ಪ್ಯಾನ್ ಕಾರ್ಡ್‌ಗೆ ಗಡುವು ಇರುತ್ತಾ? ಎಷ್ಟು ವರ್ಷಗಳವರೆಗೆ ಬಳಸಬಹುದು ಗೊತ್ತಾ?

ಬ್ಯಾಂಕ್ ಖಾತೆ ತೆರೆಯುವುದು, ಆದಾಯ ತೆರಿಗೆ ಸಲ್ಲಿಕೆ ಅಥವಾ ಆರ್ಥಿಕ ವ್ಯವಹಾರಗಳಿಗೆ ಪ್ಯಾನ್ ಕಾರ್ಡ್ ಕಡ್ಡಾಯ. ಆದರೆ ಇದಕ್ಕೆ ಗಡುವು ಇದೆಯೇ ಎಂಬ ಕುತೂಹಲ ಜನರಲ್ಲಿ ಸಾಮಾನ್ಯವಾಗಿ ಕಾಣಿಸುತ್ತದೆ.

  • ಪ್ಯಾನ್ ಕಾರ್ಡ್ ಜೀವನಪೂರ್ತಿ ಮಾನ್ಯ
  • ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಹೊಂದುವುದು ಅಪರಾಧ
  • ಆನ್‌ಲೈನ್ ಮೂಲಕ ಸುಲಭವಾಗಿ ಪ್ಯಾನ್ ಕಾರ್ಡ್ ಅರ್ಜಿ ಸಲ್ಲಿಕೆ ಸಾಧ್ಯ

Pan Card: ಪ್ಯಾನ್ ಕಾರ್ಡ್‌ ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಅತ್ಯಂತ ಮಹತ್ವದ ದಾಖಲೆಯಾಗಿದೆ. ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ಆದಾಯ ತೆರಿಗೆ ರಿಟರ್ನ್ ಸಲ್ಲಿಸುವವರೆಗೂ ಪ್ಯಾನ್ ಕಾರ್ಡ್ ಅಗತ್ಯವಾಗುತ್ತದೆ. ಇದಿಲ್ಲದೆ ಅನೇಕ ಆರ್ಥಿಕ ಚಟುವಟಿಕೆಗಳು ಸಾಧ್ಯವಿಲ್ಲ.

ಬಹುತೆಕ ಜನರ ಮನಸ್ಸಿನಲ್ಲಿ ಇರುವ ಪ್ರಶ್ನೆ ಎಂದರೆ – “ಪ್ಯಾನ್ ಕಾರ್ಡ್‌ಗೆ ಗಡುವು ಇದೆಯೇ?” ವಾಸ್ತವವಾಗಿ, ಪ್ಯಾನ್ ಕಾರ್ಡ್‌ ಜೀವನಪೂರ್ತಿ ಮಾನ್ಯವಾಗಿರುತ್ತದೆ. ಇದು 10 ಅಂಕೆಗಳ ಅಲ್ಫಾನ್ಯೂಮೆರಿಕ್ ನಂಬರ್ ಆಗಿದ್ದು, ಇದರ ಗಡುವು ಎಂದಿಗೂ ಮುಗಿಯುವುದಿಲ್ಲ.

ಆದರೆ ಹೆಸರು, ವಿಳಾಸ ಅಥವಾ ಇತರೆ ವೈಯಕ್ತಿಕ ವಿವರಗಳು ಬದಲಾದಲ್ಲಿ ಅವುಗಳನ್ನು ಯಾವುದೇ ಸಮಯದಲ್ಲಿ ನವೀಕರಿಸಬಹುದು.

ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 139A ಪ್ರಕಾರ, ಒಬ್ಬ ವ್ಯಕ್ತಿಗೆ ಕೇವಲ ಒಂದು ಪ್ಯಾನ್ ಕಾರ್ಡ್ ಮಾತ್ರ ಮಾನ್ಯ. ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಹೊಂದಿರುವುದು ಕಾನೂನುಬಾಹಿರವಾಗಿದ್ದು, ಪತ್ತೆಯಾದರೆ 10,000 ರೂ.ವರೆಗೆ ದಂಡ ವಿಧಿಸಬಹುದು.

ಪ್ಯಾನ್ ಕಾರ್ಡ್‌ಗೆ ಅರ್ಜಿ ಹಾಕುವುದು ಸಹ ಸುಲಭವಾಗಿದೆ. ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್ ಅಥವಾ NSDL/UTIITSL ಪೋರ್ಟಲ್‌ಗಳ ಮೂಲಕ ಅರ್ಜಿ ಸಲ್ಲಿಸಬಹುದು.

ಭಾರತೀಯರು ಫಾರ್ಮ್ 49A ಮತ್ತು ವಿದೇಶಿ ನಾಗರಿಕರು ಫಾರ್ಮ್ 49AA ಅನ್ನು ಭರ್ತಿ ಮಾಡಬೇಕು. ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ, ಶುಲ್ಕ ಪಾವತಿಸಿದ ನಂತರ ಪ್ಯಾನ್ ಕಾರ್ಡ್ ಪಡೆಯಬಹುದು.

Does PAN Card Have an Expiry Date

TRENDING ARTICLES1 / 4
Show More

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories