ದಿನ ಭವಿಷ್ಯ 20-11-2026: ವೃಶ್ಚಿಕ, ಧನು, ಮಕರ ರಾಶಿಗೆ ನಿರೀಕ್ಷೆಗೂ ಮೀರಿದ ಲಾಭ! ನಿಮ್ಮ ರಾಶಿ ಭವಿಷ್ಯ ಹೇಗಿದೆ

ನಾಳೆಯ ದಿನ ಭವಿಷ್ಯ 20 ನವೆಂಬರ್ 2026: ಇಂದು ಧನಲಾಭ, ಉದ್ಯೋಗ ಪ್ರಗತಿ, ಕೌಟುಂಬಿಕ ಸಂತೋಷ; ಯಾರಿಗೆ ಏನು ಫಲ? । Daily Horoscope, Naleya Dina Bhavishya 20 November 2026

ದಿನ ಭವಿಷ್ಯ 20 ನವೆಂಬರ್ 2026

ಮೇಷ ರಾಶಿ: ಈ ದಿನ ಹೊಸ ಕೆಲಸಗಳನ್ನು ಆರಂಭಿಸಲು ಸ್ವಲ್ಪ ವಿಳಂಬವಾಗಬಹುದು. ಆಹಾರ ಸೇವನೆಯಲ್ಲಿ ನಿರ್ಲಕ್ಷ್ಯ ಮಾಡದೆ ಆರೋಗ್ಯದ ಕಡೆ ಗಮನಹರಿಸಿ. ಕೆಲವು ವಿಚಾರಗಳು ಮನಸ್ಸಿಗೆ ಬೇಸರ ತರಬಹುದು. ಅನಗತ್ಯ ಆತಂಕಕ್ಕೆ ಒಳಗಾಗದೆ, ಸುಳ್ಳು ಹೇಳುವುದರಿಂದ ದೂರವಿರುವುದು ಉತ್ತಮ.

ವೃಷಭ ರಾಶಿ: ಆಕಸ್ಮಿಕ ಹಣಕಾಸಿನ ನಷ್ಟವಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ವಹಿಸಿ. ಕೆಲವು ಪ್ರಮುಖ ಕೆಲಸಗಳನ್ನು ಮುಂದೂಡಬೇಕಾಗಬಹುದು. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಡಬಹುದು. ಅನಗತ್ಯ ಪ್ರಯಾಣಗಳನ್ನು ತಪ್ಪಿಸಿ, ಕುಟುಂಬದವರು ಹಾಗೂ ಆಪ್ತರೊಂದಿಗೆ ಭಿನ್ನಾಭಿಪ್ರಾಯ ಉಂಟಾಗದಂತೆ ಎಚ್ಚರಿಕೆ ವಹಿಸಿ.

ಮಿಥುನ ರಾಶಿ: ವಿದೇಶ ಪ್ರಯಾಣಕ್ಕೆ ಸಂಬಂಧಿಸಿದ ಪ್ರಯತ್ನಗಳು ಕೈಗೂಡುವ ಸಾಧ್ಯತೆ ಇದೆ. ಆದರೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗಬಹುದು. ಅನಿರೀಕ್ಷಿತ ಹಣಕಾಸಿನ ನಷ್ಟ ಉಂಟಾಗುವ ಸಾಧ್ಯತೆ ಇರುವುದರಿಂದ ಖರ್ಚಿನ ಬಗ್ಗೆ ಎಚ್ಚರಿಕೆ ಇರಲಿ. ಬಂಧುಗಳು ಮತ್ತು ಸ್ನೇಹಿತರೊಂದಿಗೆ ಉತ್ತಮ ಸಂಬಂಧ ಕಾಪಾಡಿಕೊಳ್ಳಿ.

ಕರ್ಕಾಟಕ ರಾಶಿ: ವಿದೇಶ ಪ್ರಯಾಣದ ಪ್ರಯತ್ನಗಳಿಗೆ ಉತ್ತಮ ಫಲಿತಾಂಶ ದೊರೆಯಬಹುದು. ಕುಟುಂಬದಲ್ಲಿ ಪರಿಸ್ಥಿತಿ ತೃಪ್ತಿಕರವಾಗಿದ್ದರೂ ಕೆಲವು ವಿಚಾರಗಳು ಮನಸ್ಸಿಗೆ ನೋವು ತರಬಹುದು. ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ. ಹೊಸ ಕೆಲಸಗಳನ್ನು ಸದ್ಯಕ್ಕೆ ಮುಂದೂಡುವುದು ಉತ್ತಮ.

