India News

ಚೆನ್ನೈ ಮಳೆ ಅವಾಂತರ, ಸೂಪರ್ ಸ್ಟಾರ್ ರಜನಿಕಾಂತ್ ಮನೆಗೆ ನುಗ್ಗಿದ ಮಳೆ ನೀರು

Chennai Rains : ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ತಮಿಳುನಾಡಿನ (Tamil Nadu) ರಾಜಧಾನಿ ಚೆನ್ನೈನಲ್ಲಿ ಅವಾಂತರ ಸೃಷ್ಟಿಸುತ್ತಿದೆ. ಚೆನ್ನೈನಲ್ಲಿ 19 ಸೆಂ.ಮೀ ಭಾರೀ ಮಳೆ ದಾಖಲಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಹಳದಿ ಅಲರ್ಟ್ ಘೋಷಿಸಿದೆ (Weather Update).

ಭಾರಿ ಮಳೆಯಿಂದಾಗಿ (Heavy Rains) ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಸಂತ್ರಸ್ತರಿಗಾಗಿ 931 ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮಳೆ ಪೀಡಿತ ಪ್ರದೇಶಗಳಲ್ಲಿ 16 ಸಾವಿರ ಸ್ವಯಂಸೇವಕರು ಕೆಲಸ ಮಾಡುತ್ತಿದ್ದಾರೆ.

ಚೆನ್ನೈ ಮಳೆ ಅವಾಂತರ, ಸೂಪರ್ ಸ್ಟಾರ್ ರಜನಿಕಾಂತ್ ಮನೆಗೆ ನುಗ್ಗಿದ ಮಳೆ ನೀರು

ರಾಜ್ಯಾದ್ಯಂತ 65 ಸಾವಿರ ಜನರು ಸರ್ಕಾರಿ ಸೇವೆ ನೀಡುತ್ತಿದ್ದಾರೆ. ಈನಡುವೆ ಜನಸಾಮಾನ್ಯರು ಸೇರಿದಂತೆ ಸೆಲೆಬ್ರಿಟಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಪಟ್ಟಿಗೆ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಸೇರ್ಪಡೆಯಾಗಿದ್ದಾರೆ. ರಜನಿಕಾಂತ್ ಅವರ ಚೆನ್ನೈ ಬಂಗಲೆ ಮನೆಗೆ ಮಳೆ ನೀರು ನುಗ್ಗಿದೆ.

ಚೆನ್ನೈನಲ್ಲಿ 2ನೇ ದಿನವೂ ಭಾರೀ ಮಳೆ, ಪ್ರವಾಹಕ್ಕೆ ಸಿಲುಕಿರುವ ಚೆನ್ನೈಗೆ IMD ರೆಡ್ ಅಲರ್ಟ್

ರಜನಿಕಾಂತ್ ಅವರ ಮನೆಗೆ ನುಗ್ಗಿದ ಮಳೆ ನೀರು

ಮಂಗಳವಾರದಿಂದ ಚೆನ್ನೈನಲ್ಲಿ ಭಾರೀ ಮಳೆಯಾಗುತ್ತಿದೆ. ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಈ ಹಿನ್ನೆಲೆಯಲ್ಲಿ ಮೆಟ್ರೋ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ಚೆನ್ನೈನಿಂದ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ರಸ್ತೆಗಳಲ್ಲಿ ನೀರು ತುಂಬಿಕೊಂಡಿದ್ದರಿಂದ ವಾಹನಗಳು ಎಲ್ಲೆಂದರಲ್ಲಿ ಸಿಲುಕಿಕೊಂಡಿವೆ. ಫ್ಲೈಓವರ್‌ಗಳ ಮೇಲೆ ಕಾರುಗಳನ್ನು ನಿಲ್ಲಿಸಲಾಗಿದೆ.

ರಜನಿಕಾಂತ್ ಅವರ ಮನೆಗೂ (Actor Rajinikanth House) ಭಾರೀ ಪ್ರಮಾಣದಲ್ಲಿ ನೀರು ನುಗ್ಗಿದೆ. ರಜನಿ ಮನೆ ಆವರಣಕ್ಕೆ ಪ್ರವಾಹದ ನೀರು ನುಗ್ಗಿದ ಪರಿಣಾಮ ಅವರು ಬೇರೊಂದು ಮನೆಗೆ ಶಿಫ್ಟ್ ಆಗಿದ್ದಾರೆ ಎನ್ನಲಾಗಿದೆ.

Chennai Floods Affect Rajinikanth’s Poes Garden House

Our Whatsapp Channel is Live Now 👇

Whatsapp Channel

Related Stories