Aadhaar: ಆಧಾರ್ ಹೊಸ ಅಪ್ಡೇಟ್; ಇನ್ಮುಂದೆ ಎಲ್ಲಿಂದಾದರೂ ಬದಲಾವಣೆ ಸಾಧ್ಯ
Aadhaar: ಯುಐಡಿಎಐ ಹೊಸ ಆಧಾರ್ ಆ್ಯಪ್ ಬಿಡುಗಡೆಗೆ ಸಜ್ಜಾಗಿದೆ. ಈ ಆ್ಯಪ್ ಮೂಲಕ ಮೊಬೈಲ್ ನಂಬರ್ ಸೇರಿ ಪ್ರಮುಖ ಆಧಾರ್ ವಿವರಗಳನ್ನು ಯಾವಾಗ ಬೇಕಾದರೂ, ಎಲ್ಲಿಂದಾದರೂ ಸುಲಭವಾಗಿ ಅಪ್ಡೇಟ್ ಮಾಡಬಹುದು.

- ಹೊಸ ಆಧಾರ್ ಆ್ಯಪ್ ಮೂಲಕ ಅಪ್ಡೇಟ್ ಸೌಲಭ್ಯ
- ಆಧಾರ್ ಮೊಬೈಲ್ ನಂಬರ್ ಬದಲಾವಣೆ ಸುಲಭ
- ಯುಐಡಿಎಐ ಆನ್ಲೈನ್ ಸೇವೆ ವಿಸ್ತರಣೆ
Aadhaar: ಆಧಾರ್ ಕಾರ್ಡ್ ಬಳಕೆದಾರರಿಗೆ ಯುಐಡಿಎಐ ಮಹತ್ವದ ಸೌಲಭ್ಯ ಘೋಷಿಸಿದೆ. ಆಧಾರ್ ಅಪ್ಡೇಟ್ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸುವ ಉದ್ದೇಶದಿಂದ ಹೊಸ ಆಧಾರ್ ಆ್ಯಪ್ (Aadhaar App) ಅನ್ನು ಪರಿಚಯಿಸಲು ಮುಂದಾಗಿದೆ. ಈ ತಿಂಗಳ 28ರಂದು ಆ್ಯಪ್ನ ಸಂಪೂರ್ಣ ಆವೃತ್ತಿ ಬಿಡುಗಡೆಗೊಳ್ಳಲಿದೆ.
ಇದುವರೆಗೆ ಆಧಾರ್ ವಿವರಗಳನ್ನು ಬದಲಾಯಿಸಲು ಎನ್ರೋಲ್ಮೆಂಟ್ ಕೇಂದ್ರಗಳಿಗೆ ಹೋಗಬೇಕಾಗುತ್ತಿತ್ತು. ಆದರೆ ಈಗ ಮೊಬೈಲ್ನಲ್ಲೇ ಆನ್ಲೈನ್ (Online) ಮೂಲಕವೇ ಹಲವಾರು ಬದಲಾವಣೆಗಳನ್ನು ಮಾಡಿಕೊಳ್ಳುವ ಅವಕಾಶ ಒದಗಿಸಲಾಗುತ್ತಿದೆ. ಇದರಿಂದ ಸಮಯ ಮತ್ತು ಶ್ರಮ ಎರಡೂ ಉಳಿಯಲಿದೆ.
ಮೊಬೈಲ್ ನಂಬರ್ ಅಪ್ಡೇಟ್ಗೆ ದೊಡ್ಡ ಸುಧಾರಣೆ
ಹೊಸ ಆಧಾರ್ ಆ್ಯಪ್ನ ಪ್ರಮುಖ ವೈಶಿಷ್ಟ್ಯವೆಂದರೆ, ಮೊಬೈಲ್ ನಂಬರ್ ಅನ್ನು ಎಲ್ಲಿಂದಾದರೂ, ಯಾವ ಸಮಯದಲ್ಲಾದರೂ ಬದಲಾಯಿಸಬಹುದಾಗಿದೆ.
ಸರ್ಕಾರದ ಯೋಜನೆಗಳು, ಬ್ಯಾಂಕ್ ಕೆವೈಸಿ ಮತ್ತು ವಿವಿಧ ಸೇವೆಗಳಿಗೆ ಆಧಾರ್ ಲಿಂಕ್ ಆಗಿರುವ ಮೊಬೈಲ್ ನಂಬರ್ ಅತ್ಯಂತ ಅಗತ್ಯವಾಗಿದೆ. ಸಂಖ್ಯೆ ಬದಲಾದಾಗ ಅಪ್ಡೇಟ್ ಮಾಡದಿದ್ದರೆ ಓಟಿಪಿ ಸಮಸ್ಯೆಗಳು ಎದುರಾಗುತ್ತವೆ. ಈ ಹೊಸ ವ್ಯವಸ್ಥೆ ಅಂತಹ ತೊಂದರೆಗಳಿಗೆ ಪರಿಹಾರವಾಗಲಿದೆ.
ಅಪ್ಡೇಟ್ ಮಾಡುವ ವಿಧಾನ
ಆಧಾರ್ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್ನಿಂದ (Google Play Store) ಡೌನ್ಲೋಡ್ ಮಾಡಿಕೊಂಡು, ನಿಮ್ಮ ಮೊಬೈಲ್ ನಂಬರ್ ಮೂಲಕ ಲಾಗಿನ್ ಆಗಬಹುದು. ಬಳಿಕ ಮೊಬೈಲ್ ನಂಬರ್ ಅಪ್ಡೇಟ್ ಆಯ್ಕೆ ಮಾಡಿ, ಹೊಸ ನಂಬರ್ ಹಾಗೂ ಅಗತ್ಯ ಮಾಹಿತಿಯನ್ನು ನಮೂದಿಸಿ ಓಟಿಪಿ ದೃಢೀಕರಣ ಮಾಡಿದರೆ, ಕೆಲವೇ ದಿನಗಳಲ್ಲಿ ಅಪ್ಡೇಟ್ ಪೂರ್ಣಗೊಳ್ಳುತ್ತದೆ. ಅಪ್ಡೇಟ್ ಸ್ಥಿತಿಯನ್ನು ಆ್ಯಪ್ನಲ್ಲೇ ಪರಿಶೀಲಿಸಬಹುದು.