ಸಿಂಹ ರಾಶಿ: ಅನಗತ್ಯ ಮನಸ್ತಾಪ ಮತ್ತು ಮಾನಸಿಕ ಒತ್ತಡ ಎದುರಾಗಬಹುದು. ಕುಟುಂಬದಲ್ಲಿ ಕೆಲವು ಬದಲಾವಣೆಗಳನ್ನು ಬಯಸುವಿರಿ. ಸಣ್ಣಪುಟ್ಟ ಕೆಲಸಗಳಲ್ಲಿಯೂ ಅಡೆತಡೆಗಳು ಎದುರಾಗುವ ಸಾಧ್ಯತೆ ಇದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡದೆ, ವಾದವಿವಾದಗಳಿಂದ ದೂರವಿರುವುದು ಉತ್ತಮ.

ಕನ್ಯಾ ರಾಶಿ: ವ್ಯಾಪಾರದಲ್ಲಿ ಕೆಲವು ನಷ್ಟಗಳು ಎದುರಾಗುವ ಸಾಧ್ಯತೆ ಇರುವುದರಿಂದ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ವಹಿಸಿ. ಸಹೋದ್ಯೋಗಿಗಳು ಹಾಗೂ ಆಪ್ತರೊಂದಿಗೆ ಅನಗತ್ಯ ಭಿನ್ನಾಭಿಪ್ರಾಯ ಬೇಡ. ಪ್ರಯೋಜನವಿಲ್ಲದ ಪ್ರಯಾಣಗಳಿಂದ ಖರ್ಚು ಹೆಚ್ಚಾಗಬಹುದು. ಮಹಿಳೆಯರು ಕೆಲಸದ ಒತ್ತಡ ಕಡಿಮೆ ಮಾಡಿಕೊಂಡು ವಿಶ್ರಾಂತಿಗೆ ಆದ್ಯತೆ ನೀಡಬೇಕು.

ತುಲಾ ರಾಶಿ: ಆರ್ಥಿಕ ವಿಚಾರಗಳಲ್ಲಿ ಕೆಲವು ತೊಂದರೆಗಳನ್ನು ಎದುರಿಸಬೇಕಾಗಬಹುದು. ಉದ್ಯೋಗ ಮತ್ತು ವೃತ್ತಿ ಕ್ಷೇತ್ರದಲ್ಲಿ ನಿರೀಕ್ಷಿತ ಫಲಿತಾಂಶ ಸಿಗದೆ ನಿರಾಸೆಯಾಗಬಹುದು. ಕುಟುಂಬದಲ್ಲಿ ಬದಲಾವಣೆ ಬಯಸುವಿರಿ. ಉತ್ತಮ ಅವಕಾಶವೊಂದು ಕೈತಪ್ಪುವ ಸಾಧ್ಯತೆ ಇರುವುದರಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎಚ್ಚರಿಕೆ ಇರಲಿ.

ವೃಶ್ಚಿಕ ರಾಶಿ: ಉದ್ಯೋಗ ಮತ್ತು ವೃತ್ತಿ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಕಂಡುಬರಲಿದೆ. ಅನಿರೀಕ್ಷಿತವಾಗಿ ಹಣದ ಲಾಭವಾಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಸಂತೋಷ ಮತ್ತು ನೆಮ್ಮದಿ ನೆಲೆಸಲಿದೆ. ಸಮಾಜದಲ್ಲಿ ಗೌರವ ಹೆಚ್ಚಾಗುವುದರ ಜೊತೆಗೆ ಮಕ್ಕಳಿಂದ ಸಂತಸದ ವಿಚಾರಗಳು ಕೇಳಿಬರಬಹುದು. ಶುಭಕಾರ್ಯಗಳ ಪ್ರಯತ್ನಗಳು ಸುಲಭವಾಗಿ ನೆರವೇರಲಿವೆ.

