ಅಸ್ಸಾಂನಲ್ಲಿ 5.8 ತೀವ್ರತೆಯ ಭೂಕಂಪ, ಉತ್ತರ ಬಂಗಾಳ, ಭೂತಾನ್‌ನಲ್ಲಿ ಕಂಪನದ ಅನುಭವ
Earthquake : ಅಸ್ಸಾಂನಲ್ಲಿ ಭೂಕಂಪ ಸಂಭವಿಸಿದೆ. ಭಾನುವಾರ ಸಂಜೆ 4:41 ಕ್ಕೆ 5.8 ರಷ್ಟು ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ರಾಜಧಾನಿ ಗುವಾಹಟಿಯಲ್ಲೂ ಇದರ ಪರಿಣಾಮ ಬೀರಿತು.

- ಅಸ್ಸಾಂ (Assam) ನಲ್ಲಿ 5.8 ತೀವ್ರತೆಯ ಭೂಕಂಪ
- ಗುವಾಹಟಿ (Guwahati) ಮತ್ತು ಭೂತಾನ್ ನಲ್ಲಿ ಕಂಪನ ಅನುಭವ
- ಪ್ರಸ್ತುತ ಯಾವುದೇ ಹಾನಿ ವರದಿಯಾಗಿಲ್ಲ
ಗುವಾಹಟಿ: ಅಸ್ಸಾಂನಲ್ಲಿ ಭೂಕಂಪ ಸಂಭವಿಸಿದೆ. ಭಾನುವಾರ ಸಂಜೆ 4:41 ಕ್ಕೆ 5.8 ತೀವ್ರತೆಯ ಭೂಕಂಪ (Earthquake) ಸಂಭವಿಸಿದೆ. ಇದು ರಾಜಧಾನಿ ಗುವಾಹಟಿಯ ಮೇಲೂ ಪರಿಣಾಮ ಬೀರಿದೆ.
ಈ ವೇಳೆ ಕಟ್ಟಡಗಳಲ್ಲಿ ವಾಸಿಸುತ್ತಿದ್ದ ಜನರು ಭಯಭೀತರಾಗಿ ಹೊರಗೆ ಓಡಿಬಂದಿದ್ದಾರೆ. ಅಸ್ಸಾಂನ ಉದಲ್ಗುರಿ ಜಿಲ್ಲೆಯಲ್ಲಿ ಭೂಕಂಪದ ಕೇಂದ್ರಬಿಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಐದು ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ. ಗುವಾಹಟಿ ಜೊತೆಗೆ, ಉತ್ತರ ಬಂಗಾಳ ಮತ್ತು ಭೂತಾನ್‌ನಲ್ಲಿಯೂ ಕಂಪನದ ಅನುಭವವಾಗಿದೆ. ಇಲ್ಲಿಯವರೆಗೆ ಯಾವುದೇ ಜೀವ ಅಥವಾ ಆಸ್ತಿಪಾಸ್ತಿ ನಷ್ಟ ವರದಿಯಾಗಿಲ್ಲ.
ಏತನ್ಮಧ್ಯೆ, ದೇಶದಲ್ಲಿ ಆಗಾಗ್ಗೆ ಭೂಕಂಪಗಳು ಸಂಭವಿಸುವ ಪ್ರದೇಶಗಳಲ್ಲಿ ಅಸ್ಸಾಂ ಕೂಡ ಒಂದು. ಇದು ಯುರೇಷಿಯನ್ ಪ್ಲೇಟ್ ಅಡಿಯಲ್ಲಿ ಭಾರತೀಯ ಪ್ಲೇಟ್ ಡಿಕ್ಕಿ ಹೊಡೆಯುವ ವಲಯ 5 ರಲ್ಲಿದೆ. ಸೆಪ್ಟೆಂಬರ್ 2 ರಂದು, ಅಸ್ಸಾಂನ ಸೋನಿತ್ಪುರದಲ್ಲಿ 3.5 ತೀವ್ರತೆಯ ಭೂಕಂಪ ಸಂಭವಿಸಿತ್ತು.
5.8 Magnitude Earthquake Strikes Assam
English Summary▼
TRENDING ARTICLES1 / 4







