PM Kisan: ಇನ್ಮುಂದೆ ಒಂದೇ ಕ್ಲಿಕ್‌ನಲ್ಲಿ ಪಿಎಂ ಕಿಸಾನ್ ಯೋಜನೆಗೆ ಅರ್ಜಿ ಸಾಧ್ಯ, ರೈತರಿಗೆ ಬಿಗ್ ಅಪ್ಡೇಟ್
PM Kisan: ಪಿಎಂ ಕಿಸಾನ್ ಯೋಜನೆಯ 22ನೇ ಕಂತಿನ ಹಣ ಶೀಘ್ರದಲ್ಲೇ ಬಿಡುಗಡೆ ಆಗಲಿದ್ದು, ಅರ್ಹ ರೈತರು ಮನೆಯಲ್ಲೇ ಕುಳಿತು ಆನ್‌ಲೈನ್ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದಾಗಿದೆ.

- ಪಿಎಂ ಕಿಸಾನ್ ಯೋಜನೆ: 22ನೇ ಕಂತಿನ ಹಣ ಬಿಡುಗಡೆ ಸಿದ್ಧತೆ
- ರೈತರಿಗೆ ₹6,000 ಸಹಾಯ: ವರ್ಷಕ್ಕೆ ಮೂರು ಕಂತುಗಳಲ್ಲಿ ಜಮೆ
- ಆನ್‌ಲೈನ್ ಅರ್ಜಿ ಪ್ರಕ್ರಿಯೆ: ಒಂದೇ ಕ್ಲಿಕ್‌ನಲ್ಲಿ ನೋಂದಣಿ
PM Kisan: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 22ನೇ ಕಂತಿನ ಹಣಕ್ಕಾಗಿ ದೇಶಾದ್ಯಂತ ಕೋಟಿ ಕೋಟಿ ರೈತರು ಕಾದು ನೋಡುತ್ತಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ 21ನೇ ಕಂತಿನ ಹಣವನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದು, ಮುಂದಿನ ಕಂತಿನ ಹಣವನ್ನು ಫೆಬ್ರವರಿಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಪಿಎಂ ಕಿಸಾನ್ ಯೋಜನೆಯ ಲಾಭವೇನು?
ಕೇಂದ್ರ ಸರ್ಕಾರ ರೈತರ ಆರ್ಥಿಕ ಬೆಂಬಲಕ್ಕಾಗಿ ಪಿಎಂ ಕಿಸಾನ್ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯಡಿ ಅರ್ಹ ರೈತರಿಗೆ ವರ್ಷಕ್ಕೆ ₹6,000 ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ನಾಲ್ಕು ತಿಂಗಳಿಗೆ ಒಮ್ಮೆ ₹2,000 ದಂತೆ ಮೂರು ಕಂತುಗಳಲ್ಲಿ ಹಣ ನೀಡಲಾಗುತ್ತದೆ.
10 ಕೋಟಿ ರೈತರಿಗೆ ಈಗಾಗಲೇ ಸೌಲಭ್ಯ
ಈಗಾಗಲೇ ದೇಶಾದ್ಯಂತ 10 ಕೋಟಿ ರೈತರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಹೊಸದಾಗಿ ಅರ್ಹತೆ ಹೊಂದಿರುವ ರೈತರು ಯಾವಾಗ ಬೇಕಾದರೂ ಅರ್ಜಿ ಸಲ್ಲಿಸಬಹುದು. ಇದಕ್ಕೆ ಯಾವುದೇ ಅಂತಿಮ ದಿನಾಂಕವಿಲ್ಲ. ಆನ್‌ಲೈನ್ ಹಾಗೂ ಆಫ್‌ಲೈನ್ ಎರಡೂ ವಿಧಾನಗಳಲ್ಲಿ ನೋಂದಣಿ ಸಾಧ್ಯ.
ಆನ್‌ಲೈನ್ ಮೂಲಕ ಅರ್ಜಿ ಹೇಗೆ ಸಲ್ಲಿಸಬೇಕು?
- pmkisan.gov.in ಅಧಿಕೃತ ವೆಬ್‌ಸೈಟ್ ತೆರೆಯಿರಿ
- New Registration ಆಯ್ಕೆಯನ್ನು ಕ್ಲಿಕ್ ಮಾಡಿ
- 12 ಅಂಕಿಯ ಆಧಾರ್ ಸಂಖ್ಯೆ ನಮೂದಿಸಿ
- ನೋಂದಾಯಿತ ಮೊಬೈಲ್ ಸಂಖ್ಯೆ ಹಾಕಿ
- ರಾಜ್ಯ ಆಯ್ಕೆ ಮಾಡಿ ಕ್ಯಾಪ್ಚಾ ನಮೂದಿಸಿ
- OTP ಪಡೆದು ದೃಢೀಕರಿಸಿ
- ವೈಯಕ್ತಿಕ ಹಾಗೂ ಭೂಮಿ ವಿವರಗಳನ್ನು ಭರ್ತಿ ಮಾಡಿ
- ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ
- ಎಲ್ಲಾ ವಿವರ ಪರಿಶೀಲಿಸಿ ಫಾರಂ ಸಲ್ಲಿಸಿ
ಅರ್ಜಿಯ ನಂತರ ರಿಜಿಸ್ಟ್ರೇಶನ್ ನಂಬರ್ ಮೂಲಕ ಸ್ಥಿತಿಯನ್ನು ಪರಿಶೀಲಿಸಬಹುದು.
ಈ ತಪ್ಪುಗಳು ಮಾಡಿದರೆ ಹಣ ಸಿಗಲ್ಲ
- e-KYC ಪೂರ್ಣಗೊಳಿಸದೇ ಬಿಡಬೇಡಿ
- ಆಧಾರ್–ಬ್ಯಾಂಕ್ ಖಾತೆ ಲಿಂಕ್ ಕಡ್ಡಾಯ
- ತಪ್ಪು ಮಾಹಿತಿ ನೀಡಿದರೆ ಅರ್ಜಿ ತಿರಸ್ಕಾರ







