ತಿಂಗಳಿಗೆ 5 ಸಾವಿರ ಪಿಂಚಣಿ, ಮೋದಿ ಸರ್ಕಾರದಿಂದ ಬಂಪರ್ ಸ್ಕೀಮ್

ಅಟಲ್ ಪಿಂಚಣಿ ಯೋಜನೆ (Atal Pension Yojana) ಮಧ್ಯಮ ವರ್ಗದವರಿಗೆ ನಂಬಿಕೆ ಮೂಡಿಸಿದ ಪಿಂಚಣಿ ಯೋಜನೆಯಾಗಿದೆ. ಕಡಿಮೆ ಮೊತ್ತದ ಹೂಡಿಕೆಯಿಂದ ಪ್ರತಿ ತಿಂಗಳು ಭದ್ರತೆ ನೀಡುವ ಸರ್ಕಾರದ ಸಹಾಯಧನ ಯೋಜನೆ.

  • ತಿಂಗಳಿಗೆ ₹1,000 ರಿಂದ ₹5,000 ಪಿಂಚಣಿ
  • 18-40 ವಯಸ್ಸಿನವರಿಗಾಗಿ ಅರ್ಹತಾ ನಿಯಮ
  • ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ನಲ್ಲಿ ಖಾತೆ ಇದ್ದರೆ ಸಾಕು

ಅಟಲ್ ಪಿಂಚಣಿ ಯೋಜನೆ (Atal Pension Yojana – APY) ಸಧ್ಯದಲ್ಲಿ ಮಧ್ಯಮ ವರ್ಗದ (middle class) ಜನರಲ್ಲಿ ಹೆಚ್ಚು ಪ್ರಭಾವ ಬೀರುತ್ತಿರುವ ಕೇಂದ್ರ ಸರ್ಕಾರದ (central government) ಪಿಂಚಣಿ ಯೋಜನೆಯಾಗಿದೆ. ಅತಿ ಕಡಿಮೆ ಮೊತ್ತದ ಪ್ರೀಮಿಯಮ್ ಮೂಲಕ ಭದ್ರ ಭವಿಷ್ಯದ Monthly Pension ಪಡೆಯಬಹುದು.

ಮೇ 9, 2015ರಂದು ಆರಂಭವಾದ ಈ ಯೋಜನೆಯಲ್ಲಿ ಏಪ್ರಿಲ್ 2025ರವರೆಗೆ 7.65 ಲಕ್ಷ ಮಂದಿ ಚಂದಾದಾರರಾಗಿದ್ದಾರೆ. ಈ ಯೋಜನೆಯು PFRDA (Pension Fund Regulatory and Development Authority) ಮೂಲಕ ನಿರ್ವಹಿಸಲಾಗುತ್ತದೆ ಮತ್ತು ಇದು ನ್ಯಾಷನಲ್ ಪಿಂಚಣಿ ಸ್ಕೀಮ್‌ನ (National Pension Scheme – NPS) ಅಂಗವಾಗಿ ಕಾರ್ಯನಿರ್ವಹಿಸುತ್ತದೆ.

ಈ ಯೋಜನೆಯ ಮುಖ್ಯ ಉದ್ದೇಶವೇನೆಂದರೆ, 60ನೇ ವಯಸ್ಸಿನ ನಂತರ ವ್ಯಕ್ತಿಗೆ ತಿಂಗಳಿಗೆ ₹1,000 ರಿಂದ ₹5,000 ರವರೆಗೆ ಪಿಂಚಣಿ ನೀಡುವುದು. ಇದರ ಮೊತ್ತ ನಿಮ್ಮ age of entry ಮತ್ತು monthly contribution ಮೇಲೆ ಅವಲಂಬಿತವಾಗಿರುತ್ತದೆ.

ಉದಾಹರಣೆಗೆ, ಯಾರಾದರೂ 18ನೇ ವಯಸ್ಸಿನಲ್ಲಿ ಯೋಜನೆಗೆ ಸೇರಿಕೊಂಡರೆ, ತಿಂಗಳಿಗೆ ₹42 ಮಾತ್ರ ಪಾವತಿಸಿದರೆ ಸಾಕು – 60ನೇ ವಯಸ್ಸಿನ ನಂತರ ಅವರಿಗೆ ₹1,000 ಪಿಂಚಣಿ ಸಿಗುತ್ತದೆ. ₹2,000 ಪಿಂಚಣಿಗೆ ₹84, ₹5,000 ಪಿಂಚಣಿಗೆ ತಿಂಗಳಿಗೆ ₹210 ಪಾವತಿಸಬೇಕು.

ಆದರೆ ನೀವು 40ನೇ ವಯಸ್ಸಿನಲ್ಲಿ ಯೋಜನೆಗೆ ಸೇರಿಕೊಂಡರೆ, ₹1,000 ಪಿಂಚಣಿಗೆ ₹291, ₹5,000 ಪಿಂಚಣಿಗೆ ₹1,454 ಪ್ರೀಮಿಯಮ್ ಪಾವತಿಸಬೇಕಾಗುತ್ತದೆ.

ಇನ್ನೊಂದು ವಿಶೇಷತೆ ಎಂದರೆ ಈ ಯೋಜನೆಯಲ್ಲಿ ಮಹಿಳಾ ಚಂದಾದಾರರ ಪ್ರಮಾಣ 48% ಕ್ಕೂ ಹೆಚ್ಚು. ಇದು ಮಹಿಳಾ ಹಣಕಾಸು ಸ್ವಾವಲಂಬನೆಗೆ ಪ್ರೋತ್ಸಾಹ ನೀಡುತ್ತಿದೆ.

Pension

ಈ ಯೋಜನೆಗೆ ಸೇರಬೇಕಾದರೆ ಯಾವುದೇ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ನಲ್ಲಿ ಖಾತೆ ಇದ್ದರೆ ಸಾಕು. ನೀವು Auto-Debit ಆಯ್ಕೆ ಮಾಡಿದರೆ ಪ್ರೀಮಿಯಂ ಹಣ ಸ್ವಯಂಚಾಲಿತವಾಗಿ ಕಡಿತವಾಗುತ್ತದೆ. ತಿಂಗಳಿಗೆ, ತ್ರೈಮಾಸಿಕ ಅಥವಾ ಅರ್ಧವರ್ಷಿಕವಾಗಿ ಪಾವತಿ ಮಾಡಬಹುದು.

ಅಟಲ್ ಪಿಂಚಣಿ ಯೋಜನೆಯಿಂದ 80CCD ಅಡಿಯಲ್ಲಿ Income Tax exemption ಕೂಡ ದೊರೆಯುತ್ತದೆ. ಆದರೆ ನೀವು ಈಗಾಗಲೇ Income Tax ಪಾವತಿಸುತ್ತಿದ್ದರೆ ಈ ಯೋಜನೆಯ ಸಬ್ಸಿಡಿ ಲಾಭ ಸಿಗದು.

ನೋಂದಣಿಗೆ Aadhaar ಸಂಖ್ಯೆಯೊಂದಿಗೆ ನೀವು Bank savings account ಮತ್ತು valid mobile number ಹೊಂದಿರಬೇಕು. ಕನಿಷ್ಠ 20 ವರ್ಷಗಳ ಕಾಲ ಯೋಜನೆಯಲ್ಲಿ ಹಣ ಪಾವತಿಸಬೇಕು. Nominee ಆಗಿ ನಿಮ್ಮ ಸಂಗಾತಿ ಇದ್ದರೆ ಪಿಂಚಣಿ ಮುಂದುವರಿಯುತ್ತದೆ.

Atal Pension Yojana, A Safe Retirement Plan

English Summary▼

TRENDING ARTICLES1 / 4
Show More

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories