ಕೇಂದ್ರ ಸರ್ಕಾರದಿಂದ ಹೊಸ ಪಿಂಚಣಿ ಯೋಜನೆ ಆರಂಭ! ಯಾರಿಗೆ ಸಿಗುತ್ತೆ ಪ್ರಯೋಜನ?
ಹಳೆಯ ಪಿಂಚಣಿ ಯೋಜನೆ ಮತ್ತು ರಾಷ್ಟ್ರೀಯ ಪಿಂಚಣಿ ಯೋಜನೆಯ (Pension Scheme) ಸಂಯೋಜನೆಯೊಂದಿಗೆ ಹೊಸದಾಗಿ ಏಕೀಕೃತ ಪಿಂಚಣಿ ಯೋಜನೆಯನ್ನು ಕೇಂದ್ರ ಸರ್ಕಾರ ಏಪ್ರಿಲ್ 1, 2025ರಿಂದ ಜಾರಿಗೆ ತರುಲಿದೆ.
Pension Scheme : ಕೇಂದ್ರ ಸರಕಾರಿ ನೌಕರರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಸಲುವಾಗಿ ನಿವೃತ್ತಿಯ ನಂತರ 10,000 ರೂಪಾಯಿಗಳ ಪಿಂಚಣಿ ಸಿಗುವ ಏಕೀಕೃತ ಪಿಂಚಣಿ ಯೋಜನೆ (UPS) ನ್ನು ಸರ್ಕಾರ ಘೋಷಿಸಿದೆ. 2025 ಮಾರ್ಚ್ ನಲ್ಲಿ ನಿವೃತ್ತಿ ಹೊಂದುವವರೆಗೂ ಕೂಡ ಈ ಯೋಜನೆಯ ಪ್ರಯೋಜನ ಸಿಗಲಿದೆ.
ಯಾರಿಗೆ ಸಿಗಲಿದೆ UPS ಬೆನಿಫಿಟ್ಸ್?
ಹಳೆಯ ಪಿಂಚಣಿ ಯೋಜನೆ ಮತ್ತು ರಾಷ್ಟ್ರೀಯ ಪಿಂಚಣಿ ಯೋಜನೆಯ (Pension Scheme) ಸಂಯೋಜನೆಯೊಂದಿಗೆ ಹೊಸದಾಗಿ ಏಕೀಕೃತ ಪಿಂಚಣಿ ಯೋಜನೆಯನ್ನು ಕೇಂದ್ರ ಸರ್ಕಾರ ಏಪ್ರಿಲ್ 1, 2025ರಿಂದ ಜಾರಿಗೆ ತರುಲಿದೆ.
ಕನಿಷ್ಠ 10 ವರ್ಷಗಳ ಸೇವೆ ಸಲ್ಲಿಸಿರುವ ಕೇಂದ್ರ ಸರ್ಕಾರಿ ನೌಕರರಿಗೆ ಆಟೋಮೆಟಿಕ್ ಆಗಿ ಈ ಯೋಜನೆ ಅನ್ವಯವಾಗುತ್ತದೆ. 25 ಅಥವಾ ಅದಕ್ಕಿಂತ ಹೆಚ್ಚಿನ ವರ್ಷ ಸೇವೆಯಲ್ಲಿ ಇದ್ದು, ಸ್ವಯಂ ನಿವೃತ್ತಿಯನ್ನು ಪಡೆದುಕೊಂಡರೆ ನಿವೃತ್ತಿಯ ನಂತರದ ಮೊದಲ ದಿನದಿಂದ ಈ ಯೋಜನೆ ಅನ್ವಯವಾಗುತ್ತದೆ.
ಏಪ್ರಿಲ್ 1, 2025ರ ನಂತರ ಕೆಲಸಕ್ಕೆ ಸೇರುವ ಎಲ್ಲಾ ಕೇಂದ್ರ ಸರ್ಕಾರ ನೌಕರರಿಗೆ ಈ ಯೋಜನೆ ಅನ್ವಯವಾಗುತ್ತೆ. UPS ಈಗಾಗಲೇ ನಿವೃತ್ತಿ ಹೊಂದಿರುವ ಹಾಗೂ ಮಾರ್ಚ್ 2025ಕ್ಕೆ ನಿವೃತ್ತಿ ಹೊಂದುವವರೆಗೂ ಪ್ರಯೋಜನಕಾರಿಯಾಗಲಿದೆ.
ಇನ್ನು ಯಾವುದೇ ನೌಕರರನ್ನು ಕೆಲಸದಿಂದ ತೆಗೆದಿದ್ದರೆ ಅಥವಾ ರಾಜೀನಾಮೆ ಕೊಟ್ಟಿದ್ದರೆ ಅಂತವರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ. ಕನಿಷ್ಠ 25 ವರ್ಷ ಕೆಲಸ ನಿರ್ವಹಿಸಿರುವವರಿಗೆ ಅವರ ಸಂಬಳದ 50% ನಷ್ಟು ಪಿಂಚಣಿ ಪಡೆಯಬಹುದು.
ಅದಕ್ಕಿಂತ ಕಡಿಮೆ ಅನುಭವ ಹೊಂದಿರುವವರಿಗೆ ಸಿಗುವ ಪಿಂಚಣಿ ಮೊತ್ತ ಕಡಿಮೆ. ಪಿಂಚಣಿದಾರ ಮರಣ ಹೊಂದಿದರೆ 60% ನಷ್ಟು ಪಿಂಚಣಿಯನ್ನು ಆತನ ಪತ್ನಿಗೆ ಕೊಡಲಾಗುವುದು. ಇದಕ್ಕಾಗಿ ಕೇಂದ್ರ ಸರ್ಕಾರ 6250 ಕೋಟಿ ರೂಪಾಯಿಗಳನ್ನು ಮೀಸಲಿಡಲಿದೆ.
Central government launches a new pension scheme