ತಾಯಿ ಕಣ್ಣಿಗೆ ಖಾರದ ಪುಡಿ ಎರಚಿ ಬಾಲಕನ ಅಪಹರಣ! ಸುಳಿವು ಕೊಟ್ರೆ ₹30,000 ಬಹುಮಾನ
ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಬೆಳಗಿನ ಜಾವ ಶಾಲಾ ಬಸ್‌ಗಾಗಿ ತಾಯಿಯೊಂದಿಗೆ ಕಾಯುತ್ತಿದ್ದ 6 ವರ್ಷದ ಬಾಲಕನನ್ನು ಅಪಹರಣ ಮಾಡಿರುವ ಘಟನೆ ನಡೆದಿದೆ.
- ತಾಯಿ ಕಣ್ಣಿಗೆ ಖಾರದ ಪುಡಿ ಎರಚಿ, ಬೈಕ್‌ನಲ್ಲಿ ಬಾಲಕನ ಅಪಹರಣ
- ಸಿಸಿ ಟಿವಿ ದೃಶ್ಯ ವೈರಲ್, ಪೊಲೀಸರ ತನಿಖೆ ಆರಂಭ
- ಸುಳಿವು ನೀಡಿದವರಿಗೆ ₹30,000 ಬಹುಮಾನ ಘೋಷಿಸಿದ ಪೊಲೀಸರು.
ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ (MP Gwalior) ಒಂದು ಬೆಚ್ಚಿಬೀಳಿಸುವ ಘಟನೆ ನಡೆದಿದೆ. 6 ವರ್ಷದ ಬಾಲಕನನ್ನು ಇಬ್ಬರು ಅಪಹರಣ (Kidnapped) ಮಾಡಿರುವ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮೊರಾರ್ ಪ್ರದೇಶದ ಸಿಪಿ ಕಾಲೋನಿಯಲ್ಲಿ ವಾಸಿಸುವ ರಾಹುಲ್ ಗುಪ್ತಾ ಎಂಬ ವ್ಯಾಪಾರಿಯ ಮಗನನ್ನು ಅಪಹರಿಸಲಾಗಿದೆ.
ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ, ಆರೋಪಿಗೆ 20 ವರ್ಷ ಜೈಲು ಶಿಕ್ಷೆ
ಗುರುವಾರ ಬೆಳಗ್ಗೆ ಬಾಲಕನ ತಾಯಿ ಅವನನ್ನು ಶಾಲಾ ಬಸ್‌ಗಾಗಿ ಬಸ್‌ಸ್ಟಾಪ್‌ಗೆ ಕರೆದುಕೊಂಡು ಬಂದಿದ್ದಾಗ ಇಬ್ಬರು ಬೈಕ್ ಸವಾರರು ಹಠಾತ್ತನೆ ಅಲ್ಲಿ ಬಂದು, ತಾಯಿ ಕಣ್ಣಿಗೆ ಖಾರದ ಪುಡಿ ಎರಚಿ, ಬಾಲಕನನ್ನು ಅಪಹರಿಸಿ ಪರಾರಿಯಾದರು. ತಾಯಿ ಗಾಬರಿಗೊಂಡು ಬೈಕ್ ಹಿಂದೆ ಓಡಿದರೂ, ದುಷ್ಕರ್ಮಿಗಳು ಅಲ್ಲಿಂದ ಕ್ಷಣ ಮಾತ್ರದಲ್ಲಿ ಪರಾರಿಯಾಗಿದ್ದಾರೆ
ಈ ಘಟನೆಯ ಕುರಿತಾಗಿ ಬಾಲಕನ ತಂದೆ ರಾಹುಲ್ ಗುಪ್ತಾ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದರು.
‼️ अति महत्वपूर्ण सूचना ‼️🙏🙏
मुरार सीपी कॉलोनी, ग्वालियर में दिनदहाड़े बच्चे का अपहरण
बच्चे का नाम: शिवाय गुप्ता
पिता का नाम: राहुल गुप्ता
बदमाशों ने मिर्ची झोंककर माँ के सामने से बच्चे को उठा लिया।
पुलिस प्रशासन से निवेदन हैं इस पर जल्द कार्यवाही करें @Gwalior@GwaliorComm… pic.twitter.com/mKwlMvaxjN— मनीष सागर (@Manish_NSTA) February 13, 2025
ಗರ್ಭಿಣಿ ಗೆಳತಿಯನ್ನು ಕತ್ತು ಹಿಸುಕಿ ಕೊಂದು, ಸುಟ್ಟು ಹಾಕಿದ ಪಾತಕಿ!
ಅಪಹರಣದ ಬಗ್ಗೆ ಮಾಹಿತಿ ನೀಡಿದವರಿಗೆ ₹30,000 ನಗದು ಬಹುಮಾನ ನೀಡುವುದಾಗಿ ಘೋಷಿಸಲಾಗಿದೆ. ಬಾಲಕನ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
Boy Kidnapped in Gwalior, CCTV Footage Goes Viral
Our Whatsapp Channel is Live Now 👇