ಬೆಲೆ ಏರಿಕೆ! 10 ರೂಪಾಯಿ ಇದ್ದ ಸಿಗರೇಟ್ ಈಗ ಎಷ್ಟಾಗಿದೆ ಗೊತ್ತಾ? ಧೂಮಪಾನಿಗಳಿಗೆ ಶಾಕ್
Cigarette Prices Hike: ಬಜೆಟ್ 2026-27ರಲ್ಲಿ ಸಿಗರೇಟ್ ಮೇಲಿನ ಹೊಸ ತೆರಿಗೆ ಜಾರಿಗೆ ಬಂದು, ಎಕ್ಸೈಸ್ ಹಾಗೂ ಜಿಎಸ್‌ಟಿ ಹೆಚ್ಚಳದಿಂದ ಸಾಮಾನ್ಯ ಸಿಗರೇಟ್ ಬೆಲೆಗಳು ತಕ್ಷಣವೇ ಏರಿಕೆಯಾಗಿದ್ದು ದೇಶಾದ್ಯಂತ ಗ್ರಾಹಕರಿಗೆ ಶಾಕ್ ನೀಡಿವೆ

- ಬಜೆಟ್ ನಿರ್ಧಾರದಿಂದ ಸಿಗರೇಟ್ ಬೆಲೆ ಏರಿಕೆ
- ಹೊಸ ತೆರಿಗೆ ವ್ಯವಸ್ಥೆ, ಪ್ರತಿ ಸಿಗರೇಟ್ ದುಬಾರಿ
- ಸಿಗರೇಟ್ ಪ್ಯಾಕ್ ಬೆಲೆ ಒಂದೇ ಹೊಡೆತದಲ್ಲಿ ಹೆಚ್ಚಳ
Cigarette Prices Rise: 2026-27ರ ಕೇಂದ್ರ ಬಜೆಟ್ ಬಳಿಕ ಧೂಮಪಾನ ಮಾಡುವವರಿಗೆ ಕೆಟ್ಟ ಸುದ್ದಿ ಎದುರಾಗಿದೆ. ಸಿಗರೇಟ್ ಹಾಗೂ ಇತರೆ ತಂಬಾಕು ಉತ್ಪನ್ನಗಳ ಮೇಲೆ ಸರ್ಕಾರ ಹೊಸ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಇದರ ಪರಿಣಾಮವಾಗಿ ಮಾರುಕಟ್ಟೆಯಲ್ಲಿ ಬೆಲೆಗಳು ತಕ್ಷಣವೇ ಏರಿಕೆಯಾಗಿದೆ.
ಈಗಾಗಲೇ ತೆರಿಗೆ ಭಾರದಲ್ಲಿದ್ದ ಸಿಗರೇಟ್‌ಗಳಿಗೆ ಮತ್ತಷ್ಟು ಶುಲ್ಕ ಸೇರ್ಪಡೆ ಆಗಿದ್ದು, ಗ್ರಾಹಕರ ಜೇಬಿಗೆ ನೇರ ಹೊಡೆತ ಬಿದ್ದಿದೆ. ಫೆಬ್ರವರಿ 1ರಿಂದ ಈ ಹೊಸ ತೆರಿಗೆ ನಿಯಮಗಳು ಜಾರಿಯಾಗಿದ್ದು, ಅಂಗಡಿಗಳಲ್ಲಿ ಬೆಲೆ ಬದಲಾವಣೆ ಸ್ಪಷ್ಟವಾಗಿ ಕಾಣಿಸುತ್ತಿದೆ.
