ದಿನ ಭವಿಷ್ಯ 19-11-2026: ಆಸ್ತಿ ವಿವಾದಕ್ಕೆ ಪರಿಹಾರ, ಹಠಾತ್ ಹಣದ ಲಾಭ; ಈ ರಾಶಿಗಳ ಆರ್ಥಿಕ ಸಂಕಷ್ಟಕ್ಕೆ ಮುಕ್ತಿ

ನಾಳೆಯ ದಿನ ಭವಿಷ್ಯ 19 ನವೆಂಬರ್ 2026: ಇಂದು ಈ 3 ರಾಶಿಯವರು ಸ್ವಲ್ಪ ಎಚ್ಚರ! ಹಣಕಾಸು, ಆರೋಗ್ಯದ ಬಗ್ಗೆ ಇರಲಿ ಗಮನ । Daily Horoscope, Naleya Dina Bhavishya 19 November 2026

ದಿನ ಭವಿಷ್ಯ 19 ನವೆಂಬರ್ 2026

ಮೇಷ ರಾಶಿ: ಈ ದಿನ ನೀವು ನಿರೀಕ್ಷಿಸುವ ರೀತಿಯಲ್ಲಿ ಎಲ್ಲ ಕೆಲಸಗಳೂ ನಡೆಯದೇ ಇರಬಹುದು. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಡುವ ಸಾಧ್ಯತೆಯಿದೆ. ಸಮಯಕ್ಕೆ ಸರಿಯಾಗಿ ಊಟ ಮಾಡುವುದರ ಜೊತೆಗೆ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಿ. ಮಕ್ಕಳ ವಿಚಾರದಲ್ಲಿ ಹೆಚ್ಚಿನ ಗಮನಹರಿಸುವುದು ಅಗತ್ಯ. ಆತುರದ ನಿರ್ಧಾರಗಳಿಂದ ದೂರವಿರುವುದು ಉತ್ತಮ.

ವೃಷಭ ರಾಶಿ: ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಇರಲಿದೆ. ಯಾವುದೇ ವಿಚಾರದಲ್ಲೂ ತಾಳ್ಮೆಯಿಂದ ವರ್ತಿಸುವುದು ನಿಮಗೆ ಅನುಕೂಲವಾಗಲಿದೆ. ಬಂಧುಗಳು ಮತ್ತು ಸ್ನೇಹಿತರೊಂದಿಗೆ ಅನಗತ್ಯ ಮಾತಿನ ಚಕಮಕಿ ಬೇಡ. ಅನಿರೀಕ್ಷಿತ ಖರ್ಚುಗಳಿಂದ ಹಣಕಾಸಿನ ಒತ್ತಡ ಎದುರಾಗಬಹುದು. ಆರೋಗ್ಯದಲ್ಲಿ ಏರುಪೇರಾದರೆ ನಿರ್ಲಕ್ಷ್ಯ ಮಾಡದೆ ಸೂಕ್ತ ಚಿಕಿತ್ಸೆ ಪಡೆಯಿರಿ.

ಮಿಥುನ ರಾಶಿ: ಇಂದು ಕೆಲವು ಪ್ರಮುಖ ಕೆಲಸಗಳನ್ನು ಮುಂದೂಡುವ ಪರಿಸ್ಥಿತಿ ಎದುರಾಗಬಹುದು. ಮನಸ್ಸಿನಲ್ಲಿ ಗೊಂದಲ ಹೆಚ್ಚಾಗಿ ಕೆಲಸದ ಮೇಲೆ ಆಸಕ್ತಿ ಕಡಿಮೆಯಾಗುವ ಸಾಧ್ಯತೆಯಿದೆ. ಸೋಮಾರಿತನ ಬಿಟ್ಟು ಕೈಗೆತ್ತಿಕೊಂಡ ಕೆಲಸಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಿ. ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿ. ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಬದಲಾವಣೆ ನಿರೀಕ್ಷಿಸುವಂತಿಲ್ಲ.

