ಗೃಹಲಕ್ಷ್ಮಿಯರಿಗೆ ಸರ್ಕಾರದ ಮತ್ತೊಂದು ಯೋಜನೆ; ಸಿಗಲಿದೆ ರೂ. 2,500 ಪ್ರತಿ ತಿಂಗಳು
ಗೃಹಲಕ್ಷ್ಮಿ ಯೋಜನೆಯ (Gruha lakshmi scheme) ಅಡಿಯಲ್ಲಿ 2,000 ಸಾವಿರ ರೂಪಾಯಿಗಳನ್ನು ಮಹಿಳೆಯರ ಖಾತೆಗೆ (Bank Account) ಪ್ರತಿ ತಿಂಗಳ ಖರ್ಚಿಗಾಗಿ ವಿತರಣೆ ಮಾಡುತ್ತಿದೆ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (State Congress Government) ಅಧಿಕಾರದ ಚುಕ್ಕಾಣಿ ಹಿಡಿದಿದೆ ಎಂದರೆ ಅದಕ್ಕೆ ವಿಧಾನಸಭಾ ಚುನಾವಣೆ (vidhansabha election 2023) ಗೂ ಮೊದಲು ಪ್ರಚಾರದ ಸಮಯದಲ್ಲಿ ಘೋಷಿಸಿದ ಪ್ರಣಾಳಿಕೆಗಳೇ ಕಾರಣ ಎನ್ನಬಹುದು.
ಯಾಕಂದ್ರೆ ರಾಜ್ಯ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ 5 ಪ್ರಮುಖ ಗ್ಯಾರಂಟಿ ಯೋಜನೆ (guarantee schemes) ಗಳನ್ನು ಘೋಷಿಸಿತ್ತು. ಈ ಯೋಜನೆಗಳ ಪರಿಣಾಮವಾಗಿ ಜನರು ಕಾಂಗ್ರೆಸ್ ಪಕ್ಷವನ್ನು ಆರಿಸಿದ್ದು. ಇದೀಗ ಈ ಗ್ಯಾರಂಟಿ ಯೋಜನೆಗಳನ್ನು ಕೂಡ ಸರ್ಕಾರ ಜಾರಿಗೆ ತಂದಿದೆ.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ನೋಡಿದರೆ ಇದರಲ್ಲಿ ಹೆಚ್ಚು ಬೆನಿಫಿಟ್ ಸಿಗುತ್ತಿರುವುದು ರಾಜ್ಯದ ಮಹಿಳೆಯರಿಗೆ (benefits for women) ಎನ್ನಬಹುದು. ಈ ಯೋಜನೆ ಇರಬಹುದು ಅಥವಾ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಇರಬಹುದು ಎರಡು ಯೋಜನೆಗಳಲ್ಲಿ ಪ್ರಮುಖವಾಗಿ ಮಹಿಳೆಯರಿಗೆ ಸರ್ಕಾರ ನೆರವು ನೀಡುತ್ತಿದೆ.
ರಾಜ್ಯ ಸರ್ಕಾರದ ಮಾದರಿಯಲ್ಲಿಯೇ ತೆಲಂಗಾಣದಲ್ಲಿಯೂ ಮಹಾಲಕ್ಷ್ಮಿ ಯೋಜನೆ ಜಾರಿ!
ಇತ್ತ, ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ 2,000 ಸಾವಿರ ರೂಪಾಯಿಗಳನ್ನು ಮಹಿಳೆಯರ ಖಾತೆಗೆ (Bank Account) ಪ್ರತಿ ತಿಂಗಳ ಖರ್ಚಿಗಾಗಿ ವಿತರಣೆ ಮಾಡುತ್ತಿದ್ದರೆ, ಅತ್ತ, ಇದೇ ಮೊದಲ ಬಾರಿಗೆ ತೆಲಂಗಾಣ (Telangana) ದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಮಹಿಳೆಯರಿಗೆ ಮಹಾಲಕ್ಷ್ಮಿ ಯೋಜನೆ (Mahalaxmi Yojana) ಯ ಅಡಿಯಲ್ಲಿ ರೂ.2,500ಗಳನ್ನು ಪ್ರತಿ ತಿಂಗಳು ನೀಡುತ್ತಿದೆ.
ತೆಲಂಗಾಣ ರಾಜ್ಯದಲ್ಲಿ ಮೂರು ಕೋಟಿ ಜನಸಂಖ್ಯೆ ಇದ್ದರೆ ಅದರಲ್ಲಿ ಅರ್ಧದಷ್ಟು ಜನರು ಮಹಿಳೆಯರೇ ಆಗಿದ್ದಾರೆ. ಹಾಗಾಗಿ ಮಹಿಳೆಯರ ಸಬಲೀಕರಣಕ್ಕಾಗಿ ತೆಲಂಗಾಣ ಸರ್ಕಾರ ಹೆಚ್ಚು ಯೋಜನೆಗಳನ್ನು ಪರಿಚಯಿಸಿದೆ.
ಮಹಾಲಕ್ಷ್ಮಿ ಯೋಜನೆಯ ಅಡಿಯಲ್ಲಿ ಉಚಿತ ಬಸ್ ಪ್ರಯಾಣ ಹಾಗೂ ಮಹಿಳೆಯರಿಗೆ 2500 ಗಳನ್ನು ಪ್ರತಿ ತಿಂಗಳು ನೀಡಲಾಗುವುದು. ಇದಕ್ಕಾಗಿ ರಾಜ್ಯಾದ್ಯಂತ ಎಂಟರಿಂದ 10 ಲಕ್ಷ ಅರ್ಜಿಗಳು ಸಂದಾಯವಾಗಿದ್ದು, ಜನವರಿ 6ರಿಂದ ಮೊದಲ ಕಂತಿನ ಹಣ ಬಿಡುಗಡೆ (Money Deposit) ಮಾಡಲು ಸರ್ಕಾರ ನಿರ್ಧರಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇನ್ನು ಎರಡನೆಯದಾಗಿ ಮಹಿಳೆಯರಿಗೆ 500 ರೂಪಾಯಿಗಳಿಗೆ ಸಬ್ಸಿಡಿ ದರದಲ್ಲಿ ಸಿಲಿಂಡರ್ (subsidy gas cylinder) ನೀಡಲು ಕೂಡ ತೆಲಂಗಾಣ ಸರ್ಕಾರ ಯೋಜನೆ ರೂಪಿಸುತ್ತಿದೆ.
ಅದೇ ರೀತಿ ಇಂದಿರಮ್ಮ ಇಳ್ಳು (ಇಂದಿರಮ್ಮ ಮನೆ) ಯೋಜನೆಯ ಅಡಿಯಲ್ಲಿ ಫಲಾನುಭವಿಗಳಿಗೆ ವಸತಿ (housing scheme) ಯನ್ನು ಕೂಡ ಕಲ್ಪಿಸಿಕೊಡಲಿದೆ ತೆಲಂಗಾಣ ಸರ್ಕಾರ.
ಇನ್ನು ಕೆಲವೇ ದಿನಗಳಲ್ಲಿ ಚುನಾವಣೆಗೂ ಮುನ್ನ ಘೋಷಿಸಲಾಗಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ತೆಲಂಗಾಣ ಸರ್ಕಾರವೂ ಕೂಡ ರಾಜ್ಯ ನಿವಾಸಿಗಳಿಗೆ ಒದಗಿಸುವ ಸಾಧ್ಯತೆ ಇದೆ. ತೆಲಂಗಾಣದ ನೂತನ ಮುಖ್ಯಮಂತ್ರಿ ರೇವಂತ್ ರೆಡ್ಡಿ (CM revanth Reddy), ಚುನಾವಣೆಗೂ ಮೊದಲು ಘೋಷಿಸಿದ್ದ ಎಲ್ಲಾ ಯೋಜನೆಗಳನ್ನು ಜನವರಿ ಅಂತ್ಯದ ಒಳಗೆ ರಾಜ್ಯದ ಜನತೆಗೆ ತಲುಪಿಸುವ ವಾಗ್ದಾನ ಮಾಡಿದ್ದಾರೆ.
Another government scheme for women, Will get Rs. 2,500 per month