ಕರಿಬೇವಿನ ಸೊಪ್ಪಿನಿಂದ ಈ ರೀತಿ ಮಾಡಿದ್ರೆ ತಲೆಕೂದಲ ಸಮಸ್ಯೆ ಮಾಯ
ನಮ್ಮ ದೇಹದ ಎಲ್ಲಾ ಭಾಗಗಳಿಗೂ ನಾವು ಎಲ್ಲಾ ಕಾಳಜಿ ವಹಿಸುತ್ತೇವೆ, ಆದರೆ ಕೆಲವೊಮ್ಮೆ ನಮ್ಮ ಸೌಂದರ್ಯ ಹೆಚ್ಚಿಸುವ ಪ್ರಮುಖ ಭಾಗ ತಲೆಯನ್ನೇ ನಾವು ಕಡೆಗಣಿಸುತ್ತೇವೆ . ನಮ್ಮ ಆಕರ್ಷಣೆಯ ಪ್ರಮುಖ ಅಂಶ, ಕೂದಲು, ಈ ಕೂದಲು ಕುಗ್ಗುವಿಕೆ, ಒಡೆಯುವುದು, ನಿಧಾನಗತಿಯ ಬೆಳವಣಿಗೆ, ತಲೆಹೊಟ್ಟು ಅಥವಾ ಸಿಪ್ಪೆಸುಲಿಯುವುದು ಮುಂತಾದ ಹಲವು ರೀತಿಯ ಕೂದಲಸಮಸ್ಯೆಗಳಿವೆ.
ಇದಕ್ಕೆಂದೇ ಮಾರುಕಟ್ಟೆಯಲ್ಲಿ ಹಲವು ಔಷಧಿಗಳಿವೆ, ಆದರೆ ಆ ಔಷಧಿಗಳನ್ನು ಪ್ರಯತ್ನಿಸುವಾಗ ನೀವು ಜಾಗರೂಕರಾಗಿರಬೇಕು ಅಥವಾ ನಿಮ್ಮ ಕೂದಲೀನ ಮೇಲೆ ಸಹ ಅವು ಪರಿಣಾಮ ಬೀರಬಹುದು. ಈ ಎಲ್ಲಾ ಸಮಸ್ಯೆಗೆ ಸೂಪರ್ ಟಿಪ್ಸ್ ಇಲ್ಲಿದೆ, ನಿಮಗೆ ಸಹಾಯ ಮಾಡಬಲ್ಲ ಮನೆಮದ್ದನ್ನುಒಮ್ಮೆಪ್ರಯತ್ನಿಸಿನೋಡಿ.
ಕೂದಲ ಸಂರಕ್ಷಣೆಗೆ ಸಹಾಯ ಮಾಡುತ್ತದೆ ಕರಿಬೇವು
ಕರಿಬೇವು : ಸಾಮಾನ್ಯವಾಗಿ ನಮ್ಮಅಡುಗೆ ಮನೆಯಲ್ಲಿಯೇ ಸಿಗುವ ಕರಿಬೇವಿನಲ್ಲಿ ನಮ್ಮ ಕೂದಲ ಸಮಸ್ಯೆ ನಿವಾರಣೆಯಾಗಬಲ್ಲ ಪವಾಡ ಅಡಗಿದೆ. ಹೌದು, ಒಂದು ಹಿಡಿ ಕರಿಬೇವಿನ ಸೊಪ್ಪನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ, ರುಬ್ಬಿದ ಮಿಶ್ರಣವನ್ನು ಕೊಬ್ಬರಿ ಎಣ್ಣೆಯ ಜೊತೆಗೆ ಬೆರೆಸಿ. ಬೆರೆಸಿದ ಎಣ್ಣೆಯನ್ನು ಮಿತ ಹುರಿಯಲ್ಲಿ ಕಾಯಿಸಿ, ತಣ್ಣಗಾಗಿಸಿ.
ಈ ಎಣ್ಣೆಯನ್ನು ಪ್ರತಿ ದಿನ ನಿಮ್ಮ ತಲೆಗೆ ಹಚ್ಚುತ್ತಾ ಬಂದರೆ, ನಿಮ್ಮ ತಲೆಕೂದಲ ಸಮಸ್ಯೆ ಸ್ವಲ್ಪ ದಿನಗಳಲ್ಲಿಯೇ ಮಾಯವಾಗುತ್ತದೆ. ಈ ಮಿಶ್ರಣ ನಿಮ್ಮ ತಲೆಕೂದಲು ದಟ್ಟವಾಗಿಯೂ ಮತ್ತು ಕಪ್ಪಾಗಿಯೂ ಕಂಗೊಳಿಸುವಂತೆ ಮಾಡುತ್ತದೆ. ಜೊತೆಗೆ ಆರೋಗ್ಯಕರ ಆಹಾರವನ್ನು ಕಾಪಾಡಿಕೊಳ್ಳುವುದು ಆರೋಗ್ಯಕರ ಕೂದಲುಗಳಿಗೆ ಮುಖ್ಯವಾಗಿದೆ
ಮತ್ತೇಕೆ ತಡ ನೀವೂ ತಲೆಕೂದಲ ಸಮಸ್ಯೆಯಿಂದ ಬಳಲುತ್ತಿದ್ದರೆ, ಈ ಮನೆಯ ಪರಿಹಾರವನ್ನೊಮ್ಮೆ ಪ್ರಯತ್ನಿಸಿ ನೋಡಿ, ನಿಮ್ಮ ಸ್ನೇಹಿತರಿಗೂ ಈ ಸೂಪರ್ ಟಿಪ್ ತಿಳಿಸಿ.////
Web Title : Curry leaves fix your hair problem, Try it today
Get Health Tips and Latest Kannada News at kannadanews.today
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019