ಕರ್ಕಾಟಕ ರಾಶಿ: ಆಸ್ತಿ ಮತ್ತು ಸ್ಥಿರಾಸ್ತಿಗಳಿಗೆ ಸಂಬಂಧಿಸಿದ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗುವ ಸಾಧ್ಯತೆಯಿದೆ. ಮನೆಗೆ ಸಂಬಂಧಿಸಿದ ಹೊಸ ಕೆಲಸಗಳ ಕಡೆಗೆ ಗಮನಹರಿಸುತ್ತೀರಿ. ಅನಿರೀಕ್ಷಿತವಾಗಿ ಹಣದ ಲಾಭವಾಗುವುದರಿಂದ ಸಂತೋಷ ಹೆಚ್ಚಾಗಲಿದೆ. ಬಂಧುಗಳು ಮತ್ತು ಸ್ನೇಹಿತರೊಂದಿಗೆ ಸಂತೋಷದ ಸಮಯ ಕಳೆಯುವ ಅವಕಾಶ ಸಿಗಲಿದೆ. ದೇವರ ದರ್ಶನದಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ.

ಸಿಂಹ ರಾಶಿ: ಹೊಸದಾಗಿ ಪರಿಚಯವಾಗುವ ವ್ಯಕ್ತಿಗಳನ್ನು ಅತಿಯಾಗಿ ನಂಬುವುದು ಬೇಡ. ನಿಮ್ಮ ಮಾತು ಮತ್ತು ನಡವಳಿಕೆಯಿಂದ ಗೌರವಕ್ಕೆ ಧಕ್ಕೆ ಬರದಂತೆ ಎಚ್ಚರಿಕೆ ವಹಿಸಿ. ಕೈಗೆತ್ತಿಕೊಂಡ ಕೆಲಸಗಳಲ್ಲಿ ಕೆಲವು ಅಡೆತಡೆಗಳು ಎದುರಾಗಬಹುದು. ಸಹೋದರರೊಂದಿಗೆ ಭಿನ್ನಾಭಿಪ್ರಾಯ ಉಂಟಾಗದಂತೆ ನೋಡಿಕೊಳ್ಳಿ. ಸಾಲಕ್ಕೆ ಸಂಬಂಧಿಸಿದ ಪ್ರಯತ್ನಗಳಲ್ಲಿ ಫಲಿತಾಂಶ ಸಿಗಲು ಸ್ವಲ್ಪ ಸಮಯ ಬೇಕಾಗಬಹುದು.

ಕನ್ಯಾ ರಾಶಿ: ಇಂದು ಮನಸ್ಸಿನಲ್ಲಿ ಹಲವು ಆಲೋಚನೆಗಳು ಮೂಡಿ ನಿರ್ಧಾರ ತೆಗೆದುಕೊಳ್ಳಲು ಗೊಂದಲವಾಗಬಹುದು. ಕುಟುಂಬದವರು ಹಾಗೂ ಸ್ನೇಹಿತರೊಂದಿಗೆ ಮಾತನಾಡುವಾಗ ತಾಳ್ಮೆ ಇರಲಿ. ಸಮಯಕ್ಕೆ ಸರಿಯಾಗಿ ಊಟ ಮಾಡದಿದ್ದರೆ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಸಣ್ಣ ವಿಚಾರಗಳಿಗೂ ಜಗಳ ಮಾಡಿಕೊಳ್ಳುವ ಸಾಧ್ಯತೆಯಿದೆ. ಕೆಟ್ಟ ಅಭ್ಯಾಸ ಮತ್ತು ಅನಗತ್ಯ ಸಹವಾಸಗಳಿಂದ ದೂರವಿರುವುದು ಒಳ್ಳೆಯದು.

ತುಲಾ ರಾಶಿ: ನಿಮ್ಮ ಪ್ರಯತ್ನಕ್ಕೆ ತಕ್ಕಂತೆ ಅಲ್ಪ ಪ್ರಮಾಣದ ಲಾಭ ದೊರೆಯಲಿದೆ. ವ್ಯಾಪಾರಿಗಳಿಗೆ ವ್ಯವಹಾರದಲ್ಲಿ ಉತ್ತಮ ಆದಾಯ ಸಿಗುವ ಸಾಧ್ಯತೆಯಿದೆ. ಕೆಲಸದ ನಿಮಿತ್ತ ಅನಗತ್ಯ ಪ್ರಯಾಣಗಳು ಹೆಚ್ಚಾಗಬಹುದು. ಹೊಸ ಯೋಜನೆ ಅಥವಾ ಕೆಲಸ ಆರಂಭಿಸಲು ಅವಕಾಶ ದೊರೆಯಲಿದೆ. ಹಣಕಾಸಿನ ಅಗತ್ಯಕ್ಕಾಗಿ ಸಾಲದ ಮೊರೆ ಹೋಗಬೇಕಾಗಬಹುದು. ಬಂಧುಗಳು ಮತ್ತು ಸ್ನೇಹಿತರ ನೆರವು ಸ್ವಲ್ಪ ವಿಳಂಬವಾಗಿ ಸಿಗಲಿದೆ.

ವೃಶ್ಚಿಕ ರಾಶಿ: ವಿದೇಶಕ್ಕೆ ತೆರಳಲು ಪ್ರಯತ್ನಿಸುತ್ತಿರುವವರಿಗೆ ಅನುಕೂಲಕರ ಬೆಳವಣಿಗೆಗಳು ಕಂಡುಬರಬಹುದು. ಪ್ರಯಾಣಗಳು ಹೆಚ್ಚಾಗುವ ಸಾಧ್ಯತೆಯಿರುವುದರಿಂದ ಪ್ರತಿಯೊಂದು ಹಂತದಲ್ಲೂ ಎಚ್ಚರಿಕೆ ವಹಿಸಿ. ಸ್ಥಳ ಬದಲಾವಣೆಯ ಯೋಗವೂ ಇದೆ. ಸಾಲ ಅಥವಾ ಹಣಕಾಸಿನ ವಿಚಾರದಲ್ಲಿ ಲಾಭವಾಗಬಹುದು. ಅಲರ್ಜಿ ಸಮಸ್ಯೆ ಇರುವವರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಕೆಲವು ಕೆಲಸಗಳಲ್ಲಿ ವಿಳಂಬ ಎದುರಾಗಬಹುದು.

ಧನುಸ್ಸು ರಾಶಿ: ಕುಟುಂಬದಲ್ಲಿ ಈ ಹಿಂದೆ ಇದ್ದ ಮನಸ್ತಾಪಗಳು ನಿಧಾನವಾಗಿ ದೂರವಾಗಲಿವೆ. ಆದರೆ ನೀವು ಅಂದುಕೊಂಡ ಕೆಲಸಗಳು ನಿರೀಕ್ಷಿತ ಸಮಯಕ್ಕೆ ಪೂರ್ಣಗೊಳ್ಳದೇ ಅಡೆತಡೆ ಉಂಟಾಗಬಹುದು. ಅನಗತ್ಯ ಪ್ರಯಾಣಗಳಿಂದ ದೈಹಿಕ ಆಯಾಸ ಹೆಚ್ಚಾಗುವ ಸಾಧ್ಯತೆಯಿದೆ. ಕೆಟ್ಟ ಕೆಲಸಗಳಿಂದ ದೂರವಿದ್ದು ಎಲ್ಲರೊಂದಿಗೂ ಉತ್ತಮ ಸಂಬಂಧ ಕಾಪಾಡಿಕೊಳ್ಳಿ. ಸಣ್ಣ ಪ್ರಮಾಣದ ಆರ್ಥಿಕ ಸಮಸ್ಯೆಗಳು ಎದುರಾಗಬಹುದು.

ಮಕರ ರಾಶಿ: ಆಪ್ತರಿಂದ ನಿರೀಕ್ಷಿಸುವ ಸಹಾಯ ತಕ್ಷಣಕ್ಕೆ ಸಿಗದೇ ಸ್ವಲ್ಪ ಕಾಯಬೇಕಾಗಬಹುದು. ಹಣಕಾಸಿನ ಒತ್ತಡದಿಂದ ಮನಸ್ಸಿಗೆ ಚಿಂತೆ ಉಂಟಾಗುವ ಸಾಧ್ಯತೆಯಿದೆ. ಪ್ರಯಾಣ ಮಾಡುವಾಗ ಎಚ್ಚರಿಕೆ ವಹಿಸುವುದು ಮುಖ್ಯ. ಆಹಾರ ಪದ್ಧತಿಯಲ್ಲಿ ನಿರ್ಲಕ್ಷ್ಯ ಮಾಡಬೇಡಿ, ಅಜೀರ್ಣ ಸಮಸ್ಯೆ ಕಾಡಬಹುದು. ಕೀಲು ನೋವು ಇರುವವರು ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕು.

ಕುಂಭ ರಾಶಿ: ನಿಮ್ಮ ಉತ್ತಮ ನಡವಳಿಕೆ ಮತ್ತು ಕೆಲಸದ ರೀತಿ ಇತರರಿಗೆ ಮಾದರಿಯಾಗಲಿದೆ. ಕೈಗೆತ್ತಿಕೊಂಡ ಕಾರ್ಯಗಳಲ್ಲಿ ಯಶಸ್ಸು ಸಾಧಿಸುವ ಅವಕಾಶಗಳಿವೆ. ಆಸ್ತಿ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಅನುಕೂಲಕರ ಸಮಯವಾಗಿದೆ. ದೇವರ ದರ್ಶನದಿಂದ ಮನಸ್ಸಿಗೆ ಸಂತೋಷ ಸಿಗಲಿದೆ. ಕಲೆ ಮತ್ತು ಸೃಜನಶೀಲ ಚಟುವಟಿಕೆಗಳ ಬಗ್ಗೆ ಆಸಕ್ತಿ ಹೆಚ್ಚಾಗಲಿದ್ದು, ಹೊಸ ವಸ್ತುಗಳು ಹಾಗೂ ಆಭರಣಗಳನ್ನು ಖರೀದಿಸುವ ಯೋಗವಿದೆ.

ಮೀನ ರಾಶಿ: ಕುಟುಂಬದಲ್ಲಿ ಸಂತೋಷ ಮತ್ತು ನೆಮ್ಮದಿಯ ವಾತಾವರಣ ಇರಲಿದೆ. ಆದರೆ ಆರೋಗ್ಯದ ವಿಚಾರದಲ್ಲಿ ಯಾವುದೇ ನಿರ್ಲಕ್ಷ್ಯ ಮಾಡಬೇಡಿ. ಹಣಕಾಸಿನ ಸಮಸ್ಯೆಗಳು ಸ್ವಲ್ಪ ಮಟ್ಟಿಗೆ ಕಾಡಬಹುದು. ಹೊಸ ಕೆಲಸ ಅಥವಾ ಯೋಜನೆಗಳನ್ನು ಆರಂಭಿಸುವುದಕ್ಕಿಂತ ಸದ್ಯದ ಜವಾಬ್ದಾರಿಗಳನ್ನು ಪೂರ್ಣಗೊಳಿಸುವ ಕಡೆಗೆ ಗಮನಹರಿಸಿ. ಆತ್ಮೀಯರ ಸಹಾಯಕ್ಕಾಗಿ ಸಮಯ ಮೀಸಲಿಡಬೇಕಾಗಬಹುದು.

Savitha

ಪತ್ರಿಕೋದ್ಯಮದಲ್ಲಿ 8 ವರ್ಷಗಳ ಬರವಣಿಗೆ ಅನುಭವ ಹೊಂದಿರುವ ಸವಿತಾ ರವರು, ಟ್ರೆಂಡಿಂಗ್ ವಿಷಯಗಳು, ಸೋಶಿಯಲ್ ಮೀಡಿಯಾ, ವೈರಲ್ ಕಂಟೆಂಟ್, ಧಾರ್ಮಿಕ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ… More »

Related Stories