ಮನೆ ಇಲ್ಲದ ಬಡವರಿಗೆ ಸ್ವಂತ ಸೂರು ಮಾಡಿಕೊಡುವ ಈ ಯೋಜನೆಗೆ ಅರ್ಜಿ ಸಲ್ಲಿಸಿ! ಇಲ್ಲಿದೆ ಮಾಹಿತಿ

Story Highlights

ಕೆಲವರು ಹೋಮ್ ಲೋನ್ (Home Loan) ಪಡೆದು ಮನೆ ಕಟ್ಟಿಕೊಂಡರೆ ಕೆಲವರಿಗೆ ಲೋನ್ (Loan) ಸಿಗುವುದಿಲ್ಲ. ಅದರಿಂದ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಆವಾಸ್ ಯೋಜನೆ ಜಾರಿಗೆ ತಂದಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆಯ (Pradhan Mantri Awas Yojana) ಅಡಿಯಲ್ಲಿ ಸಾಕಷ್ಟು ಬಡವರು ಹಾಗೂ ಮಧ್ಯಮ ಆದಾಯ ಹೊಂದಿರುವವರು ಸ್ವಂತ ಮನೆ (Own House) ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಾಗಿದೆ.

ದೇಶದಲ್ಲಿ ಇರುವ ಪ್ರತಿಯೊಬ್ಬರಿಗೂ ತಮ್ಮದೇ ಆಗಿರುವ ಸ್ವಂತ ಮನೆ ನಿರ್ಮಾಣ (own house) ಮಾಡಿಕೊಳ್ಳಬೇಕು ಎನ್ನುವ ಕನಸು ಇರುತ್ತದೆ, ಆದರೆ ಮನೆ ನಿರ್ಮಾಣ ಮಾಡಿಕೊಳ್ಳುವುದು ಅಂದ್ರೆ ಅಷ್ಟು ಸುಲಭದ ಮಾತಲ್ಲ.

ಅದಕ್ಕೆ ಅಷ್ಟೇ ಹಣ ಕೂಡ ಬೇಕು ಈ ಕಾರಣಕ್ಕಾಗಿ ಮನೆ ಕನಸು ಕನಸಾಗಿಯೇ ಉಳಿದುಬಿಡುತ್ತದೆ, ಕೆಲವರು ಹೋಮ್ ಲೋನ್ (Home Loan) ಪಡೆದು ಮನೆ ಕಟ್ಟಿಕೊಂಡರೆ ಕೆಲವರಿಗೆ ಲೋನ್ (Loan) ಸಿಗುವುದಿಲ್ಲ. ಅದರಿಂದ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಆವಾಸ್ ಯೋಜನೆ ಜಾರಿಗೆ ತಂದಿದ್ದು ಈ ಮೂಲಕ ಬಡವರು ಹಾಗೂ ಮಧ್ಯಮ ಆದಾಯ ಹೊಂದಿರುವವರು ಸ್ವಂತ ಮನೆ ಕಟ್ಟಿಕೊಳ್ಳಬಹುದು.

ಪ್ರಧಾನ ಮಂತ್ರಿ ಆವಾಸ್ ಯೋಜನೆ ಅರ್ಜಿ ಸಲ್ಲಿಕೆ ವಿಸ್ತಾರ!

ಡಿಸೆಂಬರ್ 31 2023ರ ವರೆಗೆ ಮಾತ್ರ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಈಗ ಮುಂದಿನ ವರ್ಷದವರೆಗೂ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮುಂದುವರೆದಿದ್ದು, PMAY ಅಧಿಕೃತ ವೆಬ್ಸೈಟ್ಗೆ ಹೋಗಿ ಅರ್ಜಿ ಸಲ್ಲಿಸಿ ಅಲ್ಲಿ ಕೇಳಿರುವ ಮಾಹಿತಿಗಳನ್ನು ಭರ್ತಿ ಮಾಡಿ ನಂತರ ನೀವು ಅರ್ಹರಾಗಿದ್ದರೆ ನಿಮಗೆ ಈ ಯೋಜನೆಯ ಪ್ರಯೋಜನ ಸಿಗಲಿದೆ, ಇದನ್ನ ಸರ್ಕಾರವೇ ಖಚಿತಪಡಿಸಲಿದೆ.

ಯಾರಿಗೆ ಸಿಗಲಿದೆ ಯೋಜನೆ!

PM Aawas Yojanaಪ್ರಧಾನಮಂತ್ರಿಯ ಆವಾಸ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು, ಮೊದಲನೇದಾಗಿ ನೀವು ಭಾರತೀಯ ನಾಗರಿಕರಾಗಿರಬೇಕು. 2015ರಲ್ಲಿ ಆರಂಭವಾದ ಪ್ರಧಾನ ಮಂತ್ರಿ ಆವಾಸ್ ಯೋಜನೆ ಲಾಭ ಪಡೆದುಕೊಳ್ಳಲು ಕುಟುಂಬದ ಆದಾಯ ಮೂರರಿಂದ ಆರು ಲಕ್ಷ ರೂಪಾಯಿ ಮೀರಿರಬಾರದು.

ಕಡಿಮೆ ಆದಾಯ ಹೊಂದಿರುವವರು ಮಧ್ಯಮ ವರ್ಗದವರು ಬಡತನ ರೇಖೆಗಿಂತ ಕೆಳಗಿನವರು ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಾರೆ. 4331 ಪಟ್ಟಣ ಹಾಗೂ ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರ ಫಲಾನುಭವಿಗಳಿಗೆ ಸ್ವಂತ ಸೂರು ನಿರ್ಮಾಣ ಮಾಡಿಕೊಡುತ್ತಿದೆ.

ಅರ್ಜಿದಾರರ ಆದಾಯ ಎಷ್ಟಿರಬೇಕು?

ಆರ್ಥಿಕ ದುರ್ಬಲ ವರ್ಗದವರು (EWS) – ವಾರ್ಷಿಕ ಆದಾಯ 3 ಲಕ್ಷಕ್ಕಿಂತ ಕಡಿಮೆ

ಕಡಿಮೆ ಆದಾಯ ಗುಂಪು (LIG) – ವರ್ಷದ ಆದಾಯ 3 ರಿಂದ 6 ಲಕ್ಷದವರೆಗೆ

ಮಧ್ಯಮ ಆದಾಯ ಗುಂಪಿಗೆ ಸೇರಿದವರ (MIG-1) ಆದಾಯ – 6 ರಿಂದ 12 ಲಕ್ಷ

ಮಧ್ಯಮ ಆದಾಯ ಗುಂಪು – (MIG-2) 12 ರಿಂದ 18 ಲಕ್ಷ ಆದಾಯ. ಈ ಆದಾಯವನ್ನು ಮೀರಿದರೆ ಅಂತವರಿಗೆ ಯೋಜನೆಯ ಪ್ರಯೋಜನ ಸಿಗುವುದಿಲ್ಲ.

ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಯಾರು ಅರ್ಹರಲ್ಲ?

ಪ್ರಧಾನಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಲು ಬಯಸಿದರೆ ಅಂತವರು ಈಗಾಗಲೇ ಸ್ವಂತ ಮನೆ ಹೊಂದಿರಬಾರದು. ಯಾವುದೇ ಸರ್ಕಾರಿ ನೌಕರಿಯಲ್ಲಿ ಇರಬಾರದು. ಮೇಲೆ ತಿಳಿಸಿದ ಆದಾಯಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರಬಾರದು.

Apply for Get own House on this scheme Pradhan Mantri Awas Yojana

Related Stories