ಮುಂಬೈ ಬೀಚ್‌ನಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ 7 ತುಂಡುಗಳಾಗಿ ಶವ ಪತ್ತೆ
ಮುಂಬೈ ಮೂಲದ ಗೊರೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪತ್ತೆಯಾಗಿರುವ ಮೃತದೇಹ ಇನ್ನೂ ಯಾರದು ಎಂಬುದು ತಿಳಿದುಬಂದಿಲ್ಲ.
- ಮುಂಬೈನ ಗೊರೈ ಬೀಚ್‌ನಲ್ಲಿ ಶವ
- ಪ್ಲಾಸ್ಟಿಕ್ ಚೀಲದಲ್ಲಿ 7 ತುಂಡುಗಳಾಗಿ ಶವ
- ಸುತ್ತಮುತ್ತಲ ಪ್ರದೇಶಗಳಲ್ಲಿ ಆತಂಕ ಸೃಷ್ಟಿ
ಮುಂಬೈ ಗೊರೈ ಬೀಚ್ ನಲ್ಲಿ (Mumbai Gorai Beach) ವ್ಯಕ್ತಿಯೊಬ್ಬರ ಶವ 7 ತುಂಡುಗಳಾಗಿ ಪತ್ತೆಯಾಗಿರುವ ಘಟನೆ ಸದ್ಯ ಸಂಚಲನ ಮೂಡಿಸುತ್ತಿದೆ. ಮಾಹಿತಿ ಪ್ರಕಾರ ವ್ಯಕ್ತಿಯ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಇಟ್ಟು ಸೀಲ್ ಮಾಡಲಾಗಿದೆ.
ಮೃತದೇಹದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಕೊಳೆತ ಶವವನ್ನು (Decomposed Body) ಭಾಗಗಳಾಗಿ ವಶಪಡಿಸಿಕೊಂಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಮುಂಬೈ ಮೂಲದ ಗೊರೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪತ್ತೆಯಾಗಿರುವ ಮೃತದೇಹ ಇನ್ನೂ ಯಾರದು ಎಂಬುದು ತಿಳಿದುಬಂದಿಲ್ಲ. ಘಟನೆಯಿಂದ ಸುತ್ತಮುತ್ತಲ ಪ್ರದೇಶಗಳಲ್ಲಿ ಆತಂಕ ಸೃಷ್ಟಿಯಾಗಿತ್ತು.
ಮೃತದೇಹದ ಸ್ಥಿತಿಯನ್ನು ಅವಲೋಕಿಸಿದರೆ ಕೆಲ ದಿನಗಳ ಹಿಂದೆಯೇ ಕೊಲೆ ನಡೆದಿರಬಹುದು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಹೊರತೆಗೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವೇಳೆ ಸಮೀಪದ ಪೊಲೀಸ್ ಠಾಣೆಗಳಿಂದ ಸಿಸಿಟಿವಿ ದೃಶ್ಯಾವಳಿ ಹಾಗೂ ನಾಪತ್ತೆ ಪ್ರಕರಣಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಪ್ರಸ್ತುತ ತನಿಖೆಯ ಆಧಾರದ ಮೇಲೆ ಸಾಕ್ಷ್ಯಾಧಾರಗಳನ್ನು ಹುಡುಕುವ ಪ್ರಯತ್ನಗಳು ನಡೆಯುತ್ತಿವೆ.
A Man Decomposed Body Found In A Plastic Bag in Mumbai Gorai Beach