ಮದುವೆಯಾದ ಎರಡೇ ದಿನಕ್ಕೆ ಮಗುವಿಗೆ ಜನ್ಮ ನೀಡಿದ ವಧು! ಟ್ವಿಸ್ಟ್ ಏನು ಗೊತ್ತಾ

ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ವಿಚಿತ್ರ ಘಟನೆ! ವಿವಾಹದ ಎರಡನೇ ದಿನವೇ ವಧುವಿಗೆ ತೀವ್ರ ನೋವು, ಆಸ್ಪತ್ರೆಗೆ ದಾಖಲಿಸಿದಾಗ ಸತ್ಯ ಹೊರಬಂದದ್ದು ಮಾತ್ರ ಶಾಕ್‌ ತಂದಂತಿದೆ!

  • ವಿವಾಹದ ಎರಡನೇ ದಿನವೇ ವಧುವಿಗೆ ತೀವ್ರ ನೋವು
  • ವೈದ್ಯರು ತಪಾಸಣೆ ನಡೆಸಿದಾಗ ಗರ್ಭವತಿ ಎಂಬ ಶಾಕಿಂಗ್ ಸುದ್ದಿ ಬೆಳಕಿಗೆ
  • ವಧುವಿನ ಕುಟುಂಬ ಮತ್ತು ವರನ ಕುಟುಂಬದ ನಡುವೆ ಜಟಾಪಟಿ

ನಿಜಕ್ಕೂ ನಂಬಲು ಅಸಾಧ್ಯವಾದ ಘಟನೆಯಿದು! ವಿವಾಹದ ಎರಡನೇ ದಿನವೇ ಸಡಗರದ ನಡುವೆ ಆಘಾತಕಾರಿ ಸತ್ಯ ಬೆಳಕಿಗೆ ಬಂದಿರುವುದು. ಉತ್ತರಪ್ರದೇಶದ (Uttar Pradesh) ಪ್ರಯಾಗ್‌ರಾಜ್‌ನಲ್ಲಿ (Prayagraj) ಈ ಘಟನೆ ನಡೆದಿದೆ.

ಫೆಬ್ರವರಿ 24ರಂದು ಅದ್ಧೂರಿಯಾಗಿ ಮದುವೆ ನಡಿದು, 25ರಂದು ವಧು ಅತ್ತೆಮನೆಯ ಬಾಗಿಲು ತಟ್ಟಿದಳು. ಎಲ್ಲವೂ ಸಂತೋಷದ ವಾತಾವರಣದಲ್ಲಿತ್ತು.

ಆದರೆ, 26ನೇ ತಾರೀಖು ಸಂಜೆ ಬದಲಾದ ಸನ್ನಿವೇಶ! ವಧುವಿಗೆ ತೀವ್ರ ಹೊಟ್ಟೆನೋವು ಶುರುವಾಯಿತು. ಕುಟುಂಬದ ಸದಸ್ಯರು ಚಿಂತಿತರಾಗಿ ಆಸ್ಪತ್ರೆಗೆ (Hospital) ಕರೆದೊಯ್ದರು. ಅಲ್ಲಿ ವೈದ್ಯರು (Doctors) ನೀಡಿದ ಮಾಹಿತಿ ನಿಜಕ್ಕೂ ಶಾಕ್ ಕೊಟ್ಟಿತು – ವಧು ಒಂಭತ್ತು ತಿಂಗಳ ಗರ್ಭವತಿ!

ವರನ ಮನೆಯವರು ಶಾಕ್

ಈ ಸಂಗತಿ ತಿಳಿದ ಕೂಡಲೇ ವರನ ಮನೆಯವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ವಿವಾಹದ ಹಿಂದಿನ ಸಂಗತಿಯನ್ನು ವಧುವಿನ ತಂದೆ ಬಹಿರಂಗಪಡಿಸಿದರು, ಮದುವೆ ನಿಗದಿಯಾದ ನಂತರ ಇವರಿಬ್ಬರ ಮಧ್ಯೆ ಶಾರೀರಿಕ ಸಂಬಂಧವಾಯಿತು ಎಂಬ ಸತ್ಯ ಬಯಲಾಯಿತು.

ಆದರೆ ವರನ ಕುಟುಂಬ ಇದನ್ನು ಒಪ್ಪಿಕೊಳ್ಳಲು ನಿರಾಕರಿಸಿತು. ವರನು ಈ ಸಂಬಂಧ ಮುಂದುವರಿಯುವುದಿಲ್ಲ ಎಂದು ಹೇಳಿಕೊಂಡರು, ವಧುವಿನ ತಾಯಿ ಇದನ್ನು ಒಪ್ಪಿಕೊಳ್ಳದೇ ಕಾನೂನಿನ ಮೊರೆ ಹೋಗುವುದಾಗಿ ಎಚ್ಚರಿಸಿದರು. ವಿಷಯ ಗ್ರಾಮ ಪಂಚಾಯಿತಿ ಮಟ್ಟಿಗೆ ಹೋಗಿದ್ದು, ವಧು ಇದೀಗ ಮಗುವಿನೊಂದಿಗೆ ತವರು ಮನೆ ಸೇರಿದ್ದಾಳೆ.

Bride Secret Stuns Groom Family

English Summary

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories