ದಿನ ಭವಿಷ್ಯ 27-08-2026: ಅನಿರೀಕ್ಷಿತ ಧನಲಾಭದ ಯೋಗ! ಈ ರಾಶಿಗಳಿಗೆ ಹಣ ಕೈ ಸೇರಲಿದೆ ಎಂದಿದೆ ಭವಿಷ್ಯ

ದಿನ ಭವಿಷ್ಯ 27 ಆಗಸ್ಟ್ 2026, ಈ ರಾಶಿಯವರಿಗೆ ಇಂದು ಶುಭಯೋಗ; ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ - Daily Horoscope, Naleya Dina Bhavishya 27 August 2026

ದಿನ ಭವಿಷ್ಯ 27 ಆಗಸ್ಟ್ 2026

ಮೇಷ ರಾಶಿ

ಇಂದು ಮೇಷ ರಾಶಿಯವರಿಗೆ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ಶುಭಕಾರ್ಯಗಳಿಗೆ ಕೈಹಾಕಿದರೆ ನಿರೀಕ್ಷಿತ ಫಲಿತಾಂಶ ಸಿಗುವ ಸಾಧ್ಯತೆ ಇದೆ. ಆತ್ಮೀಯರು ಮತ್ತು ಸ್ನೇಹಿತರಿಂದ ಅಗತ್ಯ ಸಹಕಾರ ದೊರೆಯಲಿದೆ. ಅನಿರೀಕ್ಷಿತವಾಗಿ ಹಣ ಕೈ ಸೇರುವ ಯೋಗವಿದ್ದು, ಹೊಸ ವಸ್ತು ಅಥವಾ ಆಭರಣ ಖರೀದಿಸುವ ಅವಕಾಶವೂ ಸಿಗಬಹುದು. ಬಹುಕಾಲದಿಂದ ಬಾಕಿ ಉಳಿದಿದ್ದ ಕೆಲಸಗಳು ಕೂಡ ವೇಗ ಪಡೆದುಕೊಳ್ಳಲಿವೆ.

ವೃಷಭ ರಾಶಿ

ಇತರರಿಗೆ ತೊಂದರೆ ಉಂಟುಮಾಡುವ ವಿಚಾರಗಳಿಂದ ದೂರವಿರುವುದು ಇಂದು ಒಳಿತು. ವೃತ್ತಿಯಲ್ಲಿ ಎದುರಾಗುವ ಕೆಲವು ಅಡೆತಡೆಗಳನ್ನು ಧೈರ್ಯದಿಂದ ನಿಭಾಯಿಸುವಿರಿ. ಯಾವುದೇ ಕೆಲಸ ಮಾಡುವ ಮುನ್ನ ಅದರ ಪರಿಣಾಮವನ್ನು ಯೋಚಿಸಿ ಮುಂದುವರಿಯುವುದು ಅಗತ್ಯ. ಹೊಸ ಕಾರ್ಯಗಳನ್ನು ಆರಂಭಿಸುವ ಆತುರ ಬೇಡ, ಸೂಕ್ತ ಸಮಯಕ್ಕಾಗಿ ಕಾಯುವುದು ಉತ್ತಮ. ಆದರೂ ಆತ್ಮವಿಶ್ವಾಸದಿಂದ ತೆಗೆದುಕೊಳ್ಳುವ ನಿರ್ಧಾರಗಳು ಮುಂದೆ ಉತ್ತಮ ಫಲ ನೀಡಬಹುದು.

ಮಿಥುನ ರಾಶಿ

ಸಮಾಜದಲ್ಲಿ ನಿಮ್ಮ ಗೌರವ ಮತ್ತು ಪ್ರತಿಷ್ಠೆಗೆ ಯಾವುದೇ ಕೊರತೆಯಾಗುವುದಿಲ್ಲ. ಆದರೆ ಅನಗತ್ಯ ಖರ್ಚುಗಳು ಹಾಗೂ ವ್ಯರ್ಥ ಪ್ರಯಾಣಗಳಿಂದ ಸಮಯ ಮತ್ತು ಹಣ ಎರಡೂ ವ್ಯಯವಾಗಬಹುದು. ಕೆಲವು ವಿಚಾರಗಳು ಮನಸ್ಸಿನಲ್ಲಿ ಗೊಂದಲ ಮೂಡಿಸಿ ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು. ಬಂಧು-ಮಿತ್ರರೊಂದಿಗೆ ಸಣ್ಣ ವಿಚಾರಗಳು ದೊಡ್ಡದಾಗದಂತೆ ಮಾತಿನಲ್ಲಿ ಎಚ್ಚರಿಕೆ ವಹಿಸಿ. ಆರೋಗ್ಯದ ಕಡೆ ಗಮನ ನೀಡುವುದರ ಜೊತೆಗೆ ವಿಂದನೆ-ವಿನೋದಗಳಲ್ಲಿ ಮಿತವಾಗಿ ಪಾಲ್ಗೊಳ್ಳುವುದು ಉತ್ತಮ.

ಕರ್ಕಾಟಕ ರಾಶಿ

ಕಲಾ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಹೊಸ ಅವಕಾಶಗಳು ದೊರೆಯುವ ಸಾಧ್ಯತೆ ಇದೆ. ನಿಮ್ಮ ವ್ಯಕ್ತಿತ್ವ ಮತ್ತು ಅಂದದ ಕಡೆ ಇಂದು ಹೆಚ್ಚಿನ ಗಮನ ಹರಿಸುವಿರಿ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದ್ದು, ಬಂಧು-ಮಿತ್ರರ ಭೇಟಿಯಿಂದ ಮನಸ್ಸಿಗೆ ಖುಷಿ ಸಿಗಲಿದೆ. ನಿಮ್ಮ ಕೆಲಸ ಮತ್ತು ಪ್ರತಿಭೆಗೆ ಮೆಚ್ಚುಗೆ ದೊರೆತು ಹೆಸರು ಹೆಚ್ಚಾಗಬಹುದು. ಹೊಸ ಬಟ್ಟೆ, ವಸ್ತು ಅಥವಾ ಆಭರಣ ಖರೀದಿಸುವ ಯೋಗವೂ ಇದೆ.

ಸಿಂಹ ರಾಶಿ

ಸಮಯಕ್ಕೆ ಸರಿಯಾಗಿ ಊಟ ಮಾಡದಿರುವುದು ಅಥವಾ ಆಹಾರದಲ್ಲಿ ನಿರ್ಲಕ್ಷ್ಯ ತೋರಿಸುವುದು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಮಕ್ಕಳ ವಿಚಾರದಲ್ಲಿ ಅತಿಯಾದ ಕಟ್ಟುನಿಟ್ಟು ತೋರಿಸುವ ಬದಲು ಅವರ ಮಾತನ್ನು ಶಾಂತವಾಗಿ ಆಲಿಸುವುದು ಒಳಿತು. ಸಣ್ಣ ವಿಚಾರಗಳಿಗೂ ಭಾವನಾತ್ಮಕವಾಗಿ ಪ್ರತಿಕ್ರಿಯಿಸುವ ಸಾಧ್ಯತೆ ಇರುವುದರಿಂದ ತಾಳ್ಮೆ ಅಗತ್ಯ. ಕೋಪವನ್ನು ನಿಯಂತ್ರಿಸಿಕೊಂಡರೆ ಅನೇಕ ಸಮಸ್ಯೆಗಳನ್ನು ಸುಲಭವಾಗಿ ತಪ್ಪಿಸಬಹುದು. ಹೊಸ ಕೆಲಸ ಆರಂಭಿಸುವುದಕ್ಕಿಂತ ಈಗಿರುವ ಕಾರ್ಯಗಳನ್ನು ಪೂರ್ಣಗೊಳಿಸುವತ್ತ ಗಮನ ಹರಿಸಿ.

