ಮಹಾರಾಷ್ಟ್ರದಲ್ಲಿ ಚಿಕೂನ್ ಗುನ್ಯಾ ಪ್ರಕರಣಗಳು ಹೆಚ್ಚಳ
Chikungunya : ಮಹಾರಾಷ್ಟ್ರದಲ್ಲಿ ಚಿಕೂನ್ ಗುನ್ಯಾ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 39 ರಷ್ಟು ಹೆಚ್ಚಳ ಕಂಡು ಬಂದಿದೆ.

- ಮಹಾರಾಷ್ಟ್ರದಲ್ಲಿ ಚಿಕೂನ್ ಗುನ್ಯಾ
- ಈವರೆಗೂ 658 ಚಿಕನ್ಗುನ್ಯಾ ಪ್ರಕರಣಗಳು ವರದಿ
- ಮಲೇರಿಯಾ, ಡೆಂಗ್ಯೂ ಪ್ರಕರಣಗಳಲ್ಲಿ ಇಳಿಕೆ
ಮಹಾರಾಷ್ಟ್ರದಲ್ಲಿ (Maharashtra) ಚಿಕೂನ್ ಗುನ್ಯಾ (Chikungunya) ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆ. ರಾಜ್ಯದಲ್ಲಿ ಮಲೇರಿಯಾ ಮತ್ತು ಡೆಂಗ್ಯೂಗಳು ಪ್ರಸ್ತುತ ಹೆಚ್ಚಾಗಿ ನಿಯಂತ್ರಣದಲ್ಲಿದ್ದರೂ, ಚಿಕೂನ್ ಗುನ್ಯಾ ಹರಡುವಿಕೆಯು ಕಳವಳಕ್ಕೆ ಕಾರಣವಾಗಿದೆ.
ಇದರಿಂದ ಮಹಾರಾಷ್ಟ್ರ ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚರಗೊಂಡಿದ್ದಾರೆ. ಚಿಕೂನ್ಗುನ್ಯಾ ಪ್ರಕರಣಗಳನ್ನು ತಡೆಗಟ್ಟಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
ರಾಷ್ಟ್ರೀಯ ವೆಕ್ಟರ್-ಬೋರ್ನ್ ಡಿಸೀಸ್ ಕಂಟ್ರೋಲ್ ಸೆಂಟರ್ (NCVBDC) ಪ್ರಕಾರ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಇಲ್ಲಿಯವರೆಗೆ ಚಿಕೂನ್ಗುನ್ಯಾ ಪ್ರಕರಣಗಳು ಶೇಕಡಾ 39 ರಷ್ಟು ಹೆಚ್ಚಾಗಿದೆ.
2024 ರಲ್ಲಿ 473 ರಷ್ಟಿದ್ದ ಚಿಕೂನ್ ಗುನ್ಯಾ ಪ್ರಕರಣಗಳು ಈ ವರ್ಷ ಏಪ್ರಿಲ್ 21 ರ ವೇಳೆಗೆ 658 ಕ್ಕೆ ಏರಿವೆ. ಅದೇ ಸಮಯದಲ್ಲಿ, ಕಳೆದ ವರ್ಷಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಮಲೇರಿಯಾ ಪ್ರಕರಣಗಳು ಸ್ವಲ್ಪ ಕಡಿಮೆಯಾಗಿದೆ.
2024 ರಲ್ಲಿ 2,867 ಮಲೇರಿಯಾ ಪ್ರಕರಣಗಳು ದಾಖಲಾಗಿದ್ದವು, ಆದರೆ ಈ ವರ್ಷ 2,726 ಕ್ಕೆ ಇಳಿದಿದೆ. ಡೆಂಗ್ಯೂ ಸೋಂಕುಗಳು ಸಹ 1,639 ರಿಂದ 1,373 ಕ್ಕೆ ಇಳಿದಿವೆ.
ಆದಾಗ್ಯೂ, ಒಳ್ಳೆಯ ಸುದ್ದಿ ಏನೆಂದರೆ, 2025 ರಲ್ಲಿ ಇಲ್ಲಿಯವರೆಗೆ, ಡೆಂಗ್ಯೂ, ಮಲೇರಿಯಾ, ಚಿಕೂನ್ಗುನ್ಯಾ ಮತ್ತು ಜಿಕಾದಂತಹ ಕಾಯಿಲೆಗಳಿಂದ ಯಾವುದೇ ಸಾವುಗಳು ಸಂಭವಿಸಿಲ್ಲ.
ರೋಗಗಳನ್ನು ಮೊದಲೇ ಪತ್ತೆಹಚ್ಚುವುದು ಮತ್ತು ಸಕಾಲಿಕ ಚಿಕಿತ್ಸೆ ನೀಡುವುದರಿಂದ ಸಾವುಗಳು ಕಡಿಮೆಯಾಗುತ್ತಿವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
Chikungunya cases surge in Maharashtra







