ಪ್ರತಿ ಗಂಟೆಗೆ 4 ಅತ್ಯಾಚಾರ, 10 ವರ್ಷಗಳಲ್ಲಿ 3.2 ಲಕ್ಷ ಲೈಂಗಿಕ ದೌರ್ಜನ್ಯ! ಶಾಕಿಂಗ್ ವರದಿ
2014ರಿಂದ 2023ರವರೆಗೆ ಭಾರತದಲ್ಲಿ 3.2 ಲಕ್ಷ ಮಹಿಳೆಯರು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಪ್ರತಿ ಗಂಟೆಗೆ 4 ಮಹಿಳೆಯರು ಅತ್ಯಾಚಾರಕ್ಕೆ ಬಲಿಯಾಗುತ್ತಿರುವ ಭೀಕರ ಪರಿಪಾಠವೇ ಮುಂದುವರಿದಿದೆ.

- ಅತ್ಯಾಚಾರ ಪ್ರಮಾಣದಲ್ಲಿ ಮುಂಚೂಣಿಯಲ್ಲಿರುವ 5 ರಾಜ್ಯಗಳು
- 10 ವರ್ಷಗಳಲ್ಲಿ 3.2 ಲಕ್ಷ ಅತ್ಯಾಚಾರ ಪ್ರಕರಣಗಳು ದಾಖಲು
- ಪ್ರತಿ 100 ಅತ್ಯಾಚಾರಗಳಲ್ಲಿ 82 ಕೃತ್ಯಗಳು ಪರಿಚಿತರಿಂದಲೇ ನಡೆದಿವೆ
ಭಾರತದಲ್ಲಿ ಮಹಿಳಾ ಭದ್ರತೆ ಮತ್ತೆ ಪ್ರಶ್ನೆಯಲ್ಲಿದೆ. ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ (NCRB) ಅಂಕಿಅಂಶಗಳ ಪ್ರಕಾರ, ಕಳೆದ 10 ವರ್ಷಗಳಲ್ಲಿ 3,20,196 ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗಿದ್ದಾರೆ. ಇದು 2014ರಿಂದ 2023ರವರೆಗೆ — ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರದ ಅವಧಿಯ ಸಂಖ್ಯೆ.
ಮಹಿಳೆಯರಿಗೆ ದೈನಂದಿನ ಜೀವನದಲ್ಲಿ ಎಷ್ಟು ಅಪಾಯವಿದೆ ಎಂಬುದಕ್ಕೆ ಪ್ರತಿ ಗಂಟೆಗೆ ನಲ್ವರು ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತಿರುವುದು ಸಾಕ್ಷಿಯಾಗಿದೆ. ಇದು ಸರಾಸರಿ ದಿನಕ್ಕೆ 86 ಅತ್ಯಾಚಾರ ಪ್ರಕರಣಗಳು ಎಂದು 2017 ರಿಂದ 2022ರ ನಡುವಿನ ವರದಿ ತೋರಿಸುತ್ತದೆ.
ಇದನ್ನೂ ಓದಿ: ನಿದ್ರೆ ಮಾಡುತ್ತಿದ್ದ ಡಾಕ್ಟರ್, ನರಳಿ ನರಳಿ ರಕ್ತಸ್ರಾವದಿಂದ ಪ್ರಾಣಬಿಟ್ಟ ರೋಗಿ
ಆಘಾತಕಾರಿ ಸಂಗತಿಯೆಂದರೆ ಈ ಅತ್ಯಾಚಾರಗಳಲ್ಲಿ ಬಹುಪಾಲು ಪ್ರಕರಣಗಳಲ್ಲಿ ಆರೋಪಿಗಳು ಪರಿಚಿತರೇ. ಸರಾಸರಿ 100 ಅತ್ಯಾಚಾರ ಪ್ರಕರಣಗಳಲ್ಲಿ 82 ಕೃತ್ಯಗಳನ್ನು ಪರಿಚಿತ ಪುರುಷರು ಅಥವಾ ಕುಟುಂಬದ ಸದಸ್ಯರುಗೈಯುತ್ತಿದ್ದಾರೆ. ಈ ಅಂಕಿಅಂಶಗಳು ಮಹಿಳೆಯರಿಗೆ ಮನೆಯ ಒಳಗೆಯೂ ಭದ್ರತೆ ಇಲ್ಲ ಎಂಬುದನ್ನು ತೋರಿಸುತ್ತವೆ.
ಅತ್ಯಾಚಾರ ಪ್ರಕರಣಗಳಲ್ಲಿ ಮುಂಚೂಣಿಯಲ್ಲಿರುವ ಐದು ರಾಜ್ಯಗಳೆಲ್ಲವೂ ಬಿಜೆಪಿ ಆಡಳಿತದಲ್ಲಿ ಇರುವಂತೆಯೇ ಇರುವುದೂ ಗಮನಾರ್ಹ ಸಂಗತಿ. ರಾಜಸ್ಥಾನ್ ಮೊದಲ ಸ್ಥಾನದಲ್ಲಿದ್ದು, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಮಹಾರಾಷ್ಟ್ರ ಮತ್ತು ಹರಿಯಾಣ ಕ್ರಮವಾಗಿ ಎರಡರಿಂದ ಐದನೇ ಸ್ಥಾನಗಳಲ್ಲಿ ಸ್ಥಾನ ಪಡೆದಿವೆ.
ಇದನ್ನೂ ಓದಿ: ಅರ್ಧರಾತ್ರಿ ಆಂಟಿಗಾಗಿ ಹೋದ ಯುವಕನನ್ನು ಹಿಡಿದು ಥಳಿಸಿದ ಗ್ರಾಮಸ್ಥರು
ಹೆಚ್ಚಾಗಿ ಲೈಂಗಿಕ ದೌರ್ಜನ್ಯಕ್ಕೊಳಗಾಗುತ್ತಿರುವ ಮಹಿಳೆಯರ ವಯಸ್ಸು 18ರಿಂದ 30 ವರ್ಷಗಳ ನಡುವೆ. ಉದ್ಯೋಗ ಸ್ಥಳದಲ್ಲಿಯೂ ಲೈಂಗಿಕ ಕಿರುಕುಳದ ಪ್ರಕರಣಗಳು ಹೆಚ್ಚಾಗುತ್ತಿರುವುದಾಗಿ NCRB ವರದಿ ಹೇಳಿದೆ. 2014ರಿಂದ 2022ರ ನಡುವೆ ಕೆಲಸದ ಸ್ಥಳದಲ್ಲಿ 4,231 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ.
ಇಂತಹ ಅಂಶಗಳು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗಮನಸೆಳೆಯಬೇಕಾದ್ದು ಮಾತ್ರವಲ್ಲ, ಇಡೀ ಸಮಾಜ ತಕ್ಷಣ ಎಚ್ಚರಕ್ಕೆ ಬರುವಂತೆ ಮಾಡಬೇಕು. ಬದಲಾವಣೆ, ಮಾತಿನಲ್ಲಿ ಅಲ್ಲ, ಕಠಿಣ ಕಾನೂನು ಅನುಷ್ಠಾನ ಮತ್ತು ಸಾಮಾಜಿಕ ಜವಾಬ್ದಾರಿ ತೆಗೆದುಕೊಳ್ಳುವಲ್ಲಿ ಇರಬೇಕು.
4 Women Assaulted Every Hour in India







