ದೆಹಲಿಯಲ್ಲಿ ಭಾರೀ ವಾಯು ಮಾಲಿನ್ಯ, ಕಣ್ಣು ಉರಿ, ಉಸಿರಾಟಕ್ಕೂ ಕಷ್ಟ!

Story Highlights

Air Pollution: ದೇಶದ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಮುಂದುವರಿದಿದೆ. ದಿನದಿಂದ ದಿನಕ್ಕೆ ಮಾಲಿನ್ಯ ಹೆಚ್ಚಾಗುತ್ತಿದ್ದು, ಜನರು ತೊಂದರೆ ಅನುಭವಿಸುತ್ತಿದ್ದಾರೆ.

Air Pollution: ದೇಶದ ರಾಜಧಾನಿ ದೆಹಲಿಯಲ್ಲಿ (Delhi) ವಾಯು ಮಾಲಿನ್ಯ ಮುಂದುವರಿದಿದೆ. ದಿನದಿಂದ ದಿನಕ್ಕೆ ಮಾಲಿನ್ಯ ಹೆಚ್ಚಾಗುತ್ತಿದ್ದು, ಜನರು ತೊಂದರೆ ಅನುಭವಿಸುತ್ತಿದ್ದಾರೆ. ಒಂದೆಡೆ ವಾಯು ಮಾಲಿನ್ಯದಿಂದ ಉಸಿರಾಟ ಕಷ್ಟವಾದರೆ.. ಮತ್ತೊಂದೆಡೆ ಜಲಮಾಲಿನ್ಯದಿಂದ ನರಳುತ್ತಿದ್ದಾರೆ.

ಯೌನಾ ನದಿಯಲ್ಲಿ ಮಾಲಿನ್ಯದ ಮಟ್ಟ ವಿಪರೀತವಾಗಿದೆ. ಮಂಗಳವಾರ ಬೆಳಗ್ಗೆ ರಾಷ್ಟ್ರ ರಾಜಧಾನಿ ನಗರದಲ್ಲಿ ವಾಯು ಗುಣಮಟ್ಟ ಸೂಚ್ಯಂಕ 400ಕ್ಕಿಂತ ಹೆಚ್ಚಿತ್ತು.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಅಂಕಿಅಂಶಗಳ ಪ್ರಕಾರ, ಬೆಳಿಗ್ಗೆ 8 ಗಂಟೆಗೆ ಆನಂದ್ ವಿಹಾರ್‌ನಲ್ಲಿ 457, ಅಲಿಪುರದಲ್ಲಿ 389, ವಜೀರ್‌ಪುರದಲ್ಲಿ 437, ಜಹಾಂಗೀರ್‌ಪುರಿಯಲ್ಲಿ 440, ರೋಹಿಣಿಯಲ್ಲಿ 397 ಮತ್ತು ಪಂಜಾಬಿ ಭಾಗ್‌ನಲ್ಲಿ 403 ಎಸಿಐ ದಾಖಲಾಗಿದೆ. ಮಾಲಿನ್ಯದಿಂದಾಗಿ ಗೋಚರತೆಯೂ ಕಡಿಮೆಯಾಗಿದೆ. ಹಲವೆಡೆ ದಟ್ಟ ಮಂಜು ಕವಿದಿತ್ತು.

ವಿವೇಕ ವಿಹಾರ್, ಆನಂದ್ ವಿಹಾರ್, ಇಂಡಿಯಾ ಗೇಟ್ ಮತ್ತು ಇತರ ಪ್ರದೇಶಗಳಲ್ಲಿ ಗೋಚರತೆ 500 ಮೀಟರ್‌ಗೆ ಕಡಿಮೆಯಾಗಿದೆ. ಹೆಚ್ಚುತ್ತಿರುವ ಮಾಲಿನ್ಯದಿಂದ ಜನರ ಕಣ್ಣು ಉರಿಯುತ್ತಿದ್ದು, ಉಸಿರಾಡಲು ಕಷ್ಟವಾಗುತ್ತಿದೆ.

ಈ ನಿಟ್ಟಿನಲ್ಲಿ ವೈದ್ಯಕೀಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಗರ್ಭಿಣಿಯರು, ಚಿಕ್ಕ ಮಕ್ಕಳು, ವೃದ್ಧರು ಮತ್ತು ಉಸಿರಾಟದ ಕಾಯಿಲೆಗಳಿಂದ ಬಳಲುತ್ತಿರುವವರು ವಿಶೇಷ ಕಾಳಜಿ ವಹಿಸಬೇಕು ಎಂದು ಸೂಚಿಸಲಾಗಿದೆ.

ಮನೆಯಲ್ಲಿಯೇ ಇದ್ದು ಯೋಗ, ಪ್ರಾಣಾಯಾಮ ಮಾಡುವಂತೆ ಸೂಚಿಸಲಾಗಿದೆ. ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಾಗುತ್ತಿದೆ ಎಂದು ದೆಹಲಿ ಸರ್ಕಾರದ ಪರಿಸರ ಸಚಿವ ಗೋಪಾಲ್ ರಾಯ್ ಹೇಳಿದ್ದಾರೆ. ಮಾಲಿನ್ಯ ತಗ್ಗಿಸಲು ಸರ್ಕಾರ ಒತ್ತು ನೀಡುತ್ತಿದೆ ಎಂದು ಹೇಳಿದ್ದಾರೆ.

Delhi people are suffering from Heavy air pollution

Related Stories