ಪಿಎಂ ಕಿಸಾನ್ ಹಣ ನಿಮ್ಮ ಖಾತೆಗೆ ಬರುತ್ತದೆಯೇ? ಇಲ್ಲವೇ? ಚೆಕ್ ಮಾಡುವ ಸರಳ ವಿಧಾನ

ಮಾರ್ಚ್ 13ರಂದು PM Kisan ಯೋಜನೆಯ 22ನೇ ಕಂತಿನ ₹2,000 ರೈತರ ಖಾತೆಗೆ ಜಮೆಯಾಗಲಿದೆ. ನಿಮ್ಮ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿ ಇದೆಯೇ ಎಂದು ಮೊಬೈಲ್ App ಅಥವಾ ವೆಬ್‌ಸೈಟ್ ಮೂಲಕ ಸುಲಭವಾಗಿ ಪರಿಶೀಲಿಸಬಹುದು.

ಕೇಂದ್ರ ಸರ್ಕಾರದ ಪ್ರಮುಖ ರೈತ ಕಲ್ಯಾಣ ಯೋಜನೆಗಳಲ್ಲಿ ಒಂದಾದ PM Kisan Samman Nidhi ಯೋಜನೆಯ 22ನೇ ಕಂತಿನ ಹಣ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ರೈತರು ಬಹುಕಾಲದಿಂದ ಕಾಯುತ್ತಿದ್ದ ಈ ಹಣವನ್ನು ಮಾರ್ಚ್ 13ರಂದು ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡುವುದಾಗಿ ಸರ್ಕಾರ ಸ್ಪಷ್ಟಪಡಿಸಿದೆ.

ಈ ಯೋಜನೆಯಡಿಯಲ್ಲಿ ಅರ್ಹ ರೈತರಿಗೆ ಪ್ರತಿ ಕಂತಿಗೆ ₹2,000 ನೀಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಡಿಬಿಟಿ (Direct Benefit Transfer) ವಿಧಾನದಲ್ಲಿ ಬಟನ್ ಒತ್ತುವ ಮೂಲಕ ಹಣವನ್ನು ರೈತರ ಖಾತೆಗೆ ಜಮೆ ಮಾಡಲಿದ್ದಾರೆ. ಉಗಾದಿ ಹಬ್ಬದ ಮುನ್ನವೇ ರೈತರಿಗೆ ಈ ಹಣ ಸಿಗುವಂತೆ ಸರ್ಕಾರ ಕ್ರಮ ಕೈಗೊಂಡಿದೆ.

ಆದರೆ ಎಲ್ಲ ರೈತರಿಗೆ ಹಣ ಸಿಗುವುದಿಲ್ಲ. ಇತ್ತೀಚೆಗೆ ಕೇಂದ್ರ ಸರ್ಕಾರ ಪರಿಶೀಲನೆ ನಡೆಸಿ ಅನರ್ಹ ರೈತರನ್ನು PM Kisan ಫಲಾನುಭವಿಗಳ ಪಟ್ಟಿಯಿಂದ ತೆಗೆದುಹಾಕಿದೆ. ಆದ್ದರಿಂದ ನಿಮ್ಮ ಹೆಸರು ಪಟ್ಟಿಯಲ್ಲಿ ಇದ್ದರೆ ಮಾತ್ರ ಹಣ ಖಾತೆಗೆ ಬರುತ್ತದೆ.

