ಇಂದೇ ಈ ಕೆಲಸ ಮಾಡದಿದ್ದರೆ 300 ರೂಪಾಯಿ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಸಿಗುವುದಿಲ್ಲ

ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಮಹತ್ವದ ಎಚ್ಚರಿಕೆ ನೀಡಲಾಗಿದೆ. ಮಾರ್ಚ್ 31ರೊಳಗೆ eKYC ಪೂರ್ಣಗೊಳಿಸದಿದ್ದರೆ 300 ರೂಪಾಯಿ ಗ್ಯಾಸ್ ಸಿಲಿಂಡರ್ ಸಬ್ಸಿಡಿ ನಿಲ್ಲಬಹುದು ಎಂದು ತೈಲ ಕಂಪನಿಗಳು ತಿಳಿಸಿವೆ.

Gas Cylinder Subsidy: ದೇಶದ ಬಡ ಕುಟುಂಬಗಳಿಗೆ ಕಡಿಮೆ ಬೆಲೆಗೆ ಅಡುಗೆ ಗ್ಯಾಸ್ ಒದಗಿಸಲು ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಉಜ್ವಲ ಯೋಜನೆ (PMUY) ಅನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಲಕ್ಷಾಂತರ ಕುಟುಂಬಗಳಿಗೆ ಉಚಿತ ಗ್ಯಾಸ್ ಸಂಪರ್ಕ ನೀಡಲಾಗಿದೆ. ಜೊತೆಗೆ ಮೊದಲ ಸಿಲಿಂಡರ್ ಉಚಿತವಾಗಿ ನೀಡಲಾಗಿದ್ದು, ನಂತರದ ರಿಫಿಲ್‌ಗಳಿಗೆ ಸಬ್ಸಿಡಿ ನೀಡಲಾಗುತ್ತಿದೆ.

ಪ್ರಸ್ತುತ 14.2 ಕಿಲೋಗ್ರಾಂ ಗ್ಯಾಸ್ ಸಿಲಿಂಡರ್‌ಗೆ ₹300 ರೂಪಾಯಿ ಸಬ್ಸಿಡಿ ನೀಡಲಾಗುತ್ತದೆ. ಈ ಹಣವನ್ನು ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್‌ಫರ್ (DBT) ಮೂಲಕ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

eKYC ಮಾಡುವುದು ಈಗ ಕಡ್ಡಾಯ

ಈ ಸಬ್ಸಿಡಿ ಪಡೆಯುತ್ತಿರುವ ಉಜ್ವಲ ಯೋಜನೆ ಫ್ಯಾನನುಭವಿಗಳಿಗೆ ಕೇಂದ್ರ ಸರ್ಕಾರ ಹೊಸ ನಿಯಮವನ್ನು ಜಾರಿಗೆ ತಂದಿದೆ. ಅದರಂತೆ ಪ್ರತಿಯೊಬ್ಬರೂ ಪ್ರತಿ ಆರ್ಥಿಕ ವರ್ಷದಲ್ಲಿ ಕನಿಷ್ಠ ಒಂದು ಬಾರಿ eKYC ಮಾಡಿಸಿಕೊಳ್ಳುವುದು ಕಡ್ಡಾಯ ಎಂದು ತಿಳಿಸಲಾಗಿದೆ.

ಸರ್ಕಾರಿ ತೈಲ ಕಂಪನಿಯಾದ ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಸೇರಿದಂತೆ ಹಲವು ಕಂಪನಿಗಳು ಈ ಕುರಿತು ಮಾಹಿತಿ ನೀಡಿವೆ. 14.2 ಕಿಲೋ ಸಿಲಿಂಡರ್ ಬಳಸುವವರಿಗೆ 8 ಮತ್ತು 9ನೇ ರಿಫಿಲ್‌ಗಳ ಸಬ್ಸಿಡಿ ಪಡೆಯಲು ಆಧಾರ್ ಆಧಾರಿತ ಬಯೋಮೆಟ್ರಿಕ್ ದೃಢೀಕರಣ ಅಗತ್ಯವಾಗುತ್ತದೆ ಎಂದು ತಿಳಿಸಲಾಗಿದೆ.

ಇನ್ನು 5 ಕಿಲೋ ಗ್ಯಾಸ್ ಸಿಲಿಂಡರ್ ಬಳಸುವವರಿಗೂ ಈ ನಿಯಮ ಅನ್ವಯವಾಗಿದ್ದು, ಸುಮಾರು 21ನೇ ರಿಫಿಲ್‌ವರೆಗೆ ಸಬ್ಸಿಡಿ ಪಡೆಯಲು eKYC ಅವಶ್ಯಕವಾಗಿದೆ.

ಮಾರ್ಚ್ 31 ಕೊನೆಯ ದಿನ

₹300 ಗ್ಯಾಸ್ ಸಬ್ಸಿಡಿ ನಿರಂತರವಾಗಿ ಪಡೆಯಲು ಮಾರ್ಚ್ 31, 2026ರೊಳಗೆ eKYC ಪೂರ್ಣಗೊಳಿಸಬೇಕು. ಈ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಸಬ್ಸಿಡಿ ಹಣ ಬ್ಯಾಂಕ್ ಖಾತೆಗೆ ಜಮಾ ಆಗುವುದಿಲ್ಲ. ಕೆಲವು ಸಂದರ್ಭಗಳಲ್ಲಿ ಗ್ಯಾಸ್ ರಿಫಿಲ್ ಸೇವೆಗಳಲ್ಲೂ ತೊಂದರೆ ಉಂಟಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದ್ದರಿಂದ ಉಜ್ವಲ ಯೋಜನೆಯ ಜನರು ಕೊನೆಯ ದಿನದವರೆಗೆ ಕಾಯದೇ ತಕ್ಷಣ eKYC ಪ್ರಕ್ರಿಯೆ ಪೂರ್ಣಗೊಳಿಸುವುದು ಉತ್ತಮ ಎಂದು ಸಲಹೆ ನೀಡಲಾಗಿದೆ.

eKYC ಹೇಗೆ ಮಾಡಬಹುದು?

eKYC ಪ್ರಕ್ರಿಯೆ ಬಹಳ ಸರಳವಾಗಿದೆ.

ಗ್ಯಾಸ್ ಸಿಲಿಂಡರ್ ವಿತರಣೆ ಮಾಡಲು ಮನೆಗೆ ಬರುವ ಡೆಲಿವರಿ ಸಿಬ್ಬಂದಿಯ ಬಳಿ ಇರುವ ಬಯೋಮೆಟ್ರಿಕ್ ಯಂತ್ರದ ಮೂಲಕ ಮಾಡಿಸಬಹುದು.

ಅಥವಾ ಆನ್‌ಲೈನ್ ಮೂಲಕವೂ ಪ್ರಕ್ರಿಯೆ ಪೂರ್ಣಗೊಳಿಸಬಹುದು.

ಅಗತ್ಯವಿದ್ದರೆ ನಿಮ್ಮ ಗ್ಯಾಸ್ ಏಜೆನ್ಸಿ ಕಚೇರಿಗೆ ಭೇಟಿ ನೀಡಿ ಕೂಡ eKYC ಮಾಡಿಸಿಕೊಳ್ಳಬಹುದು.

ಪ್ರತಿ ವರ್ಷ ಒಂದು ಬಾರಿ eKYC ಮಾಡಿದರೆ ಗ್ಯಾಸ್ ಸಬ್ಸಿಡಿ ಮತ್ತು ರಿಫಿಲ್ ಸೇವೆಗಳು ಯಾವುದೇ ಅಡಚಣೆ ಇಲ್ಲದೆ ಮುಂದುವರಿಯುತ್ತವೆ.

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories