ಪರಾರಿಯಾಗುತ್ತಿದ್ದ ಆರೋಪಿಗಳ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ, ರಕ್ಷಿಸಲು ಹೋದ ಪೊಲೀಸ್ ಸಾವು
ಕಾರಿನಲ್ಲಿ ಪರಾರಿಯಾಗುತ್ತಿದ್ದ ಆರೋಪಿಗಳು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾರೆ. ಈ ಪ್ರಕ್ರಿಯೆಯಲ್ಲಿ ರಕ್ಷಿಸಲು ಹೋದ ಪೊಲೀಸ್ ಕಾನ್‌ಸ್ಟೆಬಲ್ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ.

ಉತ್ತರ ಪ್ರದೇಶದ (Uttar Pradesh) ಬಿಜ್ನೋರ್ ಜಿಲ್ಲೆಯ ಒಂದು ದುರ್ಘಟನೆಯು ರಾಷ್ಟ್ರದಾದ್ಯಂತ ತೀವ್ರ ಆಘಾತ ಉಂಟುಮಾಡಿದೆ. ಮೇ 16ರಂದು ರಾತ್ರಿ 9 ಗಂಟೆ ಸುಮಾರಿಗೆ ಕೆಲ ಆರೋಪಿಗಳು ಲಾರಿ ಚಾಲಕನ ಮೇಲೆ ದಾಳಿ ಮಾಡಿ ನಂತರ ಪೋಲೀಸರ ಮೇಲೆಯೂ (firing) ಗುಂಡು ಹಾರಿಸಿ ಕಾರಿನಲ್ಲಿ ಪರಾರಿಯಾಗಿದ್ದರು.
ಪರಾರಿಯಾಗುವ ಆತುರದಲ್ಲಿ ಅವರು ಚಕ್ಕರ್ ಚೌಕ್ ಬಳಿ ಇದ್ದ ಹೈಟೆನ್ಷನ್ ವಿದ್ಯುತ್ ಕಂಬವನ್ನು ಢಿಕ್ಕಿ ಹೊಡೆದು, ಕಾರು ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಕಾಲುವೆಗೆ ಬಿದ್ದುಹೋಯಿತು. ಕಾರಿನಲ್ಲಿ ಮೂವರು ಇದ್ದು, ಇಬ್ಬರು ಪರಾರಿಯಾಗಿದ್ದು, ಒಬ್ಬ ನೀರಜ್ ಎಂಬಾತ ಕಾರಿನೊಳಗೇ ಸಿಕ್ಕಿಹಾಕಿಕೊಂಡಿದ್ದ.
ಅವರನ್ನು ಹಿಂಬಾಲಿಸಿದ್ದ ಮನೋಜ್ ಕುಮಾರ್ ಮತ್ತು ಗಂಗಾರಾಂ ಎಂಬ ಇಬ್ಬರು ಕಾನ್‌ಸ್ಟೆಬಲ್‌ಗಳು (constables) ಕಾಲುವೆಗೆ ಇಳಿದು ಆತನನ್ನು ರಕ್ಷಿಸಲು ಮುಂದಾದರು. ಆದರೆ ಅವರಿಗೆ ಕಾಲುವೆಗೆ ಬಿದ್ದಿದ್ದ ವಿದ್ಯುತ್ ತಂತಿ (high tension wire) ಗಮನಕ್ಕೆ ಬಂದಿರಲಿಲ್ಲ. ಅವರಿಬ್ಬರಿಗೂ ಶಾಕ್ ಬಡಿದು ಅಲ್ಲಿಯೇ ಕುಸಿದು ಬಿದ್ದರು.
ತಕ್ಷಣವೇ ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮನೋಜ್ ಕುಮಾರ್ ಕೊನೆಯುಸಿರೆಳೆದರು. ಗಂಗಾರಾಂ ಅವರ ಸ್ಥಿತಿ ಗಂಭೀರವಾಗಿದೆ. ಇಡೀ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (social media) ವೈರಲ್ ಆಗಿದೆ.
ನೀರಜ್‌ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಉಳಿದವರು ಇನ್ನೂ ಪತ್ತೆಯಾಗಿಲ್ಲ, ಹುಡುಕಾಟ ಮುಂದುವರಿದಿದೆ.
Cop Dies Saving Criminal from Car Accident in UP
⚠️Trigger Warning : Disturbing Video⚠️
यूपी के जिला बिजनौर में 16 मई की रात सिपाही मनोज की मौत का वीडियो सामने आया। बदमाशों की कार बिजली का खंभा तोड़ती हुई नहर में गिरी। बदमाशों को पकड़ने कई पुलिसकर्मी नहर में कूद पड़े। तभी पानी में करंट उतर आया। एक पुलिसकर्मी चपेट में आ गया। pic.twitter.com/hT1ipdkk2q
— Sachin Gupta (@SachinGuptaUP) May 18, 2025







