India NewsTechnology

ಇಂತಹ ಜನರ ಮೊಬೈಲ್ ನಂಬರ್ ರದ್ದು! ಕೇಂದ್ರ ಸರ್ಕಾರ ಖಡಕ್ ವಾರ್ನಿಂಗ್

ಕೇಂದ್ರ ಸರ್ಕಾರ (Central government) ರಾತ್ರೋರಾತ್ರಿ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ, ಸಿಮ್ ಕಾರ್ಡ್ ವಿಷಯದಲ್ಲಿ ನಡೆಯುತ್ತಿರುವ ವಂಚನೆ ಪ್ರಕರಣಗಳನ್ನು (fraud cases) ತಡೆಗಟ್ಟುವ ಸಲುವಾಗಿ ದೂರ ಸಂಪರ್ಕ ಇಲಾಖೆ ಮಹತ್ವದ ನಿರ್ಧಾರವನ್ನ ಕೈಗೊಂಡಿದ್ದು ಅದರ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದೆ.

ಇನ್ನು ಮುಂದೆ ಸಿಮ್ ಕಾರ್ಡ್ ಖರೀದಿ (sim card purchase) ಮಾಡುವವರು ಬಹಳ ಜಾಗರೂಕತೆಯಿಂದ ಇರಬೇಕು ಎಂದು ಹೇಳಲಾಗಿದೆ.

New Telecom Rules for New Sim Card From September

ಸಿಮ್ ಕಾರ್ಡ್ ಖರೀದಿಗೆ ಹೊಸ ನಿಯಮ! (Sim card purchase new rules)

ಮೊದಲು ಮೊಬೈಲ್ಗೆ ಒಂದೇ ಒಂದು ಸಿಮ್ ಇರುತ್ತಿತ್ತು ನಂತರ ಮೊಬೈಲ್ ನಲ್ಲಿ ಎರಡು ಸಿಮ್ (Mobile Dual Sim) ಬಳಕೆ ಮಾಡಲು ಅವಕಾಶ ನೀಡಲಾಯಿತು, ಹೀಗೆ ನಾವು ಡಿಜಿಟಲ್ (digital) ಆಗಿ ಮುಂದುವರಿಯುತ್ತಾ ಹೋಗುತ್ತಿದ್ದಂತೆ ವಂಚನೆ ಪ್ರಕರಣಗಳು ಕೂಡ ಜಾಸ್ತಿಯಾದವು.

ಇತ್ತೀಚಿನ ದಿನಗಳಲ್ಲಿ ಸಿಮ್ ಕಾರ್ಡ್ ಬಳಸಿ ವಂಚನೆ ಮಾಡುತ್ತಿರುವ ಪ್ರಕರಣಗಳು ಹೆಚ್ಚು ಹೆಚ್ಚು ದಾಖಲಾಗುತ್ತಿದೆ. ಸೈಬರ್ ಪ್ರಕರಣಗಳನ್ನು (cyber crime) ತಡೆಗಟ್ಟಲು ಪೊಲೀಸರು (police) ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ, ಆದರೆ ಇಂತಹ ಎಲ್ಲಾ ವಂಚನೆಗಳಿಗೂ ಸಿಮ್ ಕಾರ್ಡ್ ಖರೀದಿಯೇ ಮೂಲ ಕಾರಣ ಎನ್ನಲಾಗಿದೆ.

ಹೌದು, ಸಾಕಷ್ಟು ಆನ್ಲೈನ್ ವಂಚನೆಗಳಿಗೆ (online fraud) ಸಿಮ್ ಕಾರ್ಡ್ ಅನ್ನು ಖರೀದಿ ಮಾಡುತ್ತಿರುವುದು ಒಂದು ಕಾರಣವಾಗಿದೆ. ನಿಖರವಾದ ಮಾಹಿತಿಯನ್ನು ಕೊಡದೆ ದಾಖಲೆಗಳನ್ನು ಸಲ್ಲಿಸಿ ಹೆಚ್ಚು ಸಿಮ್ ಕಾರ್ಡ್ ಗಳನ್ನು ಪಡೆಯುತ್ತಿರುವ ಕೆಲವು ವಂಚಕರು ಬೇರೆಯವರ ಆಧಾರ್ ಕಾರ್ಡ್ ಮತ್ತಿತರ ದಾಖಲೆಗಳನ್ನು ನೀಡಿಯೂ ಕೂಡ ಸಿಮ್ ಕಾರ್ಡ್ ಖರೀದಿ ಮಾಡುತ್ತಿರುವುದು ಸರಕಾರದ ಗಮನಕ್ಕೆ ಬಂದಿದೆ. ಹಾಗಾಗಿ ಈಗಾಗಲೇ ದೇಶದಲ್ಲಿ ಲಕ್ಷಾಂತರ ಸಿಮ್ ಕಾರ್ಡ್ ರದ್ದುಪಡಿ ಕೂಡ ಮಾಡಲಾಗಿದೆ.

