e-Aadhaar App: ಇನ್ಮುಂದೆ ಎಲ್ಲ ಆಧಾರ್ ಸೇವೆಗಳು ಒಂದೇ ಆ್ಯಪ್ನಲ್ಲಿ ಲಭ್ಯ
e-Aadhaar App: e-Aadhaar ಆ್ಯಪ್ ಮೂಲಕ ನಿಮ್ಮ ಆಧಾರ್ ಕಾರ್ಡಿನ ಡಿಜಿಟಲ್ ವರ್ಶನ್ ಪಡೆಯಿರಿ, ವಿವರಗಳನ್ನು ಸುಲಭವಾಗಿ ತಿದ್ದುಪಡಿ ಮಾಡಿ, ಮತ್ತು ಪ್ರಮುಖ ದಾಖಲೆಗಳನ್ನು ದೃಢೀಕರಿಸಿ.

- ಆಧಾರ್ ಸಂಖ್ಯೆ ಬಳಸಿ ಅತಿ ಸುಲಭವಾಗಿ ಲಾಗಿನ್ ಮಾಡಿ.
- ಹೆಸರು, ವಿಳಾಸ ವಿವರಗಳನ್ನು ತಿದ್ದುಪಡಿ ಮಾಡಬಹುದು.
- ವಿವಿಧ ದಾಖಲೆಗಳನ್ನು ದೃಢೀಕರಿಸಲು ಸಹಾಯ.
e-Aadhaar App: ಭಾರತದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಆಧಾರ್ ಕಾರ್ಡ್ ಹೊಂದುವುದು ಅನಿವಾರ್ಯವಾಗಿದೆ. ಆದರೆ, ಆಧಾರ್ ಕಾರ್ಡ್ನಲ್ಲಿ ಯಾವುದೇ ದೋಷ ಅಥವಾ ತಿದ್ದುಪಡಿ ಮಾಡಬೇಕಾದಾಗ ಜನರು ಸಮಯ ಮತ್ತು ಶ್ರಮ ಹೆಚ್ಚು ಖರ್ಚು ಮಾಡಬೇಕಾಗುತ್ತಿತ್ತು.
ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಪರಿಹಾರವಾಗಿ e-Aadhaar App ಅನ್ನು ಬಿಡುಗಡೆ ಮಾಡಿದೆ. ಈ ಆ್ಯಪ್ ಬಳಸಿ, ಆಧಾರ್ ಸೇವೆಗಳೆಲ್ಲಾ ನಿಮಗೆ ಸ್ಮಾರ್ಟ್ಫೋನ್ನಲ್ಲಿ ಲಭ್ಯವಿರುತ್ತದೆ.
ಈ ಆ್ಯಪ್ ಮೂಲಕ ಬಳಕೆದಾರರು ತಮ್ಮ ಹೆಸರು, ವಿಳಾಸ, ಹುಟ್ಟಿದ ದಿನಾಂಕ, ಫೋನ್ ನಂಬರ್ ಇತ್ಯಾದಿಗಳನ್ನು ಸುಲಭವಾಗಿ ತಿದ್ದುಪಡಿಸಿಕೊಳ್ಳಬಹುದು.
ಜೊತೆಗೆ ಡಿಜಿಟಲ್ ಆಧಾರ್ ಕಾರ್ಡ್ ಅನ್ನು ಯಾವಾಗ ಬೇಕಾದರೂ ಹಂಚಿಕೊಳ್ಳಬಹುದಾಗಿದೆ. ಜನನ ಪ್ರಮಾಣಪತ್ರ, ಪಾಸ್ಪೋರ್ಟ್, ಪಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ರೇಶನ್ ಕಾರ್ಡ್ ಮುಂತಾದ ಪ್ರಮುಖ ದಾಖಲೆಗಳನ್ನು ಕೂಡ ಈ ಆ್ಯಪ್ನಿಂದ ದ್ರಢೀಕರಿಸಲು ಸಾಧ್ಯ.
ಪ್ರಾರಂಭದಲ್ಲಿ ಈ ಆ್ಯಪ್ ಆಂಡ್ರಾಯ್ಡ್ (Android App) ಬಳಕೆದಾರರಿಗೆ ಮಾತ್ರ ಲಭ್ಯವಿದ್ದು, ತಮ್ಮ ಆಧಾರ್ ಸಂಖ್ಯೆ ಬಳಸಿ ಲಾಗಿನ್ ಆಗಿ ಕೆಲವು ಮೂಲಭೂತ ಸೇವೆಗಳನ್ನು ಪಡೆಯಬಹುದು.
ಆದರೆ ಮುಂದಿನ ದಿನಗಳಲ್ಲಿ ಇದು ಸಂಪೂರ್ಣ ಕಾರ್ಯಕ್ಷಮ ಆ್ಯಪ್ ಆಗಿ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಐರಿಸ್ ಮತ್ತು ಫಿಂಗರ್ ಪ್ರಿಂಟ್ ನೋಂದಣಿಯನ್ನು ಲಿಂಕ್ ಮಾಡುವುದು ಸೇರಿದಂತೆ ಎಲ್ಲಾ ಪ್ರಮುಖ ಆಧಾರ್ ಸೇವೆಗಳನ್ನು ಈ ಆ್ಯಪ್ನಲ್ಲಿ ಪಡೆಯಬಹುದಾಗಿದೆ.
ಈ ಆ್ಯಪ್ ರಾಜ್ಯದ ನಾಗರಿಕರಿಗೆ ತಮ್ಮ ಆಧಾರ್ ನಿರ್ವಹಣೆಯ ಸುಲಭ ಮಾರ್ಗ ಒದಗಿಸುತ್ತಿದೆ. ಸರ್ಕಾರದ ಉದ್ದೇಶ ಇದರಿಂದ ಆಧಾರ್ ಸಂಬಂಧಿ ಸೇವೆಗಳನ್ನು ವೇಗವಾಗಿ, ಸುರಕ್ಷಿತವಾಗಿ, ಮತ್ತು ಸರಳವಾಗಿ ಜನರಿಗೆ ತಲುಪಿಸುವುದಾಗಿದೆ.







