ಗಣೇಶ ಹಬ್ಬಕ್ಕೆ ಬಂಪರ್ ಆಫರ್ ಘೋಷಿಸಿದ ಸರ್ಕಾರ, 1 ಲಕ್ಷ ರೂಪಾಯಿ ಗಳಿಸಲು ಇದು ಸುವರ್ಣ ಅವಕಾಶ!

Govt Quiz Competition : ಆನ್ಲೈನ್ ಮೂಲಕವೇ ಪ್ರಶ್ನೆಗಳನ್ನು ಕೇಳಲಾಗುತ್ತದೆ, ನೀವು ಆನ್ಲೈನ್ ನಲ್ಲಿಯೇ ಉತ್ತರವನ್ನು ನೀಡಬೇಕು. ಹೀಗೆ ಸರಿಯಾದ ಉತ್ತರವನ್ನು ನೀಡಿದವರಿಗೆ ಕುಳಿತಲ್ಲಿಯೇ ಲಕ್ಷ ರೂಪಾಯಿಗಳನ್ನು ಗಳಿಸುವಂತಹ ಅವಕಾಶವನ್ನು ಕೇಂದ್ರ ಸರ್ಕಾರ ಮಾಡಿಕೊಟ್ಟಿದೆ.

Govt Quiz Competition : ಇನ್ನೇನು ಗಣೇಶ ಹಬ್ಬ ಬರುತ್ತಿದೆ, ಈ ಹಬ್ಬದ ಖುಷಿಯ ಜೊತೆಗೆ ನೀವು ಇದೊಂದು ಕೆಲಸ ಮಾಡಿದರೆ ಒಂದು ಲಕ್ಷ ರೂಪಾಯಿಗಳನ್ನು ಕೇಂದ್ರ ಸರ್ಕಾರದಿಂದ (Central government) ನಿಮ್ಮದಾಗಿಸಿಕೊಳ್ಳಬಹುದು. ಅಂತಹ ಒಂದು ಸೂಪರ್ ಡೂಪರ್ ಅವಕಾಶವನ್ನು ಸಾರ್ವಜನಿಕರಿಗೆ ಕೇಂದ್ರ ಸರ್ಕಾರ ಮಾಡಿಕೊಟ್ಟಿದೆ.

ಒಂದು ಲಕ್ಷ ರೂಪಾಯಿಗಳನ್ನು ಸುಲಭವಾಗಿ ನಿಮ್ಮದಾಗಿಸಿಕೊಳ್ಳಬೇಕು ಅಂದ್ರೆ ನೀವು ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಆಗ ನಿಮಗೆ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ.

ಚಂದ್ರಯಾನದ ಮಹಾ ರಸಪ್ರಶ್ನೆಗಳಿಗೆ (Quiz competition) ನೀವು ಉತ್ತರಿಸಿ

ಅಗಸ್ಟ್ 23, ಸಂಜೆ ಸುಮಾರು ಆರು ಗಂಟೆಯ ಸಮಯ ಭಾರತದ ಪ್ರತಿಯೊಬ್ಬ ಪ್ರಜೆಯೂ ಕೂಡ ರೋಮಾಂಚನಗೊಂಡ ಕ್ಷಣ ಅದು. ಚಂದ್ರಯಾನ 2 (Chandrayan-2) ಕೊನೆಯ ಹಂತದಲ್ಲಿ ವಿಫಲವಾದಂತೆ ಚಂದ್ರಯಾನ 3 (Chandrayan -3) ಕೂಡ ಯಾವುದಾದ್ರೂ ಸಮಸ್ಯೆ ಎದುರಿಸಬಹುದೇ ಎನ್ನುವ ಆತಂಕ ಪ್ರತಿಯೊಬ್ಬರಲ್ಲಿಯೂ ಮನೆ ಮಾಡಿತ್ತು.

ಗಣೇಶ ಹಬ್ಬಕ್ಕೆ ಬಂಪರ್ ಆಫರ್ ಘೋಷಿಸಿದ ಸರ್ಕಾರ, 1 ಲಕ್ಷ ರೂಪಾಯಿ ಗಳಿಸಲು ಇದು ಸುವರ್ಣ ಅವಕಾಶ! - Kannada News

ಆದರೆ ನಮ್ಮ ಹೆಮ್ಮೆಯ ವಿಕ್ರಂ ಲ್ಯಾಂಡರ್ (Vikarm Lander) ಚಂದ್ರನ ದಕ್ಷಿಣ ಭಾಗದಲ್ಲಿ ಯಶಸ್ವಿಯಾಗಿ ಪಾದರ್ಪಣೆ ಮಾಡಿತು. ಚಂದ್ರನಲ್ಲಿ ಈಗಾಗಲೇ ಬೇರೆ ಬೇರೆ ರಾಷ್ಟ್ರದ ಉಪಗ್ರಹಗಳು ತಲುಪಿದ್ದರು ಕೂಡ ದಕ್ಷಿಣದಲ್ಲಿ ಭಾರತೀಯ ಬಾವುಟವನ್ನು ಹಾರಿಸಿದ್ದು ನಮ್ಮ ವಿಕ್ರಂ ಲ್ಯಾಂಡರ್.

ವಿಕ್ರಂ ಲ್ಯಾಂಡರ್ ಚಂದ್ರನನ್ನು ಸ್ಪರ್ಶಿಸುತ್ತಿದ್ದ ಹಾಗೆ ಭಾರತದಲ್ಲಿ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಹರ್ಷೋದ್ಗಾರ ಮೊಳಗಿತ್ತು. ಇಸ್ರೋ (ISRO) ವಿಜ್ಞಾನಿಗಳ ಪರಿಶ್ರಮಕ್ಕೆ ಅತ್ಯುತ್ತಮ ಫಲ ದೊರಕಿದೆ. ಭಾರತದ ವಿಕ್ರಂ ಲ್ಯಾಂಡರ್ ಚಂದ್ರನಲ್ಲಿ ಇಳಿದು ಐತಿಹಾಸಿಕ ದಾಖಲೆ ನಿರ್ಮಿಸಿದೆ.

ಚಂದ್ರನಲ್ಲಿ ವಿಕ್ರಂ ಲ್ಯಾಂಡರ್ ಇಳಿದ ಸ್ಥಳಕ್ಕೆ ನಾಮಕರಣ

ವಿಕ್ರಂ ಲ್ಯಾಂಡರ್ ಚಂದ್ರನನ್ನು ಸ್ಪರ್ಶಿಸುತ್ತಿದ್ದ ಹಾಗೆ ಆ ಸ್ಥಳಕ್ಕೆ ಒಂದು ಹೆಸರನ್ನ ಕೊಡಬೇಕು ಎಂಬುದಾಗಿ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಸೂಚಿಸಿದ್ದರು, ಅವರ ಅನುಮತಿಯಂತೆ ಶಿವಶಕ್ತಿ (ShivaShakti) ಎಂದು ವಿಕ್ರಂ ಲ್ಯಾಂಡರ್ ಲ್ಯಾಂಡ್ ಆದ ಸ್ಥಳಕ್ಕೆ ನಾಮಕರಣ ಮಾಡಲಾಗಿದೆ. ಹೀಗೆ ನಿಮಗೆ ಚಂದ್ರಯಾನ 3 ಬಗ್ಗೆ ಸಂಪೂರ್ಣ ಮಾಹಿತಿ ಇದ್ದರೆ ನೀವು ಒಂದು ಲಕ್ಷ ರೂಪಾಯಿಗಳನ್ನು ಗಳಿಸಬಹುದು ಹೇಗೆ ಗೊತ್ತಾ?

ಮಹಾ ರಸಪ್ರಶ್ನೆ ಸ್ಪರ್ಧೆ – Chandrayaan Maha Quiz

Chandrayaan Maha Quiz

ಚಂದ್ರಯಾನಕ್ಕೆ ಸಂಬಂಧಪಟ್ಟ ಹಾಗೆ ಸಾರ್ವಜನಿಕರಿಗೆ ರಸಪ್ರಶ್ನೆ ಒಂದನ್ನು ನಡೆಸಲಾಗುವುದು, ಇದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು ಈ ರಸಪ್ರಶ್ನೆಗಳು ಕೇವಲ 10 ಪ್ರಶ್ನೆಗಳನ್ನು ಮಾತ್ರ ಹೊಂದಿರುತ್ತವೆ. ನೀವು ಕೇವಲ 300 ಸೆಕೆಂಡುಗಳಲ್ಲಿ ಸರಿಯಾದ ಉತ್ತರವನ್ನು ನೀಡಿದರೆ ಆಯ್ಕೆಯಾದ ವ್ಯಕ್ತಿಗೆ ಒಂದು ಲಕ್ಷ ರೂಪಾಯಿಗಳ ಬಹುಮಾನ (1 lakh Rs. Prize) ಸಿಗುತ್ತದೆ.

ಎರಡನೇ ಬಹುಮಾನ 75,000 ರೂ. ಹಾಗೂ ಮೂರನೇ ಬಹುಮಾನವಾಗಿ 50 ಸಾವಿರ ರೂಪಾಯಿಗಳ ನಗದು ಹಣವನ್ನು ಕೊಡಲಾಗುವುದು. ಇನ್ನು ಪಾರ್ಟಿಸಿಪೇಟ್ ಸರ್ಟಿಫಿಕೇಟ್ ಕೂಡ ಭಾಗವಹಿಸಿದ ಅಭ್ಯರ್ಥಿಗಳಿಗೆ ಸಿಗುತ್ತದೆ.

ಭಾಗವಹಿಸುವುದು ಹೇಗೆ

ಕೇಂದ್ರ ಸರ್ಕಾರ ನಡೆಸಲಿರುವ ಮಹಾ ರಸಪ್ರಶ್ನೆ ಸ್ಪರ್ಧೆಯಲ್ಲಿ (Chandrayaan Maha Quiz) ನೀವು ಕೂಡ ಭಾಗಿಯಾಗಬಹುದು. ಅದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ MyGov ವೆಬ್ಸೈಟ್ಗೆ ಹೋಗಿ ಅಲ್ಲಿ ಮಹಾ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಲು ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.

ಆನ್ಲೈನ್ ಮೂಲಕವೇ ಪ್ರಶ್ನೆಗಳನ್ನು ಕೇಳಲಾಗುತ್ತದೆ, ನೀವು ಆನ್ಲೈನ್ ನಲ್ಲಿಯೇ ಉತ್ತರವನ್ನು ನೀಡಬೇಕು. ಹೀಗೆ ಸರಿಯಾದ ಉತ್ತರವನ್ನು ನೀಡಿದವರಿಗೆ ಕುಳಿತಲ್ಲಿಯೇ ಲಕ್ಷ ರೂಪಾಯಿಗಳನ್ನು ಗಳಿಸುವಂತಹ ಅವಕಾಶವನ್ನು ಕೇಂದ್ರ ಸರ್ಕಾರ ಮಾಡಿಕೊಟ್ಟಿದೆ. ಹಾಗಾಗಿ ನೀವು ಕೂಡ ನಮ್ಮ ಹೆಮ್ಮೆಯ ವಿಕ್ರಮ್ ಲ್ಯಾಂಡರ್ ಹಾಗೂ ಇಸ್ರೋ ಬಗೆಗಿನ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧರಾಗಿ!

Central Govt Quiz Competition

Follow us On

FaceBook Google News

Central Govt Quiz Competition