ದಿನ ಭವಿಷ್ಯ 05 ಅಕ್ಟೋಬರ್ 2026, ಸೋಮವಾರ

Today Horoscope: ಇಂದಿನ ರಾಶಿ ಭವಿಷ್ಯದಲ್ಲಿ ಉದ್ಯೋಗ, ಹಣಕಾಸು, ಕುಟುಂಬ, ಆರೋಗ್ಯ, ಪ್ರಯಾಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಎದುರಾಗುವ ಅವಕಾಶಗಳು ಮತ್ತು ಸವಾಲುಗಳ ಬಗ್ಗೆ ಪ್ರಮುಖ ಮುನ್ಸೂಚನೆಗಳು ಇಲ್ಲಿವೆ.

Today Horoscope: ಇಂದಿನ ನಿಮ್ಮ ಸಂಪೂರ್ಣ ರಾಶಿ ಫಲ ತಿಳಿಯಲು ಕ್ಲಿಕ್ಕಿಸಿ: ದಿನ ಭವಿಷ್ಯ 05-10-2026: ಮಿಥುನ ರಾಶಿಗೆ ಖರ್ಚು, ಮಕರ ರಾಶಿಗೆ ಅಪಕೀರ್ತಿ, ಕುಂಭ ರಾಶಿಗೆ ಶುಭ ಸುದ್ದಿ! ನಿಮ್ಮ ರಾಶಿಗೆ ಹೇಗಿದೆ ದಿನ

ಮೇಷ ರಾಶಿ: ಇತರರಿಗೆ ತೊಂದರೆ ಉಂಟುಮಾಡುವ ಕೆಲಸಗಳಿಂದ ದೂರವಿರಿ. ವೃತ್ತಿ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಿ, ಹೊಸ ಕೆಲಸಕ್ಕೆ ಆತುರಪಡದೆ ಸೂಕ್ತ ಸಮಯ ಕಾಯಿರಿ.

ವೃಷಭ ರಾಶಿ: ಬಂದು-ಬಳಗ ಹಾಗೂ ಸ್ನೇಹಿತರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ಕೆಲಸಗಳಲ್ಲಿ ಅಡೆತಡೆ ಸಾಧ್ಯವಾಗಿದ್ದು, ಹೊಸ ಕಾರ್ಯ ಮತ್ತು ಪ್ರಯಾಣದಲ್ಲಿ ಜಾಗರೂಕರಾಗಿರಿ.

ಮಿಥುನ ರಾಶಿ: ಕುಟುಂಬದಲ್ಲಿ ನೆಮ್ಮದಿ ಇರಲಿದ್ದು, ತಾಳ್ಮೆಯಿಂದ ನಡೆದುಕೊಂಡರೆ ಉತ್ತಮ ಫಲ ಸಿಗಲಿದೆ. ಅನಿರೀಕ್ಷಿತ ಖರ್ಚು ಹೆಚ್ಚಾಗಬಹುದು, ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.

ಕರ್ಕಾಟಕ ರಾಶಿ: ಪ್ರಮುಖ ಮಾಹಿತಿ ಹಾಗೂ ಅನಿರೀಕ್ಷಿತ ಹಣಕಾಸಿನ ಲಾಭ ದೊರೆಯುವ ಸಾಧ್ಯತೆ ಇದೆ. ಬಂಧು-ಮಿತ್ರರ ಭೇಟಿಯಿಂದ ಸಂತಸ ಹೆಚ್ಚಾಗಿ, ಪ್ರಯತ್ನಗಳಲ್ಲಿ ಯಶಸ್ಸು ಸಿಗಲಿದೆ.

ಸಿಂಹ ರಾಶಿ: ಪ್ರಮುಖ ವ್ಯಕ್ತಿಗಳ ಭೇಟಿಯಿಂದ ಹೊಸ ಅವಕಾಶಗಳು ಸಿಗಬಹುದು. ಹಣಕಾಸಿನ ಪ್ರಯತ್ನಗಳಲ್ಲಿ ವಿಳಂಬವಾದರೂ ಫಲ ಸಿಗಲಿದ್ದು, ಕುಟುಂಬದಲ್ಲಿ ವೈಮನಸ್ಸು ತಪ್ಪಿಸಿ.

ಕನ್ಯಾ ರಾಶಿ: ಹೊಸ ಪರಿಚಯದವರನ್ನು ತಕ್ಷಣ ನಂಬದೆ, ಮಾತು ಮತ್ತು ನಡೆಗಳಲ್ಲಿ ಎಚ್ಚರಿಕೆ ವಹಿಸಿ. ಕೆಲಸಗಳಲ್ಲಿ ಅಡೆತಡೆ ಎದುರಾಗಬಹುದು, ಹಣಕಾಸಿನ ಪ್ರಯತ್ನಗಳಿಗೆ ವಿಳಂಬವಾಗಬಹುದು.

