India NewsBusiness News

ಕೇಂದ್ರದ ಬಂಪರ್ ಯೋಜನೆ, ಪ್ರತಿ ತಿಂಗಳು ಸಿಗುತ್ತೆ ₹5000 ಪಿಂಚಣಿ! ಅಪ್ಲೈ ಮಾಡಿ

Atal Pension Yojana : 60 ವರ್ಷ ದಾಟಿದ ಬಳಿಕವೂ ನಿತ್ಯ ಖರ್ಚಿಗಾಗಿ ನೆಮ್ಮದಿ ರೂಪದಲ್ಲಿ ಹಣ ಸಿಗಬೇಕೆಂಬುದು ಈ ಯೋಜನೆಯ ಉದ್ದೇಶ.

Publisher: Kannada News Today (Digital Media)

  • ಜೀವನಕ್ಕೆ ಖಾತರಿ ಪಿಂಚಣಿ ನೀಡುವ ಯೋಜನೆ
  • ಅಸಂಘಟಿತ ವಲಯದಲ್ಲಿ ದುಡಿಯುವವರಿಗೆ ಕೇಂದ್ರದ ಭದ್ರತಾ ಸಹಾಯ
  • ಬ್ಯಾಂಕ್ ಅಥವಾ ಅಂಚೆ ಖಾತೆ ಇದ್ದರೆ ಅರ್ಜಿ ಹಾಕಬಹುದು

ಕೆಂದ್ರ ಸರ್ಕಾರವು ಅಸಂಘಟಿತ ವಲಯದಲ್ಲಿ ದುಡಿಯುವವರ ಭವಿಷ್ಯ ಭದ್ರತೆಗೆ ವಿಶೇಷ ಗಮನ ಹರಿಸಿದೆ. ವಯಸ್ಸಾದ ಬಳಿಕ ಖಾತರಿ ಆದಾಯವಿಲ್ಲದೆ ಜೀವನ ನಡೆಸುವುದು ಕಠಿಣ. ಈ ಹೊತ್ತಿನಲ್ಲಿ “ಅಟಲ್ ಪಿಂಚಣಿ ಯೋಜನೆ (Atal Pension Yojana)” ಇವರಿಗೆ ಬೆಳಕಾಗುತ್ತಿದೆ.

60 ವರ್ಷ ದಾಟಿದ ಬಳಿಕವೂ ನಿತ್ಯ ಖರ್ಚಿಗಾಗಿ ನೆಮ್ಮದಿ ರೂಪದಲ್ಲಿ ಹಣ ಸಿಗಬೇಕೆಂಬುದು ಈ ಯೋಜನೆಯ ಉದ್ದೇಶ. ಯೋಜನೆಗೆ ಸೇರಿಕೊಳ್ಳುವವರು ತಮ್ಮ ಹೂಡಿಕೆಯ ಪ್ರಮಾಣದ ಮೇಲೆ ಪ್ರತಿ ತಿಂಗಳು ₹1000 ರಿಂದ ₹5000 ವರೆಗೆ ಪಿಂಚಣಿಯನ್ನು ಪಡೆಯಬಹುದು.

ಕೇಂದ್ರದ ಬಂಪರ್ ಯೋಜನೆ, ಪ್ರತಿ ತಿಂಗಳು ಸಿಗುತ್ತೆ ₹5000 ಪಿಂಚಣಿ! ಅಪ್ಲೈ ಮಾಡಿ

ಇದನ್ನೂ ಓದಿ: ಹೋಮ್‌ ಲೋನ್‌, ಬಿಸಿನೆಸ್ ಲೋನ್ ಪಡೆದವರಿಗೆ ಬಿಗ್‌ ರಿಲೀಫ್! ಭರ್ಜರಿ ಸುದ್ದಿ

ಯೋಜನೆಯಡಿ ಸೇರ್ಪಡೆಯಾಗಲು ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ (Savings Account) ಇರಬೇಕು. ಯೋಜಯೇ ಸೇರಲು 18ರಿಂದ 40ವರ್ಷದೊಳಗಿನವರೆಗೂ ಅವಕಾಶವಿದೆ. ಹೂಡಿಕೆಯಲ್ಲಿ ಹೆಚ್ಚು ಒತ್ತಡ ಇಲ್ಲ – ತಿಂಗಳ ಕಂತು ಆಧಾರಿತವಾಗಿ ಯೋಜನೆ ಮುಂದುವರೆಯುತ್ತದೆ.

ಖಾಸಗಿ ವಲಯದಲ್ಲೋ ಅಥವಾ ದಿನಗೂಲಿ ಕೆಲಸಗಳಲ್ಲಿ ತೊಡಗಿರುವವರ ಸೇವಾ ವಯಸ್ಸು ಮುಗಿದ ಬಳಿಕ ದುಡಿಯಲು ಶಕ್ತಿ ಕಡಿಮೆಯಾಗುತ್ತದೆ. ಆ ಪರಿಸ್ಥಿತಿಯಲ್ಲಿ ಖಾತರಿ ಆದಾಯವಾಗಿರುವುದರಿಂದ ಅವರ ಜೀವನ ಶೈಲಿಗೆ ನಿಟ್ಟಾದ ಸಹಾಯವಾಗುತ್ತದೆ.

ಇದನ್ನೂ ಓದಿ: ಗಂಡ ಹೆಂಡತಿಗೆ ₹9,000 ಗ್ಯಾರಂಟಿ ಆದಾಯ! ಪೋಸ್ಟ್ ಆಫೀಸ್ ಬಂಪರ್ ಸ್ಕೀಮ್

ಅಟಲ್ ಪಿಂಚಣಿ ಯೋಜನೆ

ಅಟಲ್ ಪಿಂಚಣಿ ಯೋಜನೆಯು ಸರ್ಕಾರದ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳಲ್ಲಿ ಒಂದಾಗಿ ಮೂಡಿಬಂದಿದೆ. ಗರಿಷ್ಠ ಪಿಂಚಣಿ ಪಡೆಯಲು ಹೆಚ್ಚು ಸಮಯದವರೆಗೆ ಮತ್ತು ನಿರಂತರ ಹೂಡಿಕೆಯಾಗಬೇಕು. ಹೀಗಾಗಿ ಮೊದಲನೆಯದಾಗಿ ಯುವವಯಸ್ಸಲ್ಲಿಯೇ ಯೋಜನೆಗೆ ಸೇರ್ಪಡೆಯಾಗುವುದು ಉತ್ತಮ.

ಇದನ್ನೂ ಓದಿ: ಬಡವರಿಗೆ ಸೂರು, ಮನೆ ಇಲ್ಲದ ಕುಟುಂಬಗಳಿಗೆ ₹2.5 ಲಕ್ಷ ನೆರವು! ಈ ರೀತಿ ಪಡೆಯಿರಿ

ಹೂಡಿಕೆದಾರರ ಪಿಂಚಣಿ ಖಾತೆಗೆ ಜಮೆಯಾಗುತ್ತದೆ. ಯಾವುದೇ ಸರ್ಕಾರಿ ಅಥವಾ ಖಾಸಗಿ ಉದ್ಯೋಗದಲ್ಲಿಲ್ಲದವರು ಅಥವಾ ಇತರ ಪಿಂಚಣಿ ಯೋಜನೆಗೆ ಸೇರಿಲ್ಲದವರು ಇದರಲ್ಲಿ ಭಾಗವಹಿಸಬಹುದು.

5000 Monthly Pension Under Central Scheme

English Summary

Related Stories