ಹಳೆಯ ಪದ್ದತಿ ರದ್ದು, ಹೊಸ ತೆರಿಗೆ ಜಾರಿ
ಇಲ್ಲಿವರೆಗೆ ಸಿಗರೇಟ್‌ಗಳ ಮೇಲೆ 28% ಜಿಎಸ್‌ಟಿ ಹಾಗೂ ಪರಿಹಾರ ಸೆಸ್ ವಿಧಿಸಲಾಗುತ್ತಿತ್ತು. ಈ ವ್ಯವಸ್ಥೆ 2017ರಿಂದಲೇ ಜಾರಿಯಲ್ಲಿತ್ತು. ಆದರೆ ಈಗ ಆ ಹಳೆಯ ಮಾದರಿಯನ್ನು ಕೈಬಿಟ್ಟು, ಸರ್ಕಾರ ಹೊಸ ತೆರಿಗೆ ರಚನೆಯನ್ನು ಅಳವಡಿಸಿದೆ.
ಹೊಸ ವ್ಯವಸ್ಥೆಯಂತೆ ಎಕ್ಸೈಸ್ ಸುಂಕ, ಆರೋಗ್ಯ ಸೆಸ್, ರಾಷ್ಟ್ರೀಯ ಭದ್ರತಾ ಸೆಸ್ ಜೊತೆಗೆ 40% ಜಿಎಸ್‌ಟಿ ವಿಧಿಸಲಾಗುತ್ತಿದೆ. ಇದರಿಂದ ಉತ್ಪಾದನಾ ವೆಚ್ಚ ಮಾತ್ರವಲ್ಲ, ಚಿಲ್ಲರೆ ಬೆಲೆಯೂ ಗಣನೀಯವಾಗಿ ಏರಿಕೆಯಾಗಿದೆ.
ಈಗ ಸಿಗರೇಟ್ ಬೆಲೆ ಎಷ್ಟು?
ಹಿಂದೆ ರೂ.10ಕ್ಕೆ ಲಭ್ಯವಿದ್ದ ಸಾಮಾನ್ಯ ಸಿಗರೇಟ್ ಈಗ ರೂ.12 ರಿಂದ ರೂ.13ಕ್ಕೆ ಏರಿಕೆಯಾಗಿದೆ. ಒಂದೇ ಸಿಗರೇಟ್ ಮೇಲೆ ರೂ.2–3 ಎಕ್ಸೈಸ್ ಸುಂಕ ಹೆಚ್ಚಾಗಿದೆ.
ಹತ್ತು ಸಿಗರೇಟ್‌ಗಳ ಪ್ಯಾಕ್ ಕೂಡ ಈಗ ದುಬಾರಿಯಾಗಿದೆ. ಹಿಂದೆ ರೂ.100 ಇದ್ದ ಪ್ಯಾಕ್ ಬೆಲೆ ಇದೀಗ ರೂ.130–140ರ ಮಟ್ಟಕ್ಕೆ ತಲುಪಿದೆ. ಪ್ರೀಮಿಯಂ ಸಿಗರೇಟ್‌ಗಳ ಮೇಲೆ ಇನ್ನಷ್ಟು ಹೊರೆ ಬಿದ್ದಿದ್ದು, ಒಂದಕ್ಕೆ ರೂ.3.6 ರಿಂದ ರೂ.4ರವರೆಗೆ ಬೆಲೆ ಹೆಚ್ಚಾಗಿದೆ.
ಮುಂದೇನು ಪರಿಣಾಮ?
ಬೆಲೆ ಏರಿಕೆಯಿಂದ ಸಿಗರೇಟ್ ಮಾರಾಟದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಕೆಲವರು ಬಳಕೆಯನ್ನು ಕಡಿಮೆ ಮಾಡುವ ನಿರೀಕ್ಷೆಯಿದ್ದರೂ, ಮತ್ತೊಂದೆಡೆ ಕಳ್ಳಸಾಗಣೆ ಹಾಗೂ ಅಕ್ರಮ ಮಾರಾಟ ಹೆಚ್ಚಾಗುವ ಭೀತಿ ಕೂಡ ವ್ಯಕ್ತವಾಗುತ್ತಿದೆ. ಒಟ್ಟಾರೆ, ಬಜೆಟ್ ನಿರ್ಧಾರ ಧೂಮಪಾನಿಗಳ ಬದುಕಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ.






