Tomorrow HoroscopeDaily Horoscopeದಿನ ಭವಿಷ್ಯ 2025

ದಿನ ಭವಿಷ್ಯ 18-3-2025: ಈ ರಾಶಿಗಳಿಗೆ ಶತ್ರುಗಳ ಮೇಲೆ ಜಯ, ಆರ್ಥಿಕ ಲಾಭ

ನಾಳೆಯ ದಿನ ಭವಿಷ್ಯ 18-3-2025 ಮಂಗಳವಾರ ಈ ರಾಶಿಗಳಿಗೆ ಹಲವು ದಿಕ್ಕುಗಳಲ್ಲಿ ಯಶಸ್ಸು ಖಚಿತ - Daily Horoscope - Naleya Dina Bhavishya 18 March 2025

ದಿನ ಭವಿಷ್ಯ 18 ಮಾರ್ಚ್ 2025

ಮೇಷ ರಾಶಿ (Aries): ಈ ದಿನ ಹೊಸ ಅವಕಾಶಗಳು ಲಭಿಸಬಹುದು. ಸ್ನೇಹಿತರ ಸಹಕಾರದಿಂದ ಯಶಸ್ಸು ಕಾಣುವಿರಿ. ಆಕಸ್ಮಿಕವಾಗಿ ಹಣ ದೊರಕುವ ಸಾಧ್ಯತೆ ಇದೆ. ಕುಟುಂಬ ಸದಸ್ಯರಿಂದ ಪ್ರೋತ್ಸಾಹ ದೊರಕಲಿದೆ. ಹೊಸ ಮಾಹಿತಿ ಸಿಗುವ ಸಾಧ್ಯತೆ ಇದೆ. ಕೆಲಸದ ಒತ್ತಡ ಹೆಚ್ಚಾಗಬಹುದು, ಆದರೆ ತಾಳ್ಮೆಯಿಂದ ಎದುರಿಸಿದರೆ ಉತ್ತಮ ಫಲಿತಾಂಶ ಪಡೆಯಬಹುದು. ಇಂದು ಹೊಸ ಅನುಭವಗಳನ್ನೂ ಪಡೆಯುವಿರಿ.

ವೃಷಭ ರಾಶಿ (Taurus): ಇಂದಿನ ದಿನ ಹಣ ನಷ್ಟವಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅಗತ್ಯ. ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಬೇಕು. ಅಕಸ್ಮಿಕ ಪ್ರಯಾಣಗಳು ಉಂಟಾಗಬಹುದು. ಆಪ್ತರೊಂದಿಗೆ ಹೊಂದಾಣಿಕೆ ಅವಶ್ಯಕ. ನಿರ್ಧಾರ ತೆಗೆದುಕೊಳ್ಳುವಾಗ ಎಚ್ಚರಿಕೆಯಿಂದ ಇರಿ. ಹೊಸ ಯೋಜನೆಗಳನ್ನು ಈಡೇರಿಸುವ ಮೊದಲು ಸಂಪೂರ್ಣ ಮಾಹಿತಿ ಸಂಗ್ರಹಿಸಿಕೊಳ್ಳುವುದು ಉತ್ತಮ. ಆಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚಾಗಬಹುದು.

ದಿನ ಭವಿಷ್ಯ 18-3-2025

ಮಿಥುನ ರಾಶಿ (Gemini): ಕೃಷಿ ಕ್ಷೇತ್ರದವರಿಗೆ ಶುಭಕರ ದಿನ. ತುರ್ತು ನಿರ್ಧಾರ ಕೈಗೊಳ್ಳುವಾಗ ಯೋಚನೆ ಮಾಡಿ. ದುಷ್ಟ ವ್ಯಕ್ತಿಗಳಿಂದ ದೂರವಿರುವುದು ಒಳ್ಳೆಯದು. ಆಕಸ್ಮಿಕ ಭಯ, ಆತಂಕ ಉಂಟಾಗಬಹುದು. ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು. ವೃತ್ತಿ ಜೀವನದಲ್ಲಿ ಸಹಕಾರ ಸಿಗಬಹುದು. ಶುಭ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಅವಕಾಶ ದೊರಕಬಹುದು. ಸಂಜೆ ಒಳ್ಳೆಯ ಸುದ್ದಿ ಕೇಳುವಿರಿ.

ಕಟಕ ರಾಶಿ (Cancer): ಉದ್ಯೋಗ, ವ್ಯಾಪಾರದಲ್ಲಿ ಅಡ್ಡಿಗಳು ಎದುರಾಗಬಹುದು. ಆಪ್ತರೊಂದಿಗೆ ಮಾತಿನ ವಾದ ನಡೆಯುವ ಸಾಧ್ಯತೆ ಇದೆ. ಅನಾವಶ್ಯಕ ವ್ಯಯ ತಡೆಯಿರಿ. ಹಣಕಾಸಿನ ಪರಿಸ್ಥಿತಿಯಲ್ಲಿ ಏರುಪೇರಾಗಬಹುದು. ಆಕಸ್ಮಿಕ ಕಲಹಗಳು ಉಂಟಾಗುವ ಸಾಧ್ಯತೆ ಇರುವುದರಿಂದ ಶಾಂತಿ ಮತ್ತು ಸಹನೆಯಿಂದ ವರ್ತಿಸಿ. ದೂರದ ಸಂಪರ್ಕಗಳಿಂದ ಶುಭ ಸುದ್ದಿ ಸಿಗಬಹುದು.

ಸಿಂಹ ರಾಶಿ (Leo): ಯೋಜಿಸಿದ ಕಾರ್ಯಗಳು ಯಶಸ್ವಿಯಾಗುವ ಸಾಧ್ಯತೆ ಇದೆ. ಕುಟುಂಬ, ಸ್ನೇಹಿತರ ಪ್ರೋತ್ಸಾಹ ದೊರಕಲಿದೆ. ಆರೋಗ್ಯದ ಸಮಸ್ಯೆಗಳು ಕಡಿಮೆಯಾಗಬಹುದು. ಸಹೋದ್ಯೋಗಿಗಳಿಂದ ಸಹಾಯ ದೊರೆಯಬಹುದು. ನಿಮ್ಮ ಯೋಚನೆಗಳು ಸ್ಪಷ್ಟವಾಗಿದ್ದು, ಕಾರ್ಯಗತಗೊಳಿಸಲು ಅನುಕೂಲವಾಗುತ್ತದೆ. ಭವಿಷ್ಯದ ಯೋಜನೆಗಳ ಬಗ್ಗೆ ಗಂಭೀರವಾಗಿ ಚಿಂತನೆ ಮಾಡುವ ಸಮಯ.

Dina Bhavishya 18-3-2025

ಕನ್ಯಾ ರಾಶಿ (Virgo): ಶುಭ ಕಾರ್ಯಗಳ ಯತ್ನಗಳು ಸಫಲವಾಗುತ್ತವೆ. ಶುಭ ಸುದ್ದಿ ಕೇಳುವ ಸಾಧ್ಯತೆ ಇದೆ. ಆಕಸ್ಮಿಕ ಹಣಕಾಸಿನ ಲಾಭವು ಉಂಟಾಗಬಹುದು. ಎಲ್ಲಾ ಕಾರ್ಯಗಳು ತಕ್ಕಮಟ್ಟಿಗೆ ಯಶಸ್ವಿಯಾಗಬಹುದು. ಸನ್ಮಾನ, ಗೌರವ, ಪ್ರಸಿದ್ಧಿ ಹೆಚ್ಚಾಗಬಹುದು. ಕುಟುಂಬದಲ್ಲಿ ಹೊಸ ಸದಸ್ಯರ ಆಗಮನದಿಂದ ಸಂಭ್ರಮ ಉಂಟಾಗಬಹುದು. ಅನಿವಾರ್ಯ ಕಾರಣಗಳಿಂದ ಪ್ರಯಾಣ ಮಾಡಬೇಕಾಗಬಹುದು.

horoscope

ತುಲಾ ರಾಶಿ (Libra): ಆಕಸ್ಮಿಕ ಹಣ ನಷ್ಟವಾಗುವ ಸಂಭವವಿದೆ. ಆಸ್ತಿ ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ. ತಪ್ಪು ಸಲಹೆಗಳನ್ನು ಅನುಸರಿಸಬೇಡಿ. ಕ್ರೀಡಾ, ರಾಜಕೀಯ ಕ್ಷೇತ್ರದವರಿಗೆ ಒತ್ತಡ ಹೆಚ್ಚಾಗಬಹುದು. ಹೊಸ ಕಾರ್ಯಗಳನ್ನು ಆರಂಭಿಸುವ ಮೊದಲು ಯೋಚಿಸಿ ನಿರ್ಧಾರ ಕೈಗೊಳ್ಳುವುದು ಒಳಿತು. ಪರಿಚಿತರ ನೆರವಿನ ಅಗತ್ಯ ಎದುರಾಗಬಹುದು.

ವೃಶ್ಚಿಕ ರಾಶಿ (Scorpio): ಪ್ರಮುಖ ವ್ಯಕ್ತಿಗಳನ್ನು ಭೇಟಿಯಾಗುವ ಅವಕಾಶ. ಆತಂಕ, ಭಯವು ನಿವಾರಣೆಯಾಗಬಹುದು. ಸಾಲದ ಸಂಬಂಧಿತ ವಿಚಾರಗಳು ವಿಳಂಬಗೊಳ್ಳಬಹುದು. ಮನೆಯಲ್ಲಿ ನೆಮ್ಮದಿ ಕೊರತೆಯಾಗಬಹುದು. ಆಪ್ತರೊಂದಿಗೆ ವೈಮನಸ್ಯ ಉಂಟಾಗದಂತೆ ಎಚ್ಚರಿಕೆಯಿಂದ ವರ್ತಿಸಬೇಕು. ಹಳೆಯ ಸಮಸ್ಯೆಗೆ ಉತ್ತಮ ಪರಿಹಾರ ಸಿಗಬಹುದು. ತಾಳ್ಮೆಯಿಂದ ಇರಿ ಎಲ್ಲವೂ ಕ್ರಮೇಣ ಸರಿಹೋಗುತ್ತದೆ.

ಧನು ರಾಶಿ (Sagittarius): ಶುಭ ಸಮಾಚಾರ ಕೇಳುವಿರಿ. ಸ್ನೇಹಿತರು, ಕುಟುಂಬದವರೊಂದಿಗೆ ಸಂತಸದ ಕ್ಷಣಗಳನ್ನು ಅನುಭವಿಸಬಹುದು. ಆಕಸ್ಮಿಕ ಹಣದ ಲಾಭ ಸಿಗಬಹುದು. ಹೊಸ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಇದೆ. ಹಿಂದಿನ ಸಮಸ್ಯೆಗಳನ್ನು ಮೀರಿಸಿ ಹೊಸತನಕ್ಕೆ ಸಜ್ಜಾಗುವಿರಿ. ಪ್ರಯತ್ನಿಸಿದ ಕಾರ್ಯಗಳು ಲಾಭ ನೀಡಬಹುದು. ಸಂಜೆ ವೇಳೆಗೆ ಸಮಯ ನಿಮ್ಮ ಕಡೆ ಇರುತ್ತದೆ.

