ಅಫ್ಘಾನಿಸ್ತಾನದಲ್ಲಿ 4.1 ತೀವ್ರತೆಯ ಭೂಕಂಪ: ಮಣಿಪುರದಲ್ಲೂ ಕಂಪನ

ಅಫ್ಘಾನಿಸ್ತಾನದಲ್ಲಿ ಸಂಭವಿಸಿದ 4.1 ತೀವ್ರತೆಯ ಭೂಕಂಪದಿಂದ ಜನರಲ್ಲಿ ಆತಂಕ ಉಂಟಾಗಿ ಕಂಪನಗಳು ದೂರದ ಮಣಿಪುರದಲ್ಲೂ ಅನುಭವವಾಗಿದ್ದು ಯಾವುದೇ ಪ್ರಾಣಾಪಾಯ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ

  • ಅಫ್ಘಾನಿಸ್ತಾನದಲ್ಲಿ 4.1 ತೀವ್ರತೆಯ ಭೂಕಂಪ
  • ಮಣಿಪುರದ ಉಖ್ರುಲ್‌ನಲ್ಲಿ ಭೂಕಂಪನ ಅನುಭವ
  • ಪ್ರಾಣಾಪಾಯ, ಆಸ್ತಿ ನಷ್ಟ ವರದಿ ಇಲ್ಲ

Earthquake: ಶುಕ್ರವಾರ ಬೆಳಗಿನ ಜಾವ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪ ಜನರಲ್ಲಿ ಕೆಲಕಾಲ ಆತಂಕಕ್ಕೆ ಕಾರಣವಾಯಿತು. ಭೂಮಿ ಏಕಾಏಕಿ ಕಂಪಿಸಿದ ಪರಿಣಾಮ ಹಲವರು ಮನೆಗಳಿಂದ ಹೊರಬಂದು ಸುರಕ್ಷಿತ ಸ್ಥಳಗಳಲ್ಲಿ ನಿಂತರು. ಆದರೆ ತೀವ್ರತೆ ಕಡಿಮೆಯಾಗಿದ್ದರಿಂದ ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ.

ರಾಷ್ಟ್ರೀಯ ಭೂಕಂಪ ಅಧ್ಯಯನ ಕೇಂದ್ರದ ಮಾಹಿತಿ ಪ್ರಕಾರ, ಈ ಭೂಕಂಪ ರಿಕ್ಟರ್ ಮಾಪಕದಲ್ಲಿ 4.1 ತೀವ್ರತೆಯಾಗಿ ದಾಖಲಾಗಿದ್ದು, ಭೂಮಿಯ ಒಳಭಾಗದಲ್ಲಿ ಸುಮಾರು 10 ಕಿಲೋಮೀಟರ್ ಆಳದಲ್ಲಿ ಕೇಂದ್ರ ಹೊಂದಿತ್ತು. ತಕ್ಷಣದ ವರದಿಗಳಂತೆ ಪ್ರಾಣ ಅಥವಾ ಆಸ್ತಿ ನಷ್ಟದ ಮಾಹಿತಿ ಲಭ್ಯವಾಗಿಲ್ಲ.

ಮಣಿಪುರದಲ್ಲೂ ಭೂಕಂಪನ

ಇದೇ ವೇಳೆ, ಭಾರತದ ಈಶಾನ್ಯ ರಾಜ್ಯ ಮಣಿಪುರದಲ್ಲೂ ಭೂಕಂಪನ ಅನುಭವವಾಗಿದೆ. ಉಖ್ರುಲ್ ಪ್ರದೇಶದಲ್ಲಿ ಇಂದು ಮುಂಜಾನೆ 3 ಗಂಟೆ ಸುಮಾರಿಗೆ ನೆಲ ಸ್ವಲ್ಪ ಕಂಪಿಸಿದ ಅನುಭವ ಜನರಿಗೆ ಉಂಟಾಯಿತು.

ರಾಷ್ಟ್ರೀಯ ಭೂಕಂಪ ಅಧ್ಯಯನ ಕೇಂದ್ರ ತಿಳಿಸಿರುವಂತೆ, ಮಣಿಪುರದಲ್ಲಿ ದಾಖಲಾಗಿದ ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 2.9 ಆಗಿದ್ದು, ಭೂಕಂಪದ ಕೇಂದ್ರ ಭೂಮಿಯೊಳಗೆ ಸುಮಾರು 35 ಕಿಲೋಮೀಟರ್ ಆಳದಲ್ಲಿತ್ತು. ಇಲ್ಲಿಯೂ ಯಾವುದೇ ಹಾನಿ ವರದಿಯಾಗಿಲ್ಲ.

TRENDING ARTICLES1 / 4
Show More

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories