ಗಂಡನ ಆಸ್ತಿ ಹೆಂಡತಿಗೆ ಸಿಗುವ ವಿಚಾರದಲ್ಲಿ ಧಿಡೀರ್ ಬದಲಾವಣೆ, ರಾತ್ರೋ ರಾತ್ರಿ ಹೊಸ ರೂಲ್ಸ್! ಹೊಸ ವಿಚಾರ ತಿಳಿದುಕೊಳ್ಳಿ

ನಮ್ಮ ಸುತ್ತ ಮುತ್ತ ಇರುವ ಎಲ್ಲಾ ಕುಟುಂಬಗಳು ಬಹಳ ಅನ್ಯೋನ್ಯವಾಗಿರುತ್ತದೆ. ಎಲ್ಲಾ ಕುಟುಂಬಗಳು ಎಷ್ಟೇ ಚೆನ್ನಾಗಿದ್ದರು ಸಹ, ಆಸ್ತಿ ವಿಚಾರ (Property) ಎಂದು ಬಂದಾಗ ಜಗಳ, ಭಿನ್ನಾಭಿಪ್ರಾಯಗಳು ಶುರುವಾಗುತ್ತದೆ.
ಕುಟುಂಬದ ಆಸ್ತಿಗೆ ಸಂಬಂಧಿಸಿದ ಹಾಗೆ ಕಾನೂನಿನಲ್ಲಿ ಸಾಕಷ್ಟು ನಿಯಮಗಳಿವೆ. ಅವುಗಳನ್ನು ನೀವು ಕೂಡ ತಿಳಿದುಕೊಳ್ಳಬೇಕು. ಆಸ್ತಿ ಹಂಚಿಕೆ ಮಾಡುವ (Property Share) ವಿಚಾರದಲ್ಲಿ ಇರುವ ಕಾನೂನಿನ ಬಗ್ಗೆ, ಕಾನೂನು ಕ್ರಮಗಳ ಬಗ್ಗೆ ಇಂದು ನಿಮಗೆ ತಿಳಿಸಿಕೊಡುತ್ತೇವೆ. ಈ ವಿಚಾರಗಳನ್ನು ನೀವು ತಿಳಿದುಕೊಳ್ಳುವುದು ಒಳ್ಳೆಯದು.
ಹೀಗೆ ಆಸ್ತಿ ವಿಚಾರಕ್ಕೆ ಕೋರ್ಟ್ ನಲ್ಲಿ ಸಾಕಷ್ಟು ಕೇಸ್ ಗಳು ಬರುತ್ತಲೇ ಇರುತ್ತದೆ. ಹಾಗೆಯೇ ಒಬ್ಬ ಮಹಿಳೆ ಕೂಡ ಕೋರ್ಟ್ ನಲ್ಲಿ ಕೇಸ್ ಹಾಕಿದ್ದಳು. ತನ್ನ ಗಂಡನ ಜೊತೆಗೆ ಭಿನ್ನಾಭಿಪ್ರಾಯ ಮಾಡಿಕೊಂಡು, ಜಗಳ ಮಾಡಿಕೊಂಡು ಗಂಡನ ಮೇಲೆ ಕೋರ್ಟ್ ನಲ್ಲಿ ಕೇಸ್ ಹಾಕಿದ್ದಳು. ಗಂಡನ ಹೆಸರಿನಲ್ಲಿ 2 ಸೈಟ್ ಗಳು ಇವೆ, ಜೊತೆಗೆ ಬ್ಯಾಂಕ್ ನಲ್ಲಿ ಒಂದಷ್ಟು ಹಣವನ್ನು ಇಟ್ಟುಕೊಂಡಿದ್ದ. ನಿವೃತ್ತಿಯಾದ ನಂತರ ಇನ್ನು ಹೆಚ್ಚು ಹಣ ಆತನ ಬ್ಯಾಂಕ್ ಅಕೌಂಟ್ ಗೆ (Bank Account) ಬಂದಿದೆ.
10ನೇ ತರಗತಿ ಪಾಸ್ ಆಗಿದ್ರೆ ಸಾಕು, 30 ಸಾವಿರ ಸಂಬಳ ಸಿಗೋ ಸರ್ಕಾರಿ ಕೆಲಸ! ಇಂದೇ ಅರ್ಜಿ ಹಾಕಿ
ಈ ಜಗಳ ಆಗುವುದಕ್ಕಿಂತ ಮೊದಲು, ಆ ಗಂಡ ತನ್ನ ಹೆಂಡತಿಯ ಹೆಸರನ್ನು 10 ಲಕ್ಷ ರೂಪಾಯಿಯ ಹಣಕ್ಕೆ ನಾಮಿನಿಯಾಗಿ ಮಾಡಿದ್ದನು. ಆದರೆ ಹೆಂಡತಿ ಜೊತೆಗೆ ಜಗಳ ಆದ ನಂತರ ಆಕೆಯ ಹೆಸರನ್ನು ನಾಮಿನಿ ಇಂದ ತೆಗೆದುಹಾಕಿ, ತನ್ನ ತಮ್ಮನನ್ನು ನಾಮಿನಿ ಆಗಿ ಮಾಡಿಬಿಟ್ಟನು. ಹಾಗೆಯೇ ತನ್ನ ಆಸ್ತಿಯಲ್ಲಿ ಬಿಡಿಗಾಸು ಕೂಡ ಸಿಗುವುದಿಲ್ಲ ಎಂದು ಹೇಳಿದ್ದನು. ಇಂಥ ಘಟನೆಗಳು ನಮ್ಮ ನಡುವೆ ಸಾಕಷ್ಟು ನಡೆಯುತ್ತದೆ.
ಗಂಡನ ಈ ನಿರ್ಧಾರದಿಂದ ಹೆಂಡತಿಗೆ ಕಳವಳ ಮತ್ತು ಆತಂಕ ಎರಡು ಕೂಡ ಶುರುವಾಗಿದೆ. ಸಾಮಾನ್ಯವಾಗಿ ಎಲ್ಲರು ಹೇಳುವ ಹಾಗೆ ಗಂಡನ ಆಸ್ತಿಯಲ್ಲಿ ಹೆಂಡತಿಗೆ ಹಕ್ಕು ಇರುತ್ತದೆ. ಆದರೆ ಅಂಥ ಗಂಡನೆ ಕೋಪ ಮಾಡಿಕೊಂಡು, ನಾಮಿನಿ ಬದಲಾಯಿಸಿ, ನನ್ನ ಆಸ್ತಿಯಲ್ಲಿ ಒಂದು ರೂಪಾಯಿಯನ್ನು ಕೊಡುವುದಿಲ್ಲ ಎಂದು ಹೇಳಿದ್ದಕ್ಕೆ, ಆಕೆಗೆ ಆತಂಕ ಶುರುವಾಗಿ ವಕೀಲರ ಹತ್ತಿರ ಹೋಗಿ ತನ್ನ ಸಮಸ್ಯೆಯನ್ನು ಹೇಳಿಕೊಂಡು, ಆಸ್ತಿಯಲ್ಲಿ ತನಗೆ ಪಾಲು ಸಿಗಬಹುದಾ ಎಂದು ಕೇಳಿದ್ದಾಳೆ.

ವಕೀಲರ ಮಾತಿನ ಪ್ರಕಾರ, ಒಬ್ಬ ವ್ಯಕ್ತಿ ತನ್ನ ಆಸ್ತಿಗೆ (Property) ಯಜಮಾನ ಆಗಿರುವಾಗ ಆತ ಬದುಕಿರುವವರೆಗೂ ತನ್ನ ಆಸ್ತಿಯನ್ನು ಯಾರಿಗೆ ಕೊಡಬೇಕು ಎನ್ನುವ ಪೂರ್ತಿ ಹಕ್ಕು ಅವನದ್ದೇ ಆಗಿರುತ್ತದೆ.
ಆತ ಬದುಕಿದ್ದಾಗ ಯಾರು ಕೂಡ ಅವನ ಆಸ್ತಿಯ ಮೇಲೆ ಹಕ್ಕು ಸಾಧಿಸಲು ಸಾಧ್ಯ ಆಗುವುದಿಲ್ಲ. ಆದರೆ ಹೆಂಡತಿಯು ಗಂಡನ ಆಸ್ತಿಯಿಂದ ಜೀವನಾಂಶ ಪಡೆಯಲು ಒಂದು ದಾರಿ ಇದ್ದು, ಕೋರ್ಟ್ ನಲ್ಲಿ ಕೇಸ್ ಹಾಕುವ ಮೂಲಕ ಜೀವನಾಂಶ ಪಡೆಯಬಹುದು. ಇಲ್ಲಿ ಕೆಲವು ಸಂದರ್ಭಗಳಲ್ಲಿ, ಆಸ್ತಿ ಪಡೆಯುವುದಕ್ಕಿಂತ ಮನುಷ್ಯರ ನಡುವೆ ಇರುವ ಸಂಬಂಧ ಮತ್ತು ವಿಶ್ವಾಸ ಉಳಿಸಿಕೊಳ್ಳುವುದು ಮುಖ್ಯವಾಗುತ್ತದೆ.
ಗಂಡ ಹೆಂಡತಿ ಸಂಬಂಧ ಇರುವಾಗ, ಕೋರ್ಟ್ ಮೊರೆ ಹೋಗದೆ ಮನೆಯ ದೊಡ್ಡವರೆನ್ನು ಕರೆಸಿ, ರಾಜಿ ಮಾಡಿಸಿಕೊಳ್ಳಬಹುದು. ಇದು ಸಹ ಒಳ್ಳೆಯ ಉಪಾಯ ಆಗಿದೆ. ಒಂದು ವೇಳೆ ನೀವು ಜೀವನಾಂಶ ಪಡೆಯಲು ಕೋರ್ಟ್ ನಲ್ಲಿ ಕೇಸ್ ಹಾಕಿದರೆ, ಅದರಿಂದ ಗಂಡನ ಜೊತೆಗೆ ನಿಮ್ಮ ಸಂಬಂಧ ಇನ್ನು ಹಾಳಾಗಬಹುದು. ಹಾಗಾಗಿ ಇಂಥ ಸಂದರ್ಭ ಬಂದಾಗ, ಯೋಚಿಸಿ ನಿರ್ಧಾರ ಮಾಡುವುದು ಒಳ್ಳೆಯದು.
Change in the husband property Sharing to the wife







