ಬಿಎಂಡಬ್ಲ್ಯೂ ಕಾರು ಬೈಕ್ ಗೆ ಡಿಕ್ಕಿ, ಕೇಂದ್ರ ಸರ್ಕಾರಿ ಅಧಿಕಾರಿ ಸಾವು

ಕೇಂದ್ರ ಆರ್ಥಿಕ ವ್ಯವಹಾರಗಳ ಸಚಿವಾಲಯದ ಉಪ ಕಾರ್ಯದರ್ಶಿ ನವಜೋತ್ ಸಿಂಗ್ (52) ಮತ್ತು ಅವರ ಪತ್ನಿ ಸಂದೀಪ್ ಭಾನುವಾರ ಮಧ್ಯಾಹ್ನ ಬೈಕ್‌ನಲ್ಲಿ ಹೋಗುತ್ತಿದ್ದಾಗ ಬಿಎಂಡಬ್ಲ್ಯು ಕಾರು ಡಿಕ್ಕಿ ಹೊಡೆದ ಪರಿಣಾಮ ಸಿಂಗ್ ಸಾವನ್ನಪ್ಪಿದ್ದರೆ

ನವದೆಹಲಿ: ಕೇಂದ್ರ ಆರ್ಥಿಕ ವ್ಯವಹಾರಗಳ ಸಚಿವಾಲಯದ ಉಪ ಕಾರ್ಯದರ್ಶಿ ನವಜೋತ್ ಸಿಂಗ್ (52) ಮತ್ತು ಅವರ ಪತ್ನಿ ಸಂದೀಪ್ ಭಾನುವಾರ ಮಧ್ಯಾಹ್ನ ಬೈಕ್‌ನಲ್ಲಿ ಹೋಗುತ್ತಿದ್ದಾಗ ಬಿಎಂಡಬ್ಲ್ಯೂ ಕಾರು (BMW car) ಡಿಕ್ಕಿ ಹೊಡೆದಿದೆ. ಸಿಂಗ್ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಅವರ ಪತ್ನಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾರು ಚಲಾಯಿಸುತ್ತಿದ್ದ ಗಗನ್‌ಪ್ರೀತ್ ಎಂಬ ವ್ಯಕ್ತಿಗೆ, ಮೃತಪಟ್ಟ ವ್ಯಕ್ತಿಯ ಪತ್ನಿ ಏಮ್ಸ್ ಅಥವಾ ಸೇನಾ ನೆಲೆ ಆಸ್ಪತ್ರೆಗೆ ಕರೆದೊಯ್ಯುವಂತೆ ಪದೇ ಪದೇ ವಿನಂತಿಸಿಕೊಂಡಿದ್ದಾರೆ.

ಆದರೆ ಸಿಂಗ್ ಮತ್ತು ಅವರ ಪತ್ನಿಯನ್ನು 19 ಕಿ.ಮೀ ದೂರದ ಸಣ್ಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂಬ ದೂರು ಪೊಲೀಸರಿಗೆ ಬಂದಿದೆ. ಇದರ ಪರಿಣಾಮವಾಗಿ, ಪೊಲೀಸರು ಬಿಎಂಡಬ್ಲ್ಯೂ ಕಾರು ಚಲಾಯಿಸುತ್ತಿದ್ದ ಗಗನ್‌ಪ್ರೀತ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ

BMW car hits bike, central government official dies

TRENDING ARTICLES1 / 4
Show More

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories