ದಿನ ಭವಿಷ್ಯ 14-3-2025: ಅಷ್ಟಲಕ್ಷ್ಮಿ ಯೋಗ, ಈ ರಾಶಿಗಳಿಗೆ ಎಲ್ಲಾ ಕಷ್ಟ ಕಾರ್ಪಣ್ಯಗಳು ದೂರ
ನಾಳೆಯ ದಿನ ಭವಿಷ್ಯ 14-3-2025 ಶುಕ್ರವಾರ ಈ ರಾಶಿಗಳು ಕೆಟ್ಟ ಸ್ನೇಹಿತರ ಸಹವಾಸ ಬಿಡಬೇಕು - Daily Horoscope - Naleya Dina Bhavishya 14 March 2025
ದಿನ ಭವಿಷ್ಯ 14 ಮಾರ್ಚ್ 2025
ಮೇಷ ರಾಶಿ (Aries): ಇಂದಿನ ದಿನ ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಬೇಕು. ಹಣಕಾಸಿನ ಸಮಸ್ಯೆಗಳು ಕಾಡಬಹುದು, ಆದ್ದರಿಂದ ಖರ್ಚು ಕಡಿಮೆ ಮಾಡುವುದು ಉತ್ತಮ. ಹೊಸ ಕಾರ್ಯಗಳನ್ನು ಪ್ರಾರಂಭಿಸುವ ಮುನ್ನ ಯೋಚನೆ ಮಾಡಬೇಕು. ಆತ್ಮೀಯರ ಸಹಾಯಕ್ಕಾಗಿ ಸಮಯ ಉತ್ತಮ. ವಿಶ್ರಾಂತಿ ಬಗ್ಗೆ ಗಮನ ಹರಿಸಬೇಕು.
ವೃಷಭ ರಾಶಿ (Taurus): ಈ ದಿನ ಕಠಿಣ ಪರಿಶ್ರಮಕ್ಕೆ ಸಮರ್ಪಕ ಪ್ರತಿಫಲ ಸಿಗುತ್ತದೆ. ಹಣಕಾಸಿನ ಚಿಂತೆಯಿಲ್ಲದೆ ನಿರಾಳವಾಗಿ ಇರುತ್ತೀರಿ. ಶುಭಕಾರ್ಯಗಳು ಸುಲಭವಾಗಿ ನೆರವೇರಲು ಸಾಧ್ಯ. ಸ್ನೇಹಿತರೊಂದಿಗೆ ಸಮಯ ಕಳೆಯುವ ಅವಕಾಶ ಸಿಗಬಹುದು. ಪ್ರಯಾಣಗಳಿಂದ ಲಾಭವಿರುವ ಸಾಧ್ಯತೆ ಇದೆ. ಸಮಾಜದಲ್ಲಿ ಗೌರವ, ಮನ್ನಣೆ ಹೆಚ್ಚಾಗಲಿದೆ. ಎಲ್ಲದಕ್ಕೂ ಸುಖ ಶಾಂತಿಯ ವಾತಾವರಣ ಇರುವುದು ಖಚಿತ.
ಮಿಥುನ ರಾಶಿ (Gemini): ಹಣಕಾಸಿನ ಸ್ಥಿತಿಯಲ್ಲಿ ಈ ದಿನ ಯಾವುದೇ ದೊಡ್ಡ ಬದಲಾವಣೆ ಕಾಣಸಿಗದು. ಕೆಲವು ಮುಖ್ಯ ಕಾರ್ಯಗಳು ವಿಳಂಬವಾಗಬಹುದು. ಮನಸ್ಸು ಚಂಚಲವಾಗಿರಬಹುದು, ಪರಿಣಾಮವಾಗಿ ನಿರ್ಧಾರಗಳ ತೆಗೆದುಕೊಳ್ಳುವುದು ಕಷ್ಟವಾಗಬಹುದು. ಅಲಸ್ಯ ಹೆಚ್ಚಾಗಬಹುದು, ಇದು ಹೊಸ ಅವಕಾಶಗಳನ್ನು ತಪ್ಪಿಸಬಹುದು. ಮಕ್ಕಳ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸುವ ಅಗತ್ಯವಿದೆ.
ಕಟಕ ರಾಶಿ (Cancer): ಅಕಸ್ಮಿಕ ಧನಲಾಭದಿಂದ ಆನಂದ ಅನುಭವಿಸುವ ದಿನ. ಮನೆ ಮತ್ತು ಆಸ್ತಿಯ ಸಂಬಂಧಿಸಿದ ಸಮಸ್ಯೆಗಳು ಪರಿಹಾರವಾಗಲಿವೆ. ಹೊಸ ಮನೆ ಅಥವಾ ವಾಹನ ಖರೀದಿಗೆ ಚಿಂತನೆ ಶುರುವಾಗಬಹುದು. ಬಂಧುಗಳು, ಸ್ನೇಹಿತರೊಂದಿಗೆ ಆನಂದದ ಕ್ಷಣಗಳನ್ನು ಕಳೆದೀತು. ದೇವರ ದರ್ಶನ ಪಡೆಯುವ ಅವಕಾಶ ಸಿಗಬಹುದು. ಭಕ್ತಿಭಾವ ಮತ್ತು ಧಾರ್ಮಿಕ ಚಟುವಟಿಕೆಗಳು ಹೆಚ್ಚಾಗಲಿವೆ.
