ಹೊಸ ಸಿಮ್ ಕಾರ್ಡ್ ಖರೀದಿ ಮಾಡುವವರಿಗೆ ಹೊಸ ನಿಯಮ! ನವೆಂಬರ್ 1ರಿಂದಲೇ ಜಾರಿ
ಇನ್ನು ಕೇವಲ ಒಂದು ದಿನಗಳಲ್ಲಿ ನವೆಂಬರ್ ತಿಂಗಳು (November month) ಆರಂಭವಾಗುತ್ತದೆ, ಹಾಗೂ ಹೊಸ ತಿಂಗಳು ಆರಂಭವಾಗುತ್ತಿದ್ದಂತೆ ಸರ್ಕಾರದ ಹಲವು ನೀತಿ ನಿಯಮಗಳು ಕೂಡ ಬದಲಾವಣೆ ಆಗುತ್ತದೆ ಅಥವಾ ನಿಯಮಗಳಲ್ಲಿ ಅಪ್ಡೇಟ್ ಕೂಡ ಮಾಡಲಾಗುತ್ತದೆ
ಇದೀಗ ದೂರ ಸಂಪರ್ಕ ಇಲಾಖೆಯ ಸಚಿವರಾಗಿರುವ ಅಶ್ವಿನಿ ವೈಷ್ಣವ್ (Ashwini Vaishnav) ಸಿಮ್ ಕಾರ್ಡ್ (sim card purchase) ಖರೀದಿಗೂ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಹೆಚ್ಚಾಗುತ್ತಿದೆ ಸೈಬರ್ ಕ್ರೈಂ! (Cyber crime)
ಇತ್ತೀಚಿನ ದಿನಗಳಲ್ಲಿ ಸಿಮ್ ಕಾರ್ಡ್ ಖರೀದಿ (sim card purchase) ಮಾಡಿ ವಂಚನೆ ಮಾಡುತ್ತಿರುವ ಪ್ರಕರಣಗಳು ಜಾಸ್ತಿ ಆಗುತ್ತಿದೆ, ಇದರ ಜೊತೆಗೆ ಸೈಬರ್ ಕ್ರೈಂ ಕೂಡ ಹೆಚ್ಚಿನ ಮಟ್ಟದಲ್ಲಿ ದಾಖಲಾಗುತ್ತಿವೆ.
ಇಂತಹ ವಂಚನೆಗಳಿಗೆ ಮುಖ್ಯವಾದ ಕಾರಣ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಸಿಮ್ ಕಾರ್ಡ್ ಖರೀದಿ ಮಾಡಬಹುದು ಎನ್ನುವ ನಿಯಮ ಹಾಗಾಗಿ ಯಾರ್ಯಾರದೋ ಹೆಸರಿನಲ್ಲಿ ಸಿಮ್ ಕಾರ್ಡ್ ಖರೀದಿ ಮಾಡಿ ವಂಚನೆ ಮಾಡುವವರು ಜಾಸ್ತಿ ಆಗಿದ್ದಾರೆ
ಇದಕ್ಕೆಲ್ಲ ಕಡಿವಾಣ ಹಾಕಲು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಅವರು ನಿರ್ಧರಿಸಿದ್ದು, ನವೆಂಬರ್ 1ರಿಂದ ಹೊಸ ನಿಯಮವನ್ನ ಸಿಮ್ ಕಾರ್ಡ್ ಮಾರಾಟ ಮತ್ತು ಖರೀದಿ ಮಾಡುವವರ ಮೇಲೆ ವಿಧಿಸಿದ್ದಾರೆ.
ಸಿಮ್ ಕಾರ್ಡ್ ಬಲ್ಕ್ ಆಗಿ ಖರೀದಿ ಮಾಡುವ ಹಾಗಿಲ್ಲ!
ಯಾರು ಇನ್ನು ಮುಂದೆ ಸಿಮ್ ಕಾರ್ಡ್ ಅನ್ನು ಬಲ್ಕಾಗಿ ಖರೀದಿ ಮಾಡುವ ಹಾಗಿಲ್ಲ ಇನ್ನು ಮಾರಾಟ ಮಾಡುವವರು ಸಿಮ್ ಕಾರ್ಡ್ ಖರೀದಿ ಮಾಡುವುದಿದ್ದರೆ ಅದಕ್ಕೂ ಒಂದು ನಿಯಮ ಇದೆ. ಸಿಮ್ ಕಾರ್ಡ್ ಮಾರಾಟ ಮಾಡುವವರು ಕೆವೈಸಿ (KYC) ಮಾಡಿಸಿಕೊಳ್ಳುವುದು ಕಡ್ಡಾಯ ಅದೇ ರೀತಿ ಯಾರು ಸಿಮ್ ಕಾರ್ಡ್ ತೆಗೆದುಕೊಳ್ಳುತ್ತಾರೋ ಅವರಿಗೂ ಕೆವೈಸಿ ಮಾಡಿಸಬೇಕು.
ನಿಯಮ ತಪ್ಪಿದ್ರೆ 10 ಲಕ್ಷ ತಂಡ!
ನಡೆಯುತ್ತಿರುವ ಸೈಬರ್ ವಂಚನೆಯನ್ನ ತಪ್ಪಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ದೂರ ಸಂಪರ್ಕ ಇಲಾಖೆ. ಹಿನ್ನೆಲೆಯಲ್ಲಿ ಯಾರು ಹೆಚ್ಚು ಸಿಮ್ ಖರೀದಿ ಮಾಡುತ್ತಾರೋ ದಾಖಲೆ ಇಲ್ಲದೆ ಕೆವೈಸಿ ಮಾಡಿಸಿಕೊಳ್ಳದೆ ಸಿಮ್ ಕಾರ್ಡ್ ಮಾರಾಟ ಮಾಡುತ್ತಾರೋ, ಅಂಥವರು 10 ಲಕ್ಷ ರೂಪಾಯಿಗಳವರೆಗೆ ದಂಡ ಪಾವತಿ ಮಾಡಬೇಕಾಗುತ್ತದೆ.
ಸಿಮ್ ಕಾರ್ಡ್ ಕೆವೈಸಿ ಮಾಡಿಸಿಕೊಳ್ಳಲು ನವೆಂಬರ್ 30ರ ವರೆಗೆ ಅವಕಾಶ ಮಾಡಿಕೊಡಲಾಗಿದೆ. ಇನ್ನು ಈ ಹೊಸ ನಿಯಮ ನವೆಂಬರ್ ಒಂದರಿಂದಲೇ ಜಾರಿಗೆ ಬರಲಿದ್ದು ಸಿಮ್ ಕಾರ್ಡ್ ಖರೀದಿ ಮಾಡುವವರು ಟೆಲಿಕಾಂ ಸಚಿವಾಲಯ (telecom department) ವಿಧಿಸಿರುವ ನಿಯಮವನ್ನು ಪಾಲಿಸುವುದು ಕಡ್ಡಾಯವಾಗಿದೆ.
ಇಲ್ಲವಾದರೆ ದಂಡ ಪಾವತಿಸುವುದು ಮಾತ್ರವಲ್ಲದೆ ಮೂರು ವರ್ಷಗಳ ಕಾಲ ಸಿಮ್ ಕಾರ್ಡ್ ಮಾರುವವಂತಿಲ್ಲ ಹಾಗೂ ಬ್ಲಾಕ್ ಲಿಸ್ಟ್ ಗೆ ಅಂತಹ ಮಾರಾಟಗಾರರನ್ನು ಸೇರಿಸಲಾಗುತ್ತದೆ. ನಮ್ಮ ದೇಶದಲ್ಲಿ 10 ಲಕ್ಷಕ್ಕೂ ಹೆಚ್ಚಿನ ಸಿಮ್ ಕಾರ್ಡ್ ಮಾರಾಟಗಾರರು ಇದ್ದು ಎಲ್ಲರಿಗೂ ಈ ಹೊಸ ನಿಯಮ ಅನ್ವಯವಾಗಲಿದೆ.
A new rule for those who buy a new SIM card, Effective from November 1
Our Whatsapp Channel is Live Now 👇