ಕನ್ಯಾ ರಾಶಿ

ಯಾವುದೇ ಪರಿಸ್ಥಿತಿಯಲ್ಲೂ ಆತ್ಮವಿಶ್ವಾಸ ಕಳೆದುಕೊಳ್ಳದಿರುವುದು ಇಂದು ಬಹಳ ಮುಖ್ಯ. ಹೊಸ ಕೆಲಸಗಳನ್ನು ಆರಂಭಿಸಲು ಕೆಲವು ಅಡೆತಡೆಗಳು ಎದುರಾಗಬಹುದು. ಕೋಪದಲ್ಲಿ ಮಾತನಾಡುವ ಮಾತುಗಳು ನಂತರ ಸಮಸ್ಯೆಗೆ ಕಾರಣವಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ವಹಿಸಿ. ಇತರರಿಗೆ ಹಾನಿ ಉಂಟುಮಾಡುವ ಅಥವಾ ವಿವಾದಕ್ಕೆ ಕಾರಣವಾಗುವ ಚಟುವಟಿಕೆಗಳಿಂದ ಸಂಪೂರ್ಣ ದೂರವಿರುವುದು ಉತ್ತಮ. ಶಾಂತವಾಗಿ ಪರಿಸ್ಥಿತಿಯನ್ನು ನಿಭಾಯಿಸಿದರೆ ದಿನದ ಅಂತ್ಯಕ್ಕೆ ಮನಸ್ಸಿಗೆ ನೆಮ್ಮದಿ ದೊರೆಯಲಿದೆ.

ತುಲಾ ರಾಶಿ

ಆರೋಗ್ಯದ ವಿಚಾರದಲ್ಲಿ ಇಂದು ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ. ಆಧ್ಯಾತ್ಮಿಕ ಅಥವಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಬಹುದು. ವಿದೇಶ ಪ್ರಯಾಣಕ್ಕೆ ಸಂಬಂಧಿಸಿದ ಪ್ರಯತ್ನಗಳಿಗೆ ಅನುಕೂಲಕರ ಬೆಳವಣಿಗೆ ಕಂಡುಬರುವ ಸಾಧ್ಯತೆ ಇದೆ. ಕುಟುಂಬದಲ್ಲಿ ಅನಗತ್ಯ ವಾದ-ವಿವಾದಗಳಿಗೆ ಅವಕಾಶ ನೀಡದೆ ತಾಳ್ಮೆಯಿಂದ ವರ್ತಿಸಿ. ಹಣಕಾಸಿನ ವಿಚಾರದಲ್ಲಿ ಮಿತವ್ಯಯ ಪಾಲಿಸುವುದರಿಂದ ಮುಂದಿನ ದಿನಗಳಿಗೆ ಅನುಕೂಲವಾಗಲಿದೆ.

ವೃಶ್ಚಿಕ ರಾಶಿ

ಸ್ಥಿರಾಸ್ತಿ ಅಥವಾ ಆಸ್ತಿ ವ್ಯವಹಾರಗಳಿಗೆ ಸಂಬಂಧಿಸಿದ ವಿಚಾರಗಳಲ್ಲಿ ತಕ್ಷಣ ನಿರ್ಧಾರ ತೆಗೆದುಕೊಳ್ಳದೆ ಸಮಯಪ್ರಜ್ಞೆಯಿಂದ ನಡೆದುಕೊಳ್ಳಿ. ಕೆಲವು ಕಾರಣಗಳಿಂದ ಮನಸ್ಸಿನಲ್ಲಿ ನಿರಾಸೆ ಮೂಡುವ ಸಾಧ್ಯತೆ ಇದ್ದರೂ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ನಿಮ್ಮ ಮಾತು ಅಥವಾ ನಡೆ ತಪ್ಪಾಗಿ ಅರ್ಥೈಸಿಕೊಳ್ಳುವ ಪರಿಸ್ಥಿತಿ ಎದುರಾಗಬಹುದು, ಆದ್ದರಿಂದ ಎಚ್ಚರಿಕೆ ಅಗತ್ಯ. ಇತರರಿಗೆ ತೊಂದರೆ ಉಂಟುಮಾಡುವ ವಿಚಾರಗಳಿಂದ ದೂರವಿದ್ದರೆ ಉತ್ತಮ. ಸ್ವಚ್ಛತೆ ಮತ್ತು ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರೆ ಅನಾರೋಗ್ಯದ ಸಮಸ್ಯೆಗಳನ್ನು ತಪ್ಪಿಸಬಹುದು.

ಧನು ರಾಶಿ

ಮಕ್ಕಳಿಗೆ ಸಂಬಂಧಿಸಿದ ಕೆಲವು ವಿಚಾರಗಳು ಇಂದು ನಿಮಗೆ ಚಿಂತೆ ಉಂಟುಮಾಡಬಹುದು. ಕೆಲಸದ ಕ್ಷೇತ್ರದಲ್ಲಿ ಅಧಿಕಾರಿಗಳು ನಿಮ್ಮ ಪ್ರಯತ್ನವನ್ನು ಗುರುತಿಸಿ ಗೌರವಿಸುವ ಸಾಧ್ಯತೆ ಇದೆ. ಹಠ ಮತ್ತು ಪರಿಶ್ರಮದಿಂದ ಕೈಗೆತ್ತಿಕೊಂಡ ಕೆಲವು ಕೆಲಸಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ಆರೋಗ್ಯದಲ್ಲಿ ಕಾಡುತ್ತಿದ್ದ ಸಮಸ್ಯೆಗಳು ನಿಧಾನವಾಗಿ ಕಡಿಮೆಯಾಗುವ ಸೂಚನೆ ಇದೆ. ಪ್ರಯಾಣ ಮಾಡುವಾಗ ಆತುರ ಬೇಡ, ಹೊಸ ವ್ಯಕ್ತಿಗಳ ಪರಿಚಯದಿಂದ ಮುಂದಿನ ದಿನಗಳಲ್ಲಿ ಪ್ರಯೋಜನವಾಗಬಹುದು.

ಮಕರ ರಾಶಿ

ವಿದೇಶ ಪ್ರಯಾಣ ಅಥವಾ ವಿದೇಶಕ್ಕೆ ಸಂಬಂಧಿಸಿದ ಕೆಲಸಗಳಿಗೆ ಇಂದು ಅನುಕೂಲಕರ ಬೆಳವಣಿಗೆ ಕಂಡುಬರಬಹುದು. ಕೆಲಸದ ನಿಮಿತ್ತ ಹೆಚ್ಚಿನ ಪ್ರಯಾಣ ಮಾಡುವ ಪರಿಸ್ಥಿತಿ ಎದುರಾಗಬಹುದು, ಆದ್ದರಿಂದ ಎಚ್ಚರಿಕೆಯಿಂದ ಯೋಜನೆ ರೂಪಿಸಿ. ಸ್ಥಳ ಬದಲಾವಣೆ ಅಥವಾ ವರ್ಗಾವಣೆಯಂತಹ ಬೆಳವಣಿಗೆಗಳ ಸಾಧ್ಯತೆಯೂ ಇದೆ. ಸಾಲ ಅಥವಾ ಹಣಕಾಸಿಗೆ ಸಂಬಂಧಿಸಿದ ವಿಚಾರದಲ್ಲಿ ಅನುಕೂಲ ದೊರೆಯಬಹುದು. ಅಲರ್ಜಿ ಸಮಸ್ಯೆ ಇರುವವರು ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿದ್ದು, ಹೊಸ ಪ್ರಯತ್ನಗಳಲ್ಲಿ ಎದುರಾಗುವ ಸಣ್ಣ ಅಡೆತಡೆಗಳಿಂದ ನಿರುತ್ಸಾಹಗೊಳ್ಳದಿರಿ.

ಕುಂಭ ರಾಶಿ

ಬಂಧು-ಮಿತ್ರರೊಂದಿಗೆ ಅನಗತ್ಯ ಭಿನ್ನಾಭಿಪ್ರಾಯಗಳು ಉಂಟಾಗದಂತೆ ಮಾತಿನಲ್ಲಿ ಎಚ್ಚರಿಕೆ ವಹಿಸಿ. ಮನಸ್ಸಿನಲ್ಲಿ ಆತಂಕ ಮತ್ತು ಒತ್ತಡ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ವಿಶ್ರಾಂತಿಗೂ ಸಮಯ ನೀಡಿ. ಆರೋಗ್ಯಕ್ಕೆ ಸಂಬಂಧಿಸಿದ ತೊಂದರೆಗಳನ್ನು ನಿಧಾನವಾಗಿ ನಿವಾರಿಸಿಕೊಳ್ಳುವ ಅವಕಾಶ ಸಿಗಲಿದೆ. ಯಾವುದೇ ಕಾರಣವಿಲ್ಲದೆ ಬರುವ ಆರೋಪಗಳು ನಿಮ್ಮ ಮನಸ್ಸಿಗೆ ನೋವುಂಟುಮಾಡಬಹುದು, ಆದರೆ ತಾಳ್ಮೆಯಿಂದ ಪ್ರತಿಕ್ರಿಯಿಸುವುದು ಉತ್ತಮ. ಹೊಸ ಕಾರ್ಯಗಳಿಗೆ ಯೋಜನೆ ರೂಪಿಸಲು ಇದು ಸೂಕ್ತ ಸಮಯವಾಗಿದ್ದು, ಮುಂದಿನ ಹೆಜ್ಜೆಯನ್ನು ಯೋಚಿಸಿ ಇಡಿ.

ಮೀನ ರಾಶಿ

ಹಣಕಾಸಿನ ವಿಚಾರದಲ್ಲಿ ಇಂದು ಹೆಚ್ಚಿನ ತೊಂದರೆ ಎದುರಾಗುವ ಸಾಧ್ಯತೆ ಕಡಿಮೆ. ಹೊಸ ವಸ್ತುಗಳು ಅಥವಾ ಆಭರಣಗಳನ್ನು ಖರೀದಿಸುವ ಆಸೆ ಈಡೇರಬಹುದು. ಸ್ನೇಹಿತರು ಮತ್ತು ಆತ್ಮೀಯರನ್ನು ಭೇಟಿಯಾಗುವುದರಿಂದ ಸಂತೋಷದ ವಾತಾವರಣ ನಿರ್ಮಾಣವಾಗಲಿದೆ. ನಿಮ್ಮ ಅನುಭವದಿಂದ ಇತರರಿಗೆ ನೀಡುವ ಸಲಹೆ-ಸೂಚನೆಗಳು ಅವರಿಗೆ ಉಪಯುಕ್ತವಾಗಬಹುದು. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದ್ದು, ಧೈರ್ಯದಿಂದ ಕೈಗೊಳ್ಳುವ ಕೆಲವು ಕೆಲಸಗಳು ಯಶಸ್ವಿಯಾಗುತ್ತವೆ; ಜೊತೆಗೆ ಶುಭಸುದ್ದಿಯೂ ಕೇಳಿಬರುವ ಸಾಧ್ಯತೆ ಇದೆ.

Savitha

ಪತ್ರಿಕೋದ್ಯಮದಲ್ಲಿ 8 ವರ್ಷಗಳ ಬರವಣಿಗೆ ಅನುಭವ ಹೊಂದಿರುವ ಸವಿತಾ ರವರು, ಟ್ರೆಂಡಿಂಗ್ ವಿಷಯಗಳು, ಸೋಶಿಯಲ್ ಮೀಡಿಯಾ, ವೈರಲ್ ಕಂಟೆಂಟ್, ಧಾರ್ಮಿಕ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ… More »

Related Stories