Crime: ಚಲಿಸುವ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ, ಡ್ಯಾಶ್‌ಕ್ಯಾಮ್ ತೆರೆದಿಟ್ಟ ಭೀಕರ ಸತ್ಯ
ಉದಯಪುರದಲ್ಲಿ ಕಂಪನಿ ಸಿಇಒ ಹುಟ್ಟುಹಬ್ಬದ ಪಾರ್ಟಿ ನಂತರ ಮಹಿಳಾ ಉದ್ಯೋಗಿಯ ಮೇಲೆ ಚಲಿಸುತ್ತಿದ್ದ ಕಾರಿನಲ್ಲಿ ನಡೆಸಿದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಡ್ಯಾಶ್‌ಕ್ಯಾಮ್ ದೃಶ್ಯಗಳು ಬಹಿರಂಗಪಡಿಸಿವೆ.
- ಚಲಿಸುವ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ
- ಡ್ಯಾಶ್‌ಕ್ಯಾಮ್ ಫುಟೇಜ್ ಆಧಾರವಾಗಿ ಪ್ರಕರಣ ದಾಖಲು
- ಉದಯಪುರ ಪೊಲೀಸರಿಂದ 3 ಆರೋಪಿಗಳ ಬಂಧನ
Udaipur Crime: ರಾಜಸ್ಥಾನದ ಉದಯಪುರದಲ್ಲಿ ನಡೆದ ಈ ಭೀಕರ ಘಟನೆ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ಹುಟ್ಟಿಸಿದೆ. ಕಂಪನಿಯ ಸಿಇಒ ಹುಟ್ಟುಹಬ್ಬದ ಸಂಭ್ರಮದ ನಂತರ, ಮಹಿಳಾ ಉದ್ಯೋಗಿಯನ್ನು ಮನೆಗೆ ಬಿಡುವುದಾಗಿ ನಂಬಿಸಿ ಚಲಿಸುತ್ತಿದ್ದ ಕಾರಿನಲ್ಲೇ (Gang Rape in Moving Car) ಲೈಂಗಿಕ ದೌರ್ಜನ್ಯ ಎಸಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪೊಲೀಸರ ಮಾಹಿತಿ ಪ್ರಕಾರ, ಶೋಭಾಗಪುರ ಪ್ರದೇಶದ ಹೋಟೆಲ್‌ನಲ್ಲಿ ರಾತ್ರಿ ಆರಂಭವಾದ ಪಾರ್ಟಿ ತಡರಾತ್ರಿ ವರೆಗೆ ಮುಂದುವರಿದಿತ್ತು. ಕಾರ್ಯಕ್ರಮ ಮುಗಿದ ಬಳಿಕ ಮನೆಗೆ ಬಿಡುತ್ತೇವೆ ಎಂದು ಹೇಳಿದ ಆರೋಪಿಗಳು, ಮಾರ್ಗಮಧ್ಯೆ ಸಿಗರೇಟಿನಂತೆ ಕಾಣುವ ಮದ್ದು ನೀಡಿದ್ದು, ಅದನ್ನು ಸೇವಿಸಿದ ಬಳಿಕ ತಾನು ಅಚೇತನ ಸ್ಥಿತಿಗೆ ಜಾರಿದೆ ಎಂದು ಪೀಡಿತೆ ದೂರಿನಲ್ಲಿ ವಿವರಿಸಿದ್ದಾಳೆ.
ಇದನ್ನೂ ಓದಿ: ಆರು ವರ್ಷದ ಮಗಳ ಹತ್ಯೆ, ಹೆತ್ತ ತಾಯಿಯಿಂದಲೇ ನಡೆದ ಕ್ರೂರ ಕೃತ್ಯ
ಡ್ಯಾಶ್‌ಕ್ಯಾಮ್‌ನಿಂದ ಸತ್ಯ ಬಹಿರಂಗ
ಪ್ರಜ್ಞೆ ಬಂದ ಮೇಲೆ ದೇಹದ ಮೇಲೆ ಗಾಯಗಳು, ವೈಯಕ್ತಿಕ ವಸ್ತುಗಳು ಕಳೆದುಹೋಗಿರುವುದು ಪೀಡಿತೆಗೆ ಅನುಮಾನ ಹುಟ್ಟಿಸಿತು. ಬಳಿಕ ಕಾರಿನಲ್ಲಿ ಅಳವಡಿಸಲಾಗಿದ್ದ ಡ್ಯಾಶ್‌ಕ್ಯಾಮ್ ದೃಶ್ಯಗಳನ್ನು (Car Dashcam) ಪರಿಶೀಲಿಸಿದಾಗ, ನಡೆದ ದೌರ್ಜನ್ಯ ಸಂಪೂರ್ಣವಾಗಿ ದಾಖಲಾಗಿರುವುದು ಗೊತ್ತಾಗಿದೆ. ಈ ಫುಟೇಜ್ ಆಧಾರವಾಗಿಸಿಕೊಂಡು ಪೊಲೀಸರು ತಕ್ಷಣವೇ ಪ್ರಕರಣ ದಾಖಲಿಸಿದರು.
ಡಿಸೆಂಬರ್ 21ರ ತಡರಾತ್ರಿ ಘಟನೆ ನಡೆದಿದ್ದು, ಡಿಸೆಂಬರ್ 23ರಂದು ಅಧಿಕೃತ ದೂರು ಸಲ್ಲಿಸಲಾಗಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿದೆ.
ಪ್ರಕರಣದ ತನಿಖೆಯನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕರಿಗೆ ವಹಿಸಲಾಗಿದ್ದು, ಡ್ಯಾಶ್‌ಕ್ಯಾಮ್‌ನ ಆಡಿಯೋ–ವೀಡಿಯೋ ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ. ಈ ಸಂಬಂಧ ಸಿಇಒ ಸೇರಿ ಮೂವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.



