ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಬೆಂಗಾವಲು ವಾಹನ ಅಪಘಾತ
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಬೆಂಗಾವಲು ವಾಹನ ಸೋಮವಾರ ಸಂಜೆ 6.30ರ ಸುಮಾರಿಗೆ ಅಪಘಾತಕ್ಕೀಡಾಗಿದೆ.
ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Kerala CM Pinarayi Vijayan) ಅವರ ಬೆಂಗಾವಲು ವಾಹನ (convoy collide) ಸೋಮವಾರ ಸಂಜೆ 6.30ರ ಸುಮಾರಿಗೆ ಅಪಘಾತಕ್ಕೀಡಾಗಿದೆ. ಐದು ಕಾರುಗಳು ಒಂದರ ಹಿಂದೆ ಒಂದರಂತೆ ಡಿಕ್ಕಿ ಹೊಡೆದಿವೆ.
ಪೊಲೀಸ್ ಬೆಂಗಾವಲು ವಾಹನ, ಸಿಎಂ ಕಾರು ಮತ್ತು ಆಂಬ್ಯುಲೆನ್ಸ್ ಕೂಡ ಅಪಘಾತಕ್ಕೀಡಾದವು, ತಿರುವನಂತಪುರಂ ಜಿಲ್ಲೆಯ ವಾಮನಪುರಂನಲ್ಲಿ ಸಂಭವಿಸಿದ ಅಪಘಾತದಲ್ಲಿ ಸಿಎಂ ಸೇರಿದಂತೆ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಪಿಣರಾಯಿ ವಿಜಯನ್ ಅವರು ಇನ್ನೊಂದು ವಾಹನದಲ್ಲಿ ಹೊರಟರು. ಈ ಅಪಘಾತದ ಸಿಸಿಟಿವಿ ದೃಶ್ಯಾವಳಿ ವೈರಲ್ ಆಗಿದೆ.
ಬೆಂಗಾವಲು ವಾಹನ ಸ್ಕೂಟರ್ ಸವಾರ ಮಹಿಳೆಯನ್ನು ತಪ್ಪಿಸಲು ಏಕಾಏಕಿ ಬ್ರೇಕ್ ಹಾಕಿದಾಗ ಒಂದರ ಹಿನೆ ಒಂದರಂತೆ ವಾಹನಗಳು ಹಿಂಬದಿಯಿಂದ ಡಿಕ್ಕಿಯಾದವು, ಅದೃಷ್ಟಾವಶಾತ್ ಯಾವುದೇ ಅವಘಡ ಸಂಭವಿಸಿಲ್ಲ. ಇನ್ನು ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು ಘಟನೆಗೆ ಮೂಲ ಕಾರಣ ಏನು ಎಂಬುದನ್ನು ಪರಿಶೀಲನೆ ನಡೆಸುತ್ತಿದೆ.
Cars in Pinarayi Vijayan’s convoy collide after scooter makes sudden turn
CM Pinarayi Vijayan’s convoy clash with one another in a bid to avoid crashing onto a scooter rider in Kerala’s Vamanapuram. No one was injured. pic.twitter.com/KrtQUUxES4
— Adarsh Hegde (@adarshahgd) October 28, 2024