WhatsApp Aadhaar: ಆಧಾರ್ ಡೌನ್ಲೋಡ್ ಈಗ ವಾಟ್ಸಾಪ್ನಲ್ಲೇ ಸಾಧ್ಯ! ಕೇವಲ 60 ಸೆಕೆಂಡ್ ಸಾಕು
ಆಧಾರ್ ಕಾರ್ಡ್ ಕೈಯಲ್ಲಿ ಇಲ್ಲದ ಸಮಯದಲ್ಲಿ ಚಿಂತೆ ಬೇಡ. ಡಿಜಿಲಾಕರ್ ಲಿಂಕ್ ಇದ್ದರೆ, ವಾಟ್ಸಪ್ ಮೂಲಕವೇ ನಿಮಿಷದೊಳಗೆ ಆಧಾರ್ ಪಿಡಿಎಫ್ ಡೌನ್ಲೋಡ್ ಮಾಡುವ ಸೌಲಭ್ಯ ಈಗ ಲಭ್ಯವಾಗಿದೆ.

- ಆಧಾರ್ ಡೌನ್ಲೋಡ್ ಈಗ ವಾಟ್ಸಾಪ್ನಲ್ಲೇ ಸಾಧ್ಯ
- ವಾಟ್ಸಾಪ್ ಆಧಾರ್ ಸೇವೆಗೆ ಡಿಜಿಲಾಕರ್ ಲಿಂಕ್ ಕಡ್ಡಾಯ
- ಆಧಾರ್ ಕಾರ್ಡ್ ಪಿಡಿಎಫ್ ಫಾರ್ಮಾಟ್ನಲ್ಲಿ ತಕ್ಷಣ ಲಭ್ಯ
WhatsApp Aadhaar: ಆಧಾರ್ ಕಾರ್ಡ್ ಇಂದು ಪ್ರತಿಯೊಬ್ಬರ ದಿನನಿತ್ಯದ ಅಗತ್ಯ ದಾಖಲೆ ಆಗಿದೆ. ಬ್ಯಾಂಕ್, ಸರ್ಕಾರಿ ಕೆಲಸಗಳು, ಪ್ರಯಾಣ ಅಥವಾ ಗುರುತಿನ ದೃಢೀಕರಣ—ಯಾವ ಕ್ಷಣದಲ್ಲಿ ಬೇಕಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಆ ಸಮಯದಲ್ಲಿ ಕಾರ್ಡ್ ಕೈಯಲ್ಲಿ ಇಲ್ಲದೆ ಹೋದರೆ ಅಸೌಕರ್ಯ ಎದುರಾಗುತ್ತದೆ.
ಈ ಸಮಸ್ಯೆಗೆ ಪರಿಹಾರವಾಗಿ UIDAI ಡಿಜಿಟಲ್ ಸೇವೆಗಳನ್ನು ವಿಸ್ತರಿಸಿದೆ. ಈಗ ವೆಬ್ಸೈಟ್ ಅಥವಾ ಆ್ಯಪ್ ಮಾತ್ರವಲ್ಲ, WhatsApp ಮೂಲಕವೂ ಆಧಾರ್ ಡೌನ್ಲೋಡ್ (Download Aadhaar Card Online) ಮಾಡುವ ಅವಕಾಶ ನೀಡಲಾಗಿದೆ. ಕೆಲವೇ ಹಂತಗಳಲ್ಲಿ, ಪಿಡಿಎಫ್ ರೂಪದಲ್ಲಿ ಆಧಾರ್ ನಿಮ್ಮ ಫೋನ್ಗೆ ಬರುತ್ತದೆ.
ವಾಟ್ಸಪ್ ಮೂಲಕ ಆಧಾರ್ ಡೌನ್ಲೋಡ್ ಮಾಡುವ ವಿಧಾನ
- ನಿಮ್ಮ ಮೊಬೈಲ್ನಲ್ಲಿ 9013151515 ಸಂಖ್ಯೆಯನ್ನು ಸೇವ್ ಮಾಡಿ
- ವಾಟ್ಸಪ್ ತೆರಳಿ “Hi” ಎಂದು ಸಂದೇಶ ಕಳುಹಿಸಿ
- ಲಭ್ಯವಿರುವ ಸೇವೆಗಳ ಪಟ್ಟಿಯಲ್ಲಿ DigiLocker ಆಯ್ಕೆ ಮಾಡಿ
- ಡಿಜಿಲಾಕರ್ ವಿವರಗಳೊಂದಿಗೆ ಲಾಗಿನ್ ಮಾಡಿ
- ಆಧಾರ್ ಸಂಖ್ಯೆ ನಮೂದಿಸಿ
- ನೋಂದಾಯಿತ ಮೊಬೈಲ್ಗೆ ಬರುವ OTP ದೃಢೀಕರಿಸಿ
- ಡಾಕ್ಯುಮೆಂಟ್ ಪಟ್ಟಿಯಲ್ಲಿ ಆಧಾರ್ ಆಯ್ಕೆ ಮಾಡಿದರೆ, ಪಿಡಿಎಫ್ ವಾಟ್ಸಪ್ಗೆ ಬರುತ್ತದೆ
ಡಿಜಿಲಾಕರ್ ಲಿಂಕ್ ಏಕೆ ಅಗತ್ಯ?
ವಾಟ್ಸಪ್ ಮೂಲಕ ಆಧಾರ್ ಪಡೆಯಲು ಮೊದಲು ಡಿಜಿಲಾಕರ್ (Digi Locker) ಖಾತೆಯಲ್ಲಿ ಆಧಾರ್ ಲಿಂಕ್ ಮಾಡಿರಬೇಕು. ಲಿಂಕ್ ಇಲ್ಲದಿದ್ದರೆ ಈ ಸೇವೆ ಬಳಸಲು ಸಾಧ್ಯವಿಲ್ಲ.
ಒಮ್ಮೆ ಲಿಂಕ್ ಮಾಡಿದರೆ, ತುರ್ತು ಸಂದರ್ಭಗಳಲ್ಲಿ ಕೆಲವೇ ಸೆಕೆಂಡುಗಳಲ್ಲಿ ಆಧಾರ್ ಡೌನ್ಲೋಡ್ ಮಾಡಿಕೊಳ್ಳಬಹುದು. ಇದು ಡಿಜಿಟಲ್ ದಾಖಲೆಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ಸಹ ಸಹಾಯಕ.



