Aadhaar Update: ಆಧಾರ್ ಚೇಂಜ್ ಈಗ ಫಟಾಫಟ್! ಯಾವುದೇ ಅಪ್‌ಡೇಟ್ ಗೆ 5 ನಿಮಿಷ ಸಾಕು
Aadhaar Card Update: ಆಧಾರ್ ಕಾರ್ಡ್ ವಿವರ ಬದಲಾಯಿಸಲು ಈಗ ಕೇಂದ್ರ ಸರ್ಕಾರ ಹೊಸ ಮೊಬೈಲ್ ಆಪ್ ಪರಿಚಯಿಸಿದೆ. ಮನೆ ವಿಳಾಸ ಮತ್ತು ಮೊಬೈಲ್ ಸಂಖ್ಯೆ ಸೇರಿದಂತೆ ಪ್ರಮುಖ ಮಾಹಿತಿ ಕೆಲವೇ ನಿಮಿಷಗಳಲ್ಲಿ ಆನ್‌ಲೈನ್ ಮೂಲಕ ಅಪ್‌ಡೇಟ್ ಮಾಡುವ ಸೌಲಭ್ಯ ಲಭ್ಯವಾಗಿದೆ.

- ಹೊಸ ಆಧಾರ್ ಆಪ್ ಮೂಲಕ ವಿಳಾಸ ಅಪ್‌ಡೇಟ್ ಸೌಲಭ್ಯ
- ಮೊಬೈಲ್‌ನಲ್ಲೇ ನಿಮಿಷಗಳಲ್ಲಿ ಆಧಾರ್ ವಿವರ ಬದಲಾವಣೆ
- ಸೆಂಟರ್‌ಗೆ ಹೋಗದೇ ಡಿಜಿಟಲ್ ಸೇವೆ, ಸಮಯ ಉಳಿತಾಯ
Aadhaar Card Update: ಇದುವರೆಗೂ ಆಧಾರ್ ಕಾರ್ಡ್‌ನಲ್ಲಿ ವಿಳಾಸ ಅಥವಾ ಮೊಬೈಲ್ ಸಂಖ್ಯೆ ಬದಲಾಯಿಸಲು ಜನರು ಆಧಾರ್ ಕೇಂದ್ರಗಳಿಗೆ ತೆರಳಿ ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲಬೇಕಾಗುತ್ತಿತ್ತು. ಗ್ರಾಮೀಣ ಭಾಗದವರಿಗೆ ಇದು ಇನ್ನೂ ದೊಡ್ಡ ತೊಂದರೆಯಾಗಿತ್ತು. ಈಗ ಆ ಸಮಸ್ಯೆಗೆ ಪರಿಹಾರವಾಗಿ UIDAI ಹೊಸ ಮೊಬೈಲ್ ಆಪ್ ಬಿಡುಗಡೆ ಮಾಡಿದ್ದು, ಮನೆಯಿಂದ ಹೊರಬರದೆ ಸೇವೆ ಪಡೆಯುವ ಅವಕಾಶ ನೀಡಿದೆ.
ಹೇಗೆ ಕೆಲಸ ಮಾಡುತ್ತದೆ ಹೊಸ ಸೇವೆ?
ಈ ಆಪ್ ಗೂಗಲ್ ಪ್ಲೇ ಸ್ಟೋರ್ (Google Play Store App) ಮತ್ತು ಐಒಎಸ್‌ನಲ್ಲಿ ಲಭ್ಯವಿದೆ. ಆಧಾರ್ ಸಂಖ್ಯೆ ಹಾಗೂ ನೋಂದಾಯಿತ ಮೊಬೈಲ್ ಮೂಲಕ ಲಾಗಿನ್ ಆಗಿ, ಎಂ-ಪಿನ್ ಅಥವಾ ಫೇಸ್ ರಿಕಗ್ನಿಷನ್ ಬಳಸಿ ಸೇವೆ ಪ್ರವೇಶಿಸಬಹುದು. ‘ವಿಳಾಸ ಅಪ್‌ಡೇಟ್’ ಆಯ್ಕೆ ಮಾಡಿ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿದರೆ ಸಾಕು. ಬಳಿಕ ಮುಖ ಗುರುತಿನ ಪರಿಶೀಲನೆ ಪೂರ್ಣಗೊಳಿಸಿ ಡಿಜಿಟಲ್ ಪಾವತಿ ಮಾಡಿದರೆ ಅರ್ಜಿ ಪ್ರಕ್ರಿಯೆ ಆರಂಭವಾಗುತ್ತದೆ.
ಮನೆಯಲ್ಲೇ ಡಿಜಿಟಲ್ ಸೇವೆ
UIDAI ಪರಿಶೀಲನೆ ಬಳಿಕ ಹೊಸ ವಿಳಾಸವನ್ನು ಸಿಸ್ಟಂನಲ್ಲಿ ಅಪ್‌ಡೇಟ್ ಮಾಡಲಾಗುತ್ತದೆ. ನಂತರ ಹೊಸ ಆಧಾರ್ ಕಾರ್ಡ್ ಪೋಸ್ಟ್ ಮೂಲಕ ಮನೆಗೆ ತಲುಪಲಿದೆ. ವಿಶೇಷವಾಗಿ ಹಿರಿಯರು, ಗರ್ಭಿಣಿಯರು ಹಾಗೂ ಅಂಗವಿಕಲರಿಗೆ ಈ ಸೌಲಭ್ಯ ಬಹಳ ಉಪಯುಕ್ತವಾಗಿದೆ.
ಸಮಯ ಮತ್ತು ಹಣ ಉಳಿವು
ನಗರಗಳಿಗೆ ಹೋಗುವ ಪ್ರಯಾಣ, ಸಾಲಿನಲ್ಲಿ ನಿಲ್ಲುವ ಸಮಯ, ಇವೆಲ್ಲಕ್ಕೂ ಈಗ ಮುಕ್ತಿ ಸಿಕ್ಕಂತಾಗಿದೆ. ಕೇವಲ 75 ರೂಪಾಯಿ ಶುಲ್ಕ ಪಾವತಿಸಿ ಕೆಲವು ನಿಮಿಷಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಡಿಜಿಟಲ್ ಸೇವೆಗಳ ಮೂಲಕ ಜನಸಾಮಾನ್ಯರಿಗೆ ಇನ್ನಷ್ಟು ಸುಲಭತೆ ದೊರೆಯುತ್ತಿದೆ.



