Boat Accident: ಸಮುದ್ರದಲ್ಲಿ ಬೋಟ್ಗೆ ಬೆಂಕಿ.. ಇಬ್ಬರು ಮೀನುಗಾರರಿಗೆ ಗಂಭೀರ ಗಾಯ
Boat Accident: ಕಾಕಿನಾಡ ಸಮೀಪದ ತೊಂಡಂಗಿ ಕರಾವಳಿಯಲ್ಲಿ ಮೀನುಗಾರಿಕಾ ಬೋಟ್ನಲ್ಲಿ ಅಡುಗೆ ವೇಳೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಜೀವ ಉಳಿಸಿಕೊಳ್ಳಲು ಸಮುದ್ರಕ್ಕೆ ಹಾರಿದ ಮೀನುಗಾರರಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

Boat Accident: ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ತೊಂಡಂಗಿ ಕರಾವಳಿ ಸಮೀಪ ಮೀನುಗಾರಿಕಾ ಬೋಟ್ನಲ್ಲಿ ಸಂಭವಿಸಿದ ಬೆಂಕಿ ಅವಘಡ ಇಬ್ಬರು ಮೀನುಗಾರರಿಗೆ ಗಂಭೀರ ಗಾಯಗಳಾಗಲು ಕಾರಣವಾಗಿದೆ. ಈ ಘಟನೆ ಕರಾವಳಿ ಪ್ರದೇಶದ ಮೀನುಗಾರರಲ್ಲಿ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಎಲ್ಲಯ್ಯಪೇಟ ಗ್ರಾಮದ ಎರುಪಳ್ಳಿ ಕೋಟೇಶ್ ಮತ್ತು ಎರುಪಳ್ಳಿ ಪ್ರಸಾದ್ ಸೇರಿದಂತೆ ಹಲವು ಮೀನುಗಾರರು ಮೀನುಗಾರಿಕೆಗೆ ಸಮುದ್ರದೊಳಗೆ ಸುಮಾರು 15 ಕಿಲೋಮೀಟರ್ ದೂರ ತೆರಳಿದ್ದರು. ಮೀನುಗಾರಿಕೆ ವೇಳೆ ಬೋಟ್ನಲ್ಲೇ ಅಡುಗೆ ಮಾಡಲು ಗ್ಯಾಸ್ ಸ್ಟವ್ ಹಚ್ಚಿದಾಗ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ.
ಕೆಲವೇ ಕ್ಷಣಗಳಲ್ಲಿ ಬೆಂಕಿ ಇಡೀ ಬೋಟ್ಗೆ ವ್ಯಾಪಿಸಿದ್ದರಿಂದ ಪರಿಸ್ಥಿತಿ ನಿಯಂತ್ರಣ ತಪ್ಪಿತು. ಪ್ರಾಣ ರಕ್ಷಿಸಿಕೊಳ್ಳಲು ಬೋಟ್ನಲ್ಲಿದ್ದ ಎಲ್ಲರೂ ತಕ್ಷಣ ಸಮುದ್ರಕ್ಕೆ ಹಾರಿದರು. ಆದರೆ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ ಕೋಟೇಶ್ ಮತ್ತು ಪ್ರಸಾದ್ ಅವರ ದೇಹಕ್ಕೆ ಗಂಭೀರ ಸುಟ್ಟ ಗಾಯಗಳಾಗಿವೆ.
ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ಕರಾವಳಿಗೆ ಕರೆತಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯದ ಮೇಲೆ ವೈದ್ಯರು ನಿಗಾ ವಹಿಸಿದ್ದು, ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಆಂಧ್ರಪ್ರದೇಶದ ಕರಾವಳಿ ಭಾಗದಲ್ಲಿ ಮೀನುಗಾರಿಕಾ ಬೋಟ್ಗಳಿಗೆ ಸಂಬಂಧಿಸಿದ ಅಪಘಾತಗಳು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಸುರಕ್ಷತಾ ಕ್ರಮಗಳನ್ನು ಮತ್ತಷ್ಟು ಬಲಪಡಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ.