PM Kisan ಫಲಾನುಭವಿಗಳ ಪಟ್ಟಿಯನ್ನು ಹೀಗೆ ಪರಿಶೀಲಿಸಿ

  1. ಮೊದಲು PM Kisan ಅಧಿಕೃತ ವೆಬ್‌ಸೈಟ್ https://pmkisan.gov.in ತೆರೆಯಿರಿ
  2. ಹೋಮ್ ಪೇಜ್‌ನಲ್ಲಿ ಕೆಳಭಾಗದಲ್ಲಿರುವ Beneficiary List ಆಯ್ಕೆಯನ್ನು ಕ್ಲಿಕ್ ಮಾಡಿ
  3. ನಂತರ ನಿಮ್ಮ State, District, Sub-District, Block, Village ವಿವರಗಳನ್ನು ಆಯ್ಕೆ ಮಾಡಿ
  4. ಬಳಿಕ Submit ಕ್ಲಿಕ್ ಮಾಡಿದರೆ ನಿಮ್ಮ ಗ್ರಾಮದ ಫಲಾನುಭವಿಗಳ ಪಟ್ಟಿ ತೆರೆದುಕೊಳ್ಳುತ್ತದೆ
  5. ಆ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂದು ಪರಿಶೀಲಿಸಬಹುದು

ಪಟ್ಟಿಯಲ್ಲಿ ಹೆಸರು ಇದ್ದರೆ ಮಾತ್ರ ಮುಂದಿನ ಕಂತಿನ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.

ಮೊಬೈಲ್ App ಮೂಲಕ ಕೂಡ ಪರಿಶೀಲಿಸಬಹುದು

ರೈತರು ಈಗ ಮೊಬೈಲ್ ಮೂಲಕವೇ ತಮ್ಮ ಮಾಹಿತಿಯನ್ನು ಪರಿಶೀಲಿಸಬಹುದು.

  1. ಮೊದಲು PM Kisan GoI App ಅನ್ನು Google Play Store ನಿಂದ ಡೌನ್‌ಲೋಡ್ ಮಾಡಿ
  2. ನಿಮ್ಮ PM Kisan Registration ID ನಮೂದಿಸಿ
  3. ರಿಜಿಸ್ಟರ್ ಮಾಡಿದ ಮೊಬೈಲ್ ಸಂಖ್ಯೆಗೆ ಬರುವ OTP ನಮೂದಿಸಿ
  4. Login ಆದ ಬಳಿಕ Beneficiary List ಆಯ್ಕೆ ಮಾಡಿ
  5. ಜಿಲ್ಲೆ, ತಾಲೂಕು, ಗ್ರಾಮ ವಿವರಗಳನ್ನು ಆಯ್ಕೆ ಮಾಡಿ Submit ಕ್ಲಿಕ್ ಮಾಡಿ

ಇದರಿಂದ ನಿಮ್ಮ ಗ್ರಾಮದ ಸಂಪೂರ್ಣ ಲಾಭಧಾರಿಗಳ ಪಟ್ಟಿ ತೆರೆದುಕೊಳ್ಳುತ್ತದೆ ಮತ್ತು ಅದರಲ್ಲಿ ನಿಮ್ಮ ಹೆಸರು ಇದೆಯೇ ಎಂಬುದನ್ನು ಸುಲಭವಾಗಿ ಪರಿಶೀಲಿಸಬಹುದು.

e-KYC ಕಡ್ಡಾಯ

PM Kisan ಹಣ ಪಡೆಯಲು ಫಲಾನುಭವಿಗಳ ಪಟ್ಟಿಯಲ್ಲಿ ಹೆಸರು ಇದ್ದರೆ ಮಾತ್ರ ಸಾಕಾಗುವುದಿಲ್ಲ. ರೈತರು e-KYC ಪೂರ್ಣಗೊಳಿಸಿರಬೇಕು.

ಇದನ್ನು, PM Kisan ವೆಬ್‌ಸೈಟ್ ಮೂಲಕ, ಮೊಬೈಲ್ App ಮೂಲಕ ಅಥವಾ CSC ಕೇಂದ್ರಗಳಲ್ಲಿ ಸಹ ಮಾಡಿಸಬಹುದು.
e-KYC ಮಾಡದಿದ್ದರೆ ಮುಂದಿನ ಕಂತಿನ ಹಣ ಖಾತೆಗೆ ಬರದೇ ಇರುವ ಸಾಧ್ಯತೆ ಇದೆ.

TRENDING ARTICLES1 / 3
Show More

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories