Budget 2026: ಬಜೆಟ್ 2026ನಲ್ಲಿ ಯಾವ ವಸ್ತುಗಳು ಸಸ್ತ? ಯಾವುದು ದುಬಾರಿ?
Budget 2026: ಕೇಂದ್ರ ಬಜೆಟ್ 2026ನ್ನು ಲೋಕಸಭೆಯಲ್ಲಿ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ತೆರಿಗೆ ಬದಲಾವಣೆಗಳೊಂದಿಗೆ ಹಲವು ವಸ್ತುಗಳ ಬೆಲೆ ಇಳಿಕೆ ಹಾಗೂ ಏರಿಕೆಗೆ ಕಾರಣವಾಗುವ ಮಹತ್ವದ ಘೋಷಣೆಗಳನ್ನು ಪ್ರಕಟಿಸಿದರು.

- ಬೆಲೆ ಇಳಿಕೆ: ಔಷಧಿ, ಸೌರ ಉತ್ಪನ್ನ, CNG, ಶಿಕ್ಷಣ ವೆಚ್ಚ
- ಬೆಲೆ ಏರಿಕೆ: ಮದ್ಯ, ಸಿಗರೇಟು, ಖನಿಜ, ಸ್ಕ್ರ್ಯಾಪ್ ವಸ್ತುಗಳು
Budget 2026: ಲೋಕಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ 2026ನ್ನು ಮಂಡಿಸಿದ್ದು, ‘ವಿಕಸಿತ ಭಾರತ’ ಎಂಬ ದೃಷ್ಟಿಕೋನದೊಂದಿಗೆ ಆರ್ಥಿಕ ಬೆಳವಣಿಗೆಯ ಹೊಸ ರೂಪರೇಖೆಯನ್ನು ಸರ್ಕಾರ ಮುಂದಿಟ್ಟಿದೆ.
ಉದ್ಯೋಗ ಸೃಷ್ಟಿ, ಸುಧಾರಣೆಗಳು ಮತ್ತು ಹೂಡಿಕೆ ಉತ್ತೇಜನವೇ ಈ ಬಜೆಟ್ನ ಪ್ರಮುಖ ಉದ್ದೇಶವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಸರ್ಕಾರವು ಕಳೆದ ವರ್ಷದಲ್ಲೇ 350ಕ್ಕೂ ಹೆಚ್ಚು ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತಂದಿದೆ ಎಂದು ಸಚಿವೆ ಮಾಹಿತಿ ನೀಡಿದರು. ಇದರ ಪರಿಣಾಮವಾಗಿ ಉದ್ಯಮ, ರಫ್ತು ಹಾಗೂ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಚಟುವಟಿಕೆ ಹೆಚ್ಚಾಗಿದೆ ಎಂದು ಅವರು ಹೇಳಿದರು.
2026-27 ಹಣಕಾಸು ವರ್ಷದ ರಾಜಸ್ವ ಕೊರತೆಯನ್ನು 4.3 ಶೇಕಡಾ ಎಂದು ಅಂದಾಜಿಸಿದ್ದು, ಆರ್ಥಿಕ ಶಿಸ್ತು ಕಾಯ್ದುಕೊಳ್ಳುವ ಭರವಸೆಯನ್ನು ಸರ್ಕಾರ ನೀಡಿದೆ.
ಮೂಲಧನ ವೆಚ್ಚ ಮತ್ತು ತೆರಿಗೆ ಅಂದಾಜು
ಈ ಬಜೆಟ್ನಲ್ಲಿ ಮೂಲಧನ ವೆಚ್ಚವನ್ನು ರೂ.12.20 ಲಕ್ಷ ಕೋಟಿಗೆ ಏರಿಸಲಾಗಿದೆ. 2027ರ ವೇಳೆಗೆ ಸರ್ಕಾರ ರೂ.28.70 ಲಕ್ಷ ಕೋಟಿ ತೆರಿಗೆ ಸಂಗ್ರಹ ಮಾಡುವ ಗುರಿ ಹೊಂದಿದೆ. ಈ ಕ್ರಮಗಳು ದೀರ್ಘಕಾಲೀನ ಅಭಿವೃದ್ಧಿಗೆ ಸಹಕಾರಿಯಾಗಲಿವೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಯಾವ ವಸ್ತುಗಳು ಸಸ್ತ?
ಬಜೆಟ್ನ ತೆರಿಗೆ ವಿನಾಯಿತಿ ಹಾಗೂ ಕಡಿತ ಕ್ರಮಗಳಿಂದ ಹಲವಾರು ಅಗತ್ಯ ವಸ್ತುಗಳ ಬೆಲೆ ಇಳಿಕೆಯಾಗಲಿದೆ.
- ಸೌರ ಉಪಕರಣಗಳು ಮತ್ತು ಲೆದರ್ ಉತ್ಪನ್ನಗಳು
- ಬೀಡಿ, ಬ್ಯಾಟರಿ ಉತ್ಪನ್ನಗಳು
- CNG ಮತ್ತು ಬಯೋಗ್ಯಾಸ್
- ಕ್ಯಾನ್ಸರ್ ಹಾಗೂ ಡಯಾಬಿಟಿಸ್ ಔಷಧಿಗಳು, ಜೊತೆಗೆ 7 ಗಂಭೀರ ರೋಗಗಳ ಔಷಧಿ
- ವಿಮಾನ ಉಪಕರಣಗಳು ಮತ್ತು ಮೀನುಗಾರಿಕೆ ರಫ್ತು ಉತ್ಪನ್ನಗಳು
- ವಿದೇಶಿ ಶಿಕ್ಷಣ ಹಾಗೂ ವೈದ್ಯಕೀಯ ವೆಚ್ಚ – TCS ದರವನ್ನು 5%ರಿಂದ 2%ಕ್ಕೆ ಇಳಿಕೆ
ಯಾವ ವಸ್ತುಗಳು ದುಬಾರಿಯಾಗಲಿವೆ?
ಇನ್ನೊಂದೆಡೆ, ಕೆಲವು ಕ್ಷೇತ್ರಗಳಲ್ಲಿ ತೆರಿಗೆ ಹೆಚ್ಚಳದಿಂದ ಬೆಲೆ ಏರಿಕೆ ಎದುರಾಗಲಿದೆ.
- ಫಾರ್ವರ್ಡ್ ಟ್ರೇಡಿಂಗ್ ಸಂಬಂಧಿತ ವಸ್ತುಗಳು
- ಖನಿಜಗಳು ಮತ್ತು ಸ್ಕ್ರ್ಯಾಪ್
- ಮದ್ಯ ಮತ್ತು ಸಿಗರೇಟುಗಳು
ಒಟ್ಟಾರೆ, ಬಜೆಟ್ 2026 ಮಧ್ಯಮ ವರ್ಗ, ರಫ್ತು ಕ್ಷೇತ್ರ ಮತ್ತು ಆರೋಗ್ಯ–ಶಿಕ್ಷಣ ಕ್ಷೇತ್ರಗಳಿಗೆ ಅನುಕೂಲವಾಗುವ ನಿರೀಕ್ಷೆ ಇದೆ. ಆದರೆ ಮದ್ಯ ಮತ್ತು ತಂಬಾಕು ಉತ್ಪನ್ನಗಳ ಬೆಲೆ ಏರಿಕೆ ಸಾಮಾನ್ಯ ಗ್ರಾಹಕರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ.