ಮಕರ ರಾಶಿ (Capricorn): ಆರೋಗ್ಯ ಸಮಸ್ಯೆಗಳು ತಲೆದೋರಬಹುದು. ಮಾತಿನಿಂದ ಸಮಸ್ಯೆಗಳ ಸಾಧ್ಯತೆ ಇದೆ. ಅಶಾಂತಿ, ಭಯದಿಂದ ದೂರವಿರಿ. ವಿದ್ಯಾರ್ಥಿಗಳಿಗೆ ಏರುಪೇರಾದ ಪರಿಸ್ಥಿತಿ ಉಂಟಾಗಬಹುದು. ವ್ಯಾಪಾರದಲ್ಲಿ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳುವುದು ಒಳಿತು. ಮನೆಯಲ್ಲಿ ಸಂತೋಷದ ವಾತಾವರಣ ಸೃಷ್ಟಿಸಲು ನಿಮ್ಮ ಸಹಕಾರ ಅಗತ್ಯ. ಯಾವುದೇ ನಿರ್ಧಾರವನ್ನು ಯೋಚಿಸಿ ಕೈಗೊಳ್ಳಿ.

ಕುಂಭ ರಾಶಿ (Aquarius): ಯೋಜನೆಗಳಲ್ಲಿ ವಿಳಂಬ ಉಂಟಾಗಬಹುದು. ಹಣಕಾಸಿನ ಸಮಸ್ಯೆಗಳು ತಾತ್ಕಾಲಿಕ, ಕ್ರಮೇಣ ನೀವು ಲಾಭದ ಅವಕಾಶ ಪಡೆಯುತ್ತೀರಿ. ಹೊಸ ವ್ಯಕ್ತಿಗಳನ್ನು ನಂಬುವ ಮುನ್ನ ಎಚ್ಚರಿಕೆ ವಹಿಸಿ. ಕೆಟ್ಟ ಚಟಗಳಿಂದ ದೂರವಿರಿ. ಹೊಸ ಕಾರ್ಯ ಆರಂಭಿಸುವ ಮುನ್ನ ಚೆನ್ನಾಗಿ ಪರಿಗಣನೆ ಮಾಡಿ. ಸಹೋದರ ಹಾಗೂ ಸಹೋದರಿ ನಿಮಗೆ ಸಾಕಷ್ಟು ಬೆಂಬಲ ನೀಡುತ್ತಾರೆ.

ಮೀನ ರಾಶಿ (Pisces): ಈ ಸಮಯದಲ್ಲಿ ಸಂದರ್ಭಗಳು ನಿಮ್ಮ ಪರವಾಗಿವೆ. ಈ ಸಮಯದಲ್ಲಿ, ನೀವು ಒಬ್ಬ ವಿಶೇಷ ವ್ಯಕ್ತಿಯನ್ನು ಭೇಟಿಯಾಗಬಹುದು, ಅವರ ಮೂಲಕ ಕೆಲವು ಲಾಭದಾಯಕ ಸಾಧ್ಯತೆಗಳು ಸೃಷ್ಟಿಯಾಗುತ್ತವೆ. ಆಸ್ತಿ ಇತ್ಯಾದಿಗಳಿಗೆ ಸಂಬಂಧಿಸಿದ ಕೆಲಸವನ್ನು ಪೂರ್ಣಗೊಳಿಸಲು ಆತುರಪಡಬೇಡಿ. ಹೆಚ್ಚುವರಿ ಕೆಲಸದ ಹೊರೆ ತೆಗೆದುಕೊಳ್ಳಬೇಡಿ.

  • ನೀವು ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೂ, ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ.
  • ಯಾವುದೇ ಜ್ಯೋತಿಷಿಗಳಿಂದ ಸರಿಯಾದ ಸಮಾಧಾನ ಸಿಗದಿದ್ದರೆ, ಇಲ್ಲಿ ಖಚಿತ ಪರಿಹಾರ.

ದೈವಜ್ಞ ಪಂಡಿತ್ ಕೃಷ್ಣ ಭಟ್
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠಂ
ದೂರವಾಣಿ : 9535156490

Our Whatsapp Channel is Live Now 👇

Whatsapp Channel

Related Stories