ಸಿಂಹ ರಾಶಿ (Leo): ಹೊಸ ವ್ಯಕ್ತಿಗಳನ್ನು ಸಂಪೂರ್ಣವಾಗಿ ನಂಬುವುದು ಮೋಸಕ್ಕೆ ಕಾರಣವಾಗಬಹುದು. ಸಾಮಾಜಿಕ ಮನ್ನಣೆ ಕಳೆದುಕೊಳ್ಳದಂತೆ ಎಚ್ಚರಿಕೆಯಿಂದ ಇರುವ ಅಗತ್ಯವಿದೆ. ಪ್ರಯತ್ನಗಳಲ್ಲಿ ಕೆಲವು ವಿಳಂಬಗಳು ಸಂಭವಿಸಬಹುದು. ದೇವರ ದರ್ಶನಕ್ಕೆ ಪ್ರಯತ್ನಿಸಬಹುದು. ಸಾಲ ಪಡೆಯಲು ಮಾಡಿದ ಪ್ರಯತ್ನದಲ್ಲಿ ನಿರೀಕ್ಷಿತ ಫಲಿತಾಂಶ ತಡವಾಗಬಹುದು. ಸಹೋದರರೊಂದಿಗೆ ಜಗಳ ನಡೆಯುವ ಸಂಭವವಿದೆ.
ಕನ್ಯಾ ರಾಶಿ (Virgo): ಮನಸ್ಸು ಚಂಚಲವಾಗಿ ಭಿನ್ನಾಭಿಪ್ರಾಯಗಳು ಹೆಚ್ಚಾಗಬಹುದು. ವಾಗ್ವಾದಗಳು ಎದುರಾಗುವ ಸಾಧ್ಯತೆ ಇದೆ, ಆದ್ದರಿಂದ ಎಚ್ಚರಿಕೆ ವಹಿಸಬೇಕು. ಕೆಟ್ಟ ಸ್ನೇಹಿತರಿಂದ ದೂರವಿರುವುದು ಒಳಿತು. ಸಂಬಂಧಗಳು ಹಾಳಾಗದಂತೆ ಗಮನ ಕೊಡುವುದು ಅತ್ಯಗತ್ಯ. ಗುರಿಗಳಿಗೆ ತಲುಪಲು ಕೊಂಚ ಸಮಯ ಬೇಕಾಗಬಹುದು. ಆದರೆ ನಿಮ್ಮ ಪ್ರಯತ್ನ ನಿಲ್ಲಿಸಬೇಡಿ.
ತುಲಾ ರಾಶಿ (Libra): ವ್ಯಾಪಾರದಲ್ಲಿ ಲಾಭವಿರುವ ಸಾಧ್ಯತೆ ಇದೆ. ಹಣಕಾಸಿನ ಪ್ರಗತಿಗಾಗಿ ಸಾಲ ಮಾಡಬೇಕಾದ ಅನಿವಾರ್ಯತೆ ಎದುರಾಗಬಹುದು. ಹೊಸ ಕೆಲಸಗಳಿಗೆ ಚಾಲನೆ ನೀಡಬಹುದು. ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಸಹಾಯ ತಡವಾಗಬಹುದು. ಪ್ರಯತ್ನಕ್ಕೆ ಅನುಗುಣವಾಗಿ ಸಣ್ಣ ಲಾಭ ಗಳಿಸಬಹುದು. ಅನಗತ್ಯ ಪ್ರಯಾಣಗಳು ಜಾಸ್ತಿ ಆಗುವ ಸಂಭವವಿದೆ.
ವೃಶ್ಚಿಕ ರಾಶಿ (Scorpio): ಸ್ಥಳಾಂತರ ಅಥವಾ ಕೆಲಸದ ಬದಲಾವಣೆ ಸಾಧ್ಯ. ಸಾಲ ತಕ್ಕಮಟ್ಟಿಗೆ ನಿಭಾಯಿಸಬಹುದು. ವಿದೇಶ ಪ್ರಯಾಣ ಯೋಚನೆ ಫಲಿಸಬಹುದು. ಪ್ರಯಾಣಗಳು ಹೆಚ್ಚಾಗಬಹುದು, ಆದ್ದರಿಂದ ಶರೀರದ ಆರೈಕೆ ಮಾಡಿಕೊಳ್ಳುವುದು ಅಗತ್ಯ. ಚರ್ಮ ಅಥವಾ ಅಲರ್ಜಿಯ ಸಮಸ್ಯೆಯಿಂದ ಬಳಲುವವರು ಹೆಚ್ಚಿನ ಕಾಳಜಿ ವಹಿಸಬೇಕು. ಪ್ರಗತಿಗೆ ಕೆಲವು ಅಡಚಣೆಗಳು ಉಂಟಾಗಬಹುದು, ಆದರೆ ಸ್ಥೈರ್ಯದಿಂದ ಮುನ್ನಡೆದು ಸಮಸ್ಯೆಗಳನ್ನು ಎದುರಿಸಬಹುದು.
