದು ನಿರ್ಲಕ್ಷ್ಯದಿಂದ ತಪ್ಪಿಹೋಗುವ ಸಾಧ್ಯತೆ ಇದೆ. ಅನಿರೀಕ್ಷಿತ ಹಣಕಾಸಿನ ನಷ್ಟವಾಗದಂತೆ ಖರ್ಚು ಮತ್ತು ಹೂಡಿಕೆ ವಿಚಾರದಲ್ಲಿ ಜಾಗರೂಕರಾಗಿರಿ.

ಕನ್ಯಾ ರಾಶಿ

ವೃತ್ತಿ ಮತ್ತು ಉದ್ಯೋಗ ಕ್ಷೇತ್ರದಲ್ಲಿ ನಿರೀಕ್ಷಿಸಿದ ಪ್ರಗತಿ ದೊರೆಯಲಿದೆ. ಅನಿರೀಕ್ಷಿತ ಧನಲಾಭದಿಂದ ಆರ್ಥಿಕ ಸ್ಥಿತಿ ಮತ್ತಷ್ಟು ಸುಧಾರಿಸಬಹುದು. ಕುಟುಂಬದಲ್ಲಿ ನೆಮ್ಮದಿ ಮತ್ತು ಸಂತೋಷ ನೆಲೆಸಲಿದೆ. ಸಮಾಜದಲ್ಲಿ ಗೌರವ ಮತ್ತು ನಿಮ್ಮ ಮೇಲಿನ ನಂಬಿಕೆ ಹೆಚ್ಚಾಗಬಹುದು. ಮಕ್ಕಳ ಸಂತೋಷಕ್ಕಾಗಿ ಕೆಲವು ಉತ್ತಮ ಕಾರ್ಯಗಳನ್ನು ಮಾಡುವಿರಿ. ಶುಭಕಾರ್ಯಕ್ಕೆ ಸಂಬಂಧಿಸಿದ ಪ್ರಯತ್ನಗಳು ಸುಗಮವಾಗಿ ನೆರವೇರುವ ಸಾಧ್ಯತೆ ಇದೆ.

Daily Horoscope 9-10-2026

ತುಲಾ ರಾಶಿ

ಕುಟುಂಬ ಜೀವನದಲ್ಲಿ ಸಂತೃಪ್ತಿ ಮತ್ತು ನೆಮ್ಮದಿ ಇರಲಿದೆ. ಅನಿರೀಕ್ಷಿತ ಹಣಕಾಸಿನ ಲಾಭ ದೊರೆತರೆ ಸಾಲದ ಒತ್ತಡದಿಂದ ಹೊರಬರಲು ಅನುಕೂಲವಾಗಬಹುದು. ಸಮಾಜದಲ್ಲಿ ನಿಮ್ಮ ಉತ್ತಮ ನಡೆ-ನುಡಿಗೆ ಮೆಚ್ಚುಗೆ ದೊರೆಯಲಿದೆ. ನಿಮ್ಮ ಕೆಲಸ ಮತ್ತು ವ್ಯಕ್ತಿತ್ವದಿಂದ ಕೆಲವರು ನಿಮ್ಮನ್ನು ಮಾದರಿಯಾಗಿ ಪರಿಗಣಿಸುವ ಸಾಧ್ಯತೆ ಇದೆ. ಬಂಧುಗಳು ಮತ್ತು ಸ್ನೇಹಿತರ ಭೇಟಿಯಿಂದ ಮನಸ್ಸಿಗೆ ಸಂತೋಷ ಸಿಗಲಿದೆ.

ವೃಶ್ಚಿಕ ರಾಶಿ

ಅನಿರೀಕ್ಷಿತ ಧನಲಾಭ ದೊರೆಯುವ ಸಾಧ್ಯತೆ ಇದೆ. ಕುಟುಂಬದಲ್ಲಿ ಸಂತೋಷ ಮತ್ತು ಉತ್ಸಾಹದ ವಾತಾವರಣ ನಿರ್ಮಾಣವಾಗಲಿದೆ. ಬಂಧು-ಮಿತ್ರರನ್ನು ಭೇಟಿಯಾಗುವ ಅವಕಾಶ ಸಿಗುತ್ತದೆ. ಸಾಮಾಜಿಕವಾಗಿ ಗೌರವ ಹೆಚ್ಚಾಗಲಿದ್ದು, ಆರೋಗ್ಯವೂ ಉತ್ತಮವಾಗಿರಲಿದೆ. ಕೈಗೆತ್ತಿಕೊಳ್ಳುವ ಕಾರ್ಯಗಳಲ್ಲಿ ಪ್ರಗತಿ ಕಂಡುಬರಬಹುದು. ಶುಭಕಾರ್ಯಕ್ಕೆ ಸಂಬಂಧಿಸಿದ ಪ್ರಯತ್ನಗಳು ಸುಲಭವಾಗಿ ಫಲಿಸುವ ಸಾಧ್ಯತೆ ಇದೆ.

ಧನು ರಾಶಿ

ಆತ್ಮವಿಶ್ವಾಸ ಮತ್ತು ಧೈರ್ಯದಿಂದ ಮುನ್ನಡೆಯುವಿರಿ. ನಿಮ್ಮ ಜಾಣ್ಮೆ ಹಾಗೂ ಸೂಕ್ಷ್ಮವಾದ ಚಿಂತನೆಯಿಂದ ಕಷ್ಟಕರ ಕೆಲಸಗಳಲ್ಲಿಯೂ ಯಶಸ್ಸು ಸಾಧಿಸುವ ಸಾಧ್ಯತೆ ಇದೆ. ನಿಮ್ಮ ಸಾಮರ್ಥ್ಯ ಮತ್ತು ಪರಾಕ್ರಮವನ್ನು ಇತರರು ಗುರುತಿಸಲಿದ್ದಾರೆ. ಶತ್ರುಗಳಿಂದ ಎದುರಾಗಬಹುದಾದ ಸಮಸ್ಯೆಗಳು ಕಡಿಮೆಯಾಗಬಹುದು. ಪ್ರಮುಖ ವ್ಯಕ್ತಿಗಳ ಭೇಟಿ, ಶುಭಕಾರ್ಯಗಳ ನೆರವೇರಿಕೆ ಹಾಗೂ ಅನಿರೀಕ್ಷಿತ ಲಾಭದ ಅವಕಾಶಗಳು ದೊರೆಯಬಹುದು.

ಮಕರ ರಾಶಿ

ವೃತ್ತಿ ವಿಚಾರದಲ್ಲಿ ಅನುಕೂಲಕರ ಸ್ಥಳ ಬದಲಾವಣೆ ಅಥವಾ ವರ್ಗಾವಣೆ ಸಂಭವಿಸುವ ಸಾಧ್ಯತೆ ಇದೆ. ಆದರೆ ಇದೇ ಸಮಯದಲ್ಲಿ ಹಣಕಾಸಿನ ಒತ್ತಡವೂ ಕಾಡಬಹುದು. ಅನಗತ್ಯ ಜಗಳ ಮತ್ತು ವಾದಗಳಿಂದ ದೂರವಿರುವುದು ಉತ್ತಮ. ಆರೋಗ್ಯ ಸಮಸ್ಯೆಗಳು ಎದುರಾದರೆ ಸೂಕ್ತ ಚಿಕಿತ್ಸೆ ಮತ್ತು ಔಷಧೋಪಚಾರಕ್ಕೆ ಗಮನ ನೀಡಬೇಕು. ಸ್ಥಿರಾಸ್ತಿ ಖರೀದಿ ಅಥವಾ ಮಾರಾಟದಂತಹ ವಿಚಾರಗಳಲ್ಲಿ ಆತುರದ ನಿರ್ಧಾರ ಕೈಗೊಳ್ಳದೆ ಪರಿಶೀಲಿಸಿ ಮುಂದುವರಿಯಿರಿ.

ಕುಂಭ ರಾಶಿ

ತಮ್ಮ ಮಾತು ಮತ್ತು ನಡೆ-ನುಡಿಯಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯ. ಯಾವುದೇ ಕಾರಣಕ್ಕೂ ಅಪಕೀರ್ತಿಗೆ ಕಾರಣವಾಗುವಂತಹ ವಿಚಾರಗಳಿಂದ ದೂರವಿರಿ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಪ್ರಯಾಣದ ಸಂದರ್ಭದಲ್ಲಿ ಹೆಚ್ಚುವರಿ ಖರ್ಚು ಮತ್ತು ದೈಹಿಕ ಆಯಾಸ ಎದುರಾಗುವ ಸಾಧ್ಯತೆ ಇದೆ. ಕಲಹಗಳಿಂದ ದೂರವಿದ್ದು ಶಾಂತವಾಗಿ ವರ್ತಿಸುವುದು ಉತ್ತಮ. ದೂರದ ಪ್ರದೇಶದ ವ್ಯಕ್ತಿಗಳೊಂದಿಗೆ ಹೊಸ ಪರಿಚಯ ಬೆಳೆದುಬರಬಹುದು.

ಮೀನ ರಾಶಿ

ಆಪ್ತರಿಂದ ನಿರೀಕ್ಷಿಸಿದ ಸಹಾಯ ಸ್ವಲ್ಪ ತಡವಾಗಿ ದೊರೆಯಬಹುದು. ಹಣಕಾಸಿನ ವಿಚಾರದಲ್ಲಿ ಒತ್ತಡ ಎದುರಾಗುವ ಸಾಧ್ಯತೆ ಇರುವುದರಿಂದ ಖರ್ಚಿನ ಮೇಲೆ ನಿಯಂತ್ರಣ ಇರಲಿ. ಪ್ರಯಾಣ ಮಾಡುವಾಗ ಹೆಚ್ಚಿನ ಎಚ್ಚರಿಕೆ ವಹಿಸುವುದು ಉತ್ತಮ. ಅಜೀರ್ಣ ಸೇರಿದಂತೆ ಕೆಲವು ಆರೋಗ್ಯ ಸಮಸ್ಯೆಗಳು ಕಾಡಬಹುದು. ಕೀಲುನೋವಿನಂತಹ ತೊಂದರೆಗಳನ್ನು ನಿರ್ಲಕ್ಷಿಸದೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕೆಲವೊಂದು ವಿಚಾರಗಳು ಮನಸ್ಸಿಗೆ ಬೇಸರ ಉಂಟುಮಾಡಬಹುದು.

ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.

Savitha

ಪತ್ರಿಕೋದ್ಯಮದಲ್ಲಿ 8 ವರ್ಷಗಳ ಬರವಣಿಗೆ ಅನುಭವ ಹೊಂದಿರುವ ಸವಿತಾ ರವರು, ಟ್ರೆಂಡಿಂಗ್ ವಿಷಯಗಳು, ಸೋಶಿಯಲ್ ಮೀಡಿಯಾ, ವೈರಲ್ ಕಂಟೆಂಟ್, ಧಾರ್ಮಿಕ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ… More »

Related Stories