ಸಿಮ್ ಕಾರ್ಡ್ ಮಾರಾಟಗಾರರಿಗೆ ಹೊಸ ನಿಯಮ! (New rules for sim card sale)

Sim Cardಇನ್ನು ಮುಂದೆ ಯಾರೂ ಕೂಡ ಬಲ್ಕ್ ಆಗಿ ಸಿಮ್ ಕಾರ್ಡ್ ಖರೀದಿ ಮಾಡುವಂತಿಲ್ಲ. ಸಿಮ್ ಮಾರಾಟ ಮಾಡುವವರು ಬಹಳ ಜಾಗರೂಕತೆಯಿಂದ ಸಿಮ್ ಮಾರಾಟ ಮಾಡಬೇಕು. ಸಿಮ್ ಮಾರಾಟ ಮಾಡುವವರು ಸಿಮ್ ಡೀಲರ್ ನೊಂದಣಿ (sim dealer registration) ಮಾಡಿಕೊಂಡಿರಬೇಕು.

ಸಿಮ್ ಡೀಲರ್ ಗಳು ಪೋಲೀಸ್ ಪರಿಶೀಲನೆಗೆ ಒಳಪಡುವುದು ಕಡ್ಡಾಯ. ಸಿಮ್ ಕಾರ್ಡ್ ಮಾರಾಟ ಮಾಡುವವರು ಕೆವೈಸಿ (KYC) ಮಾಡಿಸಿಕೊಳ್ಳುವುದು ಕಡ್ಡಾಯ, ಇದೇ ನಿಯಮ ಸಿಮ್ ಕಾರ್ಡ್ ಖರೀದಿ ಮಾಡುವವರೆಗೂ ಕೂಡ ಅನ್ವಯವಾಗಲಿದೆ ಎಂದು ದೂರ ಸಂಪರ್ಕ ಇಲಾಖೆ ತಿಳಿಸಿದೆ. ಸಿಮ್ ಡೀಲರ್ ನೊಂದಣಿ ಮಾಡಿಕೊಳ್ಳದೆ ಇರುವ ವ್ಯಾಪಾರಿಗಳು ಸಿಮ್ ಮಾರಾಟ ಮಾಡುವಂತಿಲ್ಲ.

ಇಂತಹ ಮೊಬೈಲ್ ಸಂಖ್ಯೆ ರದ್ದು! (Mobile number cancellation)

ಈಗಾಗಲೇ ಸರ್ಕಾರ ತಿಳಿಸಿರುವಂತೆ ಸಾಕಷ್ಟು ವಂಚನೆ ಪ್ರಕರಣಗಳು ಮೊಬೈಲ್ ಸಂಖ್ಯೆ ಮೂಲಕವೇ ನಡೆಯುತ್ತಿದೆ. ಈ ಕಾರಣಕ್ಕಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು ದೇಶದಲ್ಲಿ ಸುಮಾರು 70 ಲಕ್ಷಕ್ಕೂ ಹೆಚ್ಚಿನ ಮೊಬೈಲ್ ಸಂಖ್ಯೆ ರದ್ದುಪಡಿಸಲಾಗಿದೆ

ಇದರ ಜೊತೆಗೆ ದೇಶಕ್ಕೆ ಆಗಬಹುದಾಗಿದ್ದ 900 ಕೋಟಿ ರೂಪಾಯಿಗಳ ನಷ್ಟವನ್ನ ಸರ್ಕಾರ ತಡೆಗಟ್ಟಿದೆ ಎನ್ನಲಾಗಿದೆ. ಹೊಸ ನಿಯಮದ ಪ್ರಕಾರ ಪೂರ್ವ ಸಕ್ರಿಯಗೊಂಡಿರುವ ಮೊಬೈಲ್ ಸಂಖ್ಯೆಯನ್ನು ಬೇರೆಯವರಿಗೆ ಮೊಬೈಲ್ ಡೀಲರ್ ಗಳು ನೀಡುವಂತಿಲ್ಲ. ಒಟ್ಟಿನಲ್ಲಿ ವಂಚನೆ ಪ್ರಕರಣಗಳನ್ನು ತಡೆಗಟ್ಟುವ ಸಲುವಾಗಿ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ.

Central government warning to cancel mobile number of such people

Our Whatsapp Channel is Live Now 👇

Whatsapp Channel

Related Stories