ಧನು ರಾಶಿ: ಶುಭಕಾರ್ಯಗಳಿಗೆ ಸಂಬಂಧಿಸಿದ ಪ್ರಯತ್ನಗಳು ಯಶಸ್ವಿಯಾಗಲಿವೆ. ಕುಟುಂಬ ಮತ್ತು ಸ್ನೇಹಿತರಿಂದ ಸಂತಸದ ಸುದ್ದಿಗಳು ಕೇಳಿಬರಬಹುದು. ಬಂಧುಗಳೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುವ ಅವಕಾಶ ಸಿಗಲಿದೆ. ಅನಿರೀಕ್ಷಿತ ಹಣದ ಲಾಭವಾಗುವ ಸಾಧ್ಯತೆ ಇದ್ದು, ಹೊಸ ವಸ್ತುಗಳು ಹಾಗೂ ಆಭರಣಗಳನ್ನು ಖರೀದಿಸುವ ಯೋಗವಿದೆ.

ಮಕರ ರಾಶಿ: ಆಕಸ್ಮಿಕ ಧನಲಾಭದಿಂದ ಆರ್ಥಿಕ ಸ್ಥಿತಿ ಉತ್ತಮವಾಗಬಹುದು. ಕುಟುಂಬದಲ್ಲಿ ಸಂತೋಷ ಮತ್ತು ಸಂಭ್ರಮದ ವಾತಾವರಣ ಇರಲಿದೆ. ಬಂಧುಗಳು ಹಾಗೂ ಸ್ನೇಹಿತರ ಭೇಟಿಯಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಸಮಾಜದಲ್ಲಿ ಗೌರವ ಹೆಚ್ಚಾಗಲಿದ್ದು, ಆರೋಗ್ಯವೂ ಉತ್ತಮವಾಗಿರುತ್ತದೆ. ಶುಭಕಾರ್ಯಗಳ ಪ್ರಯತ್ನಗಳು ಯಶಸ್ಸು ಕಾಣಲಿವೆ.

ಕುಂಭ ರಾಶಿ: ಯಾವುದೇ ಕಾರಣಕ್ಕೂ ಅಪಕೀರ್ತಿಗೆ ಅವಕಾಶ ನೀಡದಂತೆ ಎಚ್ಚರಿಕೆ ವಹಿಸಿ. ಸಹೋದರರೊಂದಿಗೆ ಅನಗತ್ಯ ವೈಮನಸ್ಸು ಬೆಳೆಸಿಕೊಳ್ಳಬೇಡಿ. ಅಂದುಕೊಂಡ ಕೆಲಸಗಳಲ್ಲಿ ಕೆಲವು ಅಡೆತಡೆಗಳು ಎದುರಾಗಬಹುದು. ಹಣಕಾಸಿನ ಸಮಸ್ಯೆಗಳು ಪರಿಹಾರವಾಗಲು ಸ್ವಲ್ಪ ಸಮಯ ಬೇಕಾಗಬಹುದು. ಹೊಸ ವ್ಯಕ್ತಿಗಳೊಂದಿಗೆ ವ್ಯವಹರಿಸುವಾಗ ಎಚ್ಚರಿಕೆ ಇರಲಿ.

ಮೀನ ರಾಶಿ: ನೀವು ಕೈಗೆತ್ತಿಕೊಳ್ಳುವ ಕೆಲಸಗಳಿಗೆ ಉತ್ತಮ ಫಲಿತಾಂಶ ದೊರೆಯಲಿದೆ. ಆಕಸ್ಮಿಕ ಧನಲಾಭವಾಗುವ ಸಾಧ್ಯತೆ ಇದ್ದು, ಆರ್ಥಿಕ ಸಂಕಷ್ಟಗಳಿಂದ ಮುಕ್ತಿ ಸಿಗಬಹುದು. ಆರೋಗ್ಯ ಉತ್ತಮವಾಗಿರಲಿದ್ದು, ಕುಟುಂಬದಲ್ಲಿ ಸಂತೋಷ ನೆಲೆಸಲಿದೆ. ಹೊಸ ವಸ್ತುಗಳು ಹಾಗೂ ಆಭರಣಗಳನ್ನು ಪಡೆಯುವ ಯೋಗವಿದೆ. ಧೈರ್ಯದಿಂದ ಮುನ್ನಡೆಯುವಿರಿ.

Savitha

ಪತ್ರಿಕೋದ್ಯಮದಲ್ಲಿ 8 ವರ್ಷಗಳ ಬರವಣಿಗೆ ಅನುಭವ ಹೊಂದಿರುವ ಸವಿತಾ ರವರು, ಟ್ರೆಂಡಿಂಗ್ ವಿಷಯಗಳು, ಸೋಶಿಯಲ್ ಮೀಡಿಯಾ, ವೈರಲ್ ಕಂಟೆಂಟ್, ಧಾರ್ಮಿಕ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ… More »

Related Stories