ತುಲಾ ರಾಶಿ: ಹೊಸ ಕೆಲಸ ಮತ್ತು ಯೋಜನೆಗಳಿಗೆ ಚಾಲನೆ ನೀಡುವ ಅವಕಾಶ ಸಿಗಲಿದೆ. ಹಣಕಾಸಿನ ನಷ್ಟ ಸಾಧ್ಯತೆ ಇರುವುದರಿಂದ ವ್ಯವಹಾರದಲ್ಲಿ ಎಚ್ಚರಿಕೆ ವಹಿಸಿ, ಕಲಹ ತಪ್ಪಿಸಿ.

ವೃಶ್ಚಿಕ ರಾಶಿ: ಪ್ರಯತ್ನಕ್ಕೆ ತಕ್ಕ ಸೀಮಿತ ಲಾಭ ಸಿಗಲಿದ್ದು, ವ್ಯಾಪಾರದಲ್ಲಿ ನಿರೀಕ್ಷಿತ ಫಲ ದೊರೆಯಬಹುದು. ಸಾಲದ ಅಗತ್ಯ ಎದುರಾಗಬಹುದು, ಹೊಸ ಕಾರ್ಯಕ್ಕೆ ಸಹಕಾರ ಸ್ವಲ್ಪ ತಡವಾಗಬಹುದು.

ಧನು ರಾಶಿ: ಪದೇಪದೇ ಪ್ರಯಾಣದ ಪರಿಸ್ಥಿತಿ ಎದುರಾಗಬಹುದು, ಸಮಯಕ್ಕೆ ಊಟ ಮಾಡದಿದ್ದರೆ ಆರೋಗ್ಯದ ಸಮಸ್ಯೆ ಕಾಣಿಸಬಹುದು. ಆವೇಶದ ನಿರ್ಧಾರಗಳನ್ನು ತಪ್ಪಿಸಿ, ವೃತ್ತಿಯಲ್ಲಿ ಜಾಗರೂಕರಾಗಿರಿ.

ಮಕರ ರಾಶಿ: ಬಂಧು-ಮಿತ್ರರೊಂದಿಗೆ ವೈಮನಸ್ಸು ತಪ್ಪಿಸಿ, ಗೊಂದಲದ ವಿಚಾರಗಳಲ್ಲಿ ತಾಳ್ಮೆಯಿಂದ ನಿರ್ಧಾರ ಕೈಗೊಳ್ಳಿ. ಆರೋಗ್ಯದಲ್ಲಿ ಸುಧಾರಣೆ ಕಂಡರೂ ಅನಗತ್ಯ ಆರೋಪಗಳಿಂದ ಎಚ್ಚರವಾಗಿರಿ.

ಕುಂಭ ರಾಶಿ: ಶುಭಕಾರ್ಯಗಳ ಪ್ರಯತ್ನಗಳು ಸುಗಮವಾಗಿ ನೆರವೇರುವ ಸಾಧ್ಯತೆ ಇದೆ. ಪ್ರಯಾಣದಿಂದ ಲಾಭ, ಹಣಕಾಸಿನಲ್ಲಿ ನೆಮ್ಮದಿ ಹಾಗೂ ಸಮಾಜದಲ್ಲಿ ಉತ್ತಮ ಗೌರವ ದೊರೆಯಬಹುದು.

ಮೀನ ರಾಶಿ: ನಿಮ್ಮ ಉತ್ತಮ ನಡವಳಿಕೆಯಿಂದ ಇತರರ ಮೆಚ್ಚುಗೆ ಪಡೆಯುವಿರಿ, ಹಲವು ಪ್ರಯತ್ನಗಳಲ್ಲಿ ಯಶಸ್ಸು ಸಿಗಬಹುದು. ದೇವರ ದರ್ಶನ, ಆಸ್ತಿ ಪರಿಹಾರ ಹಾಗೂ ಹೊಸ ವಸ್ತುಗಳ ಖರೀದಿಗೆ ಅವಕಾಶ ದೊರೆಯಲಿದೆ.

ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.

Savitha

ಪತ್ರಿಕೋದ್ಯಮದಲ್ಲಿ 8 ವರ್ಷಗಳ ಬರವಣಿಗೆ ಅನುಭವ ಹೊಂದಿರುವ ಸವಿತಾ ರವರು, ಟ್ರೆಂಡಿಂಗ್ ವಿಷಯಗಳು, ಸೋಶಿಯಲ್ ಮೀಡಿಯಾ, ವೈರಲ್ ಕಂಟೆಂಟ್, ಧಾರ್ಮಿಕ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ… More »

Related Stories