ಧನು ರಾಶಿ (Sagittarius): ಕೆಟ್ಟ ಚಟುವಟಿಕೆಗಳಿಂದ ದೂರವಿರುವುದು ಒಳಿತು. ಹಣಕಾಸಿನ ಚಿಂತೆಯು ಸ್ವಲ್ಪ ಮಟ್ಟಿಗೆ ಕಾಡಬಹುದು. ಕಾರ್ಯೋನ್ಮುಖ ಯೋಜನೆಗಳಿಗೆ ವಿಳಂಬವಾಗಬಹುದು. ಅತಿಯಾಗಿ ಪ್ರಯಾಣ ಮಾಡುವುದರಿಂದ ದೇಹದಲ್ಲಿ ಒತ್ತಡ ಹೆಚ್ಚಾಗಬಹುದು. ಎಲ್ಲರೊಂದಿಗೆ ಸ್ನೇಹಭಾವನೆಯಿಂದ ಇರಲು ಯತ್ನಿಸಬೇಕು. ಕುಟುಂಬ ಕಲಹಗಳು ನಿಧಾನವಾಗಿ ತಗ್ಗಲಿವೆ.
ಮಕರ ರಾಶಿ (Capricorn): ಯೋಜಿಸಿದ ಕಾರ್ಯಗಳು ಯಶಸ್ವಿಯಾಗಲಿವೆ. ಕುಟುಂಬ ಹಾಗೂ ಸ್ನೇಹಿತರ ಪ್ರೀತಿಪಾತ್ರನಾಗುವಿರಿ. ಆರೋಗ್ಯದ ಬಗ್ಗೆ ಸ್ವಲ್ಪ ತೊಂದರೆ ಎದುರಾಗದ ಸಾಧ್ಯತೆ ಇದೆ. ಯೋಜನೆಗಳು ಯಶಸ್ವಿಯಾಗಿ ಜಾರಿಗೆ ಬರಲಿವೆ. ಹೊಸ ಅವಕಾಶಗಳು ದೊರಕುವ ಸಾಧ್ಯತೆ ಇದೆ. ಸಹೋದ್ಯೋಗಿಗಳ ಸಹಕಾರದಿಂದ ಕೆಲಸಗಳು ಸುಗಮಗೊಳ್ಳಲಿವೆ.
ಕುಂಭ ರಾಶಿ (Aquarius): ಹೊಸ ವಸ್ತ್ರಗಳು, ಆಭರಣಗಳು ಖರೀದಿಸುವ ಅವಕಾಶ ಸಿಗಬಹುದು. ನಿಮ್ಮ ಒಳ್ಳೆಯ ಗುಣಗಳನ್ನು ಇತರರು ಮೆಚ್ಚಿಕೊಳ್ಳುವ ಸಾಧ್ಯತೆ ಇದೆ. ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು ಸಿಗಬಹುದು. ದೇವರ ದರ್ಶನಕ್ಕೆ ಅವಕಾಶ ಸಿಗಬಹುದು. ಆಸ್ತಿ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಾಧ್ಯತೆ ಇದೆ. ಕಲಾಪ್ರವೃತ್ತಿಗಳೆಡೆಗೆ ಆಸಕ್ತಿ ಹೆಚ್ಚಾಗಬಹುದು.
ಮೀನ ರಾಶಿ (Pisces): ಇತರರಿಗೆ ತೊಂದರೆ ಆಗುವಂತ ಕೆಲಸಗಳನ್ನು ಮಾಡದಿರುವುದು ಉತ್ತಮ. ಉದ್ಯೋಗದಲ್ಲಿ ಎದುರಾಗುವ ತೊಂದರೆಗಳನ್ನು ಸರಿಹೊಂದಿಸಬಹುದು. ಕೈಗೊಂಡ ಕಾರ್ಯಗಳು ವಿಫಲವಾಗದಂತೆ ಜಾಗ್ರತೆ ವಹಿಸಬೇಕು. ಹೊಸ ಯೋಜನೆಗಳ ಆರಂಭ ತಡೆಹಿಡಿಯುವುದು ಒಳಿತು. ಧೈರ್ಯದಿಂದ ಕೆಲಸ ಮಾಡಿದರೆ ಯಶಸ್ಸು ಖಚಿತ. ಸರಿಯಾದ ಯೋಜನೆಯೊಂದಿಗೆ ಮುಂದುವರಿದರೆ ಶ್ರೇಷ್ಟ ಫಲ ದೊರಕಬಹುದು.
- ನೀವು ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೂ, ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ.
- ಯಾವುದೇ ಜ್ಯೋತಿಷಿಗಳಿಂದ ಸರಿಯಾದ ಸಮಾಧಾನ ಸಿಗದಿದ್ದರೆ, ಇಲ್ಲಿ ಖಚಿತ ಪರಿಹಾರ.
ದೈವಜ್ಞ ಪಂಡಿತ್ ಕೃಷ್ಣ ಭಟ್
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠಂ
ದೂರವಾಣಿ : 9535156490